ಮೊನ್ನೆ ಕಿಚ್ಚ ಸುದೀಪ್‌, ಈಗ ಪ್ರಕಾಶ್‌ ರಾಜ್‌ ಸರದಿ; ಪ್ರಶಸ್ತಿ ಬೇಡ, ಮನಃಸಾಕ್ಷಿ ಒಪ್ಪುತ್ತಿಲ್ಲ ಕ್ಷಮಿಸಿ ಎಂದ ಬಹುಭಾಷಾ ನಟ
ಕನ್ನಡ ಸುದ್ದಿ  /  ಮನರಂಜನೆ  /  ಮೊನ್ನೆ ಕಿಚ್ಚ ಸುದೀಪ್‌, ಈಗ ಪ್ರಕಾಶ್‌ ರಾಜ್‌ ಸರದಿ; ಪ್ರಶಸ್ತಿ ಬೇಡ, ಮನಃಸಾಕ್ಷಿ ಒಪ್ಪುತ್ತಿಲ್ಲ ಕ್ಷಮಿಸಿ ಎಂದ ಬಹುಭಾಷಾ ನಟ

ಮೊನ್ನೆ ಕಿಚ್ಚ ಸುದೀಪ್‌, ಈಗ ಪ್ರಕಾಶ್‌ ರಾಜ್‌ ಸರದಿ; ಪ್ರಶಸ್ತಿ ಬೇಡ, ಮನಃಸಾಕ್ಷಿ ಒಪ್ಪುತ್ತಿಲ್ಲ ಕ್ಷಮಿಸಿ ಎಂದ ಬಹುಭಾಷಾ ನಟ

Actor Prakash Raj: ತುಮಕೂರು ವಿಶ್ವವಿದ್ಯಾಲಯವು ಪ್ರಕಟಿಸಿದ ಗೌರವ ಡಾಕ್ಟರೇಟ್‌ ಅನ್ನು ಇತ್ತೀಚೆಗೆ ಕಿಚ್ಚ ಸುದೀಪ್‌ ನಿರಾಕರಿಸಿದರು. ಇದೀಗ ರಾಜ್ಯ ಸರಕಾರದ ನಾಟಕ ಅಕಾಡೆಮಿ ಪ್ರಶಸ್ತಿ ಬೇಡವೆಂದು ನಟ ಪ್ರಕಾಶ್‌ ರಾಜ್‌ ಹೇಳಿದ್ದಾರೆ.

ಮೊನ್ನೆ ಕಿಚ್ಚ ಸುದೀಪ್‌, ಈಗ ಪ್ರಕಾಶ್‌ ರಾಜ್‌ ಸರದಿ; ಪ್ರಶಸ್ತಿ ಬೇಡ, ಮನಃಸಾಕ್ಷಿ ಒಪ್ಪುತ್ತಿಲ್ಲ ಕ್ಷಮಿಸಿ ಎಂದ ಬಹುಭಾಷಾ ನಟ
ಮೊನ್ನೆ ಕಿಚ್ಚ ಸುದೀಪ್‌, ಈಗ ಪ್ರಕಾಶ್‌ ರಾಜ್‌ ಸರದಿ; ಪ್ರಶಸ್ತಿ ಬೇಡ, ಮನಃಸಾಕ್ಷಿ ಒಪ್ಪುತ್ತಿಲ್ಲ ಕ್ಷಮಿಸಿ ಎಂದ ಬಹುಭಾಷಾ ನಟ

ಬೆಂಗಳೂರು: ಕರ್ನಾಟಕ ನಾಟಕ ಅಕಾಡೆಮಿಯ ವಾರ್ಷಿಕ ಪ್ರಶಸ್ತಿಯನ್ನು ಬಹುಭಾಷಾ ನಟ ಪ್ರಕಾಶ್‌ ರಾಜ್‌ ಬೇಡ ಎಂದು ತಿರಸ್ಕರಿಸಿದ್ದಾರೆ. ಇತ್ತೀಚೆಗೆ ತುಮಕೂರು ವಿಶ್ವವಿದ್ಯಾಲಯ ಕೊಡಮಾಡಿದ ಗೌರವ ಡಾಕ್ಟರೇಟ್‌ ಅನ್ನು ಕಿಚ್ಚ ಸುದೀಪ್‌ ಕೂಡ ನಿರಾಕರಿಸಿದ್ದರು. "ನಮಗಿಂತಲೂ ಹೆಚ್ಚು ಸಾಧನೆ ಮಾಡಿದವರಿಗೆ ಕೊಡಿ" ಎಂದು ಪ್ರಶಸ್ತಿ, ಗೌರವಗಳನ್ನು ತಿರಸ್ಕರಿಸಿದ್ದಾರೆ.

ಪ್ರಕಾಶ್‌ ರಾಜ್‌ಗೆ ನಾಟಕ ಅಕಾಡೆಮಿ ಪ್ರಶಸ್ತಿ

ಕರ್ನಾಟಕ ನಾಟಕ ಅಕಾಡೆಮಿಯು ಬಹುಭಾಷಾ ನಟ ಪ್ರಕಾಶ್‌ ರಾಜ್‌ಗೆ ಪ್ರಶಸ್ತಿ ಘೋಷಿಸಿತ್ತು. ಇದೀಗ ಈ ಪ್ರಶಸ್ತಿಯನ್ನು ಬೇಡ ಎಂದಿದ್ದಾರೆ. "ನಾನು ಈಗಷ್ಟೆ ರಂಗಭೂಮಿಗೆ ಮರಳಿ ಬಂದ್ದಿದ್ದೇನೆ .. ಮಾಡಬೇಕಾದ ಕೆಲಸ ಬೆಟ್ಟದಷ್ಟಿದೆ..ನನಗಿಂತಲೂ ಅರ್ಹರು ರಂಗಭೂಮಿಯಲ್ಲಿರುವುದರಿಂದ, ಈ ಪುರಸ್ಕಾರವನ್ನು ಸ್ವೀಕರಿಸಲು ನನ್ನ ಮನಃಸಾಕ್ಷಿ ಒಪ್ಪುತ್ತಿಲ್ಲ .. ಕ್ಷಮಿಸಿ. ಅಭಿನಂದಿಸಿದ ಸಹ್ರುದಯರಿಗೆ ಧನ್ಯವಾದಗಳು" ಎಂದು ಪ್ರಕಾಶ್‌ ರಾಜ್‌ ಸೋಷಿಯಲ್‌ ಮೀಡಿಯಾ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ.

ಗೌರವ ಡಾಕ್ಟರೇಟ್‌ ಬೇಡವೆಂದ ಕಿಚ್ಚ ಸುದೀಪ್‌

ಕೆಲವು ದಿನಗಳ ಹಿಂದೆ ತುಮಕೂರು ವಿಶ್ವವಿದ್ಯಾಲಯವು ಕನ್ನಡ ನಟ ಕಿಚ್ಚ ಸುದೀಪ್‌ಗೆ ಗೌರವ ಡಾಕ್ಟರೇಟ್‌ ನೀಡಲು ಮುಂದಾಗಿತ್ತು. ತುಮಕೂರು ವಿಶ್ವವಿದ್ಯಾಲಯವು ಸಿಂಡಿಕೇಟ್‌ ಸಭೆಯಲ್ಲಿ ಚರ್ಚಿಸಿ ಗೌರವ ಡಾಕ್ಟರೇಟ್‌ ನೀಡಲು ಮುಂದಾಗಿತ್ತು. ಈ ಕುರಿತು ಸುದೀಪ್‌ ಗಮನಕ್ಕೆ ತಂದಾಗ ಕಿಚ್ಚ ನಯವಾಗಿ ತಿರಸ್ಕಾರಿಸಿದ್ದಾರೆ. ನನ್ನನ್ನು ಆಯ್ಕೆ ಮಾಡಿರುವುದಕ್ಕೆ ಧನ್ಯವಾದ. ಆದರೆ, ಸಮಾಜದಲ್ಲಿ ನನಗಿಂತ ಹೆಚ್ಚು ಸೇವೆ ಮಾಡಿರುವ ಹಿರಿಯರು ಸಾಕಷ್ಟು ಜನರು ಇದ್ದಾರೆ. ಅವರಿಗೆ ಈ ಗೌರವವನ್ನು ನೀಡುವಂತೆ ತುಮಕೂರು ವಿಶ್ವವಿದ್ಯಾಲಯಕ್ಕೆ ಮನವಿ ಮಾಡಿದ್ದರು. ಕಿಚ್ಚನ ನಿರ್ಧಾರ ಅಭಿಮಾನಿಗಳಿಗೆ ಖುಷಿ ತಂದಿತ್ತು.

ಯಾರಿಗೆಲ್ಲ ನಾಟಕ ಅಕಾಡೆಮಿ ಪ್ರಶಸ್ತಿ?

ಕರ್ನಾಟಕ ನಾಟಕ ಅಕಾಡೆಮಿಯ ಜೀವಮಾನ ಸಾಧನೆ ಪ್ರಶಸ್ತಿಯನ್ನು ಈ ಬಾರಿ ಹಿರಿಯ ನಟಿ ಹಾಗೂ ವಿಧಾನಪರಿಷತ್ ಸದಸ್ಯೆ ಉಮಾಶ್ರೀ ಸೇರಿದಂತೆ ಮೂವರಿಗೆ ನೀಡಲಾಗುವುದು ಎಂದು ಅಕಾಡೆಮಿ ಅಧ್ಯಕ್ಷ ಕೆ.ವಿ ನಾಗರಾಜ ಮೂರ್ತಿ ಹೇಳಿದ್ದಾರೆ. ರಾಜ್ಯಾದ್ಯಂತ ವೃತ್ತಿರಂಗಭೂಮಿಯ 30ಕ್ಕೂ ಹೆಚ್ಚು ಕಲಾವಿದರನ್ನು ವಾರ್ಷಿಕ ಪ್ರಶಸ್ತಿ ಮತ್ತು ದತ್ತಿನಿ„ ಪ್ರಶಸ್ತಿಗಳಿಗೆ ಆಯ್ಕೆ ಮಾಡಲಾಗಿದೆ. ಮೂರು ವರ್ಷದ ಪ್ರಶಸ್ತಿಗಳನ್ನು ಪ್ರಕಟಿಸಲಾಗಿದೆ. ಜೀವಮಾನ ಪ್ರಶಸ್ತಿಗೆ ಮೂವರನ್ನು ಆಯ್ಕೆ ಮಾಡಲಾಗಿದೆ. ಅಂದರೆ, 2022ನೇ ಸಾಲಿಗೆ ಪ್ರಖ್ಯಾತ ನಟಿ ಉಮಾಶ್ರೀ, 2023ನೇ ಸಾಲಿಗೆ ನಾಟಕಕಾರ ಹೆಚ್.ಎಸ್.ಶಿವಪ್ರಕಾಶ್ ಹಾಗೂ 2024ನೇ ಸಾಲಿಗೆ ಪ್ರಸಿದ್ಧ ರಂಗಸಂಘಟಕ, ನಾಟಕಕಾರ ಮತ್ತು ಕೋಲಾರದ ಆದಿಮ ಸಾಂಸ್ಕೃತಿಕ ಪ್ರತಿಷ್ಠಾನದ ರೂವಾರಿ ಕೆ.ರಾಮಯ್ಯ ಆಯ್ಕೆಯಾಗಿದ್ದಾರೆ.

ಪ್ರಕಾಶ್ ರೈ, ಬಿ.ಸುರೇಶ್, ಅಚ್ಯುತ ಕುಮಾರ್, ರಮೇಶ್ ಪಂಡಿತ್ ಮತ್ತು ಮಕ್ಕಳ ರಂಗಭೂಮಿಯ ನಾಟಕಕಾರರಾದ ಡಾ. ಲಕ್ಷ್ಮಿಪರಿ ಕೋಲಾರ, ರಘುನಂದನ್, ರಾಜಗುರು ಹೊಸಕೋಟಿ. ಯುವ ಪ್ರಶಸ್ತಿಗೆ ಡಾಲೇಟೂರ, ರಂಗಭೂಮಿಯ ಪ್ರಸಿದ್ಧ ಸಂಘಟಕ ಹಾಗೂ ರಂಗಸ್ವಾಮಿ ಜಿ. ಮುಂತಾದವರು ವಾರ್ಷಿಕ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. ಇದೀಗ ಪ್ರಕಾಶ್‌ ರಾಜ್‌ ಈ ಪ್ರಶಸ್ತಿಯನ್ನು ತಿರಸ್ಕರಿಸಿದ್ದಾರೆ.

Whats_app_banner