Amruthadhaare Songs: ಅಮೃತಧಾರೆ ಧಾರಾವಾಹಿಯ ಜನಪ್ರಿಯ ಹಾಡುಗಳ ಲಿರಿಕ್ಸ್‌; ನಾ ಭುವಿಯಂತೆ ಕಾದೆ, ನೀ ಜಿನುಗೋ...ಹನಿಯಾದೆ…
ಕನ್ನಡ ಸುದ್ದಿ  /  ಮನರಂಜನೆ  /  Amruthadhaare Songs: ಅಮೃತಧಾರೆ ಧಾರಾವಾಹಿಯ ಜನಪ್ರಿಯ ಹಾಡುಗಳ ಲಿರಿಕ್ಸ್‌; ನಾ ಭುವಿಯಂತೆ ಕಾದೆ, ನೀ ಜಿನುಗೋ...ಹನಿಯಾದೆ…

Amruthadhaare Songs: ಅಮೃತಧಾರೆ ಧಾರಾವಾಹಿಯ ಜನಪ್ರಿಯ ಹಾಡುಗಳ ಲಿರಿಕ್ಸ್‌; ನಾ ಭುವಿಯಂತೆ ಕಾದೆ, ನೀ ಜಿನುಗೋ...ಹನಿಯಾದೆ…

Amruthadhaare Songs: ಕನ್ನಡದ ಜನಪ್ರಿಯ ಧಾರಾವಾಹಿಗಳಲ್ಲಿ ಒಂದಾದ ಅಮೃತಧಾರೆಯಲ್ಲಿ ಕನ್ನಡ ಸಿನಿಮಾ ಗೀತೆಗಳನ್ನು ನಾಚಿಸುವಂತಹ ಸುಂದರವಾದ ಹಾಡುಗಳಿವೆ. ಈ ಹಾಡುಗಳ ಲಿರಿಕ್ಸ್‌ ಇಲ್ಲಿ ನೀಡಲಾಗಿದೆ. ನಾ ಭುವಿಯಂತೆ ಕಾದೆ, ನೀ ಜಿನುಗೋ...ಹನಿಯಾದೆ.. ಟೈಟಲ್‌ ಟ್ರ್ಯಾಕ್‌ ಸೇರಿದಂತೆ ಎಲ್ಲಾ ಹಾಡುಗಳ ಸಾಹಿತ್ಯ ಮತ್ತು ವಿಡಿಯೋ ಸಾಂಗ್‌ ಇಲ್ಲಿ ನೀಡಲಾಗಿದೆ.

Amruthadhaare Songs: ಅಮೃತಧಾರೆ ಧಾರಾವಾಹಿಯ ಜನಪ್ರಿಯ ಹಾಡುಗಳ ಲಿರಿಕ್ಸ್‌
Amruthadhaare Songs: ಅಮೃತಧಾರೆ ಧಾರಾವಾಹಿಯ ಜನಪ್ರಿಯ ಹಾಡುಗಳ ಲಿರಿಕ್ಸ್‌

Amruthadhaare Songs: ಜೀ ಕನ್ನಡ ವಾಹಿನಿಯ ಜನಪ್ರಿಯ ಧಾರಾವಾಹಿ ಅಮೃತಧಾರೆ ಧಾರಾವಾಹಿ ಇದೀಗ ಕ್ಲೈಮ್ಯಾಕ್ಸ್‌ ಹಂತದಲ್ಲಿದೆ. ಗೌತಮ್‌ ದಿವಾನ್‌ಗೆ ತನ್ನ ನಿಜವಾದ ತಾಯಿ ಮತ್ತು ತಂಗಿಯನ್ನು ಭೇಟಿಯಾಗುವ ಸಮಯವಿದು. ಇದೇ ಸಮಯದಲ್ಲಿ ಈ ಸೀರಿಯಲ್‌ನ ಹಾಡು ಸಾಕಷ್ಟು ಜನರನ್ನು ಸೆಳೆದಿದೆ. ಜೀ ಕನ್ನಡ ವಾಹಿನಿಯು ಈ ಹಿಂದೆಯೇ ಅಮೃತಧಾರೆ ಧಾರಾವಾಹಿಯ ಜ್ಯೂಟ್‌ ಬಾಕ್ಸ್‌ ನೀಡಿತ್ತು. ಇದೀಗ ಹಿಂದೂಸ್ತಾನ್‌ ಟೈಮ್ಸ್‌ ಕನ್ನಡವು ಆ ಹಾಡುಗಳ ಸಾಹಿತ್ಯವನ್ನು ಇಲ್ಲಿ ನೀಡಿದೆ. ಜತಗೆ ಜ್ಯೂಟ್‌ ಬಾಕ್ಸ್‌ ವಿಡಿಯೋ ಕೂಡ ಇದೆ. ಅಮೃತಧಾರೆ ಧಾರಾವಾಹಿಯ ಹಾಡುಗಳನ್ನು ಇಷ್ಟಪಡುವವರಿಗೆ ಈ ಲಿರಿಕ್ಸ್‌ ಇಷ್ಟವಾಗಬಹುದು.

ಅಮೃತಧಾರೆ: ನಾ ಭುವಿಯಂತೆ ಕಾದೆ ಲಿರಿಕ್ಸ್‌

(ಹೆಣ್ಣು ಧ್ವನಿ)

ನಾ ಭುವಿಯಂತೆ ಕಾದೆ.

ನೀ ಜಿನುಗೋ...ಹನಿಯಾದೆ..

ಒಲವ ಹೊಳೆಯಾಗಿ ಹರಿದೇ...

ನೀ ಕಡಲಂತೆ ಬರ ಸೆಳೆದೇ.

(ಗಂಡು ಧ್ವನಿ)

ಒಂಟಿ...ಹಾದಿಗೆ..

ನೀ ಹಸಿರನೇ ಹಾಸಿದೆ..

ಬರಡಾದ ಎದೆಯಲಿ...

ಪ್ರಣಯಾ...ಚಿಗುರಿದೇ..ಏ.ಏ..

ಒಲವ ಅಮೃತಧಾರೆ...

ನನ್ನೊಲವ ಅಮೃತಧಾರೆ...

ಒಲವ ಅಮೃತಧಾರೆ...ನನ್ನೊಲವ ಅಮೃತಧಾರೆ...

 

(ಹೆಣ್ಣು ಧ್ವನಿ)

ಉಸಿರಿಗೇ ಉಸಿರಾದೆ ನೀ..

ಬೆಳಕೇ ಮೂಡಿತು ಇನಿತು.. ಇನಿತು..

ಮೋಹದ ಕಿಡಿ ತಾಕಿದೆ

ಈ ಕನಸೇ ಈಗ ಹೊಸತು.. ಹೊಸತು...

(ಗಂಡು ಧ್ವನಿ)

ಒಲುಮೆ ಬೆಳಕಲೇ..

ಒಂದಾಗಿ ಸಾಗುವೇ...

ಕಣ್ಣಾ.. ರೆಪ್ಪೆಯಾಗಿ ಕನಸಲ್ಲೂ, ಕಾಯುವೇ..ಏ.ಏ

ಒಲವ ಅಮೃತಧಾರೆ...

ನನ್ನೊಲವ ಅಮೃತಧಾರೆ...

ಒಲವ ಅಮೃತಧಾರೆ...ನನ್ನೊಲವ ಅಮೃತಧಾರೆ...

ಅಮೃತಧಾರೆ: ಏನೋ ನವಿರಾದ ಭಾವ ಲಿರಿಕ್ಸ್‌

ಏನೋ ನವಿರಾದ ಭಾವ,

ತಂದು ಹಿತವಾದ ನೋವ

ಅರಳಿ ಹೂವಂತೆ ಹೃದಯ

ಮರಳಿ ಬಂದಂತೆ ಹರೆಯ

ಕಲ್ಲಾದ ಹೃದಯದಲ್ಲಿ

ಜಿಗುರೊಂದು ಮೂಡಿದೆ

ಬರಿದಾದ ಬದುಕಲೀ

ತೊರೆಯಾಗಿ ಹರಿದಿದೇ

ಒಲವ ಅಮೃತಧಾರೆ...

ನನ್ನೊಲವ ಅಮೃತಧಾರೆ...

ಒಲವ ಅಮೃತಧಾರೆ...ನನ್ನೊಲವ ಅಮೃತಧಾರೆ...

 

ಅಮೃತಧಾರೆ: ನಿನ್ನವರ ನಗುವಲಿ ಲಿರಿಕ್ಸ್‌

ನಿನ್ನವರ ನಗುವಲಿ...

ನೀನಿತ್ತ ಬೆಳಕಿದೆ

ದೀಪದ ಬುಡದಲಿ ಕತ್ತಲೆಯು ಕವಿದಿದೆ (ಹೆಣ್ಣು)

ನಿನ್ನವರ ನಗುವಲಿ...

ನೀನಿತ್ತ ಬೆಳಕಿದೆ

ದೀಪದ ಬುಡದಲಿ ಕತ್ತಲೆಯು ಕವಿದಿದೆ (ಗಂಡು)

ಒಲವ ಅಮೃತಧಾರೆ...

ನನ್ನೊಲವ ಅಮೃತಧಾರೆ...

ಒಲವ ಅಮೃತಧಾರೆ...ನನ್ನೊಲವ ಅಮೃತಧಾರೆ...

ಅಮೃತಧಾರೆ: ಒಡೆದಂಥ ಮನಸ್ಸಿಗೆ ಒಡನಾಡಿ ಬೇಕಿದೆ ಲಿರಿಕ್ಸ್‌

(ಹೆಣ್ಣು) ಒಡೆದಂಥ ಮನಸ್ಸಿಗೆ ಒಡನಾಡಿ ಬೇಕಿದೆ

ಏಕಾಂಗಿ ಬದುಕಿಗೆ ಒಲವೊಂದು ಕಾದಿದೆ

(ಗಂಡು) (ಹೆಣ್ಣು) ಒಡೆದಂಥ ಮನಸ್ಸಿಗೆ ಒಡನಾಡಿ ಬೇಕಿದೆ

ಏಕಾಂಗಿ ಬದುಕಿಗೆ ಒಲವೊಂದು ಕಾದಿದೆ

ಓಹೋ ಓಹೋ... ಓ ಓ ಓ ಓಹೋ ಓಹೋ

ಒಲವ ಅಮೃತಧಾರೆ...

ನನ್ನೊಲವ ಅಮೃತಧಾರೆ...

ಒಲವ ಅಮೃತಧಾರೆ...ನನ್ನೊಲವ ಅಮೃತಧಾರೆ...

ಅಮೃತಧಾರೆ: ತಂಗಾಳಿ ತನ್ನವನ ಕರೆದು ಹಾಡಿನ ಲಿರಿಕ್ಸ್‌

ತಂಗಾಳಿ ತನ್ನವನ ಕರೆದು

ಸನಿಹ ಸೆಳೆದಂತೇ

ಬದುಕು ಬೆಳಕಾಗೋ ಹಾಗೇ

ಹಾದೀ ಹೊಳೆದಂತೆ..

ಮನಸು ಹೇಳುವಾ

ಪಿಸುಮಾತು ಕೇಳಿದೇ...

ಹೃದಯ ಅರೆ ಘಳಿಗೆ ಅರಳೀ ನಿಂತಿದೇ!

ಒಲವ ಅಮೃತಧಾರೆ...

ನನ್ನೊಲವ ಅಮೃತಧಾರೆ...

ಒಲವ ಅಮೃತಧಾರೆ...ನನ್ನೊಲವ ಅಮೃತಧಾರೆ...

 

ಅಮೃತಧಾರೆ: ನಿನ್ನವರ ಬದುಕಲೀ ಲಿರಿಕ್ಸ್‌

ನಿನ್ನವರ ಬದುಕಲೀ ನೀ ಬೆಳಗುವ ದೀಪವು

ಹಣತೆಯ ಬುಡುದಲಿ ಕತ್ತಲೆಯ ಶಾಪವೂ

ತನ್ನಂತೆ ಮಿಡಿವ ಮನಕೆ

ತನುವಿಂದು ಕಾದಿದೇ...

ಒಬ್ಬಂಟಿ ಅಲ್ಲ ಒಲವು

ಜೊತೆ ಸಾಗೋ ಕನಸಿದೇ

ಓ ಓ ಓಹೋ....

ಒಲವ ಅಮೃತಧಾರೆ...

ನನ್ನೊಲವ ಅಮೃತಧಾರೆ...

ಒಲವ ಅಮೃತಧಾರೆ...ನನ್ನೊಲವ ಅಮೃತಧಾರೆ...

ಅಮೃತಧಾರೆ: ತನ್ನವರ ಬದುಕಲೀ ಹಾಡಿನ ಲಿರಿಕ್ಸ್‌

ತನ್ನವರ ಬದುಕಲೀ ನೀ ಬೆಳಕನ್ನು ಬೀರಲು

ದೀಪದ ಬುಡದಲೀ ಉಳಿಯುವುದೇ ಕತ್ತಲು

ಓ ಓ ಓಹೋ....

ಒಲವ ಅಮೃತಧಾರೆ...

ನನ್ನೊಲವ ಅಮೃತಧಾರೆ...

ಒಲವ ಅಮೃತಧಾರೆ...ನನ್ನೊಲವ ಅಮೃತಧಾರೆ...

 

ಅಮೃತಧಾರೆ: ಯಾರೋ ಕರೆದಂತೆ ಹೆಸರಾ ಲಿರಿಕ್ಸ್‌

ಯಾರೋ ಕರೆದಂತೆ ಹೆಸರಾ

ಎಲ್ಲೋ ಮಿಡಿದಂತೆ ಉಸಿರಾ

ಏನೋ ಸುಳಿದಂತೆ ಸನಿಹಾ

ಭಾನು ಸುಳಿದಂತೆ ಭುವಿಯಾ

ತಿಳಿಯಾದ ಕೊಳದಲಿ ಅಲೆಯೊಂದು ಮೂಡಿದೆ

ಸವಿಯಾದ ಧ್ವನಿಯಲ್ಲಿ ಸ್ವರವೊಂದು ಮೂಡಿದೆ

ಒಲವ ಅಮೃತಧಾರೆ...

ನನ್ನೊಲವ ಅಮೃತಧಾರೆ...

ಒಲವ ಅಮೃತಧಾರೆ...ನನ್ನೊಲವ ಅಮೃತಧಾರೆ...

ಅಮೃತಧಾರೆ ಸಾಂಗ್‌ -JUKEBOX

 

 

ಅಮೃತಧಾರೆ ಸೀರಿಯಲ್‌ ಪಾತ್ರವರ್ಗ: ಛಾಯಾ ಸಿಂಗ್‌: ಭೂಮಿಕಾ (ನಾಯಕಿ), ರಾಜೇಶ್ ನಟರಂಗ್: ಗೌತಮ್‌ ದಿವಾನ್‌ (ನಾಯಕ), ವನಿತಾ ವಾಸು: ಶಕುಂತಳಾ (ಗೌತಮ್‌ ಮಲತಾಯಿ), ಸಿಹಿಕಹಿ ಚಂದ್ರು: ಸದಾಶಿವ (ಭೂಮಿಕ ಮತ್ತು ಜೀವನ್‌ ತಂದೆ), ಚೈತ್ರಾ ಶೆಣೈ: ಮಂದಾಕಿಣಿ (ಸದಾಶಿವನ ಹೆಂಡತಿ, ಭೂಮಿಕಾ ಮತ್ತು ಜೀವನ್ ತಾಯಿ), ಅಮೃತ ನಾಯಕ್: ಅಪೇಕ್ಷಾ (ಭೂಮಿಕ ತಂಗಿ), ಸಾರಾ ಅಣ್ಣಯ್ಯ : ಮಹಿಮಾ (ಗೌತಮ್‌ ತಂಗಿ, ಶಂಕುತಳಾ ಮಗಳು, ಜೀವನ್‌ ಹೆಂಡತಿ), ಶಶಿ ಹೆಗ್ಗಡೆ: ಜೀವನ್‌ (ಭೂಮಿಕಾ ತಮ್ಮ, ಮಂದಕಿನಿ, ಸದಾಶಿವನ ಮಗ, ಮಹಿಮಾಳ ಗಂಡ), ರಾಣವ್‌: ಜೈದೇವ್‌, ಚಂದನ್‌: ಅಶ್ವಿನಿ, ಸ್ವಾತಿ: ಅಪರ್ಣಾ (ಆನಂದ್‌ ಹೆಂಡತಿ), ಆನಂದ್‌: ಆನಂದ್‌ (ಗೌತಮ್‌ ಸ್ನೇಹಿತ, ಅಪರ್ಣಾ ಗಂಡ).

Whats_app_banner