OTT Action Thriller: ಕೆಲವೇ ದಿನಗಳಲ್ಲಿ ಒಟಿಟಿಗೆ ಬರಲಿದೆ ಆಕ್ಷನ್ ಥ್ರಿಲ್ಲರ್ ಸಿನಿಮಾ 'ಮುರಾ'; ಮನೆಯಲ್ಲೇ ಕುಳಿತು ನೋಡಿ
ಕನ್ನಡ ಸುದ್ದಿ  /  ಮನರಂಜನೆ  /  Ott Action Thriller: ಕೆಲವೇ ದಿನಗಳಲ್ಲಿ ಒಟಿಟಿಗೆ ಬರಲಿದೆ ಆಕ್ಷನ್ ಥ್ರಿಲ್ಲರ್ ಸಿನಿಮಾ 'ಮುರಾ'; ಮನೆಯಲ್ಲೇ ಕುಳಿತು ನೋಡಿ

OTT Action Thriller: ಕೆಲವೇ ದಿನಗಳಲ್ಲಿ ಒಟಿಟಿಗೆ ಬರಲಿದೆ ಆಕ್ಷನ್ ಥ್ರಿಲ್ಲರ್ ಸಿನಿಮಾ 'ಮುರಾ'; ಮನೆಯಲ್ಲೇ ಕುಳಿತು ನೋಡಿ

ಕೆಲವೇ ದಿನಗಳಲ್ಲಿ ಒಟಿಟಿಗೆ ಬರಲಿದೆ ಆಕ್ಷನ್ ಥ್ರಿಲ್ಲರ್ ಸಿನಿಮಾ ‘ಮುರಾ’ ಈ ರೀತಿ ಕಥೆಗಳನ್ನೇ ಇಷ್ಟಪಡುವವರು ಈ ಸಿನಿಮಾ ನೋಡಲು ಮರೆಯದಿರಿ. ಡಿಸೆಂಬರ್ ತಿಂಗಳಿನಲ್ಲಿ ಒಟಿಟಿಯಲ್ಲಿ ಸ್ಟ್ರೀಮ್ ಆಗಲಿದ್ದು. ಇನ್ನೂ ಅನೇಕ ಸಿನಿಮಾಗಳು ವೀಕ್ಷಣೆಗೆ ಲಭ್ಯವಿದೆ.

ಒಟಿಟಿಗೆ ಬರಲಿದೆ ಆಕ್ಷನ್ ಥ್ರಿಲ್ಲರ್ ಸಿನಿಮಾ 'ಮುರಾ
ಒಟಿಟಿಗೆ ಬರಲಿದೆ ಆಕ್ಷನ್ ಥ್ರಿಲ್ಲರ್ ಸಿನಿಮಾ 'ಮುರಾ

ಈ ವರ್ಷ ಮಲಯಾಳಂ ಚಿತ್ರರಂಗಕ್ಕೆ ಸುವರ್ಣ ವರ್ಷ ಎಂದು ಹೇಳಬಹುದು. 2024 ರಲ್ಲಿ ಸಾಕಷ್ಟು ಚಿತ್ರಗಳು ಬಿಡುಗಡೆಯಾದವು. ಅನೇಕ ಚಲನಚಿತ್ರಗಳು ಬ್ಲಾಕ್ಬಸ್ಟರ್ ಹಿಟ್ ಆದವು. ನವೆಂಬರ್ 8 ರಂದು ಬಿಡುಗಡೆಯಾದ ಮತ್ತೊಂದು ಚಿತ್ರ ಮುರಾ ಈಗ ಒಟಿಟಿಗೆ ಕಾಲಿಡುತ್ತಿದೆ. ನೀವು ಮನೆಯಲ್ಲೇ ಕೂತು ಈ ಸಿನಿಮಾ ವೀಕ್ಷಿಸಬಹುದು. IMDb ನಲ್ಲಿ 8.5 ರೇಟಿಂಗ್ ಪಡೆದಿರುವ ಈ ಚಿತ್ರವು ಈ ತಿಂಗಳಲ್ಲೇ OTTಯಲ್ಲಿ ಬಿಡುಗಡೆಯಾಗಲಿದೆ.

ಮುರಾ ಮುಹಮ್ಮದ್ ಮುಸ್ತಫಾ ನಿರ್ದೇಶನದ ಮಲಯಾಳಂ ಚಲನಚಿತ್ರವಾಗಿದೆ. ಕಳೆದ ತಿಂಗಳು ಬಿಡುಗಡೆಯಾದ ಚಲನಚಿತ್ರವು ಡಿಸೆಂಬರ್ 25 ರಿಂದ ಅಮೆಜಾನ್ ಪ್ರೈಮ್ ವೀಡಿಯೊದಲ್ಲಿ ಸ್ಟ್ರೀಮಿಂಗ್ ಆಗಲಿದೆ . ಹ್ರುದು ಹರೂನ್, ಸೂರಜ್ ವೆಂಜರಮೂಡು ಮತ್ತು ಮಾಲಾ ಪಾರ್ವತಿ ನಟಿಸಿದ್ದು, ಚಿತ್ರವು ನವೆಂಬರ್ 8 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಯಿತು ವೀಕ್ಷಕರಿಂದ ಸಕಾರಾತ್ಮಕ ಪ್ರತಿಕ್ರಿಯೆ ಪಡೆಯಿತು.

ಯಾವ ಭಾಷೆಯಲ್ಲಿ ಲಭ್ಯವಿದೆ?

ಈಗ ಸುಮಾರು ಆರು ವಾರಗಳ ನಂತರ OTT ಪ್ರವೇಶಿಸುತ್ತಿದೆ. ಈ ಆಕ್ಷನ್ ಥ್ರಿಲ್ಲರ್ ಕ್ರಿಸ್‌ಮಸ್‌ ಸಮಯದಲ್ಲಿ ಬರಲಿದೆ. ಇದು ಮಲಯಾಳಂ, ತೆಲುಗು, ತಮಿಳು ಮತ್ತು ಹಿಂದಿ ಭಾಷೆಗಳಲ್ಲಿಯೂ ಸ್ಟ್ರೀಮ್ ಆಗಲಿದೆ.

ಸಿನಿಮಾದ ಕಥೆ ಹೀಗಿದೆ

ಮುರಾ ಚಿತ್ರ ಇತ್ತೀಚೆಗಷ್ಟೇ ಚಿತ್ರಮಂದಿರಗಳಲ್ಲಿ 50 ದಿನಗಳನ್ನು ಪೂರೈಸಿದೆ. ಅನೇಕ ಹೊಸ ನಟರ ಉಪಸ್ಥಿತಿಯ ಹೊರತಾಗಿಯೂ, ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ಉತ್ತಮ ಪ್ರತಿಕ್ರಿಯೆಯನ್ನು ಪಡೆಯಿತು. ಮುರಾ ಕೇರಳದ ರಾಜಧಾನಿ ತಿರುವನಂತಪುರದಲ್ಲಿ ನಡೆಯುವ ಕಥೆ. ಈ ಕಥೆಯು ನಾಲ್ಕು ಉದ್ಯೋಗವಿಲ್ಲದ ಯುವಕರ ಸುತ್ತ ಸುತ್ತುತ್ತದೆ. ದರೋಡೆಗೆ ಯತ್ನಿಸಿದ ನಂತರ ಅವರ ಜೀವನ ಹೇಗೆ ತಿರುವು ಪಡೆಯಿತು ಎಂಬುದನ್ನು ಈ ಚಿತ್ರದಲ್ಲಿ ಕಟ್ಟಿಕೊಟ್ಟಿದ್ದಾರೆ.

ಯಾವ ದಿನಾಂಕದಂದು ಬಿಡುಗಡೆಯಾಗಲಿದೆ?

ಈ ಚಿತ್ರವನ್ನು ಮುಹಮ್ಮದ್ ಮುಸ್ತಫಾ ನಿರ್ದೇಶಿಸಿದ್ದಾರೆ. ಕ್ಷನ್ ಥ್ರಿಲ್ಲರ್ ಸಿನಿಮಾಗಳನ್ನು ಇಷ್ಟಪಡುವವರಿಗೆ ಈ ಸಿನಿಮಾ ಇಷ್ಟವಾಗುತ್ತದೆ. ಡಿಸೆಂಬರ್ 25ರಂದು ಅಮೆಜಾನ್‌ ಪ್ರೈಂ ವಿಡಿಯೋದಲ್ಲಿ ನೀವು ಈ ಸಿನಿಮಾವನ್ನು ನೋಡಬಹುದು. ಸಾಕಷ್ಟು ಜನರು ಕಥೆಯಲ್ಲಿ ಟ್ವಿಸ್ಟ್‌ ಇರುವ ಸ್ಟೋರಿಗಳನ್ನೇ ಇಷ್ಟಪಡುತ್ತಾರೆ. ಅದರಲ್ಲೂ ಆಕ್ಷನ್ ಥ್ರಿಲ್ಲರ್ ಸಿನಿಮಾಗಳಿಗೆ ಅದರದ್ದೇ ಆದ ಬೇರೆ ಫ್ಯಾನ್‌ ಫಾಲೋವಿಂಗ್ ಇರುತ್ತದೆ. ನಿಮಗೂ ಈ ಜಾನರ್‌ನ ಸಿನಿಮಾಗಳು ಇಷ್ಟವಾದರೆ ಅಮೆಜಾನ್ ಪ್ರೈಂ ವಿಡಿಯೋದಲ್ಲಿ ವೀಕ್ಷಿಸಿ.

ಅಮೆಜಾನ್‌ ಪ್ರೈಮ್‌ ವಿಡಿಯೋದಲ್ಲಿ ಈ ಸೋಮವಾರ (ಡಿಸೆಂಬರ್‌ 16) ಟಾಪ್‌ 10 ಸಿನಿಮಾಗಳ ಪಟ್ಟಿಯಲ್ಲಿ ಕ್ರಿಸ್ಮಸ್‌ ಸಂಭ್ರಮದ ರೆಡ್‌ ಒನ್‌, ಕಂಗುವಾ, ಮೆಕ್ಯಾನಿಕ್‌ ರಾಕಿ, ಅಗ್ನಿ, ಮಟ್ಕಾ, ಪುಷ್ಪ ದಿ ರೈಸ್‌, ಸರ್‌, ಸ್ತ್ರೀ 2, ವೆಟ್ಟೈಯನ್‌, ಬ್ಲಡಿ ಬೆಗ್ಗರ್‌ ಸಿನಿಮಾಗಳು ಸ್ಥಾನ ಪಡೆದಿವೆ. ಈ ಎಲ್ಲ ಸಿನಿಮಾಗಳನ್ನೂ ನೀವು ವೀಕ್ಷಿಸಬಹುದು. ಮನೆಯಲ್ಲಿಯೇ ಕುಳಿತು ಸಿನಿಮಾ ನೋಡುವವರಿಗೆ ಅಮೆಜಾನ್‌ ಪ್ರೈಮ್‌ ವಿಡಿಯೋ, ನೆಟ್‌ಫ್ಲಿಕ್ಸ್‌, ಡಿಸ್ನಿ ಪ್ಲಸ್‌ ಹಾಟ್‌ಸ್ಟಾರ್‌, ಜಿಯೋ ಸಿನಿಮಾ, ಜೀ5 ಮುಂತಾದ ಒಟಿಟಿಗಳಲ್ಲಿ ಹಲವು ಸಿನಿಮಾಗಳು ಇವೆ.

Whats_app_banner