ನಾಗಚೈತನ್ಯ ಹಾಗೂ ಶೋಭಿತಾ ಧೂಳಿಪಾಲ ಮದುವೆ ಡೇಟ್ ಫಿಕ್ಸ್; ಮದುವೆಗೆ ಯಾರೆಲ್ಲ ಬರ್ತಿದ್ದಾರೆ ನೋಡಿ
ನಾಗಚೈತನ್ಯ ಹಾಗೂ ಶೋಭಿತಾ ಧೂಳಿಪಾಲ ಮದುವೆ ದಿನಾಂಕ ಹೊರಬಿದ್ದಿದೆ. ಹೈದ್ರಾಬಾದ್‌ನಲ್ಲಿ ಅವರಿಬ್ಬರೂ ಮದುವೆಯಾಗಲಿದ್ದಾರೆ. ಇನ್ನು ಮದುವೆಗೆ ಯಾರೆಲ್ಲ ಬರಲಿದ್ದಾರೆ ಎಂಬ ಮಾಹಿತಿ ಇಲ್ಲಿದೆ.
ನಾಗ ಚೈತನ್ಯ ಮತ್ತು ಶೋಭಿತಾ ಧೂಳಿಪಾಲ ಈ ವರ್ಷ ಆಗಸ್ಟ್‌ನಲ್ಲಿ ಹೈದರಾಬಾದ್‌ನಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದು ಸದ್ಯದಲ್ಲೇ ಮದುವೆಯಾಗಲಿದ್ದಾರೆ. ಈ ಜೋಡಿಯ ವಿವಾಹ ಯಾವಾಗ ಎಂಬ ಪ್ರಶ್ನೆಗೆ ನಾವಿಲ್ಲಿ ಉತ್ತರ ನೀಡಿದ್ದೇವೆ. ಎರಡು ವರ್ಷಗಳ ಡೇಟಿಂಗ್ ನಂತರ ಆಗಸ್ಟ್ 8 ರಂದು ಹೈದರಾಬಾದ್‌ನಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿರುವ ಇವರಿಬ್ಬರೂ ತಮ್ಮ ಮದುವೆಯ ಹಾರ ಬದಲಾಯಿಸಿಕೊಳ್ಳುವ ಮುಹೂರ್ತ ಹತ್ತಿರ ಬರುತ್ತಿದೆ. ಇವರಿಬ್ಬರ ಮದುವೆ ಮುಂದಿನ ತಿಂಗಳಿನಲ್ಲಿ ನಡೆಯಲಿದೆ. ಅಂದರೆ ಡಿಸೆಂಬರ್ 4 ರಂದು ನಡೆಯಲಿದೆ ಎಂದು ಮೂಲಗಳು ಹಿಂದೂಸ್ತಾನ್ ಟೈಮ್ಸ್‌ಗೆ ಮಾಹಿತಿ ನೀಡಿದೆ.
ಇವರಿಬ್ಬರ ಮದುವೆ ಬೆಳಗ್ಗೆ ಅಥವಾ ಸಂಜೆ ನಡೆಯಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ. ಈ ಬಗ್ಗೆ ಅಧಿಕೃತವಾಗಿ ಯಾವುದೇ ಮಾಹಿತಿಯನ್ನು ನಾಗಚೈತನ್ಯ ಅಥವಾ ಶೋಭಿತಾ ಧೂಳಿಪಾಲ್ ಯಾರೊಬ್ಬರೂ ಹಂಚಿಕೊಂಡಿಲ್ಲ. ಆದರೂ ಮದುವೆ ಸಿದ್ಧತೆಗಳು ಈಗಾಗಲೇ ಆರಂಭವಾಗಿದೆ. ಇನ್ನು ಕೆಲ ದಿನಗಳ ಹಿಂದೆ ಅವರಿಬ್ಬರೂ ಸಹ ತಮ್ಮ ವಿವಾಹ ಪೂರ್ವ ಸಂಪ್ರದಾಯಗಳನ್ನು ನಡೆಸಿದ ಫೋಟೋವನ್ನು ಶೋಭಿತಾ ಅವರೇ ಹಂಚಿಕೊಂಡಿದ್ದರು.
ಇನ್ನು ಇವರಿಬ್ಬರ ಮದುವೆ ಸಮಾಚಾರ ಕೇಳಿದ ಸಮಂತಾ ಫ್ಯಾನ್ಸ್ ಇನ್ನೂ ಬೇಸರದಲ್ಲಿದ್ದಾರೆ. ನಾಗಚೈತನ್ಯ ಮಾಡುತ್ತಿರುವುದು ಸರಿಯಲ್ಲ ಎಂದು ಹೇಳುತ್ತಿದ್ದಾರೆ.
ಯಾರೆಲ್ಲ ಬರ್ತಾರೆ?
ಶೋಭಿತಾ ಅವರ ಕುಟುಂಬದ ಸದಸ್ಯರು, ಅಕ್ಕಿನೇನಿ ಮತ್ತು ದಗ್ಗುಬಾಟಿ ಕುಟುಂಬಗಳನ್ನು ಹೊರತುಪಡಿಸಿ ಆಪ್ತವಲಯದ ಕೆಲವರಿಗೆ ಮಾತ್ರ ಆಮಂತ್ರಣವಿದ್ದಂತಿದೆ. ತುಂಬಾ ಸಿಂಪಲ್ ಆಗಿ ಮದುವೆ ಮಾಡಿಕೊಳ್ಳಲಿದ್ದಾರಂತೆ.
ತಮ್ಮ ಡೇಟಿಂಗ್ ಸುದ್ದಿಯನ್ನು ಸಾಧ್ಯವಾದಷ್ಟು ಕಾಲ ರಹಸ್ಯವಾಗಿಟ್ಟ ಇವರಿಬ್ಬರು ಈಗ ಮದುವೆಯ ಬಗ್ಗೂ ಅಷ್ಟೊಂದು ಮಾತನಾಡಿಲ್ಲ. 2022 ರಲ್ಲಿ ಪರಸ್ಪರ ಪ್ರೀತಿಸಲು ಪ್ರಾರಂಭಿಸಿದರೂ ಯಾರಿಗೂ ಈ ಬಗ್ಗೆ ಮಾಹಿತಿ ಇರಲಿಲ್ಲ. 2024ರಲ್ಲಿ ಇವರಿಬ್ಬರ ಸಂಬಂಧದ ಬಗ್ಗೆ ಎಲ್ಲರಿಗೂ ಗೊತ್ತಾಗಿದೆ. ಇನ್ನು ಮದುವೆಯನ್ನು ಆದಷ್ಟು ಸಿಂಪಲ್ ಆಗಿ ಮಾಡಿಕೊಳ್ಳಲು ನಿರ್ಧರಿಸಿದಂತಿದೆ. ಆದರೆ ಇದೇ ಸಂದರ್ಭದಲ್ಲಿ ಸಂಪ್ರದಾಯಗಳಿಗೆ ಹೆಚ್ಚಿನ ಆದ್ಯತೆ ನೀಡುವಂತೆ ತೋರುತ್ತಿದೆ.
ಶೋಭಿತಾ ಧೂಳಿಪಾಲ ಮತ್ತು ನಾಗ ಚೈತನ್ಯ ತಮ್ಮ ಮದುವೆಯ ತಯಾರಿಯನ್ನು ಪ್ರಾರಂಭಿಸಿದ್ದಾರೆ. ಇವರಿಬ್ಬರು ಶೀಘ್ರದಲ್ಲೇ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ.ಮದುವೆಯ ಪೂರ್ವ ಸಮಾರಂಭದ ಸುಂದರವಾದ ಫೊಟೋಗಳನ್ನು ಶೋಭಿತಾ ಕೆಲ ದಿನಗಳ ಹಿಂದೆಯೇ ಹಂಚಿಕೊಂಡಿದ್ದರು. “ಗೋಧುಮ ರೈ ಪಸುಪು ದಂಚತಂ” ಎಂದು ಅವರು ತಮ್ಮ ಪೋಸ್ಟ್‌ಗೆ ಕ್ಯಾಪ್ಶನ್ ನೀಡಿದ್ದಾರೆ. ಇದರ ಅರ್ಥ ಹೀಗಿದೆ. ಗೋಧೂಮ ಎಂದರೆ ಗೋಧಿ. ರಾಯ ಎಂದರೆ ಕಲ್ಲು. ಪಸುಪು ಎಂದರೆ ಅರಿಶಿನ. ದಂಚತಂ ಎಂದರೆ ಪುಡಿ ಮಾಡುವುದು. ಅದಕ್ಕೆ ತಕ್ಕಂತೆ ಫೋಟೋಗಳನ್ನೂ ಸಹ ಅವರು ಪೋಸ್ಟ್ ಮಾಡಿದ್ದರು.
ಸಾಂಪ್ರದಾಯಿಕ ಆಚರಣೆಯನ್ನು ಆಚರಿಸುವ ಮೂಲಕ ಮದುವೆಯ ಸಮಾರಂಭಕ್ಕೆ ಅಣಿಯಾಗುತ್ತಿದ್ದಾರೆ. ಸುಂದರವಾದ ಗೋಲ್ಡನ್ ಮತ್ತು ಹಸಿರು ಬಣ್ಣದ ಕಾಂಬಿನೇಷನ್ ಇರುವ ಸೀರೆಯನ್ನು ಅವರು ಉಟ್ಟ ಫೋಟೋಗಳು ಎಲ್ಲ ಕಡೆ ಹರಿದಾಡಿತ್ತು.