ಆವತ್ತು ದರ್ಶನ್ ಜೈಲಿಂದ ಹೊರಬರಲು ‘ಜನ್ಮಾಂತರ’ ರಾಮಚಂದ್ರ ಗುರೂಜಿಗಳ ಪ್ರಾರ್ಥನೆಯೇ ಕಾರಣ! ಅದ್ಹೇಗೆ? ಅಚ್ಚರಿಯ ಸಂಗತಿ ಬಹಿರಂಗ
2011ರಲ್ಲಿ ಪತ್ನಿ ಮೇಲೆ ಹಲ್ಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್ ಜೈಲು ಸೇರಿದ್ದರು. ಆವತ್ತು ಅವರ ಬಿಡುಗಡೆಯ ಹಿಂದೆ ಜನ್ಮಾಂತರ ಖ್ಯಾತಿಯ ಡಾ. ರಾಮಚಂದ್ರ ಗುರೂಜಿ ಅವರ ಪಾತ್ರವೂ ಇದೆಯಂತೆ. ಅದನ್ನು ಸ್ವತಃ ಅವರೇ ಹೇಳಿಕೊಂಡಿದ್ದಾರೆ.
Darshan thoogudeepa: ಕನ್ನಡ ಕಿರುತೆರೆಯಲ್ಲಿ ಜನ್ಮಾಂತರ ಕಾರ್ಯಕ್ರಮದ ಮೂಲಕವೇ ಕೌತುಕ ವಿಚಾರಗಳನ್ನು ಈ ಹಿಂದೆ ತೆರೆದಿಟ್ಟಿದ್ದರು ಅಂತಾರಾಷ್ಟ್ರೀಯ ಮಟ್ಟದಲ್ಲಿಯೂ ಹೆಸರು ಮಾಡಿರುವ ಡಾ. ಶ್ರೀ ರಾಮಚಂದ್ರ ಗುರೂಜಿ. ಇತ್ತೀಚೆಗಷ್ಟೇ ಪುನೀತ್ ನಿಧನದ ಬಳಿಕ ಅವರ ಆತ್ಮದ ಜತೆಗೂ ಮಾತನಾಡಿದ್ದೇನೆ, ಅವರ ಮುಂದೆ ಮೂರು ಪ್ರಶ್ನೆಗಳನ್ನಿಟ್ಟು ಉತ್ತರವನ್ನೂ ಪಡೆದುಕೊಂಡಿದ್ದರು ರಾಮಚಂದ್ರ ಗುರೂಜಿ. ಅದಷ್ಟೇ ಅಲ್ಲ ಈ ಹಿಂದೆ ಸಿನಿಮಾ ಸೆಲೆಬ್ರಿಟಿಗಳು ಸೇರಿ ಗಣ್ಯರ ಅಕಾಲಿಕ ಸಾವಿನ ಹಿಂದಿನ ರಹಸ್ಯವನ್ನು ಅವರ ಆತ್ಮದ ಜತೆಗೆ ಮಾತನಾಡಿದ್ದಾರೆ. ಇದೀಗ ದರ್ಶನ್ ಮತ್ತು ಬಂಧನದ ಬಗ್ಗೆಯೂ ಮಾತನಾಡಿದ್ದಾರೆ.
ಪತ್ನಿ ವಿಜಯಲಕ್ಷ್ಮೀ ಮೇಲೆ ಎಣ್ಣೆ ಮತ್ತಿನಲ್ಲಿ ದೈಹಿಕವಾಗಿ ಹಲ್ಲೆ ಮಾಡಿದ್ದಾರೆಂಬ ಕಾರಣಕ್ಕೆ 2011ರ ಸೆಪ್ಟಂಬರ್ 9ರಂದು ನಟ ದರ್ಶನ್ ಅವರನ್ನು ಬಂಧಿಸಲಾಗಿತ್ತು. ರಿವಾಲ್ವರ್ ತೋರಿಸಿ ಬೆದರಿಕೆ ಹಾಕಿದ್ದರು ಎಂದು ಪತ್ನಿ ವಿಜಯಲಕ್ಷ್ಮೀ ದೂರು ನೀಡಿದ್ದರು. ಒಂದಷ್ಟು ದಿನಗಳ ಕಾಲ ನಟ ದರ್ಶನ್ ಪರಪ್ಪನ ಅಗ್ರಹಾರ ಜೈಲು ಸೇರಿದ್ದರು. ಆವತ್ತಿನ ದರ್ಶನ್ ಜೈಲಿನಿಂದ ಬಿಡುಗಡೆಯ ಆಗುವಲ್ಲಿ ರಾಮಚಂದ್ರ ಗುರೂಜಿಗಳ ಪಾತ್ರವೂ ಇದೆ ಎಂದರೆ ನಂಬ್ತೀರಾ? ನಂಬಲೇಬೇಕು. ಈ ವಿಚಾರವನ್ನು ಸ್ವತಃ ರಾಮಚಂದ್ರ ಗುರೂಜಿ ಅವರು ಆರ್‌ಜೆ ರಾಜೇಶ್ ಗೌಡ ಅವರ ಯೂಟ್ಯೂಬ್ ಚಾನೆಲ್ ಜತೆಗಿನ ಸಂದರ್ಶನದಲ್ಲಿ ಅಚ್ಚರಿಯ ಸಂಗತಿ ಹೇಳಿಕೊಂಡಿದ್ದಾರೆ.
ರಾಮಚಂದ್ರ ಗುರೂಜಿ ಹೇಳಿದ್ದೇನು?
"ದರ್ಶನ್ ಅವರು ಸಂಸ್ಕಾರ ತೆಗೆದುಕೊಂಡು ಬಂದಿದ್ದಾರೆ. ಆ ಸಂಸ್ಕಾರ ಎರಡು ವಿಧದಲ್ಲಿದೆ. ಒಂದು ದುಃಖದ ಸಂಸ್ಕಾರ. ಇನ್ನೊಂದು ಉಚ್ರಾಯ ಸ್ಥಿತಿಯ ಸಂಸ್ಕಾರ. ಹ್ಯಾಪಿನೆಸ್. ಉಚ್ರಾಯ ಸ್ಥಿತಿಯನ್ನು ಕಂಡವರು ನೀಚ ಸ್ಥಿತಿಯನ್ನೂ ಕಾಣುವ ಸಂಸ್ಕಾರದ ಜತೆ ಬಂದಿರುತ್ತಾರೆ. ಈ ಹಿಂದೆ ಹೇಳಿದಂತೆ, ಪತ್ನಿ ಮೇಲೆ ಹಲ್ಲೆ ಮಾಡಿದ ಕಾರಣಕ್ಕೆ, 15 ದಿನಗಳ ಕಾಲ ನಟ ದರ್ಶನ್ ಜೈಲಿಗೆ ಹೋಗಿಬಂದಿದ್ದರು. ಅವರು ಹೊರಬರುವಲ್ಲಿ ನನ್ನದೂ ಪಾತ್ರವಿದೆ. ಅಚ್ಚರಿ ಅನಿಸ್ತಿದೆಯಲ್ವಾ?"
"ಯಾರು ಬೇಕಾದರೂ ಅದಕ್ಕೆ ಸೂಕ್ತ ಸಾಕ್ಷಿ ಇದೆ. ಅವರಿಗೆ ಬೇಲ್ ಸಿಕ್ತಲ್ಲ.. ಆ ಎರಡು ಮೂರು ದಿವಸದ ಹಿಂದೆ ನಡೆದ ಘಟನೆ ಇದು. ನೀವು ರಾಮಚಂದ್ರ ಗುರೂಜಿ ಪ್ರಾರ್ಥನೆ ಮಾಡಿದ್ದರಿಂದ, ದರ್ಶನ್‌ಗೆ ಬೇಲ್ ಸಿಕ್ತು ಎಂಬ ಸಾರಾಂಶ ಅಲ್ಲಿದೆ. ಈ ಮೊದಲು ಅವರು ಜೈಲಿಗೆ ಹೋದಾಗ ನಡೆದಿದ್ದಿರು. ದರ್ಶನ್ ಅವರ ಸಾರಥಿ ಸಿನಿಮಾಕ್ಕೆ ನನ್ನ ವಿದ್ಯಾರ್ಥಿಯೊಬ್ಬಳನ್ನು ನಾನು ಪರಿಚಯಿಸಿದ್ದೆ. ಕತ್ತಲಿಗೆ ಬೆಳಕು ಅನ್ನೋ ರೀತಿ ಇದು. ನಾನು ಪರಿಚಯಿಸಲ್ಪಟ್ಟ ವಿದ್ಯಾರ್ಥಿನಿಯೇ ದರ್ಶನ್ ಅವರ ಗಮನಕ್ಕೆ ತಂದಿದ್ದಾರೆ. ಇದೆಲ್ಲವೂ ಹಾಯ್ ಬೆಂಗಳೂರು ಪತ್ರಿಕೆಯಲ್ಲಿ ಸಾಕ್ಷಿ, ಫೋಟೋ ಸಮೇತ ಲೇಖನ ಪ್ರಕಟವಾಗಿದೆ. ಈಗಲೂ ಅದನ್ನು ಓದಬಹುದು" ಎಂದಿದ್ದಾರೆ.
ಅಂದರೆ, ಅವರಿಗಾಗಿ ನಾವು ಈ ಹಿಂದೆ ಪ್ರಾರ್ಥನೆ ಮಾಡಿದ್ದೇವೆ. ಆದರೆ, ಈ ಸಲ ಮಾಡಲು ಸಾಧ್ಯವಿಲ್ಲ. ಅವಶ್ಯಕತೆಯಿಲ್ಲ. ಯಾರೇ ತಪ್ಪು ಮಾಡಿದರೂ ತಪ್ಪೇ. ಒಂದು ತಪ್ಷಿಗೆ ಕ್ಷಮೆ ಇದೆ. ಆದರೆ, ಪದೇ ಪದೆ ತಪ್ಪು ಮಾಡುವ ವ್ಯಕ್ತಿಗಳಿಗೆ ಪ್ರಾರ್ಥನೆ ಮಾಡುವುದರಲ್ಲಿ ಯಾವುದೇ ಅರ್ಥವಿಲ್ಲ. ಅದು ಕಾಂಟ್ರವರ್ಸಿಯಾಗಿ ಬದಲಾಗಬಾರದು" ಎಂದಿದ್ದಾರೆ ಡಾ. ರಾಮಚಂದ್ರ ಗುರೂಜಿ.
ಪುನೀತ್ ಆತ್ಮದ ಜತೆಗೂ ಮಾತನಾಡಿದ್ದ ಗುರೂಜಿ
ಈ ಹಿಂದೆ ಪುನೀತ್ ರಾಜ್‌ಕುಮಾರ್ ನಿಧನದ ಬಳಿಕ ಅವರ ಆತ್ಮದ ಜತೆಗೂ ರಾಮಚಂದ್ರ ಗುರೂಜಿ ಮಾತನಾಡಿದ್ದರು. ಆಗ ಪುನೀತ್ ಮುಂದೆ ಮೂರು ಪ್ರಶ್ನೆಗಳನ್ನಿಟ್ಟಿದ್ದರು. "ಅಪ್ಪು ಜತೆ ಕನೆಕ್ಟ್ ಆಗ್ತಿದ್ದಂತೆ, ನಿಮ್ಮ ಸಾವಿನ ಬಗ್ಗೆ ಸಾಕಷ್ಟು ಊಹಾಪೋಹಗಳು ಹರಿದಾಡುತ್ತಿವೆ. ಅವುಗಳು ನಿಜಾನಾ? ಎಂದೆ. ಅದಕ್ಕೆ ಉತ್ತರಿಸಿದ ಅವರು, "ಇಲ್ಲ ನಾನು ಹೃದಯ ಸಂಬಂಧಿ ಸಮಸ್ಯೆಯಿಂದಲೇ ಸತ್ತಿದ್ದೇನೆ.." ಎಂದು ಕ್ಲಿಯರ್ ಮಾಡಿದರು. ಅದಾದ ಬಳಿಕ ಈಗ ಎಲ್ಲಿದ್ದೀರಿ? ಎಂದೆ, ಆ ಪ್ರಶ್ನೆಗೆ ಉತ್ತರ ನೀಡಿದ ಅವ್ರು, "ನಾನೀಗ ನನ್ನ ತಂದೆ ತಾಯಿಯ ಹುಡುಕಾಟದಲ್ಲಿದ್ದೇನೆ.."ಎಂದು ರಾಮಚಂದ್ರ ಗುರೂಜಿ ಪ್ರಶ್ನೆಗೆ ಉತ್ತರ ನೀಡಿದರು.
ಮಗಳ ಹೊಟ್ಟೆಯಲ್ಲಿ ಹುಟ್ಟಿ ಬರುವೆ..
ಈ ಎರಡು ಪ್ರಶ್ನೆಗಳ ಬಳಿಕ ಮರುಜನ್ಮದ ಬಗ್ಗೆ ರಾಮಚಂದ್ರ ಗುರೂಜಿ ಮೂರನೇಯದಾಗಿ, ಮರು ಜನ್ಮದ ಬಗ್ಗೆ ಪ್ರಶ್ನೆ ಮಾಡಿದರು. "ನೀವು ಮತ್ತೆ ಹುಟ್ಟಿ ಬರುತ್ತೀರಾ?" ಎಂದರು. ಅದಕ್ಕೆ ಪ್ರತಿಯಾಗಿ, "ಆ ಬಗ್ಗೆ ನಾನಿನ್ನೂ ಯೋಚನೆ ಮಾಡಿಲ್ಲ. ಒಂದು ವೇಳೆ ಮತ್ತೊಮ್ಮೆ ಹುಟ್ಟಿ ಬರುವುದೇ ಆದರೆ, ನನ್ನ ಮಗಳ ಹೊಟ್ಟೆಯಲ್ಲಿ ಹುಟ್ಟಿ ಬರುತ್ತೇನೆಂದು ಪುನೀತ್ ಸ್ಪಷ್ಟಪಡಿಸಿದರು. ಅವರ ಸಾವಿನ ಬಗ್ಗೆ ಒಂದಷ್ಟು ಅನುಮಾನಗಳು ವ್ಯಕ್ತವಾದವು. ಅದನ್ನು ತಿಳಿಯುವ ಉದ್ದೇಶಕ್ಕೆ, ನಮ್ಮ ಸಂಶೋಧನೆಯ ಭಾಗವಾಗಿ ನಾನು ಅವರ ಆತ್ಮದ ಜತೆಗೆ ಮಾತನಾಡಿದ್ದೆ. ಇದನ್ನು ನಾನು ಎಲ್ಲಿಯೂ ಹೇಳಿಕೊಂಡಿಲ್ಲ" ಎಂದರು ಶ್ರೀ ರಾಮಚಂದ್ರ ಗುರೂಜಿ.
ವಿಭಾಗ