ಗೆಳೆತನದಲ್ಲಿ ದಿಗ್ಗಜ, ಸ್ಯಾಂಡಲ್‌ವುಡ್‌ ಕರ್ಣ ರೆಬೆಲ್‌ಸ್ಟಾರ್‌ ಅಂಬರೀಶ್‌ಗಿಂದು 72ನೇ ಬರ್ತ್‌ಡೇ; ಅಪ್ಪಾಜಿಯನ್ನು ನೆನೆದ ‌ನಟ ದರ್ಶನ್
ಕನ್ನಡ ಸುದ್ದಿ  /  ಮನರಂಜನೆ  /  ಗೆಳೆತನದಲ್ಲಿ ದಿಗ್ಗಜ, ಸ್ಯಾಂಡಲ್‌ವುಡ್‌ ಕರ್ಣ ರೆಬೆಲ್‌ಸ್ಟಾರ್‌ ಅಂಬರೀಶ್‌ಗಿಂದು 72ನೇ ಬರ್ತ್‌ಡೇ; ಅಪ್ಪಾಜಿಯನ್ನು ನೆನೆದ ‌ನಟ ದರ್ಶನ್

ಗೆಳೆತನದಲ್ಲಿ ದಿಗ್ಗಜ, ಸ್ಯಾಂಡಲ್‌ವುಡ್‌ ಕರ್ಣ ರೆಬೆಲ್‌ಸ್ಟಾರ್‌ ಅಂಬರೀಶ್‌ಗಿಂದು 72ನೇ ಬರ್ತ್‌ಡೇ; ಅಪ್ಪಾಜಿಯನ್ನು ನೆನೆದ ‌ನಟ ದರ್ಶನ್

ರೆಬೆಲ್‌ಸ್ಟಾರ್‌ ಅಂಬರೀಶ್‌ ನಮ್ಮ ನಡುವೆ ದೈಹಿಕವಾಗಿ ಇದ್ದಿದ್ದರೆ ಅವರಿಗೆ ಇಂದಿಗೆ 72 ವರ್ಷ ತುಂಬುತ್ತಿತ್ತು. ಆದರೆ, ಅವರ ಅನುಪಸ್ಥಿತಿಯ ನಡುವೆಯೂ ಅಭಿಮಾನಿ ವಲಯದ ಸಂಭ್ರಮದಿಂದಲೇ ಹುಟ್ಟುಹಬ್ಬವನ್ನು ಆಚರಿಸುತ್ತಿದೆ. ಇತ್ತ ನಟ ದರ್ಶನ್‌ ಸಹ ವಿಶೇಷ ಪೋಸ್ಟ್‌ ಹಂಚಿಕೊಂಡಿದ್ದಾರೆ.

ಗೆಳೆತನದಲ್ಲಿ ದಿಗ್ಗಜ, ಸ್ಯಾಂಡಲ್‌ವುಡ್‌ ಕರ್ಣ ರೆಬೆಲ್‌ಸ್ಟಾರ್‌ ಅಂಬರೀಶ್‌ಗಿಂದು 72ನೇ ಬರ್ತ್‌ಡೇ; ಅಪ್ಪಾಜಿಯನ್ನು ನೆನೆದ ‌ನಟ ದರ್ಶನ್
ಗೆಳೆತನದಲ್ಲಿ ದಿಗ್ಗಜ, ಸ್ಯಾಂಡಲ್‌ವುಡ್‌ ಕರ್ಣ ರೆಬೆಲ್‌ಸ್ಟಾರ್‌ ಅಂಬರೀಶ್‌ಗಿಂದು 72ನೇ ಬರ್ತ್‌ಡೇ; ಅಪ್ಪಾಜಿಯನ್ನು ನೆನೆದ ‌ನಟ ದರ್ಶನ್

Ambareesh Birthday: ಗೆಳೆತನದಲ್ಲಿ ದಿಗ್ಗಜ ಎನಿಸಿಕೊಂಡ ಸ್ಯಾಂಡಲ್‌ವುಡ್‌ ಕರ್ಣ ರೆಬೆಲ್‌ಸ್ಟಾರ್‌ ಅಂಬರೀಶ್‌ ಇಂದು (ಮೇ 29) ನಮ್ಮ ಜತೆ ದೈಹಿಕವಾಗಿ ಇದ್ದಿದ್ದರೆ ಅವರಿಗೆ 72 ವರ್ಷ ತುಂಬುತ್ತಿತ್ತು. ಅವರ ಅನುಪಸ್ಥಿತಿಯಲ್ಲಿಯೇ ಪ್ರತಿ ವರ್ಷ ಈ ದಿನವನ್ನು ಹಬ್ಬದಂತೆ ಆಚರಿಸುತ್ತಾರೆ ಅವರ ಅಭಿಮಾನಿಗಳು. ಬರ್ತ್‌ಡೇ ಪ್ರಯುಕ್ತ ಅಂಬಿಯ ಸಿನಿಮಾ ಮತ್ತು ರಾಜಕೀಯದ ಕಲರ್‌ಫುಲ್‌ ಪಯಣದ ಕಿರು ಝಲಕ್‌ ಇಲ್ಲಿದೆ.

ಇಂದು (ಮೇ 29) ಸ್ಯಾಂಡಲ್‌ವುಡ್‌ನ ರೆಬೆಲ್‌ಸ್ಟಾರ್‌ ಅಂಬರೀಶ್‌ ಅವರ 72ನೇ ಬರ್ತ್‌ಡೇ. ಈ ಹಿನ್ನೆಲೆಯಲ್ಲಿ ಬೆಂಗಳೂರು, ಮಂಡ್ಯ ಸೇರಿ ಅವರ ಹುಟ್ಟೂರಿನಲ್ಲಿ ಅವರ ಅಭಿಮಾನಿಗಳಿಂದ ಹಲವು ಕಾರ್ಯಕ್ರಮಗಳು ನಡೆಯಲಿವೆ. ಕಂಠೀರವ ಸ್ಟುಡಿಯೋದಲ್ಲಿ ಅವರ ಸಮಾಧಿಗೆ ಕುಟುಂಬ ವಿಶೇಷ ಪೂಜೆ ಸಲ್ಲಿಸಿದರೆ, ಪುತ್ರ ಅಭಿಷೇಕ್‌ ಅಂಬರೀಶ್‌ ಅವರ ಸಿನಿಮಾಗಳ ಪೋಸ್ಟರ್‌ ಸೇರಿ ಹೊಸ ಸಿನಿಮಾಗಳ ಘೋಷಣೆಯೂ ಸಾಧ್ಯತೆಗಳಿವೆ.

ದರ್ಶನ್‌ ಪೋಸ್ಟ್‌

ಈ ನಡುವೆ ನಟ ದರ್ಶನ್‌ ಅಂಬಿ ಬರ್ತ್‌ಡೇ ಬಗ್ಗೆ ಸೋಷಿಯಲ್‌ ಮೀಡಿಯಾ ಟ್ವಿಟರ್‌ನಲ್ಲಿ ವಿಶೇಷ ಫೋಟೋ ಜತೆಗೆ ಒಂದಷ್ಟು ಸಾಲುಗಳನ್ನು ಬರೆದುಕೊಂಡಿದ್ದಾರೆ. ಹೀಗಿದೆ ಅವರ ಪೋಸ್ಟ್‌. “ನಮ್ಮೆಲ್ಲರ ಪ್ರೀತಿಯ ಮಂಡ್ಯದ ಗಂಡು ಅಂಬಿ ಅಪ್ಪಾಜಿ ರವರಿಗೆ ಜನ್ಮದಿನಾಚರಣೆಯ ಶುಭಾಶಯಗಳು. ಇಂದಿಗೂ ಅವರ ಖಡಕ್ ಜೀವನ ಶೈಲಿ, ನೇರ ನುಡಿ ಹಾಗೂ ಕಾಪಾಡಿಕೊಂಡು ಬಂದ ಪ್ರೀತಿ-ಆದರ್ಶಗಳು ಎಲ್ಲರಿಗೂ ಸ್ಫೂರ್ತಿಯಾಗಿರುತ್ತದೆ. ದೈಹಿಕವಾಗಿ ನಮ್ಮನು ಅಗಲಿದರೂ ಮಾನಸಿಕವಾಗಿ ನಮ್ಮನ್ನು ಕಾಯುತ್ತ ಆಶೀರ್ವದಿಸುತ್ತಾ ನಮ್ಮೊಂದಿಗೆ ಇದ್ದಾರೆ. One and only #HappyBirthdayRebelStar We all miss him” ಎಂದಿದ್ದಾರೆ. 

ಮಳವಳ್ಳಿ ಹುಚ್ಚೇಗೌಡ ಅಮರನಾಥ್

ಮಂಡ್ಯ ಜಿಲ್ಲೆ ದೊಡ್ಡರಸನ ಕೆರೆ ಗ್ರಾಮದಲ್ಲಿ 1952 ಮೇ 29ರಂದು ಜನಿಸಿ ಅಂಬರೀಶ್‌ ಅವರ ಮೂಲ ಹೆಸರು ಮಳವಳ್ಳಿ ಹುಚ್ಚೇಗೌಡ ಅಮರನಾಥ್. ತಾಯಿ ಪದ್ಮಮ್ಮ. ಖ್ಯಾತ ಪಿಟೀಲು ವಿದ್ವಾನ್ ಟಿ ಚೌಡಯ್ಯ ಅಂಬರೀಶ್‌ ಅವರ ತಾತ. 1973ರಲ್ಲಿ ಪುಟ್ಟಣ್ಣ ಕಣಗಾಲ್‌ ಅವರ ನಾಗರಹಾವು ಸಿನಿಮಾ ಮೂಲಕ ಜಲೀಲನಾಗಿ ಕನ್ನಡ ಚಿತ್ರರಂಗಕ್ಕೆ ಎಂಟ್ರಿಕೊಟ್ಟ ಅಂಬರೀಶ್‌, ಅದಾದ ಮೇಲೆ ಮತ್ತೆ ಹಿಂತಿರುಗಿ ನೋಡಲೇ ಇಲ್ಲ.

ಸಾಲು ಸಾಲು ಸಿನಿಮಾಗಳಲ್ಲಿ ಅವಕಾಶ ಗಿಟ್ಟಿಸಿಕೊಳ್ಳುತ್ತ ಹೋದರು. ಅಲ್ಲಿಂದ ಆರಂಭವಾದ ಅವರ ಸಿನಿಮಾ ಪಯಣ ಚಂದನವನದಲ್ಲಿ ಸುದೀರ್ಘವಾಗಿ ಸಾಗಿ ಬಂತು. ಕನ್ನಡದಲ್ಲಿ 200ಕ್ಕೂ ಅಧಿಕ ಸಿನಿಮಾಗಳಲ್ಲಿ ಅಂಬರೀಶ್‌ ನಟಿಸಿದ್ದಾರೆ. ದರ್ಶನ್‌ ಪ್ರಧಾನ ಪಾತ್ರದಲ್ಲಿ ನಟಿಸಿದ್ದ ಕುರುಕ್ಷೇತ್ರ ಚಿತ್ರವೇ ಅವರ ಕೊನೇ ಸಿನಿಮಾ.

ಗೆಳೆತನದಲ್ಲಿ ದಿಗ್ಗಜ

ಸುದೀರ್ಘ ಆರು ವರ್ಷಗಳ ಕಾಲ ಸುಮಲತಾ ಅವರೊಂದಿಗೆ ಪ್ರೀತಿಯಲ್ಲಿದ್ದ ಈ ಜೋಡಿ 1991ರಲ್ಲಿ ಸಪ್ತಪದಿ ತುಳಿದರು. ಈ ಜೋಡಿಯ ಮಡಿಲಿಗೆ ಅಕ್ಟೋಬರ್‌ 1993ರಲ್ಲಿ ಮಗ ಅಭಿಷೇಕ್‌ ಆಗಮನವಾಯಿತು. ಅದೇ ರೀತಿ ಕನ್ನಡದಲ್ಲಿ ಮಾತ್ರವಲ್ಲದೆ ಪಕ್ಕದ ಬಾಲಿವುಡ್‌, ಟಾಲಿವುಡ್‌, ಕಾಲಿವುಡ್‌ನಲ್ಲಿಯೂ ಅಪಾರ ಸ್ನೇಹ ಬಳಗ ಹೊಂದಿರುವ, ಗೆಳೆತನದಲ್ಲಿ ದಿಗ್ಗಜ ಎನಿಸಿರುವ ಅಂಬಿ ಕೇವಲ ಸಿನಿಮಾ ಕ್ಷೇತ್ರಕ್ಕಷ್ಟೇ ಸೀಮಿತವಾಗಿ ಉಳಿದಿಲ್ಲ. ರಾಜಕೀಯದಲ್ಲಿಯೂ ಗುರುತಿಸಿಕೊಂಡಿದ್ದಾರೆ.

2018ರ ನವೆಂಬರ್‌ 24ರಂದು ನಿಧನ

ಅಂಬರೀಶ್‌ ಮೊದಲಿಗೆ ರಾಜಕೀಯ ಕ್ಷೇತ್ರವನ್ನು ಪ್ರವೇಶಿಸಿದ್ದು ಜನತಾದಳದಿಂದ. ಅದಾದ ಬಳಿಕ 1994ರಲ್ಲಿ ಕಾಂಗ್ರೆಸ್‌ ಪಕ್ಷ ಸೇರ್ಪಡೆಯಾದರು. 1998ರ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ ಜಯಗಳಿಸಿದರು. ಅದಾದ ಬಳಿಕ 2013ರಲ್ಲಿ ಮಂಡ್ಯದಿಂದ ಗೆದ್ದು ವಿಧಾನಸಭೆ ಪ್ರವೇಶಿಸಿ ಸಿದ್ದರಾಮಯ್ಯ ಸಚಿವ ಸಂಪುಟದಲ್ಲಿ ವಸತಿ ಸಚಿವರಾದರು. ನಟ ಅಂಬರೀಶ್ 2018ರ ನವೆಂಬರ್ 24ರಂದು ಬೆಂಗಳೂರಿನಲ್ಲಿ ಹೃದಯಾಘಾತದಿಂದ ನಿಧನರಾದರು. ಅವರಿಗೆ ಆಗ 66 ವರ್ಷ ವಯಸ್ಸಾಗಿತ್ತು.

Whats_app_banner