ಕನ್ನಡ ಸುದ್ದಿ  /  ಮನರಂಜನೆ  /  Namratha Gowda: ಪದೇಪದೆ ನನ್ನ ದೇಹದ ಆ ಭಾಗವನ್ನು ಮುಟ್ಟಿಕೊಳ್ಳುವ ವಿಚಿತ್ರ ಅಭ್ಯಾಸ ನನಗಿದೆ; ಕಾರಣ ತಿಳಿಸಿದ ನಮ್ರತಾ ಗೌಡ

Namratha Gowda: ಪದೇಪದೆ ನನ್ನ ದೇಹದ ಆ ಭಾಗವನ್ನು ಮುಟ್ಟಿಕೊಳ್ಳುವ ವಿಚಿತ್ರ ಅಭ್ಯಾಸ ನನಗಿದೆ; ಕಾರಣ ತಿಳಿಸಿದ ನಮ್ರತಾ ಗೌಡ

ಸೀರಿಯಲ್‌ಗಳ ಮೂಲಕ ಗಮನ ಸೆಳೆದ ನಟಿ ನಮ್ರತಾ ಗೌಡ, ಬಿಗ್‌ಬಾಸ್‌ ಕನ್ನಡ ಸೀಸನ್‌ 10ರಲ್ಲಿ ಕಾಣಿಸಿಕೊಂಡು, ತಮ್ಮ ಪ್ರಭಾವಳಿಯನ್ನು ಮತ್ತಷ್ಟು ಹೆಚ್ಚಿಸಿಕೊಂಡರು. ಇದೀಗ ಇದೇ ನಟಿ, ತಮ್ಮಗಿರುವ ವಿಚಿತ್ರ ಅಭ್ಯಾಸವೊಂದರ ಬಗ್ಗೆ ಓಪನ್‌ ಆಗಿಯೇ ಹೇಳಿಕೊಂಡಿದ್ದಾರೆ.

Namratha Gowda: ಪದೇಪದೆ ನನ್ನ ದೇಹದ ಆ ಭಾಗವನ್ನು ಮುಟ್ಟಿಕೊಳ್ಳುವ ವಿಚಿತ್ರ ಅಭ್ಯಾಸ ನನಗಿದೆ; ಕಾರಣ ತಿಳಿಸಿದ ನಮ್ರತಾ ಗೌಡ
Namratha Gowda: ಪದೇಪದೆ ನನ್ನ ದೇಹದ ಆ ಭಾಗವನ್ನು ಮುಟ್ಟಿಕೊಳ್ಳುವ ವಿಚಿತ್ರ ಅಭ್ಯಾಸ ನನಗಿದೆ; ಕಾರಣ ತಿಳಿಸಿದ ನಮ್ರತಾ ಗೌಡ

Namratha Gowda: ಕನ್ನಡ ಸಿನಿಮಾಗಳಲ್ಲಿ ಬಾಲನಟಿಯಾಗಿ ಗುರುತಿಸಿಕೊಂಡು, ಅದಾದ ಬಳಿಕ ಕಿರುತೆರೆಯಲ್ಲೂ ಕಮಾಲ್‌ ಮಾಡಿದವರು ನಟಿ ನಮ್ರತಾ ಗೌಡ. ನಾಗಿಣಿ (Naagini Kannada Serial) ಧಾರಾವಾಹಿ ಮೂಲಕ ನಾಡಿನ ಮನೆಮನಗಳಲ್ಲೂ ಹೆಸರು ಮಾಡಿದ ನಮ್ರತಾಗೆ, ದೊಡ್ಡ ಬ್ರೇಕ್‌ ನೀಡಿದ್ದು ಬಿಗ್‌ ಬಾಸ್‌ ಕನ್ನಡ ಸೀಸನ್‌ 10ರ (Bigg Boss Kannada Season 10) ವೇದಿಕೆ. ಇದೀಗ ಅದೇ ಪ್ರಭಾವಳಿಯಲ್ಲಿಯೇ ಹೊಸ ಬದುಕು ಕಟ್ಟಿಕೊಂಡಿದ್ದಾರೆ ನಮ್ರತಾ ಗೌಡ. ಈ ನಡುವೆ ತಮ್ಮ ವೈಯಕ್ತಿಕ ಜೀವನದ ಒಂದಷ್ಟು ಅಚ್ಚರಿಯ ಸಂಗತಿಗಳನ್ನು ಇತ್ತೀಚೆಗೆ ನೀಡಿದ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ ನಮ್ರತಾ ಗೌಡ.

ಟ್ರೆಂಡಿಂಗ್​ ಸುದ್ದಿ

ನಾಗಿಣಿ ಸೀರಿಯಲ್‌ ಮೂಲಕ ಹೆಚ್ಚು ಗುರುತಿಸಿಕೊಂಡ ನಮ್ರತಾ, ಆ ಸೀರಿಯಲ್‌ ಮುಗಿದ ಬಳಿಕ ಒಂದಷ್ಟು ತಿಂಗಳ ಕಾಲ ಯಾವ ಧಾರಾವಾಹಿಯಲ್ಲೂ ನಟಿಸಲಿಲ್ಲ. ನೇರವಾಗಿ ಬಿಗ್‌ಬಾಸ್‌ ಅವಕಾಶ ಗಿಟ್ಟಿಸಿಕೊಂಡು, ಬಿಗ್‌ ಮನೆಯಲ್ಲಿ ಸುದೀರ್ಘ 100 ಪ್ಲಸ್‌ ದಿನಗಳನ್ನು ಕಳೆದರು. ಕಾರ್ತಿಕ್‌ ಮಹೇಶ್‌ ವಿಜೇತ ಪಟ್ಟ ಪಡೆದುಕೊಂಡರೆ, ಡ್ರೋಣ್‌ ಪ್ರತಾಪ್‌ ರನ್ನರ್‌ ಅಪ್‌ ಆದರು. ಹೀಗೆ ಕೊನೇ ವರೆಗೂ ಬಿಗ್‌ ಬಾಸ್‌ನಲ್ಲಿದ್ದ ನಮ್ರತಾಗೆ, ಸೀರಿಯಲ್‌ ಹೊರತುಪಡಿಸಿ, ಅದರಾಚೆಗೂ ಲಕ್ಷಾಂತರ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ.

ವಿಚಿತ್ರ ಅಭ್ಯಾಸದ ಬಗ್ಗೆ ಏನಂದ್ರು ನಮ್ರತಾ?

ಇದೀಗ ಇದೇ ನಮ್ರತಾ ಗೌಡ, ತಮಗಿರುವ ವಿಚಿತ್ರ ಅಭ್ಯಾಸದ ಬಗ್ಗೆಯೂ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ. ಪ್ರತಿಯೊಬ್ಬ ವ್ಯಕ್ತಿಯೂ ಅವರದೇ ಆದ ಒಂದಷ್ಟು ಅಭ್ಯಾಸಗಳಿರುತ್ತವೆ. ಅಂಥದ್ದೇ ಒಂದು ಅಭ್ಯಾಸ ನಮ್ರತಾ ಅವರಿಗೂ ಇದೆ. ಅದೇನೆಂದರೆ ಪದೇಪದೆ ಮೂಗು ಮುಟ್ಟಿಕೊಳ್ಳುವುದು. ಬಿಗ್‌ ಬಾಸ್‌ ಮನೆಯಲ್ಲಿದ್ದಾಗಲೇ, ನಮ್ರತಾ ಅವರ ಈ ಹವ್ಯಾಸವನ್ನು ವೀಕ್ಷಕರು ಗಮನಿಸಿದ್ದರು. ಪ್ರಶ್ನೆ ಸಹ ಮಾಡಿದ್ದರು. ಇದೀಗ ಅದರ ಹಿಂದಿನ ಕಾರಣವೇನು ಎಂದು ಹೇಳಿಕೊಂಡಿದ್ದಾರೆ ನಮ್ರತಾ.

ಪದೇಪದೆ ಮೂಗು ಮುಟ್ಟಿಕೊಳ್ಳುವುದೇಕೆ ನಮ್ರತಾ?

ನಾನು ನರ್ವಸ್‌ ಆದಾಗ, ಬೇಜಾರಾದಾಗ, ಕೋಪ ಬಂದಾಗ, ನನ್ನೊಳಗೆ ಬೇರೆ ಭಾವನೆಗಳು ಮೂಡಿದಾಗ ನನಗೆ ಗೊತ್ತಿಲ್ಲದೇ ನನ್ನ ಮೂಗನ್ನು ಮುಟ್ಟಿಕೊಳ್ಳುತ್ತೇನೆ. ನನಗೆ ಟೆನ್ಷನ್‌ ಆದಾಗ, ನನಗೆ ನಾನೇ ಪ್ರತಿಕ್ರಿಯಿಸುವ ರೀತಿಯದು. ಹಾಗಂತ ಅದಕ್ಕೆ ಇಂಥದ್ದೇ ಕಾರಣ ಅಂತ ಏನೂ ಇಲ್ಲ. ಮನುಷ್ಯರೆಂದ ಮೇಲೆ ಎಲ್ಲರೂ ಒಂದೇ ರೀತಿ ಇರಲ್ಲ. ಒಬ್ಬೊಬ್ಬರಿಗೂ ಅವರವರದೇ ಆದ ಒಂದಷ್ಟು ಹವ್ಯಾಸಗಳಿರುತ್ತವೆ. ಅಭ್ಯಾಸಗಳಿರುತ್ತವೆ. ನನಗೂ ನನ್ನದೇ ಆದ ಒಂದಷ್ಟು ಹಾವ ಭಾವಗಳಿವೆ. ಅದರಲ್ಲಿ ಇದೂ ಒಂದು. ಆರಂಭದಲ್ಲಿ ಹೀಗೆ ಮೂಗು ಮುಟ್ಟಿಕೊಳ್ಳುವ ವಿಚಾರ ನನ್ನ ಗಮನಕ್ಕೇ ಬಂದಿರಲಿಲ್ಲ"

"ಆಪ್ತ ವಲಯದಲ್ಲಿರುವ ಕೆಲವರು ನನ್ನ ಈ ಅಭ್ಯಾಸವನ್ನು ಗಮನಿಸಿ ನನ್ನ ಗಮನಕ್ಕೆ ತಂದಿದ್ದರು. ಅವರು ಹೇಳಿದ್ದಾರೆಂದ ಮಾತ್ರಕ್ಕೆ ನನಗೆ ಅದನ್ನು ಅಷ್ಟು ಬೇಗನೆ ಬಿಡಲು ಸಾಧ್ಯವಾಗಿಲ್ಲ. ಅದನ್ನು ಬಿಡಬೇಕು ಎಂದೂ ನಾನು ನಿಂತಿಲ್ಲ. ಅದು ನನ್ನ ಐಡೆಂಟಿಟಿ ಆಗಿರಬಹುದು. ಎಲ್ಲರಿಗೂ ಒಂದೊಂದು ಹಾವಭಾವ ಇದ್ದಂತೆ, ನನಗೂ ಈ ಮೂಗು ಮುಟ್ಟಿಕೊಳ್ಳುವ ಅಭ್ಯಾಸ ರೂಢಿಯಾಗಿದೆ" ಎಂದಿದ್ದಾರೆ.

ಇಂಡಸ್ಟ್ರಿ ಫ್ರೆಂಡ್ಸ್‌ ಮಾಡಿಕೊಳ್ಳೋ ಜಾಗ ಅಲ್ಲ..

ರ್ಯಾಪಿಡ್‌ ರಶ್ಮಿ ಯೂಟ್ಯೂಬ್‌ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಸುದೀರ್ಘ ಒಂದು ಗಂಟೆಗಳ ಕಾಲ ಮಾತನಾಡಿರುವ ನಮ್ರತಾ, ಬಣ್ಣದ ಲೋಕದಲ್ಲಿನ ಗೆಳಯರ ಬಗ್ಗೆಯೂ ಮಾತನಾಡಿದ್ದಾರೆ. "ಮೊದಲಿಂದಲೂ ನಾನು ಹೆಚ್ಚು ಸ್ನೇಹಿತರ ಜತೆಗಿದ್ದವಳಲ್ಲ. ನನ್ನದೇ ಆದ ಒಂದು ಪುಟ್ಟ ಸರ್ಕಲ್‌ ಇದೆ. ಆರೇಳು ಮಂದಿ ಅಷ್ಟೇ ಅಲ್ಲಿ ಕಾಣ್ತಾರೆ. ಈ ಇಂಡಸ್ಟ್ರಿ ಗೆಳೆಯರನ್ನು ಮಾಡಿಕೊಳ್ಳುವ ಸೂಕ್ತ ಜಾಗ ಅಂತ ನನಗನಿಸಿಲ್ಲ. ಎಲ್ಲಿಯೂ ಹೋದರೂ, ತುಳಿದು ಮೇಲೆ ಬರಲು ಪ್ರಯತ್ನಿಸುವವರೇ ಅಧಿಕ. ಅದರಲ್ಲೂ ಮನರಂಜನಾ ಇಂಡಸ್ಟ್ರಿಯಲ್ಲಿ ಅದು ಚೂರು ಜಾಸ್ತಿನೇ ಅನ್ನೋ ಮಾತಿದೆ. ಈಗಾಗಲೇ ಅಂಥ ಒಂದಷ್ಟು ಅನುಭವಗಳ ನನಗಾಗಿವೆ. ನನ್ನನ್ನು ನಿಜವಾಗಿಯೂ ಬೆಂಬಲಿಸುವವರನ್ನು ಮಾತ್ರ ನಾನು ನನ್ನ ಜತೆಗಿರಿಸಿಕೊಂಡಿದ್ದೇನೆ" ಎಂಬುದು ನಮ್ರತಾ ಮಾತು.

ಟಿ20 ವರ್ಲ್ಡ್‌ಕಪ್ 2024