Rachitha on Personal life: ಅವರಿಂದ್ಲೇ ನನ್ನ ನೆಮ್ಮದಿ ಹಾಳಾಯ್ತು,ಬಿಗ್‌ಬಾಸ್‌ನಲ್ಲಿ ಮೊದಲ ಬಾರಿ ವೈಯಕ್ತಿಕ ಜೀವನದ ಬಗ್ಗೆ ಮಾತನಾಡಿದ ನಟಿ
ಕನ್ನಡ ಸುದ್ದಿ  /  ಮನರಂಜನೆ  /  Rachitha On Personal Life: ಅವರಿಂದ್ಲೇ ನನ್ನ ನೆಮ್ಮದಿ ಹಾಳಾಯ್ತು,ಬಿಗ್‌ಬಾಸ್‌ನಲ್ಲಿ ಮೊದಲ ಬಾರಿ ವೈಯಕ್ತಿಕ ಜೀವನದ ಬಗ್ಗೆ ಮಾತನಾಡಿದ ನಟಿ

Rachitha on Personal life: ಅವರಿಂದ್ಲೇ ನನ್ನ ನೆಮ್ಮದಿ ಹಾಳಾಯ್ತು,ಬಿಗ್‌ಬಾಸ್‌ನಲ್ಲಿ ಮೊದಲ ಬಾರಿ ವೈಯಕ್ತಿಕ ಜೀವನದ ಬಗ್ಗೆ ಮಾತನಾಡಿದ ನಟಿ

ರಚಿತ ಮಹಾಲಕ್ಷ್ಮಿ ಹಾಗೂ ದಿನೇಶ್‌ ಗೋಪಾಲಸ್ವಾಮಿ ಇಬ್ಬರ ನಡುವೆ ಮನಸ್ತಾಪ ಇದೆ, ಇಬ್ಬರೂ ದೂರಾಗಿದ್ದಾರೆ ಎಂಬ ಸುದ್ದಿ ಬಂದಾಗ ಕೆಲವರು ಇದನ್ನು ನಿರಾಕರಿಸಿದ್ದರು. ಆದರೆ ಇದೀಗ ಅವರು ಪ್ರತ್ಯೇಕವಾಗಿರುವುದು ಕನ್ಫರ್ಮ್‌ ಆಗಿದೆ. ಬಿಗ್‌ ಬಾಸ್‌ನಲ್ಲಿ ರಚಿತ ಮಹಾಲಕ್ಷ್ಮಿ ಮೊದಲ ಬಾರಿಗೆ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಮಾತನಾಡಿದ್ದಾರೆ.

<p>ರಚಿತ ಮಹಾಲಕ್ಷ್ಮಿ</p>
ರಚಿತ ಮಹಾಲಕ್ಷ್ಮಿ (PC: Rachitha Mahalakshmi)

ಕನ್ನಡ ಕಿರುತೆರೆ ಮೂಲಕ ಬಣ್ಣದ ಬದುಕು ಆರಂಭಿಸಿ ತಮಿಳು, ತೆಲುಗು ಕಿರುತೆರೆಯಲ್ಲಿ ಕೂಡಾ ಗುರುತಿಸಿಕೊಂಡಿರುವ ರಚಿತ ಮಹಾಲಕ್ಷ್ಮಿ ಈಗ ತಮಿಳು ಬಿಗ್‌ ಬಾಸ್‌ ಸೀಸನ್‌ 6ರ ಸ್ಪರ್ಧಿ. ರಚಿತ, ತಮಿಳು ಕಿರುತೆರೆಯಲ್ಲಿ ಬ್ಯುಸಿಯಾಗಿದ್ದಾಗ ಬಹಳ ಜನರಿಗೆ ಆಕೆ ಅಲ್ಲಿ ಸೆಟಲ್‌ ಆಗಿರುವುದು ತಿಳಿದಿರಲಿಲ್ಲ. ಇದೀಗ ಅವರು ಬಹಳ ವರ್ಷಗಳ ನಂತರ ಮತ್ತೆ ಕನ್ನಡ ಸಿನಿಮಾಗಳು ಹಾಗೂ ವೈಯಕ್ತಿಕ ವಿಚಾರಗಳ ಮೂಲಕ ಸುದ್ದಿಯಲ್ಲಿದ್ದಾರೆ.

ರಚಿತ ಮಹಾಲಕ್ಷ್ಮಿ ಕನ್ನಡದಲ್ಲಿ 'ಮೇಘ ಮಂದಾರ' ಧಾರಾವಾಹಿ ಮೂಲಕ ಆಕ್ಟಿಂಗ್‌ ಕರಿಯರ್‌ ಆರಂಭಿಸಿದರು. ನಂತರ ಗೀತಾಂಜಲಿ, ಸೂರ್ಯಕಾಂತಿ, ಸುಪ್ರಭಾತ, ಸವಿಗನಸು ಸೇರಿ ಅನೇಕ ಧಾರಾವಾಹಿಗಳಲ್ಲಿ ನಟಿಸಿದರು. ನಂತರ ತೆಲುಗು ಹಾಗೂ ತಮಿಳು ಕಿರುತೆರೆಯಲ್ಲಿ ಕೂಡಾ ಅವಕಾಶ ಗಳಿಸಿದರು. ತಮಿಳಿನ ಅನೇಕ ಧಾರಾವಾಹಿಗಳಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿರುವ ಅವರು ಈಗ ತಮಿಳು ಕಿರುತೆರೆಯಲ್ಲಿ ಬೇಡಿಕೆಯ ನಟಿಯಾಗಿ ಹೆಸರು ಮಾಡಿದ್ದಾರೆ. ರಚಿತ, ತಮಿಳಿನಲ್ಲಿ ಮೊದಲು ನಟಿಸಿದ್ದು 'ಪಿರಿವೊಮ್‌ ಸಂತಿಪೊಮ್‌' ಎಂಬ ಧಾರಾವಾಹಿಯಲ್ಲಿ. ಅದೇ ಸೀರಿಯಲ್‌ನಲ್ಲಿ ತಮ್ಮೊಂದಿಗೆ ನಟಿಸಿದ್ದ ದಿನೇಶ್‌ ಗೋಪಾಲಸ್ವಾಮಿ ಅವರನ್ನು ಪ್ರೀತಿಸಿದ ರಚಿತ 2013ರಲ್ಲಿ ಮದುವೆಯಾಗಿ ಚೆನ್ನೈನಲ್ಲೇ ಸೆಟಲ್‌ ಆದರು. ಆದರೆ ಇದೀಗ ರಚಿತ ಮಹಾಲಕ್ಷ್ಮಿ ಪತಿಯಿಂದ ದೂರಾಗಿದ್ದಾರೆ.

ರಚಿತ ಮಹಾಲಕ್ಷ್ಮಿ ಹಾಗೂ ದಿನೇಶ್‌ ಗೋಪಾಲಸ್ವಾಮಿ ಇಬ್ಬರ ನಡುವೆ ಮನಸ್ತಾಪ ಇದೆ, ಇಬ್ಬರೂ ದೂರಾಗಿದ್ದಾರೆ ಎಂಬ ಸುದ್ದಿ ಬಂದಾಗ ಕೆಲವರು ಇದನ್ನು ನಿರಾಕರಿಸಿದ್ದರು. ಆದರೆ ಇದೀಗ ಅವರು ಪ್ರತ್ಯೇಕವಾಗಿರುವುದು ಕನ್ಫರ್ಮ್‌ ಆಗಿದೆ. ಬಿಗ್‌ ಬಾಸ್‌ನಲ್ಲಿ ರಚಿತ ಮಹಾಲಕ್ಷ್ಮಿ ಮೊದಲ ಬಾರಿಗೆ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಮಾತನಾಡಿದ್ದಾರೆ. ಸದ್ಯಕ್ಕೆ ತಮಿಳಿನ ವಿಜಯ್‌ ಟಿವಿಯಲ್ಲಿ ಬಿಗ್‌ ಬಾಸ್‌ ಸೀಸನ್‌ 6 ಪ್ರಸಾರವಾಗುತ್ತಿದೆ. ಖ್ಯಾತ ನಟ ಕಮಲ್‌ ಹಾಸನ್‌ ಬಿಗ್‌ ಬಾಸ್‌ ನಿರೂಪಣೆ ಮಾಡುತ್ತಿದ್ದಾರೆ. ಒರು ಕಥೈ ಸೊಲ್ಲತಾ ಟಾಸ್ಕ್‌ನಲ್ಲಿ ರಚಿತಾ ತಮ್ಮ ಕುಟುಂಬದಿಂದ ನನ್ನ ನೆಮ್ಮದಿ ಹಾಳಾಯ್ತು ಎಂದು ಹೇಳಿಕೊಂಡಿದ್ದಾರೆ.

<p>ದಿನೇಶ್‌ ಗೋಪಾಲಸ್ವಾಮಿ, ರಚಿತ ಮಹಾಲಕ್ಷ್ಮಿ</p>
ದಿನೇಶ್‌ ಗೋಪಾಲಸ್ವಾಮಿ, ರಚಿತ ಮಹಾಲಕ್ಷ್ಮಿ (PC: @RachithaMaha_24 Twitter)

ತಮ್ಮ ಸಹಸ್ಪರ್ಧಿಗಳಾದ ಅಜೀಮ್‌ ಹಾಗೂ ಕ್ವೀನ್ಸಿ ಅವರೊಂದಿಗೆ ವೈಯಕ್ತಿಕ ಜೀವನದ ಬಗ್ಗೆ ಹೇಳಿಕೊಂಡ ರಚಿತಾ ''ನನ್ನ ಕುಟುಂಬದಿಂದಾಗಿ ನಾನು ಎಲ್ಲವನ್ನೂ ಕಳೆದುಕೊಂಡೆ. ನಾನು ಬೆಂಗಳೂರಿನಲ್ಲಿ ಹುಟ್ಟಿ ಬೆಳೆದ ಹುಡುಗಿಯಾದರೂ ಒಮ್ಮೆಯೂ ಪಬ್‌ ಅಂತ ಹೋದವಳಲ್ಲ. ನನ್ನ ಫ್ಯಾಮಿಲಿ ಬಗ್ಗೆ ಯೋಚಿಸುತ್ತಲೇ ನನ್ನ ಸಂತೋಷವನ್ನು ಹಾಳು ಮಾಡಿಕೊಂಡೆ. ಒಂದು ದಿನವೂ ನಾನು ಲೈಫ್‌ ಎಂಜಾಯ್‌ ಮಾಡಲಿಲ್ಲ. ಕುಟುಂಬದವರನ್ನು ಪ್ರೀತಿಯಿಂದ ಕಂಡರೂ ಅವರಿಂದ ನಾನು ಬಹಳ ತೊಂದರೆಗೆ ಒಳಗಾಗದೆ'' ಎಂದು ಹೇಳಿಕೊಂಡಿದ್ದಾರೆ. ಆದರೆ ದಿನೇಶ್‌ ಅವರಿಂದ ದೂರಗಿದ್ದಕ್ಕೆ ನಿರ್ದಿಷ್ಟ ಕಾರಣ ಹೇಳಲಿಲ್ಲ.

2013 ರಲ್ಲಿ ಮದುವೆಯಾದ ದಂಪತಿಗೆ ಮಕ್ಕಳು ಇರಲಿಲ್ಲ. ದಿನೇಶ್‌ಗೆ ಮಕ್ಕಳ ವಿಚಾರದಲ್ಲಿ ಆಸೆ ಇದ್ದರೂ ರಚಿತಾ ಮಾತ್ರ ಆಕ್ಟಿಂಗ್‌ ಕರಿಯರ್‌ ಹಾಳಾಗುತ್ತದೆ ಎಂಬ ಕಾರಣಕ್ಕೆ ಈಗಲೇ ಮಕ್ಕಳು ಬೇಡ ಎಂದು ಹಠ ಮಾಡುತ್ತಿದ್ದರು. ಆದ್ದರಿಂದಲೇ ಇಬ್ಬರೂ ಬೇರೆಯಾಗಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಆದರೆ ಸತ್ಯ ಸಂಗತಿ ಏನು ಎಂಬುದು ಮಾತ್ರ ರಚಿತ ಹಾಗೂ ದಿನೇಶ್‌ ಇಬ್ಬರಿಗೇ ಗೊತ್ತು. ನಾವಿಬ್ಬರೂ ಬೇರೆಯಾಗಿದ್ದರೂ ಈಗ ಸ್ನೇಹಿತರಂತೆ ಇದ್ದೇವೆ ಎಂದಿರುವ ದಿನೇಶ್‌, ರಚಿತಾ ಬಿಗ್‌ ಬಾಸ್‌ಗೆ ಹೋದ ನಂತರ ಶುಭ ಹಾರೈಸಿದ್ದರು.

ರಚಿತ ಮಹಾಲಕ್ಷ್ಮಿ ಬಹಳ ದಿನಗಳ ಗ್ಯಾಪ್‌ ನಂತರ ಕನ್ನಡದಲ್ಲಿ ನಟಿಸುತ್ತಿದ್ದಾರೆ. ವಿಖ್ಯಾತ್ ಚಿತ್ರ ಪ್ರೊಡಕ್ಷನ್ಸ್ ಬ್ಯಾನರ್‌ನಲ್ಲಿ ಮಠ ಖ್ಯಾತಿಯ ನಿರ್ದೇಶಕ ಗುರುಪ್ರಸಾದ್‌ ಸಾರಥ್ಯದಲ್ಲಿ 'ರಂಗನಾಯಕ' ಸಿನಿಮಾ ತಯಾರಾಗುತ್ತಿದೆ. ಚಿತ್ರದಲ್ಲಿ ರಚಿತ ಮಹಾಲಕ್ಷ್ಮಿ ಜಗ್ಗೇಶ್‌ಗೆ ನಾಯಕಿಯಾಗಿ ನಟಿಸುತ್ತಿದ್ದಾರೆ. ಬಹುತೇಕ ಚಿತ್ರೀಕರಣ ಮುಗಿದಿದ್ದು ಶೀಘ್ರವೇ ಸಿನಿಮಾ ತೆರೆ ಕಾಣಲಿದೆ.

Whats_app_banner