Kalki 2898 AD OTT: ಒಟಿಟಿಯಲ್ಲಿ ಕಲ್ಕಿ ಅಬ್ಬರ; 2 ಒಟಿಟಿಗಳಲ್ಲಿ 5 ಭಾಷೆಗಳಲ್ಲಿ ಕಲ್ಕಿ 2898 ಎಡಿ ಸಿನಿಮಾ ಬಿಡುಗಡೆ-ott news kalki 2898 ad ott release august 22 in 2 ott platforms watch prabhas movie prime video netfilx pcp ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  Kalki 2898 Ad Ott: ಒಟಿಟಿಯಲ್ಲಿ ಕಲ್ಕಿ ಅಬ್ಬರ; 2 ಒಟಿಟಿಗಳಲ್ಲಿ 5 ಭಾಷೆಗಳಲ್ಲಿ ಕಲ್ಕಿ 2898 ಎಡಿ ಸಿನಿಮಾ ಬಿಡುಗಡೆ

Kalki 2898 AD OTT: ಒಟಿಟಿಯಲ್ಲಿ ಕಲ್ಕಿ ಅಬ್ಬರ; 2 ಒಟಿಟಿಗಳಲ್ಲಿ 5 ಭಾಷೆಗಳಲ್ಲಿ ಕಲ್ಕಿ 2898 ಎಡಿ ಸಿನಿಮಾ ಬಿಡುಗಡೆ

Kalki 2898 AD OTT Release: ಪ್ರಭಾಸ್‌, ದೀಪಿಕಾ ಪಡುಕೋಣೆ, ಅಮಿತಾಬ್‌ ಬಚ್ಚನ್‌ ನಟನೆಯ ಕಲ್ಕಿ 2898 ಎಡಿ ಸಿನಿಮಾ ಒಟಿಟಿಯಲ್ಲಿ ಬಿಡುಗಡೆಯಾಗಲು ಕೆಲವೇ ಗಂಟೆಗಳು ಬಾಕಿ ಉಳಿದಿವೆ. ಕಲ್ಕಿ ಸಿನಿಮಾ ಆಗಸ್ಟ್‌ 22ರಂದು ಅಂದ್ರೆ ಇಂದು ಮಧ್ಯರಾತ್ರಿ ಒಟಿಟಿಯಲ್ಲಿ ಬಿಡುಗಡೆಯಾಗಲಿದೆ.

2 ಒಟಿಟಿಗಳಲ್ಲಿ 5 ಭಾಷೆಗಳಲ್ಲಿ ಕಲ್ಕಿ 2898 ಎಡಿ ಸಿನಿಮಾ ಬಿಡುಗಡೆ
2 ಒಟಿಟಿಗಳಲ್ಲಿ 5 ಭಾಷೆಗಳಲ್ಲಿ ಕಲ್ಕಿ 2898 ಎಡಿ ಸಿನಿಮಾ ಬಿಡುಗಡೆ (HT_PRINT)

Kalki 2898 AD OTT Release Date: ಈ ವರ್ಷದ ಬ್ಲಾಕ್‌ಬಸ್ಟರ್‌ ಸಿನಿಮಾ ಕಲ್ಕಿ 2898 ಎಡಿ ಕೊನೆಗೂ ಒಟಿಟಿಗೆ ಆಗಮಿಸಲು ಕ್ಷಣಗಣನೆ ಆರಂಭವಾಗಿದೆ. ಇಂದು ಮಧ್ಯರಾತ್ರಿ ಅಂದರೆ ಆಗಸ್ಟ್‌ 22ರಂದು ಒಟಿಟಿಗಳಲ್ಲಿ ಸ್ಟ್ರೀಮಿಂಗ್‌ ಆಗಲಿದೆ. ಪ್ರಭಾಸ್ ಮತ್ತು ದೀಪಿಕಾ ಅಭಿನಯದ ನಾಗ್ ಅಶ್ವಿನ್ ನಿರ್ದೇಶನದ ಈ ವೈಜ್ಞಾನಿಕ ಚಿತ್ರವು ಏಕಕಾಲದಲ್ಲಿ ಎರಡು ಒಟಿಟಿಗಳಲ್ಲಿ ರಿಲೀಸ್‌ ಆಗಲಿದೆ. ಕಲ್ಕಿ 2898 ಎಡಿ ವಿಶ್ವಾದ್ಯಂತ 1200 ಕೋಟಿ ರೂಪಾಯಿಗೂ ಹೆಚ್ಚು ಕಲೆಕ್ಷನ್ ಮಾಡಿದೆ. ಈ ಸಾಧನೆ ಮಾಡಿದ ಆರನೇ ಭಾರತೀಯ ಸಿನಿಮಾವಾಗಿದೆ. ಆಗಸ್ಟ್‌ 22ರಂದು ಈ ಸಿನಿಮಾ ಒಟಿಟಿಗಳಲ್ಲಿ ರಿಲೀಸ್‌ ಆಗಲಿದೆ. ಅಂದರೆ, ಇಂದು ಮಧ್ಯರಾತ್ರಿಯಿಂದಲೇ ಆನ್‌ಲೈನ್‌ನಲ್ಲಿ ಮನೆಯಲ್ಲೇ ಕಲ್ಕಿ ಸಿನಿಮಾ ನೋಡಬಹುದು. ಕನ್ನಡ ಭಾಷೆಯಲ್ಲೂ ಕಲ್ಕಿ ಸಿನಿಮಾದ ವೈಭವವನ್ನು ಕಣ್ತುಂಬಿಕೊಳ್ಳಬಹುದು.

ಕಲ್ಕಿ 2898 ಎಡಿ ಒಟಿಟಿ ಬಿಡುಗಡೆ ದಿನಾಂಕ

ಕಲ್ಕಿ 2898 ಎಡಿ ಸಿನಿಮಾವು ಗುರುವಾರದಿಂದ (ಆಗಸ್ಟ್ 22) ಅಮೆಜಾನ್ ಪ್ರೈಮ್ ವಿಡಿಯೋ ಮತ್ತು ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮಿಂಗ್ ಆಗಲಿದೆ. ಅಂದರೆ ಬುಧವಾರ ಮಧ್ಯರಾತ್ರಿಯಿಂದ ಈ ಸಿನಿಮಾ ನೋಡಬಹುದಾಗಿದೆ.. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆಯಾದ ಈ ಚಲನಚಿತ್ರವು ಈಗ ಐದು ಭಾಷೆಗಳಲ್ಲಿ ಒಟಿಟಿಗಳಲ್ಲಿ ಸ್ಟ್ರೀಮ್ ಆಗುತ್ತಿದೆ. ಇದು ತೆಲುಗು, ತಮಿಳು, ಕನ್ನಡ ಮತ್ತು ಮಲಯಾಳಂ ಭಾಷೆಗಳಲ್ಲಿ ಪ್ರೈಮ್ ವಿಡಿಯೋದಲ್ಲಿ ಬಿಡುಗಡೆಯಾಗಲಿದೆ. ಚಿತ್ರಮಂದಿರಗಳಲ್ಲಿ ನೋಡಿರುವವರು, ನೋಡದೆ ಇರುವವರು ಈ ಸಿನಿಮಾ ನೋಡಬಹುದು.

ಯಾವ ಒಟಿಟಿಯಲ್ಲಿ ಕಲ್ಕಿ ಸಿನಿಮಾ ಪ್ರಸಾರ?

ಕಲ್ಕಿ 2898 ಎಡಿ ಸಿನಿಮಾದ ಹಿಂದಿ ಆವೃತ್ತಿಯು ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮಿಂಗ್ ಆಗಲಿದೆ. ಅಮೆಜಾನ್‌ ಪ್ರೈಮ್‌ ವಿಡಿಯೋದಲ್ಲಿ ಕನ್ನಡ ಸೇರಿದಂತೆ ಇತರೆ ಭಾರತೀಯ ಭಾಷೆಗಳಲ್ಲಿ ಸ್ಟ್ರೀಮಿಂಗ್‌ ಆಗಲಿದೆ. ಚಿತ್ರಮಂದಿರಗಳಲ್ಲಿ ತೆಲುಗು ಅಥವಾ ಹಿಂದಿ ಭಾಷೆಯಲ್ಲಿ ನೋಡಿದ್ದರೆ ಈಗ ಅಮೆಜಾನ್‌ ಪ್ರೈಮ್‌ ವಿಡಿಯೋದಲ್ಲಿ ಕನ್ನಡದಲ್ಲಿ ನೋಡಬಹುದಾಗಿದೆ.

ಕಲ್ಕಿ 2898 ಎಡಿ ಸಿನಿಮಾ ಒಟಿಟಿಯಲ್ಲಿ ಸ್ಟ್ರೀಮಿಂಗ್‌ ಆಗುವ ಕೆಲವು ಗಂಟೆಗಳ ಮೊದಲು ಅಮೆಜಾನ್‌ ಪ್ರೈಮ್ ವಿಡಿಯೋ ಆಸಕ್ತಿದಾಯಕ ವೀಡಿಯೊವೊಂದನ್ನು ಬಿಡುಗಡೆ ಮಾಡಿದೆ. ಸಿನಿಮಾದ ಎರಡನೇ ಭಾಗದಲ್ಲಿ ಏನಾಗಲಿದೆ ಎಂದು ಊಹಿಸಲು ಅಭಿಮಾನಿಗಳು ಸೃಷ್ಟಿಸಿದ ಥಿಯರಿಯ ವಿಡಿಯೋವನ್ನು ರಿಲೀಸ್‌ ಮಾಡಿದೆ. ಈ ವಿಡಿಯೋದಲ್ಲಿ ಫ್ಯಾನ್ಸ್‌ ಊಹೆಗೆ ನಿರ್ದೇಶಕ ನಾಗ್‌ ಅಶ್ವಿನ್‌ ಉತ್ತರ ನೀಡಿದ್ದಾರೆ.

"ಎರಡನೇ ಭಾಗದಲ್ಲಿ ಬುಜ್ಜಿ ಕಾರು ಬಿಳಿ ಕುದುರೆಯಾಗಿ ಬದಲಾಗಲಿದೆ. ಈ ಬುಜ್ಜಿ ಕುದುರೆ ದೀಪಿಕಾಗೆ ಹುಟ್ಟಲಿರುವ ಮಗನನ್ನು ತರುತ್ತಾನೆ" ಎಂದು ಅಭಿಮಾನಿಯೊಬ್ಬರು ಊಹಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ನಾಗ್ ಅಶ್ವಿನ್, "ಊಹೆ ಚೆನ್ನಾಗಿದೆ. ಅದು ಸುಳ್ಳಲ್ಲ" ಎಂದು ಸ್ಪಷ್ಟಪಡಿಸಿದ್ದಾರೆ. "ಪ್ರಭಾಸ್ ನಿಜವಾಗಿ ದೀಪಿಕಾ ಅವರ ಮಗ, ಅವರನ್ನು ರಕ್ಷಿಸಲು ಭವಿಷ್ಯದಿಂದ ಬರುತ್ತಾರೆ" ಎಂದು ಅಭಿಮಾನಿಯೊಬ್ಬರು ಹೇಳಿದ್ದಾರೆ.

"ಎರಡನೇ ಭಾಗದಲ್ಲಿ, ದುಲ್ಕರ್ ಸಲ್ಮಾನ್ ಪಾತ್ರವು ಮತ್ತೆ ಬಂದು ಪ್ರಭಾಸ್ ಬಗ್ಗೆ ಬಹಿರಂಗಪಡಿಸುತ್ತದೆ ಮತ್ತು ಸುಪ್ರೀಮ್ ಯಾಸ್ಕಿನ್ ಅನ್ನು ಕೊನೆಗೊಳಿಸಲು ವಿಜಯ್ ದೇವರಕೊಂಡ ಅವರ ಪಾತ್ರವೂ ಪ್ರಭಾಸ್ ಅವರೊಂದಿಗೆ ಕೈಜೋಡಿಸುತ್ತದೆ" ಎಂದೆಲ್ಲ ಫ್ಯಾನ್ಸ್‌ ಊಹಿಸಿದ್ದಾರೆ. ಆದರೆ, ಇವು ನಿಜವಲ್ಲ ಎಂದು ನಾಗ್‌ ಅಶ್ವಿನ್ ಸ್ಪಷ್ಟಪಡಿಸಿದ್ದಾರೆ.