Matsyagandha OTT: ಖಾಕಿ ಲುಕ್‌ನಲ್ಲಿ ಲವರ್‌ಬಾಯ್‌ ಪೃಥ್ವಿ ಅಂಬಾರ್‌; ಈ ಶುಕ್ರವಾರ ಒಟಿಟಿಯಲ್ಲಿ ಮತ್ಸ್ಯಗಂಧ ಸಿನಿಮಾ ಬಿಡುಗಡೆ-ott movies matsyagandha ott release date sept 20 where to watch pruthvi ambaar kannada cop drama film pcp ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  Matsyagandha Ott: ಖಾಕಿ ಲುಕ್‌ನಲ್ಲಿ ಲವರ್‌ಬಾಯ್‌ ಪೃಥ್ವಿ ಅಂಬಾರ್‌; ಈ ಶುಕ್ರವಾರ ಒಟಿಟಿಯಲ್ಲಿ ಮತ್ಸ್ಯಗಂಧ ಸಿನಿಮಾ ಬಿಡುಗಡೆ

Matsyagandha OTT: ಖಾಕಿ ಲುಕ್‌ನಲ್ಲಿ ಲವರ್‌ಬಾಯ್‌ ಪೃಥ್ವಿ ಅಂಬಾರ್‌; ಈ ಶುಕ್ರವಾರ ಒಟಿಟಿಯಲ್ಲಿ ಮತ್ಸ್ಯಗಂಧ ಸಿನಿಮಾ ಬಿಡುಗಡೆ

Matsyagandha OTT: ಈ ಶುಕ್ರವಾರ (ಸೆ 19) ಒಟಿಟಿಯಲ್ಲಿ ಮತ್ಸ್ಯಗಂಧ ಕನ್ನಡ ಸಿನಿಮಾ ಬಿಡುಗಡೆಯಾಗುತ್ತಿದೆ. ಪೃಥ್ವಿ ಅಂಬಾರ್‌ ಖಾಕಿ ಖದರ್‌ನಲ್ಲಿ ನಟಿಸಿರುವ ಈ ಚಿತ್ರವನ್ನು ಆನ್‌ಲೈನ್‌ನಲ್ಲಿ ನೋಡಲು ಬಯಸುವವರಿಗೆ ಹೆಚ್ಚಿನ ವಿವರ ಇಲ್ಲಿ ನೀಡಲಾಗಿದೆ. ಈ ವಾರ ಚಿತ್ರಮಂದಿರಗಳು ಮತ್ತು ಒಟಿಟಿಗಳಲ್ಲಿ ಅತ್ಯಂತ ಕಡಿಮೆ ಸಂಖ್ಯೆಯಲ್ಲಿ ಸಿನಿಮಾಗಳು ಬಿಡುಗಡೆಯಾಗುತ್ತಿವೆ.

ಖಾಕಿ ಲುಕ್‌ನಲ್ಲಿ ಲವರ್‌ಬಾಯ್‌ ಪೃಥ್ವಿ ಅಂಬಾರ್‌ ನಟಿಸಿರುವ  ಮತ್ಸ್ಯಗಂಧ ಸಿನಿಮಾ ಒಟಿಟಿಯಲ್ಲಿ ಬಿಡುಗಡೆಯಾಗುತ್ತಿದೆ.
ಖಾಕಿ ಲುಕ್‌ನಲ್ಲಿ ಲವರ್‌ಬಾಯ್‌ ಪೃಥ್ವಿ ಅಂಬಾರ್‌ ನಟಿಸಿರುವ ಮತ್ಸ್ಯಗಂಧ ಸಿನಿಮಾ ಒಟಿಟಿಯಲ್ಲಿ ಬಿಡುಗಡೆಯಾಗುತ್ತಿದೆ.

Matsyagandha OTT: ಕನ್ನಡ ನಟ ಪೃಥ್ವಿ ಅಂಬಾರ್‌ ಮೊದಲ ಬಾರಿಗೆ ಖಾಕಿ ಅವತಾರದಲ್ಲಿ ಕಾಣಿಸಿಕೊಂಡ ಚಿತ್ರ "ಮತ್ಸ್ಯಗಂಧ". ಕೆಲವು ಸಮಯದ ಹಿಂದೆ ಚಿತ್ರಮಂದಿರಗಳಲ್ಲಿ ಬಿಡುಗಡೆಗೊಂಡಿದ್ದ ಈ ಸಿನಿಮಾವನ್ನು ದೇವ್‌ರಾಜ್‌ ಪೂಜಾರಿ ನಿರ್ದೇಶನ ಮಾಡಿದ್ದರು. ಈ ಥ್ರಿಲ್ಲರ್‌ ಸಿನಿಮಾವನ್ನು ಆನ್‌ಲೈನ್‌ನಲ್ಲಿ ನಾಳೆಯಿಂದ ನೋಡಬಹುದು. ಕೊನೆಗೂ ಈ ಚಿತ್ರಕ್ಕೆ ಒಟಿಟಿ ಪಾಟ್ನರ್‌ ದೊರಕಿದ್ದು, ಮನೆಯ ಟಿವಿಯಲ್ಲಿ, ಕಂಪ್ಯೂಟರ್‌ನಲ್ಲಿ ಅಥವಾ ಮೊಬೈಲ್‌ ಫೋನ್‌ಗಳಲ್ಲಿ ಮತ್ಸ್ಯಗಂಧವನ್ನು ಸಿನಿಮಾಪ್ರೇಮಿಗಳು ಕಣ್ತುಂಬಿಕೊಳ್ಳಬಹುದು. ಸೆಪ್ಟೆಂಬರ್‌ 20ರಂದು ಸಿನಿಬಜಾರ್‌ ಒಟಿಟಿಯಲ್ಲಿ ರೆಂಟ್‌ ರೂಪದಲ್ಲಿ ಮತ್ಸ್ಯಗಂಧ ಸಿನಿಮಾ ಬಿಡುಗಡೆಯಾಗುತ್ತಿದೆ. ಕನ್ನಡ ಸಿನಿಮಾ ಪ್ರೇಮಿಗಳು 49 ರೂಪಾಯಿ ನೀಡಿ ಈ ಚಿತ್ರವನ್ನು ಕಣ್ತುಂಬಿಕೊಳ್ಳಬಹುದು.

ಮತ್ಸ್ಯಗಂಧ ಸಿನಿಮಾದಲ್ಲಿ ಪೊಲೀಸ್‌ ಅಧಿಕಾರಿಯಾದ ಪೃಥ್ವಿ ಅಂಬಾರ್‌

ಪ್ರೀತಿ ಪ್ರೇಮ ಪ್ರಣಯದಂತಹ ಲವರ್‌ ಬಾಯ್‌ ಸಿನಿಮಾಗಳ ಮೂಲಕ ಸ್ಯಾಂಡಲ್‌ವುಡ್‌ನ ಗಮನ ಸೆಳೆದ ಪೃಥ್ವಿ ಅಂಬಾರ್‌ ಮತ್ಸ್ಯಗಂಧ ಸಿನಿಮಾದಲ್ಲಿ ಪೊಲೀಸ್‌ ಅಧಿಕಾರಿಯಾಗಿ ಕಾಣಿಸಿದ್ದಾರೆ. ಪೃಥ್ವಿ ಅಂಬಾರ್‌ ಈ ಚಿತ್ರದಲ್ಲಿ ಪರಮ್‌ ಎಂಬ ಪೊಲೀಸ್‌ ಅಧಿಕಾರಿಯಾಗಿದ್ದಾರೆ. ಟೊಂಕ ಪೊಲೀಸ್‌ ಸ್ಟೇಷನ್‌ಗೆ ಪ್ರೊಬೆಷನರಿಯಾಗಿ ಕೆಲಸಕ್ಕೆ ಸೇರಿದ್ದಾರೆ. ಈ ಊರಲ್ಲಿ ಯಾವುದೇ ಕೇಸ್‌ಗಳೇ ಇರುವುದಿಲ್ಲ. ಹೀಗಾಗಿ, ಇಲ್ಲಿ ಕೆಲಸ ಮಾಡಲು ಯಾವುದೇ ಪೊಲೀಸರಿಗೆ ಮನಸ್ಸಿಲ್ಲ. ಈ ಸಮಯದಲ್ಲಿ ಪರಮ್‌ಗೆ ಇನ್‌ಸ್ಪೆಕ್ಟರ್‌ ಆಗಿ ಬಡ್ತಿ ದೊರಕುತ್ತದೆ. ಆರಂಭದಲ್ಲಿ ಈ ಸಿನಿಮಾದಲ್ಲಿ ಅಘನಾಶಿನಿ ತೀರವನ್ನು ತುಂಬಾ ಸುಂದರವಾಗಿ ತೋರಿಸಿದ್ದಾರೆ. ಆರಂಭದಲ್ಲಿ ಕ್ಲಾಸ್‌ ಆಗಿ ಗಮನ ಸೆಳೆದ ಸಿನಿಮಾ ಬಳಿಕ ಮಾಸ್‌ ಅವತಾರ ತಾಳುತ್ತದೆ. ಗಾಂಜಾ ಅಮಲು, ಮೀನುಗಾರ ಹುಡುಗರ ಕಥೆ, ರಾಜಕೀಯ ಎಲ್ಲವೂ ಇಲ್ಲಿದೆ. ಪ್ರಶಾಂತ್‌ ಸಿದ್ಧಿ ಇಲ್ಲಿ ವಿಲನ್‌ ಆಗಿ ಮಿಂಚಿದ್ದಾರೆ. ಸ್ಥಳೀಯ ವಾದ್ಯಗಳೇ ಹಿನ್ನೆಲೆ ಸಂಗೀತವಾಗಿ ಆಪ್ತವಾಗುವಂತಹ ಸಿನಿಮಾವಿದು. ಈ ಊರಲ್ಲಿ ಪರಂಗೆ ಸವಾಲಿನ ಕೇಸ್‌ ದೊರಕುತ್ತದೆ. ಇದನ್ನು ಹೇಗೆ ಬಗೆಹರಿಸುತ್ತಾರೆ ಎನ್ನುವುದೇ ಮತ್ಸ್ಯಗಂಧ ಸಿನಿಮಾದ ಪ್ರಮುಖಾಂಶ.

“ಮತ್ಸ್ಯಗಂಧ’ ಸಿನಿಮಾದಲ್ಲಿ ಪೃಥ್ವಿ ಅಂಬರ್‌ ಮಾತ್ರವಲ್ಲದೆ ಪ್ರಶಾಂತ್‌ ಸಿದ್ಧಿ, ನಾಗರಾಜ್‌ ಬೈಂದೂರ್‌, ಶರತ್‌ ಲೋಹಿತಾಶ್ವ, ಮೈಮ್‌ ರಾಮದಾಸ್‌ ಮುಂತಾದವರು ನಟಿಸಿದ್ದಾರೆ. ಈ ಸಿನಿಮಾದಲ್ಲಿ ವಿಲನ್‌ ರೋಲ್‌ನಲ್ಲಿ ಪ್ರಶಾಂತ್‌ ಸಿದ್ಧಿ ಭಿನ್ನವಾಗಿ ನಟಿಸಿದ್ದಾರೆ. ಈ ಚಿತ್ರದ ಹಾಡುಗಳಿಗೆ ಪ್ರಶಾಂತ್‌ ಸಿದ್ಧಿ ಸಂಗೀತ ಸಂಯೋಜನೆ ಮಾಡಿದ್ದು ವಿಶೇಷ. ಈ ಮೂಲಕ ಇವರು ಸಂಗೀತ ನಿರ್ದೇಶಕರಾಗಿಯೂ ಸ್ಯಾಂಡಲ್‌ವುಡ್‌ಗೆ ಎಂಟ್ರಿ ನೀಡಿದ್ದರು.

ಸಿನಿಬಜಾರ್‌ನಲ್ಲಿ ಕನ್ನಡ ಸಿನಿಮಾಗಳು

ಸಿನಿಬಜಾರ್‌ ಒಟಿಟಿಯ ಸಿನಿ ಲೈಬ್ರೆರಿಗೆ ಮತ್ಸ್ಯಗಂಧ ಸೇರುತ್ತಿದೆ. ಈಗಾಗಲೇ ಹಲವು ಕನ್ನಡ ಸಿನಿಮಾಗಳು ಸಿನಿಬಜಾರ್‌ನಲ್ಲಿದೆ. ಉಸಿರೇ ಉಸಿರೇ, ದಾಸಪ್ಪ, ಟಗರುಪಲ್ಯ, ಆರ್ಕೆಸ್ಟ್ರಾ ಮೈಸೂರು, ಚೌಚೌ ಬಾತ್‌ ಸೇರಿದಂತೆ ಹಲವು ಕನ್ನಡ ಸಿನಿಮಾಗಳು ಇವೆ.

ಪೃಥ್ವಿ ಅಂಬಾರ್‌ ಇತ್ತೀಚೆಗೆ ಎ ಡೇಸ್‌ ಇನ್‌ ಡಾಲರ್ಸ್‌ಪೇಟೆ ಸಿನಿಮಾದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಇವರು ನಟಿಸಿರುವ ಭವನಂ ಗಗನಂ ಸಿನಿಮಾ ನವೆಂಬರ್‌ನಲ್ಲಿ ಬಿಡುಗಡೆಯಾಗುವ ಸೂಚನೆಯಿದೆ. ಈ ಸಿನಿಮಾದಲ್ಲಿ ಪ್ರಮೋದ್‌ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಇದು ಟ್ರಾವೆಲ್‌ ಆಧರಿತ ಸಿನಿಮಾವಾಗಿದೆ.

mysore-dasara_Entry_Point