ಕನ್ನಡ ಸುದ್ದಿ  /  ಮನರಂಜನೆ  /  Maidaan Ott: ಅಜಯ್‌ ದೇವಗನ್‌ ನಟನೆಯ ಮೈದಾನ್‌ ಸಿನಿಮಾ ನೋಡಲು ರೆಂಟ್‌ ನೀಡಬೇಕಿಲ್ಲ; ಒಟಿಟಿ ಚಂದಾದಾರರಿಗೆ ಉಚಿತ ಸ್ಟ್ರೀಮಿಂಗ್‌

Maidaan OTT: ಅಜಯ್‌ ದೇವಗನ್‌ ನಟನೆಯ ಮೈದಾನ್‌ ಸಿನಿಮಾ ನೋಡಲು ರೆಂಟ್‌ ನೀಡಬೇಕಿಲ್ಲ; ಒಟಿಟಿ ಚಂದಾದಾರರಿಗೆ ಉಚಿತ ಸ್ಟ್ರೀಮಿಂಗ್‌

Watch Maidaan Movie Without Rent: ಅಜಯ್‌ ದೇವಗನ್‌ ನಟನೆಯ ಮೈದಾನ್‌ ಸಿನಿಮಾವು ಎರಡು ವಾರದ ಹಿಂದೆ ಬಾಡಿಗೆ (ರೆಂಟ್‌) ಆಧಾರದಲ್ಲಿ ಒಟಿಟಿಯಲ್ಲಿ ರಿಲೀಸ್‌ ಆಗಿತ್ತು. ಇದೀಗ ಮೈದಾನ್‌ ಸಿನಿಮಾವನ್ನು ರೆಂಟ್‌ ನೀಡದೆ ಒಟಿಟಿ ಚಂದಾದರಾರು ನೋಡಬಹುದು.

Maidaan OTT: ಅಜಯ್‌ ದೇವಗನ್‌ ನಟನೆಯ ಮೈದಾನ್‌ ಸಿನಿಮಾ ನೋಡಲು ರೆಂಟ್‌ ನೀಡಬೇಕಿಲ್ಲ
Maidaan OTT: ಅಜಯ್‌ ದೇವಗನ್‌ ನಟನೆಯ ಮೈದಾನ್‌ ಸಿನಿಮಾ ನೋಡಲು ರೆಂಟ್‌ ನೀಡಬೇಕಿಲ್ಲ

ಬೆಂಗಳೂರು: ಅಮೆಜಾನ್‌ ಪ್ರೈಮ್‌ ವಿಡಿಯೋ ಇದೀಗ ಮೈದಾನ್‌ ಸಿನಿಮಾವನ್ನು ಎಲ್ಲಾ ಚಂದಾದಾರರಾರಿಗೆ ನೋಡುವಂತೆ ಮಾಡಿದೆ. ಅಜಯ್‌ ದೇವಗನ್‌ ನಟನೆಯ ಮೈದಾನ್‌ ಸಿನಿಮಾವು ಎರಡು ವಾರದ ಹಿಂದೆ ಬಾಡಿಗೆ (ರೆಂಟ್‌) ಆಧಾರದಲ್ಲಿ ಒಟಿಟಿಯಲ್ಲಿ ರಿಲೀಸ್‌ ಆಗಿತ್ತು. ಇದೀಗ ಮೈದಾನ್‌ ಸಿನಿಮಾವನ್ನು ರೆಂಟ್‌ ನೀಡದೆ ಒಟಿಟಿ ಚಂದಾದರಾರು ನೋಡಬಹುದು. ಈ ಸಿನಿಮಾ ಚಿತ್ರಮಂದಿರಗಳಲ್ಲಿ ಏಪ್ರಿಲ್‌ 12, 2024ರಂದು ರಿಲೀಸ್‌ ಆಗಿತ್ತು. ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಎರಡು ತಿಂಗಳ ಬಳಿಕ ಒಟಿಟಿಗೆ ಆಗಮಿಸಿತ್ತು.

ಟ್ರೆಂಡಿಂಗ್​ ಸುದ್ದಿ

ಅಜಯ್‌ ದೇವಗನ್‌ ನಟನೆಯ ಮೈದಾನ್‌ ಸಿನಿಮಾವು ಬಾಕ್ಸ್‌ ಆಫೀಸ್‌ನಲ್ಲಿ ಹೇಳಿಕೊಳ್ಳುವಷ್ಟು ಗಳಿಕೆಯೇನೂ ಮಾಡಿರಲಿಲ್ಲ. ವೀಕ್ಷಕರಿಂದ ಅಷ್ಟೇನೂ ಉತ್ತಮ ರಿವ್ಯೂ ಪಡೆಯದೆ ಇದ್ದ ಕಾರಣ ಈ ಸಿನಿಮಾವನ್ನು ಕಡಿಮೆ ಸಂಖ್ಯೆಯಲ್ಲಿ ಜನರು ಥಿಯೇಟರ್‌ಗಳಲ್ಲಿ ನೋಡಿದ್ದರು. ಒಟಿಟಿಗೆ ಬಂದ ಬಳಿಕ ಆರಂಭದ ಎರಡು ವಾರಗಳ ಕಾಲ ರೆಂಟ್‌ ಆಧಾರದಲ್ಲಿ ಸ್ಟ್ರೀಮಿಂಗ್‌ ಮಾಡಲಾಗಿತ್ತು. ಇದೀಗ ರೆಂಟ್‌ ತೆಗೆಯಲಾಗಿದ್ದು, ಅಮೆಜಾನ್‌ ಪ್ರೈಮ್‌ ಸದಸ್ಯರು ನೋಡಬಹುದಾಗಿದೆ.

ಮೈದಾನ್‌ ಸಿನಿಮಾದ ಕಥೆ ಮತ್ತು ಪಾತ್ರಗಳು

ಭಾರತದ ಪ್ರಮುಖ ಫುಟ್‌ಬಾಲ್‌ ಕೋಚ್‌ ನಿಜಜೀವನದ ಕಥೆಯನ್ನು ಆಧರಿಸಿ ಮೈದಾನ್‌ ಸಿನಿಮಾ ನಿರ್ಮಿಸಲಾಗಿದೆ. 1952-1962ರ ನಡುವೆ ಈ ಆಟಗಾರ ಸಾಕಷ್ಟು ಜನಪ್ರಿಯತೆ ಪಡೆದಿದ್ದರು. ಕೋಚ್‌ ಸೈಯದ್‌ ಅಬ್ದುಲ್‌ ರಹಿಮ್‌ ಅವರ ಪಾತ್ರದಲ್ಲಿ ಅಜಯ್‌ ದೇವಗನ್‌ ಪರಕಾಯ ಪ್ರವೇಶ ಮಾಡಿದ್ದರು. ಈ ಕೋಚ್‌ 1956ರಲ್ಲಿ ಸ್ಪರ್ಧಿಗಳನ್ನು ಒಲಿಂಪಿಕ್‌ ಮತ್ತು ಏಷ್ಯಾ ಗೇಮ್ಸ್‌ಗಳಿಗೆ ತಯಾರು ಮಾಡಿದ್ದರು. ಸಾಕಷ್ಟು ಅಡೆತಡೆಗಳ ನಡುವೆ ಅವರು ಈ ಸಾಧನೆ ಮಾಡಿದ್ದರು. ಇವರ ಸ್ಪೂರ್ತಿದಾಯಕ ಕಥೆಯನ್ನು ಮೈದಾನ್‌ ಸಿನಿಮಾ ಹೊಂದಿದೆ.

ಮೈದಾನ್‌ ಸಿನಿಮಾದಲ್ಲಿ ಅಜಯ್‌ ದೇವಗನ್‌ ಪತ್ನಿ ಪಾತ್ರದಲ್ಲಿ ಪ್ರಿಯಾಮಣಿ ನಟಿಸಿದ್ದಾರೆ. ಉಳಿದಂತೆ ಸೈರಾ ರಹಿಮ್‌ ಮತ್ತು ಗಜ್‌ರಾಜ್‌ ರಾವ್‌ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ದೇವಾಂಶ್ ತ್ರಿಪಾಠಿ, ರಿಷಬ್ ಜೋಶಿ, ನಿತಾಂಶಿ ಗೋಯೆಲ್, ಆಯೇಶಾ ವಿಂಧರಾ, ಮೀನಲ್ ಪಟೇಲ್, ರುದ್ರನೀಲ್ ಘೋಷ್, ಬಹರುಲ್ ಇಸ್ಲಾಂ, ಜಹೀರ್ ಮಿರ್ಜಾ, ಮಧುರ್ ಮಿತ್ತಲ್, ಚೈತನ್ಯ ಶರ್ಮಾ, ತೇಜಸ್ ರವಿಶಂಕರ್, ಡೇವಿಂದರ್ ಗಿಲ್, ಅಮರ್ತ್ಯ ರೇ, ಸುಶಾಂತ್ ವೈದಂಡೆ, ವಿಷ್ಣು ಥಾಪ್ಲಿಯಾ, ಅಭಿಲಾಷ್ ಥಾಪ್ಲಿಯಾಲ್ ವಾರಿಯರ್, ರಾಫೆಲ್ ಜೋಸ್, ಜಯಂತ್ ವಿ., ಅಮನ್ ಮುನ್ಷಿ, ಸಾಯಿ ಕಿಶೋರ್, ಅಮನ್‌ದೀಪ್ ಠಾಕೂರ್, ತನ್ಮಯ್ ಭಟ್ಟಾಚಾರ್ಜಿ, ಅರ್ಕೋ ದಾಸ್, ಪ್ರಜ್ವಲ್ ಮಸ್ಕಿ ಮತ್ತು ವಿಜಯ್ ಮೌರ್ಯ ಇತರರು ಈ ಸಿನಿಮಾದಲ್ಲಿ ನಟಿಸಿದ್ದಾರೆ.

ಏಪ್ರಿಲ್ 11 ರಂದು ಅಜಯ್‌ ದೇವಗನ್‌ ನಾಯಕನಾಗಿ ನಟಿಸಿದ ನೈಜ ಘಟನೆ ಆಧರಿತ ಮೈದಾನ್ ಸಿನಿಮಾ‌ ಬಿಡುಗಡೆ ಆಗಿತ್ತು.ಇದೇ ಚಿತ್ರ 40 ದಿನಗಳ ಬಳಿಕ ಒಟಿಟಿಗೆ ಎಂಟ್ರಿಕೊಟ್ಟಿತ್ತು. ಭಾರತೀಯ ಫುಟ್ಬಾಲ್ ಕೋಚ್ ಸೈಯದ್ ಅಬ್ದುಲ್ ರಹೀಮ್ ಅವರ ಜೀವನ ಆಧರಿತ ಮೈದಾನ್‌ ಸಿನಿಮಾವನ್ನು 235 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿತ್ತು. ಬಿಡುಗಡೆ ಬಳಿಕ ಕೇವಲ 67 ಕೋಟಿ ಗಳಿಕೆ ಕಂಡು ಬಾಕ್ಸ್‌ ಆಫೀಸ್‌ನಲ್ಲಿ ಹೀನಾಯ ಸೋಲು ಕಂಡಿತ್ತು . ಚಿತ್ರವನ್ನು ಅಮಿತ್ ರವೀಂದ್ರನಾಥ್ ಶರ್ಮಾ ನಿರ್ದೇಶಿಸಿದ್ದಾರೆ. ಆಕಾಶ್ ಚಾವ್ಲಾ, ಅರುಣವ್ ಜಾಯ್ ಸೇನ್‌ಗುಪ್ತಾ, ಬೋನಿ ಕಪೂರ್ ಮತ್ತು ಜೀ ಸ್ಟುಡಿಯೋಸ್ ಜಂಟಿಯಾಗಿ ನಿರ್ಮಿಸಿದೆ.

ಟಿ20 ವರ್ಲ್ಡ್‌ಕಪ್ 2024