‘ರೌಂಡ್‌ 2, ಪ್ಯಾಂಟ್‌ಗಳು ಬರ್ತಿಲ್ಲ..’ ಎರಡನೇ ಬಾರಿ ಪ್ರಗ್ನೆಂಟ್‌ ಆದ ವಿಚಾರವನ್ನು ವಿಭಿನ್ನವಾಗಿ ಹೇಳಿದ ನಟಿ ಪ್ರಣೀತಾ ಸುಭಾಷ್‌-sandalwood news actress pranitha subhash expecting second child with husband nitin raju mnk ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  ‘ರೌಂಡ್‌ 2, ಪ್ಯಾಂಟ್‌ಗಳು ಬರ್ತಿಲ್ಲ..’ ಎರಡನೇ ಬಾರಿ ಪ್ರಗ್ನೆಂಟ್‌ ಆದ ವಿಚಾರವನ್ನು ವಿಭಿನ್ನವಾಗಿ ಹೇಳಿದ ನಟಿ ಪ್ರಣೀತಾ ಸುಭಾಷ್‌

‘ರೌಂಡ್‌ 2, ಪ್ಯಾಂಟ್‌ಗಳು ಬರ್ತಿಲ್ಲ..’ ಎರಡನೇ ಬಾರಿ ಪ್ರಗ್ನೆಂಟ್‌ ಆದ ವಿಚಾರವನ್ನು ವಿಭಿನ್ನವಾಗಿ ಹೇಳಿದ ನಟಿ ಪ್ರಣೀತಾ ಸುಭಾಷ್‌

ಬಹುಭಾಷಾ ನಟಿ ಪ್ರಣೀತಾ ಸುಭಾಷ್‌ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಈ ನಿಮಿತ್ತ ವಿಶೇಷ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿ, ಸಿಹಿ ಸುದ್ದಿಯನ್ನು ಹಂಚಿಕೊಂಡಿದ್ದಾರೆ.

‘ರೌಂಡ್‌ 2, ಪ್ಯಾಂಟ್‌ಗಳು ಬರ್ತಿಲ್ಲ..’ ಎರಡನೇ ಬಾರಿ ಪ್ರಗ್ನೆಂಟ್‌ ಆದ ವಿಚಾರ ವಿಭಿನ್ನವಾಗಿ ತಿಳಿಸಿದ ನಟಿ ಪ್ರಣೀತಾ ಸುಭಾಷ್‌
‘ರೌಂಡ್‌ 2, ಪ್ಯಾಂಟ್‌ಗಳು ಬರ್ತಿಲ್ಲ..’ ಎರಡನೇ ಬಾರಿ ಪ್ರಗ್ನೆಂಟ್‌ ಆದ ವಿಚಾರ ವಿಭಿನ್ನವಾಗಿ ತಿಳಿಸಿದ ನಟಿ ಪ್ರಣೀತಾ ಸುಭಾಷ್‌

Pranitha Subhash expecting second child: ಸ್ಯಾಂಡಲ್‌ವುಡ್‌ ನಟಿ ಪ್ರಣೀತಾ ಸುಭಾಷ್‌ ಇದೀಗ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಸೋಷಿಯಲ್‌ ಮೀಡಿಯಾದಲ್ಲಿ ಬೇಬಿ ಬಂಪ್‌ ಫೋಟೋ ಶೇರ್‌ ಮಾಡಿರುವ ಪ್ರಣೀತಾ, ತಮ್ಮ ಫ್ಯಾನ್ಸ್‌ಗೆ ಸಿಹಿ ಸುದ್ದಿ ರವಾನಿಸಿದ್ದಾರೆ. ಮೊದಲ ಮಗುವಿನ ಹೆರಿಗೆ ಬಳಿಕ, ಫಿಟ್‌ನೆಸ್‌ ಕಾಪಾಡಿಕೊಂಡು ಮತ್ತೆ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದ ಪ್ರಣೀತಾ, ಇದೀಗ ಮತ್ತೆ ಗರ್ಭಿಣಿ ಆಗಿರುವ ವಿಚಾರವನ್ನು ಹೇಳಿಕೊಂಡಿದ್ದಾರೆ. ನಟಿಯ ಈ ಸಿಹಿ ಸುದ್ದಿಗೆ ಅವರ ಅಭಿಮಾನಿಗಳು, ಶುಭಾಶಯ ರವಾನಿಸುತ್ತಿದ್ದಾರೆ.

2021ರಲ್ಲಿ ನಿತಿನ್‌ ರಾಜು ಜತೆ ವಿವಾಹ

2021ರ ಮೇ ತಿಂಗಳಲ್ಲಿ ಬಹುಕಾಲದ ಗೆಳೆಯ ನಿತಿನ್‌ ರಾಜು ಅವರೊಂದಿಗೆ ಪ್ರಣೀತಾ ಸುಭಾಷ್‌ ವಿವಾಹ ನೆರವೇರಿತ್ತು. ಕೋವಿಡ್‌ ಕಾಲಘಟ್ಟದಲ್ಲಿಯೇ ತೀರಾ ಖಾಸಗಿಯಾಗಿಯೇ ಈ ಜೋಡಿಯ ಸರಳ ವಿವಾಹ ನಡೆದಿತ್ತು. ಕುಟುಂಬಸ್ಥರು, ಆಪ್ತರಷ್ಟೇ ಮದುವೆಗೆ ಹಾಜರಿ ಹಾಕಿದ್ದರು. ಇದಾದ ಬಳಿಕ ಅಂದರೆ 2022ರಲ್ಲಿ ಮಗಳನ್ನು ಬರಮಾಡಿಕೊಂಡಿದ್ದರು. ಇತ್ತೀಚೆಗಷ್ಟೇ ಕಳೆದ ಏಪ್ರಿಲ್‌ನಲ್ಲಿ ಮಗಳ ಬರ್ತ್‌ಡೇಯನ್ನೂ ಆಚರಿಸಿಕೊಂಡಿದ್ದರು. ಇದೀಗ ಎರಡನೇ ಮಗುವಿನ ಆಗಮನದ ಬಗ್ಗೆ ಪೋಸ್ಟ್‌ ಮಾಡಿದ್ದಾರೆ.

ವಿಶೇಷ ಫೋಟೋಶೂಟ್‌ ಶೇರ್‌..

"ರೌಂಡ್‌ 2.. ಇನ್ಮೇಲೆ ಪ್ಯಾಂಟ್‌ಗಳ ಅಳತೆ ಸರಿಹೊಂದಲ್ಲ" ಎಂಬ ಕ್ಯಾಪ್ಷನ್‌ ನೀಡಿ, ಸೈಜ್‌ ಬಾರದ ಜೀನ್ಸ್‌ ಪ್ಯಾಂಟ್‌ ಧರಿಸಿದ ಭಂಗಿಯ ಫೋಟೋಗಳನ್ನು ಶೇರ್‌ ಮಾಡಿದ್ದರು. ನಟಿಯ ಪೋಟೋಗಳಿಗೆ ಬಗೆಬಗೆ ಕಾಮೆಂಟ್‌ ಮೂಲಕ ಶುಭಾಶಯ ರವಾನಿಸುತ್ತಿದ್ದಾರೆ ಅವರ ಆಪ್ತರು. ಅಂದಹಾಗೆ ಪ್ರಣೀತಾ ಸುಭಾಷ್‌ ಅವರ ಮೊದಲ ಹೆರಿಗೆಯನ್ನು ಸ್ತ್ರೀ ರೋಗ ತಜ್ಞೆ ಮತ್ತಯ ವೈದ್ಯೆಯೂ ಆಗಿರುವ ಅವರ ತಾಯಿ ಡಾ. ಜಯಶ್ರೀ ಮಾಡಿಸಿದ್ದರು. ಇದೀಗ ಎರಡನೇ ಮಗುವಿನ ಆರೈಕೆಯಲ್ಲಿಯೂ ಅಜ್ಜಿ ಭಾಗಿಯಾಗಿದ್ದಾರೆ.

ಸದ್ಯಕ್ಕಿಲ್ಲ ಬೇರಾವ ಸಿನಿಮಾ…

ಇನ್ನು ಸಿನಿಮಾಗಳ ವಿಚಾರಕ್ಕೆ ಬಂದರೆ, 2021ರಲ್ಲಿ ಹಂಗಾಮಾ 2 ಮೂಲಕ ಬಾಲಿವುಡ್‌ ಬಾಗಿಲು ತಟ್ಟಿದ್ದ ಪ್ರಣೀತಾ, ಅದಾದ ಬಳಿಕ ಭುಜ್‌; ದಿ ಪ್ರೈಡ್‌ ಆಫ್‌ ಇಂಡಿಯಾ ಸಿನಿಮಾದಲ್ಲಿ ನಟಿಸಿದರು. ಅಲ್ಲಿಂದ ಎರಡು ವರ್ಷ ಬ್ರೇಕ್‌ ಪಡೆದು, ಮೊದಲ ಮಗುವಿನ ಆರೈಕೆಯಲ್ಲಿದ್ದರು. ಈ ವರ್ಷ ಅಂದರೆ 2024ರಲ್ಲಿ ಮಲಯಾಳಂನಲ್ಲಿ ತಂಕಮಣಿ ಸಿನಿಮಾ ಶೂಟಿಂಗ್‌ ಮುಗಿಸಿದ್ದಾರೆ, ಕನ್ನಡದಲ್ಲಿ ರಾಮನ ಅವತಾರ ಸಿನಿಮಾ ಸಹ ಇತ್ತೀಚೆಗಷ್ಟೇ ತೆರೆಕಂಡಿತ್ತು. ಸದ್ಯ ಬೇರಾವುದೇ ಸಿನಿಮಾ ಕೆಲಸಗಳಲ್ಲಿ ಪ್ರಣೀತಾ ತೊಡಗಿಸಿಕೊಂಡಿಲ್ಲ.