ಚಿಕನ್‌ ಬಿರಿಯಾನಿ ತಿನ್ನೋಕೆ ಬಂದ್ರೆ ಮಾರ್ಟಿನ್‌ ಡೈನೋಸಾರ್‌ ಬಿರಿಯಾನಿ ಹಾಕಿಬಿಟ್ಟ; ಧ್ರುವ ಸರ್ಜಾ ಸಿನಿಮಾ ಪಬ್ಲಿಕ್‌ ಟಾಕ್‌ ಹೀಗಿದೆ
ಕನ್ನಡ ಸುದ್ದಿ  /  ಮನರಂಜನೆ  /  ಚಿಕನ್‌ ಬಿರಿಯಾನಿ ತಿನ್ನೋಕೆ ಬಂದ್ರೆ ಮಾರ್ಟಿನ್‌ ಡೈನೋಸಾರ್‌ ಬಿರಿಯಾನಿ ಹಾಕಿಬಿಟ್ಟ; ಧ್ರುವ ಸರ್ಜಾ ಸಿನಿಮಾ ಪಬ್ಲಿಕ್‌ ಟಾಕ್‌ ಹೀಗಿದೆ

ಚಿಕನ್‌ ಬಿರಿಯಾನಿ ತಿನ್ನೋಕೆ ಬಂದ್ರೆ ಮಾರ್ಟಿನ್‌ ಡೈನೋಸಾರ್‌ ಬಿರಿಯಾನಿ ಹಾಕಿಬಿಟ್ಟ; ಧ್ರುವ ಸರ್ಜಾ ಸಿನಿಮಾ ಪಬ್ಲಿಕ್‌ ಟಾಕ್‌ ಹೀಗಿದೆ

ಎಪಿ ಅರ್ಜುನ್‌ ಡೈರೆಕ್ಷನ್‌ನಲ್ಲಿ ಧ್ರುವ ಸರ್ಜಾ ಅಭಿನಯದ ಮಾರ್ಟಿನ್‌ ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಒಂದು ದಿನ ಮುನ್ನವೇ ಪ್ರೀಮಿಯರ್‌ ಶೋ ನೋಡಿದ ತೆಲುಗು ಸಿನಿಪ್ರಿಯರು ಸಿನಿಮಾವನ್ನು ಹಾಡಿ ಹೊಗಳುತ್ತಿದ್ದಾರೆ. ಸಿನಿಮಾ 1000 ಕೋಟಿ ಕಲೆಕ್ಷನ್‌ ಮಾಡೋದು ಪಕ್ಕಾ ಎನ್ನುತ್ತಿದ್ದಾರೆ. ಮಾರ್ಟಿನ್‌ ಚಿತ್ರದ ಪಬ್ಲಿಕ್‌ ಟಾಕ್‌ ಹೀಗಿದೆ.

ಧ್ರುವ ಸರ್ಜಾ ಅಭಿನಯದ ಮಾರ್ಟಿನ್‌ ಸಿನಿಮಾ ಸಿನಿಮಾ ಬ್ಲಾಕ್‌ ಬಸ್ಟರ್‌,  1000 ರೂ ಕಲೆಕ್ಷನ್‌ ಮಾಡೋದು ಪಕ್ಕಾ ಎಂದು ಪಬ್ಲಿಕ್‌ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಎಪಿ ಅರ್ಜುನ್‌ ಡೈರೆಕ್ಷನ್‌, ಧ್ರುವ ಆಕ್ಷನ್‌ ಎಲ್ಲರಿಗೂ ಇಷ್ಟವಾಗಿದೆ.
ಧ್ರುವ ಸರ್ಜಾ ಅಭಿನಯದ ಮಾರ್ಟಿನ್‌ ಸಿನಿಮಾ ಸಿನಿಮಾ ಬ್ಲಾಕ್‌ ಬಸ್ಟರ್‌, 1000 ರೂ ಕಲೆಕ್ಷನ್‌ ಮಾಡೋದು ಪಕ್ಕಾ ಎಂದು ಪಬ್ಲಿಕ್‌ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಎಪಿ ಅರ್ಜುನ್‌ ಡೈರೆಕ್ಷನ್‌, ಧ್ರುವ ಆಕ್ಷನ್‌ ಎಲ್ಲರಿಗೂ ಇಷ್ಟವಾಗಿದೆ. (PC: Review Talks, SSP MEDIA, HOUSEFULL TALK)

ಧ್ರುವ ಸರ್ಜಾ ಅಭಿನಯದ ಮಾರ್ಟಿನ್‌ ಸಿನಿಮಾ ಇಂದು ತೆರೆ ಕಂಡಿದೆ. ಮಧ್ಯರಾತ್ರಿಯಿಂದಲೇ ಅಭಿಮಾನಿಗಳು ಸಿನಿಮಾ ನೋಡಿ ಸಂಭ್ರಮಿಸಿದ್ದಾರೆ. ಇಂದು ಒಂದೆಡೆ ಆಯುಧ ಪೂಜೆ ಭರಾಟೆ ಒಂದೆಡೆ ಆದರೆ, ಮತೊಂದೆಡೆ ಚಿತ್ರಮಂದಿರಗಳಲ್ಲಿ ಮಾರ್ಟಿನ್‌ ಭಾರೀ ಸದ್ದು ಮಾಡುತ್ತಿದ್ದಾನೆ. ವಿಶ್ವಾದ್ಯಂತ ಸುಮಾರು 3000 ಸ್ಕ್ರೀನ್‌ಗಳಲ್ಲಿ ಮಾರ್ಟಿನ್‌ ಸಿನಿಮಾ ಪ್ರದರ್ಶನವಾಗುತ್ತಿದೆ.

ಮಾರ್ಟಿನ್‌ ಚಿತ್ರತಂಡ ಒಂದು ದಿನ ಮುಂಚಿತವಾಗಿಯೇ ಬಹಳಷ್ಟು ಕಡೆ ಪೇಯ್ಡ್‌ ಪ್ರೀಮಿಯರ್‌ ಶೋ ಏರ್ಪಡಿಸಿತ್ತು. ಸಿನಿಮಾ ನೋಡಿದವರು ಏನಂದ್ರು? ಧ್ರುವ ಸರ್ಜಾ ಅಭಿನಯಕ್ಕೆ, ಎಪಿ ಅರ್ಜುನ್‌ ಡೈರೆಕ್ಷನ್‌ಗೆ ಎಷ್ಟು ಮಾರ್ಕ್ಸ್‌ ಕೊಟ್ರು? ಚಿತ್ರದ ಹಾಡುಗಳು ಹೇಗಿವೆ? ಇಲ್ಲಿದೆ ಪಬ್ಲಿಕ್‌ ಟಾಕ್‌.

  • ನಾನು ಚಿಕನ್‌ ಬಿರಿಯಾನಿ ತಿಂದಿದ್ದೇನೆ, ಮಟನ್‌ ಬಿರಿಯಾನಿ ತಿಂದಿದ್ದೇನೆ, ಆದರೆ ಇದು ಡೈನೋಸಾರ್‌ ಬಿರಿಯಾನಿ. 4 ಡೈನೋಸಾರ್‌ಗಳು ಹೊಡೆದಾಡಿದ್ರೆ ಹೇಗಿರುತ್ತೋ ಸಿನಿಮಾ ಕೂಡಾ ಹಾಗೇ ಇದೆ. ದೇವರ, ಸಲಾರ್‌, ಕೆಜಿಎಫ್‌, ಬಾಹುಬಲಿ ಎಲ್ಲಾ ಸಿನಿಮಾಗಳನ್ನು ಮಿಕ್ಸ್‌ ಮಾಡಿದಂತೆ ಇದೆ. ಸಿನಿಮಾ 1000 ಕೋಟಿ ರೂಗಿಂತಲೂ ಹೆಚ್ಚಿಗೆ ಕಲೆಕ್ಷನ್‌ ಮಾಡುತ್ತೆ.
  • ಥಿಯೇಟರ್‌ಗಳಲ್ಲಿ ಯಾರೂ ಚೇರ್‌ನಲ್ಲಿ ಸರಿಯಾಗಿ ಕೂರುತ್ತಿಲ್ಲ ಎಲ್ಲರೂ ಕುರ್ಚಿ ತುದಿಯಲ್ಲಿ ಕುಳಿತು ಸಿನಿಮಾ ನೋಡ್ತಿದ್ದಾರೆ. ವಿಎಫ್‌ಎಕ್ಸ್‌ ಚೆನ್ನಾಗಿದೆ. ಫೈಟ್‌ ಅಂತೂ ಹಾಲಿವುಡ್‌ ರೇಂಜ್‌ಗೆ ಇದೆ. ಧ್ರುವ ಸರ್ಜಾ ಕರಿಯರ್‌ನಲ್ಲಿ ಇದು ನಿಜಕ್ಕೂ ಬೆಸ್ಟ್‌ ಸಿನಿಮಾ.
  • ಧ್ರುವ ಸರ್ಜಾ, ನಮ್ಮ ತೆಲುಗು ಸಿನಿಮಾ ಇಂಡಸ್ಟ್ರಿಗೆ ಬಂದಿದ್ದಾರೆ. ಸಿನಿಮಾ ಮಾಮೂಲಂತೂ ಇಲ್ಲವೇ ಇಲ್ಲ. ಸಿನಿಮಾದಲ್ಲಿ ಅಂತದ್ದೇನಿದೆ ಅಂತ ಇಲ್ಲಿಗೆ ಬಂದೆ, ಆದ್ರೆ ಎಲ್ಲರಿಗೂ ಗೂಸ್‌ ಬಂಪ್ಸ್‌ ಬರೋದು ಪಕ್ಕಾ, ಧ್ರುವ ಸರ್ಜಾ ಸೂಪರ್‌, ಅವರ ದೇಹ, ಟ್ಯಾಟೂ, ಹಿರೋ ಲುಕ್‌, ಫೈಟ್‌ ಎಲ್ಲವೂ ನೆಕ್ಸ್ಟ್‌ ಲೆವೆಲ್‌. ಸಿನಿಮಾದಲ್ಲಿ ಫೈಟ್‌ ಅಂತೂ ನೆಕ್ಸ್ಟ್‌ ಲೆವೆಲ್‌, ಸಿನಿಮಾ ಪಕ್ಕಾ ಬ್ಲಾಕ್‌ ಬಸ್ಟರ್‌ ಪಕ್ಕಾ.
  • ಹೀರೋ ಎಂಟ್ರಿ ಅಂತೂ ಸೂಪರ್‌, ಕೆಲವೊಂದು ದೃಶ್ಯಗಳನ್ನು ನೋಡುತ್ತಿದ್ದರೆ ಡಬ್ಲ್ಯೂ ಡಬ್ಲ್ಯೂ ಎಫ್‌ ನೋಡಿದಂತೆ ಆಗ್ತಿದೆ. ಒಂದೊಂದು ಸೀನ್‌ ಕೂಡಾ ಮೈಂಡ್‌ ಬ್ಲೋಯಿಂಗ್‌, ಕೆಜಿಎಫ್‌ ಚಿತ್ರದಂತೆ ಮಾರ್ಟಿನ್‌ ಕೂಡಾ ಬ್ಲಾಕ್‌ ಬಸ್ಟರ್‌ ಆಗೋದು ಖಂಡಿತ, ಅಲ್ಲು ಅರ್ಜುನ್‌ ಸೋದರಳಿಯನ ಸಿನಿಮಾ ಅಂದ್ರೆ ಸುಮ್ನೇನಾ, ಮಾವನಿಗಿಂತ ಧ್ರುವ ಎತ್ತರಕ್ಕೆ ಬೆಳೆಯುತ್ತಾರೆ.
  • ಆ ಹೀರೋ ಎಲ್ಲಿಂದ ಬಂದ್ರು? ಆತನ ಬಾಡಿ ನೋಡುತ್ತಿದ್ರೆ..! ಸಿನಿಮಾದಲ್ಲಿ ಕಂಟೆಂಟ್‌ ಅಂತೂ ಬೇರೆ ಲೆವೆಲ್‌ಗೆ ಇದೆ. ಧ್ರುವ ಸರ್ಜಾಗಂತೂ ಕೈ ಮುಗಿಯಲೇಬೇಕು. ನಿಜಕ್ಕೂ ಸಿನಿಮಾ 2000 ಕೋಟಿಗಿಂತಲೂ ಲಾಭ ಮಾಡುತ್ತೆ,
  • ಸಿನಿಮಾದಲ್ಲಿ ಒಂದು ಸ್ಪೆಷಲ್‌ ಸಾಂಗ್‌ ಇದೆ, ಅದಂತೂ ಹೈ ಲೆವೆಲ್‌ನಲ್ಲಿದೆ, ಚಿತ್ರಮಂದಿರಕ್ಕೆ ಬಂದ ಎಲ್ಲಾ ಆಡಿಯನ್ಸ್‌ಗೂ ಸಿನಿಮಾ ರಸಗುಲ್ಲಾ ತಿಂದತೆ ಆಗುತ್ತೆ.
  • ಆ ಧ್ರುವ ಸರ್ಜಾ ದೇಹ ಚೈನಾ ವಾಲ್‌ನಂತೆ ಇದೆ. ಅದೇನು ಪರ್ಸನಾಲಿಟಿ ಆತನದ್ದು, ಸಿನಿಮಾ ನೋಡುತ್ತಿದ್ರೆ ಗೂಸ್‌ ಬಂಪ್ಸ್‌ ಬರುತ್ತೆ, ಪ್ರತಿಯೊಂದು ವಿಶ್ಯುವಲ್‌ ಕೂಡಾ ಕರೆಂಟ್‌ ಶಾಕ್‌ ಕೊಟ್ಟಂತೆ ಇದೆ. ಇದುವರೆಗೂ ಕನ್ನಡದಲ್ಲಿ ಬಂದ ಸಿನಿಮಾಗಳ ರೆಕಾರ್ಡ್‌ ಮಾರ್ಟಿನ್‌ ಮುಂದೆ ಬ್ರೇಕ್‌ ಆಗೋದು ಪಕ್ಕಾ.

ಇದನ್ನೂ ಓದಿ: ಒಟಿಟಿಗೆ ಬರಲು ರೆಡಿಯಾಯ್ತು ‘ಕೃಷ್ಣಂ ಪ್ರಣಯ ಸಖಿ’​; ಈ ವೇದಿಕೆಯಲ್ಲಿ ಪ್ರಸಾರ ಆರಂಭಿಸಲಿದೆ ಗೋಲ್ಡನ್‌ ಸ್ಟಾರ್‌ ಗಣೇಶ್‌ ಸಿನಿಮಾ

ಇದು ಮಾರ್ಟಿನ್‌ ಸಿನಿಮಾ ನೋಡಿದ ತೆಲುಗು ಅಭಿಮಾನಿಗಳ ರಿವ್ಯೂ. ಒಟ್ಟಿನಲ್ಲಿ ಸಿನಿಮಾ ಬಗ್ಗೆ ಪಾಸಿಟಿವ್‌ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು ಚಿತ್ರತಂಡ ಫುಲ್‌ ಖುಷಿಯಾಗಿದೆ.

Whats_app_banner