Kantara Chapter 1: ರಿಷಬ್ ಶೆಟ್ಟಿ ಕಳರಿ ಪಟ್ಟು ಸಮರ ಕಲೆ ಅಭ್ಯಾಸ; ಕಾಂತಾರ ಚಾಪ್ಟರ್ 1ಗಾಗಿ ಶೆಟ್ರ ಕಸರತ್ತು ಹೀಗಿದೆ ನೋಡಿ-sanadalwood news rishab shetty shared kalaripayattu training photo actor preparing for kantara chapter 1 fighting scen ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  Kantara Chapter 1: ರಿಷಬ್ ಶೆಟ್ಟಿ ಕಳರಿ ಪಟ್ಟು ಸಮರ ಕಲೆ ಅಭ್ಯಾಸ; ಕಾಂತಾರ ಚಾಪ್ಟರ್ 1ಗಾಗಿ ಶೆಟ್ರ ಕಸರತ್ತು ಹೀಗಿದೆ ನೋಡಿ

Kantara Chapter 1: ರಿಷಬ್ ಶೆಟ್ಟಿ ಕಳರಿ ಪಟ್ಟು ಸಮರ ಕಲೆ ಅಭ್ಯಾಸ; ಕಾಂತಾರ ಚಾಪ್ಟರ್ 1ಗಾಗಿ ಶೆಟ್ರ ಕಸರತ್ತು ಹೀಗಿದೆ ನೋಡಿ

Rishab Shetty Kantara Updates: ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ವಿಜೇತ ರಿಷಬ್‌ ಶೆಟ್ಟಿ ಕಾಂತಾರ ಚಾಪ್ಟರ್‌ 1 ಸಿನಿಮಾಕ್ಕೆ ಸಂಬಂಧಪಟ್ಟ ಫೋಟೋವೊಂದನ್ನು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ತನ್ನ ಮುಂಬರುವ ಸಿನಿಮಾಕ್ಕೆ ಕಳರಿಪಟ್ಟು ಸಮರಕಲೆ ಅಭ್ಯಾಸ ನಡೆಸುವ ಫೋಟೋ ಹಂಚಿಕೊಂಡಿದ್ದಾರೆ.

ಕಳರಿ ಪಟ್ಟು ಸಮರ ಕಲೆ ಅಭ್ಯಾಸ ಮಾಡುತ್ತಿರುವ ಫೋಟೋವನ್ನು ಕಾಂತಾರ ನಟ ರಿಷಬ್‌ ಶೆಟ್ಟಿ ಹಂಚಿಕೊಂಡಿದ್ದಾರೆ.
ಕಳರಿ ಪಟ್ಟು ಸಮರ ಕಲೆ ಅಭ್ಯಾಸ ಮಾಡುತ್ತಿರುವ ಫೋಟೋವನ್ನು ಕಾಂತಾರ ನಟ ರಿಷಬ್‌ ಶೆಟ್ಟಿ ಹಂಚಿಕೊಂಡಿದ್ದಾರೆ.

ಬೆಂಗಳೂರು: ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ವಿಜೇತ ರಿಷಬ್‌ ಶೆಟ್ಟಿ ಕಾಂತಾರ ಚಾಪ್ಟರ್‌ 1 ಸಿನಿಮಾದ ಯುದ್ಧದ ದೃಶ್ಯಗಳಿಗೆ ಸಿದ್ಧತೆ ನಡೆಸುತ್ತಿದ್ದಾರೆ. ಸದ್ಯ ಎಕ್ಸ್‌ನಲ್ಲಿ ಸಮರ ಕಲೆ ಕಳರಿಪಟ್ಟು ಕಲಿಯುತ್ತಿರುವಂತಹ ಫೋಟೋವೊಂದನ್ನು ಹಂಚಿಕೊಂಡಿದ್ದಾರೆ. ಪಿರೆಯಿಡ್‌ ಕಥೆ ಇರುವ ಕಾಂತಾರ ಸಿನಿಮಾದಲ್ಲಿ ಭರ್ಜರಿ ಸಾಹಸ ದೃಶ್ಯಗಳಿರುವ ಸೂಚನೆಯನ್ನು ಈ ಮೂಲಕ ನೀಡಿದ್ದಾರೆ. ಕಾಂತಾರ ಸಿನಿಮಾಕ್ಕಾಗಿ ಕಾಯುತ್ತಿರುವವರ ನಿರೀಕ್ಷೆಯನ್ನು ಇದು ಹೆಚ್ಚಿಸಿದೆ.

ರಿಷಬ್‌ ಶೆಟ್ಟಿ ಹಂಚಿಕೊಂಡ ಫೋಟೋಗೆ ಪ್ರತಿಕ್ರಿಯೆ

ಕಾಂತಾರ ನಟ ರಿಷಬ್‌ ಶೆಟ್ಟಿ ಕಳರಿ ಪಟ್ಟು ಆಕ್ಷನ್‌ನಲ್ಲಿರುವ ಫೋಟೋವನ್ನು ಎಕ್ಸ್‌ನಲ್ಲಿ (ಹಳೆ ಜಮಾನದ ಟ್ವಿಟ್ಟರ್‌) ಹಂಚಿಕೊಂಡಿದ್ದಾರೆ. ಈ ಮೂಲಕ ಕಾಂತಾರ ಸಿನಿಮಾದ ಯುದ್ಧದ ದೃಶ್ಯದ ಸೂಚನೆ ನೀಡಿದ್ದಾರೆ. ಆದರೆ, ಅದಕ್ಕೆ ಸೋಷಿಯಲ್‌ ಮೀಡಿಯಾ ಬಳಕೆದಾರರು ವೈವಿಧ್ಯಮಯ ಕಾಮೆಂಟ್‌ ನೀಡಿದ್ದಾರೆ. "ನೀವು ಇತ್ತೀಚೆಗೆ ಬಾಲಿವುಡ್‌ ಬಗ್ಗೆ ಹೇಳಿದ ಅಭಿಪ್ರಾಯಕ್ಕೆ ಎದುರಾದ ಟೀಕೆಗಳಿಗೆ ಪ್ರತಿರೋಧದ ಗುರಾಣಿ ಹಿಡಿದಂತೆ ಈ ಫೋಟೋ ಕಾಣಿಸುತ್ತದೆ" ಎಂದು ಕೆಲವರು ಕಾಮೆಂಟ್‌ ಮಾಡಿದ್ದಾರೆ.

ಇದೇ ಸಮಯದಲ್ಲಿ ಸಾಕಷ್ಟು ಜನರು ಕಾಂತಾರ ಸಿನಿಮಾದ ಕುರಿತು ಕುತೂಹಲದ ಪ್ರಶ್ನೆಗಳನ್ನು ಕೇಳಿದ್ದಾರೆ. "ರಿಷಬ್‌ ಶೆಟ್ಟಿ ಸರ್‌ ಯಾವಾಗ ಕಾಂತಾರ ಸಿನಿಮಾ ಬರುತ್ತದೆ?" "ನಾವೆಲ್ಲ ಸಾಕಷ್ಟು ನಿರೀಕ್ಷೆಯಿಂದ ಕಾಂತಾರಕ್ಕೆ ಕಾಯುತ್ತಿದ್ದೇವೆ" "ಪಕ್ಕಾ ಮಾಸ್‌ ಲುಕ್‌ ಸರ್‌" "ನೀವು ಸ್ಪೂರ್ತಿದಾಯಕ ವ್ಯಕ್ತಿ" ಎಂದೆಲ್ಲ ಕಾಮೆಂಟ್‌ ಮಾಡಿದ್ದಾರೆ.

ಬಾಲಿವುಡ್‌ ಬಗ್ಗೆ ರಿಷಬ್‌ ಶೆಟ್ಟಿ ಕಾಮೆಂಟ್‌

ಮೆಟ್ರೊಸಾಗಾಗೆ ನೀಡಿದ ಸಂದರ್ಶನದಲ್ಲಿ ರಿಷಬ್‌ ಶೆಟ್ಟಿ ಬಾಲಿವುಡ್‌ ಬಗ್ಗೆ ಮಾತನಾಡಿದ್ದರು. "ಭಾರತದ ಸಿನಿಮಾಗಳು, ವಿಶೇಷವಾಗಿ ಬಾಲಿವುಡ್‌ ಸಿನಿಮಾಗಳು ಭಾರತ ಇಮೇಜ್‌ ಅನ್ನು ಕೆಟ್ಟದ್ದಾಗಿ ತೋರಿಸುತ್ತವೆ. ಈ ರೀತಿ ದೇಶವನ್ನು ಕೆಟ್ಟದ್ದಾಗಿ ತೋರಿಸುವ ಕಲಾತ್ಮಕ ಸಿನಿಮಾಗಳನ್ನು ಜಾಗತಿಕ ಇವೆಂಟ್‌ಗಳು ಮತ್ತು ರೆಡ್‌ ಕಾರ್ಪೆಟ್‌ ಕಾರ್ಯಕ್ರಮಗಳಿಗೆ ಆಹ್ವಾನಿಸಲಾಗುತ್ತದೆ. ನನ್ನ ರಾಜ್ಯ, ನನ್ನ ದೇಶ ನನ್ನ ಹೆಮ್ಮೆ. ಜಾಗತಿಕವಾಗಿ ದೇಶದ ಬಗ್ಗೆ ಒಳ್ಳೆಯ ಅಭಿಪ್ರಾಯ ಮೂಡಿಸಲು ನಾನು ಆದ್ಯತೆ ನೀಡುವೆ" ಎಂದು ರಿಷಬ್‌ ಶೆಟ್ಟಿ ಹೇಳಿದ್ದರು.

ಇವರ ಹೇಳಿಕೆಗೆ ಒಂದಿಷ್ಟು ಜನರು ಪ್ರತಿರೋಧ ವ್ಯಕ್ತಪಡಿಸಿದ್ದರು. ಸೋಷಿಯಲ್‌ ಮೀಡಿಯಾದಲ್ಲಿ ಕಾಂತಾರ ಸಿನಿಮಾದ ವಿಡಿಯೋ ಕ್ಲಿಪ್‌ ಇಟ್ಟುಕೊಂಡು ಟ್ರೋಲ್‌ ಮಾಡಲಾಗಿತ್ತು. ಕೆಲವರು ರಿಷಬ್‌ ಶೆಟ್ಟಿ ಕಾಂತಾರ ಸಿನಿಮಾದಲ್ಲಿ ನಾಯಕಿಯ ಸೊಂಟು ಚಿವುಟುವ ದೃಶ್ಯವನ್ನು ಇಟ್ಟುಕೊಂಡು ಟ್ರೋಲ್‌ ಮಾಡಿದ್ದರು. "ಯಶಸ್ಸು ಬರುತ್ತದೆ ಹೋಗುತ್ತದೆ. ಆದರೆ, ಸೊಂಚ ಚಿವುಟುವ ನೀವು ಬಾಲಿವುಡ್‌ ಬಗ್ಗೆ ಕೆಟ್ಟದ್ದಾಗಿ ಏಕೆ ಮಾತನಾಡುವಿರಿ" ಎಂದೆಲ್ಲ ಒಂದಿಷ್ಟು ನೆಟ್ಟಿಗರು ಪ್ರಶ್ನೆ ಮಾಡಿದ್ದರು. ಇದೇ ಸಮಯದಲ್ಲಿ ಸಾಕಷ್ಟು ಜನರು ಶೆಟ್ರು ಪರವಾಗಿ ನಿಂತು ಹೌದು ಬಾಲಿವುಡ್‌ನ ಕೆಲವು ಚಿತ್ರಗಳಲ್ಲಿ ಭಾರತವನ್ನು ಕೆಟ್ಟದ್ದಾಗಿ ತೋರಿಸಲಾಗುತ್ತಿದೆ ಎಂದು ಹೇಳಿದ್ದಾರೆ.

ಇದೀಗ ರಿಷಬ್‌ ಶೆಟ್ಟಿ ಹಂಚಿಕೊಂಡಿರುವ ಫೋಟೋ ಇಂತಹ ಪ್ರತಿಕ್ರಿಯೆಗಳಿಗೆ ಪ್ರತಿರೋಧದ ಗುರಾಣಿ ಹಿಡಿದಂತೆ ಕಾಣಿಸುತ್ತದೆ ಎಂದು ಕೆಲವರು ಕಾಮೆಂಟ್‌ ಮಾಡಿದ್ದಾರೆ. ಈ ಚಿತ್ರವು ಕಾಂತಾರ ಸಿನಿಮಾಕ್ಕೆ ಸಂಬಂಧಪಟ್ಟದ್ದು ಎನ್ನಲಾಗುತ್ತಿದೆ. ಈ ಸಿನಿಮಾದಲ್ಲಿ ಕಳರಿಪಟ್ಟು ಸಮರ ಇರುವ ಸೂಚನೆಯಿದೆ. ಕರಾವಳಿ ದೈವಗಳ ಮೂಲದ ಕಥೆ ಹೊಂದಿರುವುದರಿಂದ ಈ ಸಿನಿಮಾವು ಕೇರಳ, ತಮಿಳುನಾಡಿನ ಇತಿಹಾಸವನ್ನು ಕನೆಕ್ಟ್‌ ಮಾಡುವ ಸೂಚನೆಯಿದೆ. ಇದೇ ಸಮಯದಲ್ಲಿ ಕಳರಿಪಟ್ಟು ಇತ್ಯಾದಿ ಸಮರ ಕಲೆಯು ಕಾಂತಾರ ಚಾಪ್ಟರ್‌ 1ರಲ್ಲಿ ಇರಲಿದೆ ಎನ್ನಲಾಗುತ್ತಿದೆ.