Fact Check: ಅಯೋಧ್ಯೆ ರಾಮ ಮಂದಿರ ನಿರ್ಮಾಣಕ್ಕೆ ನಟ ಯಶ್‌ 50 ಕೋಟಿ ರೂ. ದೇಣಿಗೆ!?: ಫ್ಯಾಕ್ಟ್‌ ಚೆಕ್‌ ಏನು ಹೇಳುತ್ತೆ?
ಕನ್ನಡ ಸುದ್ದಿ  /  ಮನರಂಜನೆ  /  Fact Check: ಅಯೋಧ್ಯೆ ರಾಮ ಮಂದಿರ ನಿರ್ಮಾಣಕ್ಕೆ ನಟ ಯಶ್‌ 50 ಕೋಟಿ ರೂ. ದೇಣಿಗೆ!?: ಫ್ಯಾಕ್ಟ್‌ ಚೆಕ್‌ ಏನು ಹೇಳುತ್ತೆ?

Fact Check: ಅಯೋಧ್ಯೆ ರಾಮ ಮಂದಿರ ನಿರ್ಮಾಣಕ್ಕೆ ನಟ ಯಶ್‌ 50 ಕೋಟಿ ರೂ. ದೇಣಿಗೆ!?: ಫ್ಯಾಕ್ಟ್‌ ಚೆಕ್‌ ಏನು ಹೇಳುತ್ತೆ?

ನಟ ಯಶ್‌ ಅವರು ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ಶ್ರೀ ರಾಮ ಮಂದಿರ ನಿರ್ಮಾಣಕ್ಕೆ ಬರೋಬ್ಬರಿ 50 ಕೋಟಿ ರೂ. ಹಣವನ್ನು ದೇಣಿಗೆ ರೂಪದಲ್ಲಿ ನೀಡಿದ್ದಾರೆ ಎಂಬ ಸುದ್ದಿ ಇದೀಗ ಸೋಷಿಯಲ್‌ ಮೀಡಿಯಾದಲ್ಲಿ ಫೋಟೋ ಸಮೇತ ವೈರಲ್‌ ಆಗಿದೆ.

<p>ಅಯ್ಯೋಧ್ಯೆ ರಾಮ ಮಂದಿರ ನಿರ್ಮಾಣಕ್ಕೆ ನಟ ಯಶ್‌ 50 ಕೋಟಿ ರೂ. ದೇಣಿಗೆ!?: ಫ್ಯಾಕ್ಟ್‌ ಚೆಕ್‌ ಏನು ಹೇಳುತ್ತೆ?</p>
ಅಯ್ಯೋಧ್ಯೆ ರಾಮ ಮಂದಿರ ನಿರ್ಮಾಣಕ್ಕೆ ನಟ ಯಶ್‌ 50 ಕೋಟಿ ರೂ. ದೇಣಿಗೆ!?: ಫ್ಯಾಕ್ಟ್‌ ಚೆಕ್‌ ಏನು ಹೇಳುತ್ತೆ? (Twitter)

ನವದೆಹಲಿ: ಸ್ಯಾಂಡಲ್‌ವುಡ್‌ ನಟ ಯಶ್‌ ಇದೀಗ ಪ್ಯಾನ್‌ ಇಂಡಿಯಾ ಸ್ಟಾರ್‌ ಆಗಿ ಬೆಳೆದು ನಿಂತಿದ್ದಾರೆ. ಕರ್ನಾಟಕ ಮಾತ್ರವಲ್ಲ ಇಡೀ ದೇಶಾದ್ಯಂತ ಮತ್ತು ವಿಶ್ವದ ಹಲವೆಡೆಗಳಲ್ಲಿ ಅಪಾರ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಇದೆಲ್ಲ ಸಾಕಾರವಾಗಿದ್ದು; "ಕೆಜಿಎಫ್‌ ಚಾಪ್ಟರ್‌ 2" ಸಿನಿಮಾ ಮೂಲಕ. ಆ ಒಂದೇ ಒಂದು ಸಿನಿಮಾ ಯಶ್‌ ಅವರನ್ನು ನ್ಯಾಶನಲ್‌ ಸ್ಟಾರ್‌ ಪಟ್ಟಕ್ಕೇರಿಸಿತು. ಅಭಿಮಾನಿ ಬಳಗವೂ ಹಿರಿದಾಯಿತು. ಇದೀಗ ಅವರ ಸಿನಿಮಾಕ್ಕೆ ಕೇವಲ ಕರ್ನಾಟಕ ಮಾತ್ರವಲ್ಲ ಇಡೀ ದೇಶ ಕಾಯುತ್ತಿದೆ.

ಹೌದು, ಯಶ್‌ ಅವರ ಕಾಲ್‌ಶೀಟ್‌ ಪಡೆಯಲು ದೊಡ್ಡ ದೊಡ್ಡ ನಿರ್ಮಾಪಕ ಬಳಗವೇ ಸರತಿಯಲ್ಲಿದೆ. ಯಶ್‌ಗೆ ನೂರು ಕೋಟಿ ಸಂಭಾವನೆ ಕೊಡುವುದಾಗಿಯೂ ಹಲವು ನಿರ್ಮಾಪಕರು ಹೇಳಿಕೊಂಡಿದ್ದಾರೆ ಎಂಬ ಸುದ್ದಿಯೂ ಇತ್ತೀಚೆಗಷ್ಟೇ ಹರಿದಾಡಿತ್ತು. ಇನ್ನೇನಿದ್ದರೂ ಯಶ್‌ ಸಿನಿಮಾ ಬಜೆಟ್‌ ಸಹ 500 ಕೋಟಿ ಮೇಲೆಯೇ ಇರಲಿದೆ ಎಂದೂ ಹೇಳಲಾಗಿತ್ತು. ಆದರೆ, ಈವರೆಗೂ ಯಶ್‌ ಅವರ ಸಿನಿಮಾ ಮಾತ್ರ ಸೆಟ್ಟೇರಿಲ್ಲ. ಈ ನಡುವೆ ಯಶ್‌ ಅವರ ಬಗ್ಗೆ ಸಾಕಷ್ಟು ಸುದ್ದಿಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿವೆ. ಅದರಲ್ಲಿ ಇದೂ ಒಂದು.

ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುವ ಸುದ್ದಿಗಳು ಎಷ್ಟರ ಮಟ್ಟಿಗೆ ನಿಜ, ಸುಳ್ಳು ಎಂಬುದನ್ನು ಪತ್ತೆ ಮಾಡುವುದು ಸರಳವಲ್ಲ. ಆದರೆ, ಅದೇ ಸುದ್ದಿ ನಿಜ ಎಂದು ನಂಬುವವರೇ ಹೆಚ್ಚು. ಇದೀಗ ಯಶ್‌ ಅವರ ಹೆಸರಿನಲ್ಲಿ ಅಂಥದ್ದೇ ಸುದ್ದಿಯೊಂದು ಜಾಲತಾಣದಲ್ಲಿ ದೊಡ್ಡ ಮಟ್ಟದಲ್ಲಿ ಸುದ್ದಿ ಮಾಡುತ್ತಿದೆ. ಹಾಗಾದರೆ ಏನದು ವಿಚಾರ? ಹರಿದಾಡಿದ ಸುದ್ದಿಯ ಫ್ಯಾಕ್ಟ್‌ ಚೆಕ್‌ ಏನು? ಇಲ್ಲಿದೆ ಮಾಹಿತಿ.

ಅಯೋಧ್ಯೆ ರಾಮ ಮಂದಿರಕ್ಕೆ 50 ಕೋಟಿ ದೇಣಿಗೆ!?

ನಟ ಯಶ್‌ ಅವರು ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ಶ್ರೀ ರಾಮ ಮಂದಿರ ನಿರ್ಮಾಣಕ್ಕೆ ಬರೋಬ್ಬರಿ 50 ಕೋಟಿ ರೂ. ಹಣವನ್ನು ದೇಣಿಗೆ ರೂಪದಲ್ಲಿ ನೀಡಿದ್ದಾರೆ ಎಂಬ ಸುದ್ದಿ ಇದೀಗ ಜಾಲತಾಣದಲ್ಲಿ ಫೋಟೋ ಸಮೇತ ವೈರಲ್‌ ಆಗಿದೆ. ಇತ್ತೀಚೆಗಷ್ಟೇ ಯಶ್ ತಮ್ಮ ಭುಜದ ಮೇಲೆ ಕೇಸರಿ ಶಾಲು, ಹಣೆಯ ಮೇಲೆ ತಿಲಕ ಧರಿಸಿ ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ರಾಮಮಂದಿರಕ್ಕೆ ಭೇಟಿ ನೀಡಿ ಬಂದಿದ್ದರು ಎಂಬ ಪುಕಾರೂ ಹಬ್ಬಿದೆ. ಅಷ್ಟೇ ಅಲ್ಲ ಮಂದಿರ ನಿರ್ಮಾಣಕ್ಕೆ 50 ಕೋಟಿ ನೆರವು ನೀಡುವುದಾಗಿಯೂ ಘೋಷಿಸಿದ್ದಾರೆ ಎಂಬ ಸುದ್ದಿ ಸದ್ದು ಮಾಡುತ್ತಿದೆ. ಆದರೆ, ಹೀಗೆ ಹರಿದಾಡಿರುವ ಫೋಟೋದ ಅಸಲಿಯತ್ತೇ ಬೇರೆಯದ್ದಾಗಿದೆ.

ಇದು ತಿರುಪತಿ ಭೇಟಿಯ ಫೋಟೋ..

ಕೆಜಿಎಫ್‌ ಚಾಪ್ಟರ್‌ 2 ಸಿನಿಮಾ ಸಂದರ್ಭದಲ್ಲಿ ನಟ ಯಶ್‌ ಟೆಂಪಲ್‌ ರನ್‌ ನಡೆಸಿದ್ದರು. ಬಿಡುಗಡೆ ಹಿನ್ನೆಲೆಯಲ್ಲಿ ಹಲವು ಗುಡಿ ಗುಂಡಾರಗಳಿಗೆ ಭೇಟಿ ನೀಡಿದ್ದರು. ಆ ಪೈಕಿ ಚಿತ್ರತಂಡದ ಜತೆಗೆ ತಿರುಪತಿಯ ತಿರುಮಲ ದೇವಸ್ಥಾನಕ್ಕೂ ತೆರಳಿದ್ದರು. ಆ ಭೇಟಿಯ ಫೋಟೋವನ್ನೇ ಅಜಯ್‌ ದಾದಾ ಅಯೋಧ್ಯೆವಾಸಿ ಎಂಬುವವರು ತಮ್ಮ ಟ್ವಿಟರ್‌ನಲ್ಲಿ ಪೋಸ್ಟ್‌ ಮಾಡಿಕೊಂಡು, ಯಶ್‌ ಅವರಿಂದ ಅಯೋಧ್ಯೆ ರಾಮ ಮಂದಿರ ನಿರ್ಮಾಣಕ್ಕೆ 50 ಕೋಟಿ ದೇಣಿಗೆ ಎಂದು ಬರೆದುಕೊಂಡಿದ್ದಾರೆ. ಆದರೆ ಅಸಲಿ ವಿಚಾರ ಏನೆಂದರೆ ಇದೇ ವರ್ಷದ ಏಪ್ರಿಲ್‌ 11ರಂದು ಯಶ್‌ ಹೈದರಾಬಾದ್‌ನಲ್ಲಿ ಕೆಜಿಎಫ್‌ ಚಿತ್ರದ ಪ್ರಚಾರಕ್ಕೂ ಮುನ್ನ ತಿರುಪತಿಗೆ ಭೇಟಿ ನೀಡಿದ್ದರು. ಆ ಫೋಟೋಗಳೇ ಇದೀಗ ಅಯೋಧ್ಯೆ ಭೇಟಿಯ ಫೋಟೋ ಎಂದು ಬಿಂಬಿಸಲಾಗಿದೆ.

Whats_app_banner