‘ಈ ಜಾಗದಲ್ಲಿ ನಿಮ್ಮ ತಾಯಿ, ಮಡದಿ, ಸಹೋದರಿ ಇದ್ದಿದ್ದರೆ?’ ಕೆಟ್ಟ ಮನಸ್ಥಿತಿಗಳ ಬಗ್ಗೆ ಆಂಕರ್‌ ಅನುಶ್ರೀ ಬೇಸರ
ಕನ್ನಡ ಸುದ್ದಿ  /  ಮನರಂಜನೆ  /  ‘ಈ ಜಾಗದಲ್ಲಿ ನಿಮ್ಮ ತಾಯಿ, ಮಡದಿ, ಸಹೋದರಿ ಇದ್ದಿದ್ದರೆ?’ ಕೆಟ್ಟ ಮನಸ್ಥಿತಿಗಳ ಬಗ್ಗೆ ಆಂಕರ್‌ ಅನುಶ್ರೀ ಬೇಸರ

‘ಈ ಜಾಗದಲ್ಲಿ ನಿಮ್ಮ ತಾಯಿ, ಮಡದಿ, ಸಹೋದರಿ ಇದ್ದಿದ್ದರೆ?’ ಕೆಟ್ಟ ಮನಸ್ಥಿತಿಗಳ ಬಗ್ಗೆ ಆಂಕರ್‌ ಅನುಶ್ರೀ ಬೇಸರ

ಸೋಷಿಯಲ್ ಮೀಡಿಯಾದಲ್ಲಿ ‌ಅಶ್ವಿನಿ ಪುನೀತ್‌ ಅವರ ಮಾನಹಾನಿ ಮಾಡಿದವರ ವಿರುದ್ಧ ಆಂಕರ್ ಅನುಶ್ರೀ ಕಡು ಕೋಪದಲ್ಲಿದ್ದಾರೆ. ಈ ಜಾಗದಲ್ಲಿ ನಿಮ್ಮ ತಾಯಿ, ಮಡದಿ, ಸಹೋದರಿ ಇದ್ದಿದ್ದರೆ? ಎಂದು ಪೋಸ್ಟ್‌ ಮಾಡಿದ ಕೆಟ್ಟ ಮನಸ್ಥಿತಿಗಳ ಬಗ್ಗೆ ಬೇಸರ ಹೊರಹಾಕಿದ್ದಾರೆ.

‘ಈ ಜಾಗದಲ್ಲಿ ನಿಮ್ಮ ತಾಯಿ, ಮಡದಿ, ಸಹೋದರಿ ಇದ್ದಿದ್ದರೆ?’ ಕೆಟ್ಟ ಮನಸ್ಥಿತಿಗಳ ಬಗ್ಗೆ ಆಂಕರ್‌ ಅನುಶ್ರೀ ಬೇಸರ
‘ಈ ಜಾಗದಲ್ಲಿ ನಿಮ್ಮ ತಾಯಿ, ಮಡದಿ, ಸಹೋದರಿ ಇದ್ದಿದ್ದರೆ?’ ಕೆಟ್ಟ ಮನಸ್ಥಿತಿಗಳ ಬಗ್ಗೆ ಆಂಕರ್‌ ಅನುಶ್ರೀ ಬೇಸರ

Anchor Anushree on Ashwini Puneeth Rajkumr: ಸೋಷಿಯಲ್‌ ಮೀಡಿಯಾದಲ್ಲಿ ಅಶ್ವಿನಿ ಪುನೀತ್‌ ರಾಜ್‌ಕುಮಾರ್‌ ಅವರನ್ನು ನಿಂದಿಸಿದವರ ವಿರುದ್ಧ ಕಡು ಕೋಪ ವ್ಯಕ್ತವಾಗುತ್ತಿದೆ. ಈ ಕೂಡಲೇ ಕೆಟ್ಟ ಪೋಸ್ಟ್‌ ಹಾಕಿದಾತನನ್ನು ಬಂಧಿಸುವಂತೆ ಆಗ್ರಹವೂ ಹೆಚ್ಚಾಗುತ್ತಿದೆ. ಸಿಎಂ ಸಿದ್ಧರಾಮಯ್ಯ ಸಹ ಈ ಬಗ್ಗೆ ಪೋಸ್ಟ್‌ ಹಂಚಿಕೊಂಡು, ಕಾನೂನು ಕ್ರಮ ಕೈಗೊಳ್ಳುವ ಭರವಸೆಯನ್ನೂ ನೀಡಿದ್ದಾರೆ. ಇತ್ತ ಪುನೀತ್‌ ಅಭಿಮಾನಿಗಳು ನೀಡಿದ ದೂರು ಪೊಲೀಸ್‌ ಆಯುಕ್ತರನ್ನೂ ತಲುಪಿದೆ. ಸ್ಯಾಂಡಲ್‌ವುಡ್‌ ವಲಯದಿಂದಲೂ ಅಶ್ವಿನಿ ಪುನೀತ್‌ ರಾಜ್‌ಕುಮಾರ್‌ ಅವರಿಗೆ ಸಾಕಷ್ಟು ಸೆಲೆಬ್ರಿಟಿಗಳು ಬೆಂಬಲ ಸೂಚಿಸುತ್ತಿದ್ದಾರೆ. ಈಗ ಪುನೀತ್‌ ಅವರ ಆಪ್ತ ಬಳಗದಲ್ಲಿಯೇ ಗುರುತಿಸಿಕೊಂಡ ನಿರೂಪಕಿ ಅನುಶ್ರೀ ಬೇಸರ ಹೊರಹಾಕಿದ್ದಾರೆ.

ಕಳೆದ ಕೆಲ ದಿನಗಳಿಂದ ನಿರ್ಮಾಪಕಿ ಅಶ್ವಿನಿ ಪುನೀತ್‌ ರಾಜ್‌ಕುಮಾರ್‌ ಅವರನ್ನು ಸೋಷಿಯಲ್‌ ಮೀಡಿಯಾದಲ್ಲಿ ಕೆಟ್ಟದಾಗಿ ಬಿಂಬಿಸಲಾಗಿದೆ. ಗಜಪಡೆ ಹೆಸರಿನ ಟ್ವಿಟರ್‌ ಖಾತೆಯಿಂದ ಹೊರಬಂದ ಪೋಸ್ಟ್‌ ಬಗ್ಗೆ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ಆರ್‌ಸಿಬಿ ಸೋಲಿಗೆ ಗಂಡ ಇಲ್ಲದ ಮಹಿಳೆಯನ್ನು ಕರೆಸಿದ್ದೇ ಕಾರಣ ಎಂದು ಅಶ್ವಿನಿ ಪುನೀತ್‌ ರಾಜ್‌ಕುಮಾರ್‌ ಅವರ ಫೋಟೋ ಸಮೇತ ಪೋಸ್ಟ್‌ ಶೇರ್‌ ಮಾಡಲಾಗಿತ್ತು. ಈ ಬಗ್ಗೆ ಸಿಡಿದೆದ್ದ ಪುನೀತ್‌ ಅಭಿಮಾನಿಗಳು ಹೀನ ಪೋಸ್ಟ್‌ ಮಾಡಿದ ವ್ಯಕ್ತಿ ಬಂಧನಕ್ಕೆ ಆಗ್ರಹಿಸಿ ದೂರು ಸಹ ನೀಡಿದ್ದರು.

ಇದೆಲ್ಲದರ ನಡುವೆ ಸೋಷಿಯಲ್‌ ಮೀಡಿಯಾದಲ್ಲಿನ ಈ ಬೆಳವಣಿಗೆಗಳ ಬಗ್ಗೆಯೂ ಪರೋಕ್ಷವಾಗಿ ಪ್ರತಿಕ್ರಿಯಿಸಿದ್ದ ಅಶ್ವಿನಿ, "ಬೇರೆ ಆಪ್ಷನ್ನೇ ಇಲ್ಲ. ಜೀವನ ಸಾಗಲೇಬೇಕು. ಹಾಗಾಗಿ ಪಾಸಿಟಿವ್‌ ಮತ್ತು ನೆಗೆಟಿವ್‌ ಎರಡನ್ನೂ ಸಮಾನವಾಗಿಯೇ ಸ್ವೀಕರಿಸಿದ್ದೇನೆ. ಮುಂದೆಯೂ ಹಾಗೇ ಇರಲಿದೆ" ಎಂದಿದ್ದರು. ಈಗ ಇದೇ ನಿರ್ಮಾಪಕಿ ಅಶ್ವಿನಿ ಅವರ ಬಗ್ಗೆ ಮತ್ತು ಪುನೀತ್‌ ರಾಜ್‌ಕುಮಾರ್‌ ಬಗ್ಗೆ ಅಪಾರ ಗೌರವ ಇಟ್ಟುಕೊಂಡಿರುವ, ಕನ್ನಡದ ಖ್ಯಾತ ನಿರೂಪಕಿ ಎನಿಸಿರುವ ಅನುಶ್ರೀ ಸಹ ಬೇಸರ ಹೊರಹಾಕಿದ್ದಾರೆ.

ಅನುಶ್ರೀ ಪೋಸ್ಟ್‌ನಲ್ಲೇನಿದೆ?

"ಹೆಣ್ಣಾಗಿ ಹುಟ್ಟೋದು ಒಂದು ವರ .... ಇನ್ನೊಬ್ಬರ ಮನೆ ಬೆಳಗೋ ಲಕ್ಷ್ಮೀ ಸಮಾಜಕ್ಕೆ ಒಂದು ವರ. ಇದೆಲ್ಲ ಗಾಳಿ ಮಾತುಗಳ ಹೆಮ್ಮರ! ಈ ಜಾಗದಲ್ಲಿ ನಿಮ್ಮ ತಾಯಿ, ಮಡದಿ ಅಥವಾ ಸಹೋದರಿ ಇದ್ದಿದ್ದರೆ ??? ಹೆಣ್ಣಿಗೆ ಗೌರವ ಸಿಗೋದು ಒಂದು ಕನಸು ಅಷ್ಟೇ. ಈ ಕೆಟ್ಟ ಬೆಳವಣಿಗೆಗೆ ಕೊನೆಯಿಲ್ಲವೇ?? ಸ್ತ್ರೀ ಅಂದರೆ ಅಷ್ಟೇ ಸಾಕೆ !!! ಹೆಣ್ಣೆಂದರೆ ಅಂಬಿಕೆ. ನಿಜ ಮಾಡಿ ಈ ಮೂಢನಂಬಿಕೆ" ಎಂದು ತಮ್ಮ ಮನದ ಬೇಸರವನ್ನು ಪೋಸ್ಟ್‌ ಮೂಲಕ ಹಂಚಿಕೊಂಡು, ಅಶ್ವಿನಿ ಮೇಡಂ ನಾವು ನಿಮ್ಮ ಜತೆ ಸದಾ ಇರುತ್ತೇವೆ ಎಂದಿದ್ದಾರೆ ಅನುಶ್ರೀ.

Whats_app_banner