ಕನ್ನಡ ಸುದ್ದಿ  /  ಮನರಂಜನೆ  /  Kalki 2898 Ad: ಜಾಗತಿಕ ಬಾಕ್ಸ್‌ ಆಫೀಸ್‌ನಲ್ಲಿ 900 ಕೋಟಿ ರೂ ಗಳಿಕೆ ಮಾಡಿದ ಕಲ್ಕಿ 2898 ಎಡಿ ಸಿನಿಮಾ; ಜಗತ್ತಿನಾದ್ಯಂತ ಕಲ್ಕಿ ಹವಾ

Kalki 2898 AD: ಜಾಗತಿಕ ಬಾಕ್ಸ್‌ ಆಫೀಸ್‌ನಲ್ಲಿ 900 ಕೋಟಿ ರೂ ಗಳಿಕೆ ಮಾಡಿದ ಕಲ್ಕಿ 2898 ಎಡಿ ಸಿನಿಮಾ; ಜಗತ್ತಿನಾದ್ಯಂತ ಕಲ್ಕಿ ಹವಾ

Kalki 2898 AD worldwide collection ₹900 crore: ಪ್ರಭಾಸ್‌, ದೀಪಿಕಾ ಪಡುಕೋಣೆ ನಟನೆಯ ಕಲ್ಕಿ 2898 ಎಡಿ ಸಿನಿಮಾವು ಜಾಗತಿಕ ಬಾಕ್ಸ್‌ ಆಫೀಸ್‌ನಲ್ಲಿ ತನ್ನ 11ನೇ ದಿನ 900 ಕೋಟಿ ರೂಪಾಯಿ ಗಳಿಕೆ ಮಾಡಿ ಹೊಸ ಮೈಲಿಗಲ್ಲು ತಲುಪಿದೆ.

Kalki 2898 AD: ಜಾಗತಿಕ ಬಾಕ್ಸ್‌ ಆಫೀಸ್‌ನಲ್ಲಿ 900 ಕೋಟಿ ರೂ ಗಳಿಕೆ ಮಾಡಿದ ಕಲ್ಕಿ 2898 ಎಡಿ
Kalki 2898 AD: ಜಾಗತಿಕ ಬಾಕ್ಸ್‌ ಆಫೀಸ್‌ನಲ್ಲಿ 900 ಕೋಟಿ ರೂ ಗಳಿಕೆ ಮಾಡಿದ ಕಲ್ಕಿ 2898 ಎಡಿ

ಬೆಂಗಳೂರು: ಪ್ರಭಾಸ್‌, ದೀಪಿಕಾ ಪಡುಕೋಣೆ ನಟನೆಯ ಕಲ್ಕಿ 2898 ಎಡಿ ಸಿನಿಮಾವು ಜಾಗತಿಕ ಬಾಕ್ಸ್‌ ಆಫೀಸ್‌ನಲ್ಲಿ ತನ್ನ 11ನೇ ದಿನ 900 ಕೋಟಿ ರೂಪಾಯಿ ಗಳಿಕೆ ಮಾಡಿ ಹೊಸ ಮೈಲಿಗಲ್ಲು ತಲುಪಿದೆ. ಅಮಿತಾಬ್‌ ಬಚ್ಚನ್‌, ಕಮಲ್‌ ಹಾಸನ್‌, ದೀಪಿಕಾ ಪಡುಕೋಣೆ, ದಿಶಾ ಪಟಾನಿ ಕೂಡ ಈ ಸಿನಿಮಾದಲ್ಲಿ ನಟಿಸಿದ್ದಾರೆ. ಇದೀಗ ಈ ಸಿನಿಮಾ ಗಳಿಕೆಯಲ್ಲಿ ಹೊಸ ದಾಖಲೆ ಮಾಡಿದ್ದು, ಶೀಘ್ರದಲ್ಲಿ 1 ಸಾವಿರ ಕೋಟಿ ರೂಪಾಯಿ ಗಳಿಕೆ ಮಾಡುವ ಸೂಚನೆ ಇದೆ.

ಕಲ್ಕಿ ಸಿನಿಮಾ ತಂಡವು ಈ ಕುರಿತು ಎಕ್ಸ್‌ನಲ್ಲಿ ಹೀಗೆ ಪೋಸ್ಟ್‌ ಮಾಡಿದೆ. ಈ ವಿವರದ ಜತೆ ಪ್ರಭಾಸ್‌ನ ಭೈರವ ಪೋಸ್ಟರ್‌ ಕೂಡ ಹಂಚಿಕೊಂಡಿದ್ದಾರೆ. "ಎಪಿಕ್‌ ಮಹಾ ಬ್ಲಾಕ್‌ಬಸ್ಟರ್‌ ಸಿನಿಮಾವು ಜಾಗತಿಕವಾಗಿ 900 ಕೋಟಿ ರೂಪಾಯಿಗೆ ಗಳಿಕೆ ಮಾಡಿದೆ. ಚಿತ್ರಮಂದಿರಗಳಲ್ಲಿ ಮ್ಯಾಜಿಕಲ್‌ ಮೈಲ್‌ಸ್ಟೋನ್‌" ಎಂದು ಪೋಸ್ಟ್‌ ಮಾಡಿದೆ.

ನಾಗ್‌ ಅಶ್ವಿನ್‌ ನಿರ್ದೇಶನದ ಈ ಸಿನಿಮಾವು ಜಾಗತಿಕ ಸಿನಿಪ್ರೇಕ್ಷಕರ ಗಮನ ಸೆಳೆದಿದೆ. ಈ ಹಿಂದೆ ನಾಗ್‌ ಅಶ್ವಿನ್‌ ಅವರು ಮಹಾನಟಿ ಮತ್ತು ಯೆವಡೆ ಸುಬ್ರಹ್ಮಣ್ಯಂನಂತಹ ಸಿನಿಮಾಗಳನ್ನು ಮಾಡಿದ್ದರು. ಈ ಸಿನಿಮಾವನ್ನು ವೈಜಯಂತಿ ಮೂವಿಸ್‌ನಡಿ ನಿರ್ಮಾಣ ಮಾಡಲಾಗಿದೆ.

ಟ್ರೆಂಡಿಂಗ್​ ಸುದ್ದಿ

ಭಾರತದ ಬಾಕ್ಸ್‌ ಆಫೀಸ್‌ನಲ್ಲಿ ಮೊದಲ ವಾರದಲ್ಲಿ ಈ ಸಿನಿಮಾವು 500 ಕೋಟಿ ರೂಪಾಯಿ ಗಳಿಕೆ ಮಾಡಿತ್ತು. ಜಾಗತಿಕವಾಗಿ ಸದ್ಯದಲ್ಲಿಯೇ ಒಂದು ಕೋಟಿ ರೂಪಾಯಿ ಗಳಿಕೆ ಮಾಡುವ ಸೂಚನೆಯಿದೆ.

ಈ ಸಿನಿಮಾದಲ್ಲಿ 81 ವರ್ಷ ವಯಸ್ಸಿನ ಅಮಿತಾಬ್‌ ಬಚ್ಚನ್‌ ಅವರು ಅಮರ ಯೋಧ ಅಶ್ವತ್ಥಾಮನ ಪಾತ್ರದಲ್ಲಿ ನಟಿಸಿದ್ದಾರೆ. ನಾಯಕ ನಟನಿಗಿಂತ ಅಶ್ವತ್ಥಾಮನ ಪಾತ್ರವು ಕಲ್ಕಿ ಸಿನಿಮಾದ ಮೊದಲ ಅಧ್ಯಾಯದಲ್ಲಿ ಗಮನ ಸೆಳೆದಿದೆ.

ಭಾರತದಲ್ಲಿ ಕಲ್ಕಿ ಸಿನಿಮಾದ ಕಲೆಕ್ಷನ್‌

ಹಿಂದೂಸ್ತಾನ್‌ ಟೈಮ್ಸ್‌ ಕನ್ನಡವು ಈಗಾಗಲೇ ವರದಿ ಮಾಡಿದಂತೆ ಕಲ್ಕಿ 2898 ಎಡಿ ಸಿನಿಮಾವು ಇಲ್ಲಿಯವರೆಗೆ ಭಾರತದಲ್ಲಿ ಒಟ್ಟು 521 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಜಾಗತಿಕವಾಗಿ 900 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಈ ಚಲನಚಿತ್ರವು ಜೂನ್‌ 27ರಂದು 95.3 ಕೋಟಿ ರೂಪಾಯಿ ಗಳಿಸಿತ್ತು. ಮರುದಿನ ಶುಕ್ರವಾರ 59.3 ಕೋಟಿ ರೂ. ಗಳಿಸಿತ್ತು. ಮೊದಲ ವೀಕೆಂಡ್‌ನಲ್ಲಿ ಬಿಸ್ನೆಸ್‌ ಪಿಕಪ್‌ ಆಗಿತ್ತು. ಮೊದಲ ಶನಿವಾರ 66.2 ಕೋಟಿ ರೂಪಾಯಿ ಮತ್ತು ಭಾನುವಾರ 88.2 ಕೋಟಿ ರೂಪಾಯಿ ಸಂಗ್ರಹಿಸಿತ್ತು.

ಬಳಿಕ ವಾರದ ಇತರೆ ದಿನಗಳಲ್ಲಿತೆ ಕಲ್ಕಿ 2898 ಎಡಿ ಬಿಸ್ನೆಸ್‌ ಕಡಿಮೆಯಾಗಿತ್ತು. ಸೋಮವಾರ 34.15 ಕೋಟಿ ರೂಪಾಯಿ, ಮಂಗಳವಾರ 27.05 ಕೋಟಿ ರೂಪಾಯಿ, ಬುಧವಾರ 22.7 ಕೋಟಿ ರೂಪಾಯಿ, 21.8 ಕೋಟಿ ರೂಪಾಯಿ, ಶುಕ್ರವಾರ 16.9 ಕೋಟಿ ರೂಪಾಯಿ ಸಂಗ್ರಹಿಸಿತ್ತು. ಎರಡನೇ ವಾರ ಮತ್ತೆ ಬಿಸ್ನೆಸ್‌ ಪಿಕಪ್‌ ಆಗಿತ್ತು. ಎರಡನೇ ವಾರದ ಮೊದಲ ಶನಿವಾರ ಮತ್ತು ಭಾನುವಾರ ಕ್ರಮವಾಗಿ 34.15 ಕೋಟಿ ರೂಪಾಯಿ ಮತ್ತು 44.35 ಕೋಟಿ ರೂಪಾಯಿ ಗಳಿಸಿತ್ತು. ಮತ್ತೆ ನಿನ್ನೆ ಅಂದರೆ ಸೋಮವಾರ ಗಳಿಕೆ ಶೇಕಡ 74ರಷ್ಟು ಇಳಿಕೆ ಆಗಿತ್ತು. ಒಟ್ಟು 521.4 ಕೋಟಿ ರೂಪಾಯಿ ಗಳಿಕೆ ಮಾಡಿದೆ.