ಏರುತಿಹುದು ನೋಡಿಲ್ಲಿ ಕೃಷ್ಣಂ ಪ್ರಣಯ ಸಖಿ ಬಾಕ್ಸ್ ಆಫೀಸ್ ಗಳಿಕೆ; 4 ದಿನದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ಸಿನಿಮಾ ಗಳಿಸಿದ್ದೆಷ್ಟು?
Krishnam Pranaya Sakhi Box Office Collection: ಗೋಲ್ಡನ್ ಸ್ಟಾರ್ ಗಣೇಶ್ ನಟನೆಯ ಕೃಷ್ಣಂ ಪ್ರಣಯ ಸಖಿ ಸಿನಿಮಾ ಬಿಡುಗಡೆಯಾಗಿ 4 ದಿನವಾಗಿದೆ. ಭಾನುವಾರ ಅಂದರೆ ನಿನ್ನೆ ಈ ಸಿನಿಮಾ 2.18 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಈ ಸಿನಿಮಾದ ಐದು ದಿನದ ಬಾಕ್ಸ್ ಆಫೀಸ್ ರಿಪೋರ್ಟ್ ಕಾರ್ಡ್ ಇಲ್ಲಿದೆ.
Krishnam Pranaya Sakhi Collection: ಕೃಷ್ಣಂ ಪ್ರಣಯ ಸಖಿ ಸಿನಿಮಾವು ಬಾಕ್ಸ್ ಆಫೀಸ್‌ನಲ್ಲಿ ಭಾನುವಾರ ಅತ್ಯಧಿಕ ಗಳಿಕೆ ಮಾಡಿದೆ. ಹಿಂದಿನ ಮೂರು ದಿನಗಳ ಗಳಿಕೆಗೆ ಹೋಲಿಸಿದರೆ ಆಗಸ್ಟ್ 18ರಂದು ಭರ್ಜರಿ ಕಲೆಕ್ಷನ್ ಮಾಡಿದೆ. ಮೊದಲು ಚಿನ್ನಮ್ಮ ಚಿನ್ನಮ್ಮ ಎಂಬ ಹಾಡಿನ ಮೂಲಕ, ಇದಾದ ಬಳಿಕ ದ್ವಾಪರ ದಾಟಲು ಹಾಡಿನ ಬಳಿಕ ಕನ್ನಡ ಸಿನಿಮಾ ಅಭಿಮಾನಿಗಳಲ್ಲಿ ಸಾಕಷ್ಟು ನಿರೀಕ್ಷೆ ಹುಟ್ಟುಹಾಕಿದ ಇತ್ತೀಚಿನ ಸಿನಿಮಾ ಕೃಷ್ಣಂ ಪ್ರಣಯ ಸಖಿ. ಈ ಚಿತ್ರ ಬಿಡುಗಡೆಯಾದ ಬಳಿಕ ನಿಧಾನವಾಗಿ ಚಿತ್ರಮಂದಿರಗಳಲ್ಲಿ ಜನದಟ್ಟಣೆ ಸ್ಥಿರತೆ ಕಾಣುತ್ತಿದೆ. ಮುಂದಿನ ದಿನಗಳಲ್ಲಿ ಈ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಇನ್ನಷ್ಟು ಗಳಿಕೆ ಮಾಡುವ ಸೂಚನೆ ನೀಡಿದೆ.
ಕೃಷ್ಣಂ ಪ್ರಣಯ ಸಖಿ ಬಾಕ್ಸ್ ಆಫೀಸ್ ವರದಿ
ಗೋಲ್ಡನ್ ಸ್ಟಾರ್ ಗಣೇಶ್ ನಟನೆಯ ಕೃಷ್ಣಂ ಪ್ರಣಯ ಸಖಿ ಸಿನಿಮಾವು 4ನೇ ದಿನ ಅಂದರೆ ಭಾನುವಾರ ಭಾರತದ ಬಾಕ್ಸ್ ಆಫೀಸ್‌ನಲ್ಲಿ 2.18 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಇದು ಕಳೆದ ನಾಲ್ಕು ದಿನಗಳಲ್ಲಿಯೇ ಅತ್ಯಧಿಕ ಗಳಿಕೆಯಾಗಿದೆ. ಇದಕ್ಕೂ ಮೊದಲು ಶನಿವಾರ 1.7 ಕೋಟಿ ರೂಪಾಯಿ ಗಳಿಕೆ ಮಾಡಿತ್ತು. ಶುಕ್ರವಾರ ಅಂದರೆ, ಎರಡನೇ ದಿನ 0.85 ಕೋಟಿ ರೂಪಾಯಿ ಗಳಿಸಿತ್ತು. ಮೊದಲ ದಿನ ಅಂದರೆ ಸ್ವಾತಂತ್ರ್ಯ ದಿನಾಚರಣೆಯಂದು ಬಿಡುಗಡೆಯಾದ ಸಿನಿಮಾವು 1.5 ಕೋಟಿ ರೂಪಾಯಿ ಗಳಿಸಿತ್ತು. ಅದಕ್ಕೂ ಹಿಂದಿನ ದಿನ ಪ್ರೀಮಿಯರ್ ಶೋ ಮೂಲಕ 0.1 ಕೋಟಿ ರೂಪಾಯಿ ಗಳಿಕೆ ಮಾಡಿತ್ತು. ಒಟ್ಟಾರೆ ಕಳೆ ನಾಲ್ಕು ದಿನಗಳಲ್ಲಿ ಕೃಷ್ಣಂ ಪ್ರಣಯ ಸಖಿ ಸಿನಿಮಾ 6.33 ಕೋಟಿ ರೂಪಾಯಿ ಗಳಿಕೆ ಮಾಡಿದೆ.
ಕೃಷ್ಣಂ ಪ್ರಣಯ ಸಖಿಯತ್ತ ಒಲವು
ಭಾನುವಾರ ಸಾಕಷ್ಟು ಜನರು ಕುಟುಂಬ ಸಮೇತ ಗಣೇಶ್ ಮೂವಿ ನೋಡಲು ಆಗಮಿಸಿದ್ದರು. ನಿನ್ನೆ ಟಿಕೆಟ್ ಬುಕ್ಕಿಂಗ್‌ನಲ್ಲೂ ಹೊಸ ದಾಖಲೆಯಾಗಿತ್ತು. "ಬುಕ್ ಮೈ ಶೋ ಪ್ರಕಾರ ದಕ್ಷಿಣ ಭಾರತದಲ್ಲಿಯೇ ನಿನ್ನೆ (ಶನಿವಾರ) ಬಿಡುಗಡೆಯಾದ ಎಲ್ಲಾ ಸಿನಿಮಾಗಳಿಗಿಂತ (ತಂಗಲಾನ್ ಹೊರತುಪಡಿಸಿ) ಅತಿ ಹೆಚ್ಚು ಟಿಕೆಟ್ ಮಾರಾಟವಾಗಿದ್ದು ನಮ್ಮ ಕನ್ನಡದ ಸಿನಿಮಾ ಕೃಷ್ಣಂ ಪ್ರಣಯ ಸಖಿ ಸಿನಿಮಾಗೆ. ನಲ್ವತ್ತೊಂಬತ್ತು ಸಾವಿರ ಟಿಕೇಟುಗಳು ಮಾರಾಟವಾಗಿವೆ" ಎಂದು ಸೋಷಿಯಲ್ ಮೀಡಿಯಾ ಪೋಸ್ಟ್‌ವೊಂದು ವೈರಲ್ ಆಗಿದೆ. ಈ ಕುರಿತ ವರದಿ ಇಲ್ಲಿದೆ.
ಈ ಬಾರಿ ಸ್ವಾತಂತ್ರ್ಯ ದಿನಾಚರಣೆಯಂದು ಹಲವು ಸಿನಿಮಾಗಳು ಬಿಡುಗಡೆಯಾಗಿವೆ. ಕನ್ನಡದಲ್ಲಿ ಕೃಷ್ಣಂ ಪ್ರಣಯ ಸಖಿ ಮತ್ತು ಗೌರಿ ಸಿನಿಮಾಗಳು ರಿಲೀಸ್ ಆಗಿವೆ. ಈ ಸಿನಿಮಾಗಳು ಪ್ರೇಕ್ಷಕರ ನಿರೀಕ್ಷೆಯ ಮಟ್ಟಕ್ಕೆ ಇಲ್ಲ ಎಂಬ ಅಭಿಪ್ರಾಯವನ್ನೂ ಪ್ರೇಕ್ಷಕರಿಂದ ಪಡೆದುಕೊಂಡಿವೆ. ಇವುಗಳಲ್ಲಿ ಗೌರಿ ಸಿನಿಮಾದ ಮೂಲಕ ಸಮರ್ಜಿತ್ ಲಂಕೇಶ್ ಸ್ಯಾಂಡಲ್‌ವುಡ್‌ಗೆ ಪದಾರ್ಪಣೆ ಮಾಡಿದ್ದಾರೆ.
ದ್ವಾಪರ ದಾಡಲು ಹಾಡು
ಕೃಷ್ಣಂ ಪ್ರಣಯ ಸಖಿ ಸಿನಿಮಾದ ದ್ವಾಪರ ದಾಟಲು ಹಾಡು ಯೂಟ್ಯೂಬ್‌ನಲ್ಲಿ ಟ್ರೆಂಡಿಂಗ್‌ನಲ್ಲಿತ್ತು. ಫೇಸ್‌ಬುಕ್, ಯೂಟ್ಯೂಬ್ ಸೇರಿದಂತೆ ಎಲ್ಲೆಡೆ ರೀಲ್ಸ್, ಶಾರ್ಟ್ ವಿಡಿಯೋಗಳಲ್ಲಿ ದ್ವಾಪರ ದಾಟಲು ಹಾಡೇ ಹವಾ ಸೃಷ್ಟಿಸಿತ್ತು. ಸಂಗೀತ ಪ್ರೇಮಿಗಳು " ದ್ವಾಪರ ದಾಟುತ ನನ್ನನೇ ನೋಡಲು, ನನ್ನನೇ ಸೇರಲು ಬಂದ ರಾಧಿಕೆ, ಹಾಡಲಿ ಹಾಡಲು ಮಾತಲಿ ಹೇಳಲು, ಸಾಧ್ಯವೇ ಇಲ್ಲದ ರಾಗ ಮಾಲಿಕೆ, ಸಖಿ ಸಖಿ ನನ್ನ ರೂಪಸಿ, ಸಖಿ ಸಖಿ ನಿನ್ನ ಮೋಹಿಸಿ, ನೀನೇ ನನ್ನ ಪ್ರೇಯಸಿ, ಜೇನ ದನಿಯೋಳೆ ಮೀನ ಕಣ್ಣೋಳೆ, ಸೊಬಗೆ ಮೈತುಂಬಿದೆ ಹಂಸ ನಡೆಯೋಳೆ, ಎದೆಗೆ ಇಳಿದೋಳೆ ಜೀವ ಝಲ್ ಎಂದಿದೆ" ಎಂಬ ಹಾಡಿನ ಮೋಡಿಗೆ ಒಳಗಾಗಿದ್ದಾರೆ.