ಅಥಿ ಐ ಲವ್‌ ಯು: ನಾಳೆ ಹೆಂಡ್ತಿ ಸಿನಿಮಾ ಟಿಕೆಟ್‌ ತೆಗೆದುಕೊಂಡ್ರೆ ಗಂಡನಿಗೆ ಫ್ರೀ, ಗಂಡ ತೆಗೆದುಕೊಂಡ್ರೂ ಫ್ರೀ; ಗೋವಾ ಪ್ರವಾಸನೂ ಇದೆ ಕಣ್ರಿ
ಕನ್ನಡ ಸುದ್ದಿ  /  ಮನರಂಜನೆ  /  ಅಥಿ ಐ ಲವ್‌ ಯು: ನಾಳೆ ಹೆಂಡ್ತಿ ಸಿನಿಮಾ ಟಿಕೆಟ್‌ ತೆಗೆದುಕೊಂಡ್ರೆ ಗಂಡನಿಗೆ ಫ್ರೀ, ಗಂಡ ತೆಗೆದುಕೊಂಡ್ರೂ ಫ್ರೀ; ಗೋವಾ ಪ್ರವಾಸನೂ ಇದೆ ಕಣ್ರಿ

ಅಥಿ ಐ ಲವ್‌ ಯು: ನಾಳೆ ಹೆಂಡ್ತಿ ಸಿನಿಮಾ ಟಿಕೆಟ್‌ ತೆಗೆದುಕೊಂಡ್ರೆ ಗಂಡನಿಗೆ ಫ್ರೀ, ಗಂಡ ತೆಗೆದುಕೊಂಡ್ರೂ ಫ್ರೀ; ಗೋವಾ ಪ್ರವಾಸನೂ ಇದೆ ಕಣ್ರಿ

Athi i love you: ಅಥಿ ಐ ಲವ್‌ ಯು ಸಿನಿಮಾ ನಾಳೆ ಬಿಡುಗಡೆಯಾಗಲಿದೆ. ಈ ಸಿನಿಮಾ ಪ್ರಮೋಷನ್‌ಗಾಗಿ ಚಿತ್ರತಂಡ ನಾನಾ ಆಫರ್‌ ನೀಡಿದೆ. ಹೆಂಡ್ತಿ ಸಿನಿಮಾ ಟಿಕೆಟ್‌ ತೆಗೆದುಕೊಂಡರೆ ಗಂಡನಿಗೆ ಉಚಿತ, ಗಂಡ ತೆಗೆದುಕೊಂಡರೆ ಹೆಂಡತಿಗೆ ಉಚಿತ, ಅದೃಷ್ಟಶಾಲಿಗಳಿಗೆ ಗೋವಾ ಪ್ರವಾಸ ಇತ್ಯಾದಿ ಆಫರ್‌ ನೀಡಿದೆ.

ಅಥಿ ಐ ಲವ್‌ ಯು ಸಿನಿಮಾದ ಸ್ಟಿಲ್ಸ್‌
ಅಥಿ ಐ ಲವ್‌ ಯು ಸಿನಿಮಾದ ಸ್ಟಿಲ್ಸ್‌

ಹೊಸ ಸಿನಿಮಾ, ವಿಭಿನ್ನ ಸಿನಿಮಾ, ಪ್ರಯೋಗಾತ್ಮಕ ಸಿನಿಮಾಗಳನ್ನು ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡುವುದು ಸವಾಲು. ಜತೆಗೆ, ಇಂತಹ ಸಿನಿಮಾಗಳಿಗೆ ಪ್ರೇಕ್ಷಕರನ್ನು ಕರೆತರುವುದು ಇನ್ನೂ ದೊಡ್ಡ ಸವಾಲು. ಇಂತಹ ಸವಾಲುಗಳ ನಡುವೆ ನಾಳೆ ಬಿಡುಗಡೆಯಾಗುತ್ತಿರುವ ಅಥಿ ಐ ಲವ್‌ ಯು ಸಿನಿಮಾವು ಆಫರ್‌ಗಳ ಮೂಲಕ ಪ್ರೇಕ್ಷಕರನ್ನು ಸೆಳೆಯಲು ಪ್ರಯತ್ನಿಸುತ್ತಿದೆ. ಚಿತ್ರತಂಡ ಈ ಹಿಂದೆ ಮಾಹಿತಿ ನೀಡಿದ ಪ್ರಕಾರ ನಾಳೆ ಸಿನಿಮಾ ಪ್ರೇಕ್ಷಕರಿಗೆ ಕೆಲವೊಂದು ಆಫರ್‌ಗಳು ದೊರಕಬಹುದು.

ಒಂದು ಟಿಕೆಟ್‌ಗೆ ಇನ್ನೊಂದು ಟಿಕೆಟ್‌ ಫ್ರೀ

ಅಥಿ ಐ ಲವ್‌ ಯು ಸಿನಿಮಾ ನಾಳೆ (ಡಿಸೆಂಬರ್‌ 08) ಬಿಡುಗಡೆಯಾಗಲಿದೆ. ಗಂಡ ಸಿನಿಮಾ ಟಿಕೆಟ್‌ ತೆಗೆದುಕೊಂಡರೆ ಹೆಂಡತಿಗೆ ಉಚಿತ, ಹೆಂಡತಿ ಸಿನಿಮಾ ಟಿಕೆಟ್‌ ತೆಗೆದುಕೊಂಡರೆ ಗಂಡನಿಗೆ ಸಿನಿಮಾ ಟಿಕೆಟ್‌ ಉಚಿತ ಆಫರ್‌ ಪರಿಚಯಿಸಲು ಯೋಜಿಸಿರುವುದಾಗಿ ಈ ಹಿಂದೆ ಚಿತ್ರತಂಡ ಹೇಳಿತ್ತು. ಈ ಆಫರ್‌ ಯಾವ ಚಿತ್ರಮಂದಿರಗಳಲ್ಲಿ ಲಭ್ಯವಿದೆ ಎಂಬ ಮಾಹಿತಿ ಸದ್ಯ ಲಭ್ಯವಿಲ್ಲ. ಕರ್ನಾಟಕದ್ಯಾಂತ ಎಲ್ಲಾ ಸಿನಿಮಾ ಮಂದಿರಗಳಲ್ಲಿ ಈ ಆಫರ್‌ ಇರುವುದೇ ಎಂಬ ವಿವರ ಲಭ್ಯವಿಲ್ಲ. ನಾಳೆ ಎಲ್ಲಾದರೂ ಸಿನಿಮಾ ಮಂದಿರಗಳಲ್ಲಿ ಸಿನಿಮಾಕ್ಕೆ ಟಿಕೆಟ್‌ ಖರೀದಿಸುವಾಗ ಒಂದು ಟಿಕೆಟ್‌ಗೆ ಒಂದು ಫ್ರೀ ಕೊಟ್ರೆ ಅಚ್ಚರಿ ಪಡಬೇಡಿ. ಒಂದಕ್ಕೊಂದು ಉಚಿತ ನೀಡದೆ ಇದ್ದರೂ ಬೇಸರ ಮಾಡಬೇಡಿ.

3 ದಿನದ ಉಚಿತ ಗೋವಾ ಪ್ರವಾಸನೂ ಇದೆ ಕಣ್ರಿ

"ಚಿತ್ರ ಬಿಡುಗಡೆಯ ಸಮಯದಲ್ಲಿ ಗಂಡ ಸಿನಿಮಾ ಟಿಕೆಟ್‌ ತೆಗೆದುಕೊಂಡರೆ ಹೆಂಡತಿಗೆ ಫ್ರೀ, ಹೆಂಡತಿ ತೆಗೆದುಕೊಂಡರೆ ಗಂಡನಿಗೆ ಫ್ರೀ ಸಿನಿಮಾ ಟಿಕೆಟ್‌ ನೀಡುವ ಯೋಜನೆ ಹಾಕಿಕೊಂಡಿದ್ದೇವೆ. ಇದೇ ರೀತಿ ಈ ಸಿನಿಮಾ ನೋಡಿರುವ ಏಳು ಅದೃಷ್ಟಶಾಲಿ ದಂಪತಿಯನ್ನು ಗೋವಾ ಟ್ರಿಪ್‌ಗೆ ಆಯ್ಕೆ ಮಾಡುವ ಯೋಜನೆಯನ್ನೂ ಹಾಕಿಕೊಂಡಿದ್ದೇವೆ" ಎಂದು ಕೆಲವು ದಿನಗಳ ಹಿಂದೆ ಚಿತ್ರತಂಡ ಮಾಹಿತಿ ನೀಡಿತ್ತು. ಹೀಗಾಗಿ, ಅಥಿ ಐ ಲವ್‌ ಯು ಸಿನಿಮಾ ನೋಡುವ ಅದೃಷ್ಟಶಾಲಿ ದಂಪತಿಗೆ ಮೂರು ದಿನ ಉಚಿತ ಪ್ರವಾಸದ ಅದೃಷ್ಟವೂ ದೊರಕಲಿದೆ. ಈ ಆಫರ್‌ ಕುರಿತು ಚಿತ್ರದ ಟ್ರೈಲರ್‌ ಬಿಡುಗಡೆಯಾಗುವ ಸಮಯದಲ್ಲಿ ಚಿತ್ರತಂಡ ಮಾಹಿತಿ ನೀಡಿತ್ತು.

ಸಿನಿಮಾದಲ್ಲಿರೋದು ನಾಯಕ ಮತ್ತು ನಾಯಕಿ ಮಾತ್ರ

ನಮ್ಮ ಸಿನಿಮಾವನ್ನು ಮದುವೆಯಾದ ದಂಪತಿ ಅಥವಾ ಪ್ರೀತಿ ಮಾಡುತ್ತಿರುವವರು ನೋಡಿ. ಈ ಸಿನಿಮಾದ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವ ಪ್ರಯತ್ನವನ್ನೂ ಮಾಡಿದ್ದೇವೆ. ಈ ಚಿತ್ರದಲ್ಲಿ ಕೇವಲ ಎರಡೇ ಎರಡು ಪಾತ್ರಗಳು ಇರಲಿವೆ. ಉಳಿದ ಪಾತ್ರಗಳು ಧ್ವನಿಯ ಮೂಲಕ ಅಥಿ ಐ ಲವ್‌ ಯು ಸಿನಿಮಾಕ್ಕೆ ಧ್ವನಿ ತುಂಬಲಿವೆ. ಈ ಚಿತ್ರದಲ್ಲಿ ಸಾತ್ವಿಕ ನಾಯಕಿಯಾಗಿ ನಟಿಸಿದ್ದಾರೆ ಎಂದು ಈ ಹಿಂದೆ ಚಿತ್ರತಂಡ ಮಾಹಿತಿ ನೀಡಿತ್ತು. ಜತೆಗೆ ಈ ಸಿನಿಮಾವು ಒಂದೇ ದಿನ, ಒಂದೇ ಲೊಕೆಷನ್‌ನಲ್ಲಿ ನಡೆಯುತ್ತದೆ. ಒಟ್ಟಾರೆ, ಇದು ವಿಭಿನ್ನ ಪ್ರಯತ್ನದ ಸಿನಿಮಾವಾಗಿ ಗಮನ ಸೆಳೆಯುವ ನಿರೀಕ್ಷೆಯಿದೆ.

ಈ ಚಿತ್ರದಲ್ಲಿ ಅಥಿ ಮತ್ತು ವಸಂತ್‌ ಎಂಬ ಎರಡು ಪಾತ್ರಗಳು ಮಾತ್ರ ಇರಲಿವೆ. ಈ ಚಿತ್ರದ ನಿರ್ದೇಶಕರು ಲೋಕೇಂದ್ರ ಸೂರ್ಯ. ಸಿನಿಮಾದ ನಾಯಕರೂ ಇವರೇ. ಈ ಚಿತ್ರದ ಕಥೆಯನ್ನೂ ಇವರೇ ಬರೆದಿದ್ದಾರೆ. ಸಾತ್ವಿಕ ಎಂಬ ನಾಯಕಿ ಜತೆಗಿದ್ದಾರೆ. ಈ ಚಿತ್ರಕ್ಕೆ ಸಂಗೀತ ನಿರ್ದೇಶನ ಅನಂತ್‌ ಆರ್ಯನ್‌, ಕಲರಿಸ್ಟ್‌ ಜೇಕಬ್‌ ಮ್ಯಾಥ್ಯೂ, ಕಾಸ್ಟ್ಯೂಮ್‌ ಡಿಸೈನರ್‌ ಋತು ಚೈತ್ರ, ಕಲಾ ನಿರ್ದೇಶಕ ಕ್ರಿಯೇಟಿವ್‌ ವಿಜಯ್‌ ಮುಂತಾದವರು ಸಾಥ್‌ ನೀಡಿದ್ದಾರೆ.

Whats_app_banner