ನನ್ನ ಸಾವಿನ ಬಳಿಕ ನನ್ನನ್ನು ಯಾರೂ ನೆನಪಿಸಿಕೊಳ್ಳಲ್ಲ, ಏಕೆಂದರೆ ಸಾವಿರದಲ್ಲಿ ನಾನೂ ಒಬ್ಬ; ಮಲಯಾಳಿ ನಟ ಮಮ್ಮುಟ್ಟಿಯ ಅಚ್ಚರಿಯ ಹೇಳಿಕೆ
ಕನ್ನಡ ಸುದ್ದಿ  /  ಮನರಂಜನೆ  /  ನನ್ನ ಸಾವಿನ ಬಳಿಕ ನನ್ನನ್ನು ಯಾರೂ ನೆನಪಿಸಿಕೊಳ್ಳಲ್ಲ, ಏಕೆಂದರೆ ಸಾವಿರದಲ್ಲಿ ನಾನೂ ಒಬ್ಬ; ಮಲಯಾಳಿ ನಟ ಮಮ್ಮುಟ್ಟಿಯ ಅಚ್ಚರಿಯ ಹೇಳಿಕೆ

ನನ್ನ ಸಾವಿನ ಬಳಿಕ ನನ್ನನ್ನು ಯಾರೂ ನೆನಪಿಸಿಕೊಳ್ಳಲ್ಲ, ಏಕೆಂದರೆ ಸಾವಿರದಲ್ಲಿ ನಾನೂ ಒಬ್ಬ; ಮಲಯಾಳಿ ನಟ ಮಮ್ಮುಟ್ಟಿಯ ಅಚ್ಚರಿಯ ಹೇಳಿಕೆ

ಒಂದೇ ಶೈಲಿಯ ಸಿನಿಮಾಗಳಿಗೆ ಸೀಮಿತವಾಗದ ಮಮ್ಮುಟ್ಟಿ, ಕಲಾತ್ಮಕ ಸಿನಿಮಾಗಳು, ಪ್ರಯೋಗಾತ್ಮಕ ಚಿತ್ರಗಳನ್ನು ಮಾಡುವುದರ ಜತೆಗೆ ಮಾಸ್ ಆಕ್ಷನ್ ಚಿತ್ರಗಳ ಭಾಗವಾಗಿದ್ದಾರೆ. ಮಲಯಾಳಿ ಮಾರುಕಟ್ಟೆ ಚಿಕ್ಕದಾದರೂ, ಆ ಚಿಕ್ಕ ಮಾರ್ಕೆಟ್‌ನಲ್ಲಿಯೇ ಬಾಕ್ಸ್‌ ಆಫೀಸ್‌ನಲ್ಲಿ ಧೂಳೆಬ್ಬಿಸುತ್ತಿದ್ದಾರೆ. ಹೀಗಿರುವಾಗಲೇ ಇದೇ ನಟ ಇದೀಗ ಅಚ್ಚರಿಯ ಹೇಳಿಕೆ ನೀಡಿ ಸುದ್ದಿಯಲ್ಲಿದ್ದಾರೆ.

ನನ್ನ ಸಾವಿನ ಬಳಿಕ ನನ್ನನ್ನು ಯಾರೂ ನೆನಪಿಸಿಕೊಳ್ಳಲ್ಲ, ಏಕೆಂದರೆ ಸಾವಿರದಲ್ಲಿ ನಾನೂ ಒಬ್ಬ; ಮಲಯಾಳಿ ನಟ ಮಮ್ಮುಟ್ಟಿಯ ಅಚ್ಚರಿಯ ಹೇಳಿಕೆ
ನನ್ನ ಸಾವಿನ ಬಳಿಕ ನನ್ನನ್ನು ಯಾರೂ ನೆನಪಿಸಿಕೊಳ್ಳಲ್ಲ, ಏಕೆಂದರೆ ಸಾವಿರದಲ್ಲಿ ನಾನೂ ಒಬ್ಬ; ಮಲಯಾಳಿ ನಟ ಮಮ್ಮುಟ್ಟಿಯ ಅಚ್ಚರಿಯ ಹೇಳಿಕೆ

Malayalam actor Mammootty: ಮಲಯಾಳಿ ಸಿನಿಮಾರಂಗದ ಇತ್ತೀಚಿನ ಬೆಳವಣಿಗೆ ನೋಡಿದರೆ ಎಂಥವರೂ ಬಾಯಿಮೇಲೆ ಬೆರಳಿಟ್ಟುಕೊಳ್ಳುತ್ತಿದ್ದಾರೆ. ಅದಕ್ಕೆ ಕಾರಣ; ಕೇವಲ ನಾಲ್ಕೇ ತಿಂಗಳ ಅವಧಿಯಲ್ಲಿ ಮಾಲಿವುಡ್‌ ಚಿತ್ರೋದ್ಯಮದಲ್ಲಾದ ಅಚ್ಚರಿಯ ಬದಲಾವಣೆ. ಬಿಡುಗಡೆಯಾದ ಸಿನಿಮಾಗಳೆಲ್ಲ ಬ್ಲಾಕ್‌ ಬಸ್ಟರ್‌ ಹಿಟ್‌ ಪಟ್ಟ ಪಡೆದುಕೊಳ್ಳುತ್ತಿವೆ. ಸಣ್ಣ ಸಣ್ಣ ಕಲಾವಿದರೂ ನೂರಾರು ಕೋಟಿಯ ಕಲೆಕ್ಷನ್‌ ಮಾಡುತ್ತಿದ್ದಾರೆ. ಮಂಜುಮ್ಮೆಲ್‌ ಬಾಯ್ಸ್‌, ಆಡು ಜೀವಿತಂ, ಪ್ರೇಮಲು, ಬ್ರಮಯುಗಂ, ಆವೇಶಂ ಚಿತ್ರಗಳು ದೊಡ್ಡ ಮಟ್ಟದಲ್ಲಿ ಸದ್ದು ಮಾಡಿವೆ. ಆ ಪೈಕಿ ಹಿರಿಯ ನಟ ಮಮ್ಮುಟ್ಟಿ ಅವರ ಕೊಡುಗೆಯೂ ನೆನಪಿನಲ್ಲಿಟ್ಟುಕೊಳ್ಳುವಂಥದ್ದು.

ಸಾಲು ಸಾಲು ಸಿನಿಮಾಗಳಲ್ಲಿ ನಟಿಸುವ ಮೂಲಕ ಯಂಗ್‌ ನಟರಿಗೂ ಟಾಂಗ್‌ ಕೊಡುತ್ತಿದ್ದಾರೆ, 73ರ ಹರೆಯದ ಮಲಯಾಳಿ ನಟ ಮಮ್ಮುಟ್ಟಿ. ಈ ಒಂದೇ ವರ್ಷದ ಅವಧಿಯಲ್ಲಿ, ಯಂಗ್‌ ಹೀರೋಗಳು ಒಂದೇ ಸಿನಿಮಾ ನೀಡಲು ಹಿಂದೇಟು ಹಾಕುತ್ತಿರುವ ಈ ಹೊತ್ತಲ್ಲಿ, ಬರೋಬ್ಬರಿ ಮೂರು ಸಿನಿಮಾಗಳನ್ನು ನೀಡಿದ ಕೀರ್ತಿ ಮಮ್ಮುಟ್ಟಿ ಅವರಿಗೆ ಸಲ್ಲಬೇಕು. ವರ್ಷದ ಆರಂಭದಲ್ಲಿ ಅಬ್ರಹಂ ಒಜಲರ್‌, ಬ್ರಮಯುಗಂ ಸಿನಿಮಾಗಳು ಹಿಟ್‌ ಪಟ್ಟ ಪಡೆದರೆ, ಇತ್ತಿಚೆಗಷ್ಟೇ ಬಿಡುಗಡೆಯಾದ ಟರ್ಬೊ ಸಿನಿಮಾ ನೋಡುಗರ ಗಮನ ಸೆಳೆಯುತ್ತಿದೆ. ಹೀಗೆ ಸಿನಿಮಾ ಮೇಲಿನ ಅವರ ಉತ್ಸಾಹ ಮಲಯಾಳಂ ಇಂಡಸ್ಟ್ರಿ ಮಾತ್ರವಲ್ಲ ಅದರಾಚೆಗೂ ದೊಡ್ಡ ಮಟ್ಟದಲ್ಲಿ ಚರ್ಚೆಯಾಗುತ್ತಿದೆ.

70ರ ವಯಸ್ಸಲ್ಲೂ ಬತ್ತದ ಉತ್ಸಾಹ

ಒಂದೇ ಶೈಲಿಯ ಸಿನಿಮಾಗಳಿಗೆ ಸೀಮಿತವಾಗದ ಮಮ್ಮುಟ್ಟಿ, ಕಲಾತ್ಮಕ ಸಿನಿಮಾಗಳು, ಪ್ರಯೋಗಾತ್ಮಕ ಚಿತ್ರಗಳನ್ನು ಮಾಡುವುದರ ಜತೆಗೆ ಮಾಸ್ ಆಕ್ಷನ್ ಚಿತ್ರಗಳ ಭಾಗವಾಗಿದ್ದಾರೆ. ಮಲಯಾಳಿ ಮಾರುಕಟ್ಟೆ ಚಿಕ್ಕದಾದರೂ, ಆ ಚಿಕ್ಕ ಮಾರ್ಕೆಟ್‌ನಲ್ಲಿಯೇ ಬಾಕ್ಸ್‌ ಆಫೀಸ್‌ನಲ್ಲಿ ಧೂಳೆಬ್ಬಿಸುತ್ತಿದ್ದಾರೆ. ಒಟಿಟಿಯಲ್ಲಿಯೂ ತಮ್ಮದೇ ಆದ ಬ್ರಾಂಡ್‌ ಕ್ರಿಯೆಟ್‌ ಮಾಡಿಕೊಂಡಿರುವ ಮಮ್ಮುಟ್ಟಿ, ಒಂದಾದ ಮೇಲೊಂದು ವೈವಿಧ್ಯಮಯ ಸಿನಿಮಾಗಳನ್ನು ಪ್ರೇಕ್ಷಕರಿಗೆ ನೀಡುತ್ತ, ಯುವ ನಟರೂ ನಾಚುವಂತೆ ಸಿನಿಮಾಗಳಲ್ಲಿ ಸಕ್ರಿಯರಾಗಿದ್ದಾರೆ. ಹೀಗಿರುವಾಗಲೇ ಇದೇ ನಟ ಸಾವಿನ ಬಗ್ಗೆ ಮಾತನಾಡಿದ್ದಾರೆ!

ಕೊನೆ ಉಸಿರಿರುವವರೆಗೂ ನಟಿಸುತ್ತೇನೆ..

ನಟ ಮಮ್ಮುಟ್ಟಿ ಇತ್ತೀಚಿನ ಸಂದರ್ಶನವೊಂದರಲ್ಲಿ ನೀಡಿದ ಹೇಳಿಕೆ, ಸೋಷಿಯಲ್‌ ಮೀಡಿಯಾದಲ್ಲಿ ಎಲ್ಲರ ಗಮನ ಸೆಳೆಯುತ್ತಿದೆ. ನಟ ಮಮ್ಮುಟ್ಟಿ ಅವರನ್ನು ಜಗತ್ತು ಹೇಗೆ ನೆನಪಿಸಿಕೊಳ್ಳಬೇಕು? ಎಂಬ ಪ್ರಶ್ನೆಗೆ ಮಮ್ಮುಟ್ಟಿ ನೀಡಿದ ಉತ್ತರ, ನೋಡುಗರನ್ನು ಚಿಂತನೆಗೆ ಹಚ್ಚಿದೆ. ಜತೆಗೆ ಅವರ ಕೋಟ್ಯಂತರ ಅಭಿಮಾನಿಗಳಿಗೆ ಆತಂಕವನ್ನುಂಟು ಮಾಡಿದೆ. "ಎಲ್ಲಾ ನಟ-ನಟಿಯರು ಸಾಲು ಸಾಲು ಸಿನಿಮಾಗಳಲ್ಲಿ ನಟಿಸಿದ ಬಳಿಕ ಕೊಂಚ ಸುಸ್ತಾದಂತೆ ಭಾವಿಸ್ತಾರೆ. ಅಯ್ಯೋ ಸಾಕಪ್ಪ ಎಂದು ಹೇಳಿರ್ತಾರೆ. ನೀವು ಎಂದಾದರೂ ಆ ಬಗ್ಗೆ ಯೋಚಿಸಿದ್ದೀರಾ ಎಂಬ ಬಗ್ಗೆ ಮಾತನಾಡಿದ ಮಮ್ಮುಟ್ಟಿ, "ಇಲ್ಲ. ನನಗೆ ಸಿನಿಮಾಗಳಿಂದ ಸುಸ್ತಾಗುವುದಿಲ್ಲ. ಕೊನೆ ಉಸಿರಿರುವವರೆಗೂ ನಾನು ನಟಿಸಲು ಬಯಸುತ್ತೇನೆ" ಎಂದಿದ್ದಾರೆ ಮಮ್ಮುಟ್ಟಿ.

ಸಾವಿನ ಬಳಿಕವೂ ನೆನಪಿಸಿಕೊಳ್ಳಬೇಕು ಎಂಬ ನಿರೀಕ್ಷೆ ಬೇಡ

"ನೀವು ಕೊನೆಯ ಉಸಿರು ಇರೋವರೆಗೂ ಸಿನಿಮಾ ಮಾಡುತ್ತೀರಿ ಎಂದು ಹೇಳಿದ್ದೀರಿ. ಹಾಗಾದರೆ ಜಗತ್ತು ನಿಮ್ಮನ್ನು ಹೇಗೆ ನೆನಪಿಸಿಕೊಳ್ಳಬೇಕೆಂದು ನೀವು ಬಯಸುತ್ತೀರಿ?" ಎಂಬ ಪ್ರಶ್ನೆ ಎದುರಾಗಿದೆ. ಅದಕ್ಕೂ ಅಷ್ಟೇ ಸರಳವಾಗಿ ಉತ್ತರ ನೀಡಿದ ಮಮ್ಮುಟ್ಟಿ, "ಅವರು ನನ್ನನ್ನು ಎಷ್ಟು ದಿನ ನೆನಪಿಸಿಕೊಳ್ಳುತ್ತಾರೆ.. ಒಂದು ವರ್ಷ...10 ವರ್ಷ...15 ವರ್ಷ? ಪ್ರಪಂಚದ ಅಂತ್ಯದವರೆಗೂ ಜನರು ನಮ್ಮನ್ನು ನೆನಪಿಸಿಕೊಳ್ಳುತ್ತಾರೆ ಎಂದು ನಿರೀಕ್ಷಿಸಬೇಡಿ. ಅಂತಹ ಅವಕಾಶ ಯಾರಿಗೂ ಸಿಗುವುದಿಲ್ಲ. ಮಹಾರಥರು ಕೂಡ ಬಹಳ ಕಡಿಮೆ ಜನರಿಗೆ ನೆನಪಾಗುತ್ತಾರೆ. ಸಾವಿರಾರು ನಟರಲ್ಲಿ ನಾನು ಒಬ್ಬ. ಒಂದು ವರ್ಷಕ್ಕೂ ಹೆಚ್ಚು ಕಾಲ ಅವರು ನನ್ನನ್ನು ಹೇಗೆ ನೆನಪಿಸಿಕೊಳ್ಳುತ್ತಾರೆ? ಅದರಲ್ಲಿ ಯಾವುದೇ ಭರವಸೆ ಇಲ್ಲ. ಒಮ್ಮೆ ನೀವು ಜಗತ್ತನ್ನು ತೊರೆದರೆ, ನಿಮಗೆ ಅದರ ಅರಿವಿದೆಯೇ? ಇದು ಸಾಧ್ಯವಿಲ್ಲ. ಪ್ರತಿಯೊಬ್ಬರೂ ಪ್ರಪಂಚದ ಕೊನೆಯವರೆಗೂ ನೆನಪಿನಲ್ಲಿಟ್ಟುಕೊಳ್ಳಲು ಬಯಸುತ್ತಾರೆ. ಆದರೆ ಅದು ಅಸಾಧ್ಯ" ಎಂದಿದ್ದಾರೆ.

Whats_app_banner