ಕನ್ನಡ ಸುದ್ದಿ  /  ಮನರಂಜನೆ  /  ಪುನೀತ್‌ ಆತ್ಮದ ಜತೆಗೆ ಜನ್ಮಾಂತರ ಖ್ಯಾತಿಯ ಶ್ರೀ ರಾಮಚಂದ್ರ ಗುರೂಜಿ ಮಾತುಕತೆ; ಆ ಪ್ರಶ್ನೆಗೆ ಕೊನೆಗೂ ಸಿಕ್ತು ಉತ್ತರ!

ಪುನೀತ್‌ ಆತ್ಮದ ಜತೆಗೆ ಜನ್ಮಾಂತರ ಖ್ಯಾತಿಯ ಶ್ರೀ ರಾಮಚಂದ್ರ ಗುರೂಜಿ ಮಾತುಕತೆ; ಆ ಪ್ರಶ್ನೆಗೆ ಕೊನೆಗೂ ಸಿಕ್ತು ಉತ್ತರ!

ಪುನೀತ್ ರಾಜ್‌ಕುಮಾರ್‌ ನಿಧನರಾದ ಕೆಲವೇ ದಿನಗಳಲ್ಲಿ ಅವರ ಆತ್ಮದ ಜತೆಗೆ ಶ್ರೀ ರಾಮಚಂದ್ರ ಗುರೂಜಿ ಸಂಭಾಷಣೆ ನಡೆಸಿದ್ದಾರೆ. ತಮ್ಮ ತಲೆಯಲ್ಲಿದ್ದ ಮೂರು ಪ್ರಶ್ನೆಗಳನ್ನು ಪುನೀತ್‌ ಆತ್ಮದ ಮುಂದಿಟ್ಟಿದ್ದರು. ಅದಕ್ಕೆ ಉತ್ತರವನ್ನೂ ಪಡೆದಿದ್ದಾರೆ.

ಪುನೀತ್‌ ಆತ್ಮದ ಜತೆಗೆ ಜನ್ಮಾಂತರ ಖ್ಯಾತಿಯ ಶ್ರೀ ರಾಮಚಂದ್ರ ಗುರೂಜಿ ಮಾತುಕತೆ; ಆ ಪ್ರಶ್ನೆಗೆ ಕೊನೆಗೂ ಸಿಕ್ತು ಉತ್ತರ!
ಪುನೀತ್‌ ಆತ್ಮದ ಜತೆಗೆ ಜನ್ಮಾಂತರ ಖ್ಯಾತಿಯ ಶ್ರೀ ರಾಮಚಂದ್ರ ಗುರೂಜಿ ಮಾತುಕತೆ; ಆ ಪ್ರಶ್ನೆಗೆ ಕೊನೆಗೂ ಸಿಕ್ತು ಉತ್ತರ!

Puneeth Rajkumar: ಸ್ಯಾಂಡಲ್‌ವುಡ್‌ ಪವರ್‌ಸ್ಟಾರ್‌ ಪುನೀತ್‌ ರಾಜ್‌ಕುಮಾರ್‌ ನಿಧನದ ಸುದ್ದಿ ಅವರ ಅಭಿಮಾನಿ ವಲಯದಲ್ಲಿ ಇಂದಿಗೂ ಅದೊಂದು ಕೆಟ್ಟ ದುರಂತ. ಮರೆಯಲಾಗದ ನೋವಿನ ಸಂಗತಿ. ಪುನೀತ್‌ ಇಲ್ಲವಾಗಿ ವರ್ಷಗಳು ಉರುಳಿದರೂ, ಇಂದಿಗೂ ಅವರನ್ನು ಜಪಿಸೋ ಅಭಿಮಾನಿಗಳಿದ್ದಾರೆ. ಅವರಿಲ್ಲದಿದ್ದರೂ ಹಬ್ಬದಂತೆ ಅವರ ಬರ್ತ್‌ಡೇ ಆಚರಿಸುವವರಿದ್ದಾರೆ. ಚಿತ್ರಮಂದಿರಗಳಲ್ಲಿ ಅಪ್ಪು ಸಿನಿಮಾಗಳು ಮರು ಬಿಡುಗಡೆ ಆದರೆ, ಕ್ಷೀರಾಭಿಷೇಕ ಮಾಡಿ ಸ್ವಾಗತಿಸುವ ದೊಡ್ಡ ಬಳಗವೇ ಇದೆ. ಆದರೆ, ಇದೇ ಪುನೀತ್‌ ಸಾವನ್ನು ಅರಗಿಸಿಕೊಳ್ಳುವ ಮನಸ್ಥಿತಿ ಮಾತ್ರ ಯಾರಿಗೂ ಇಲ್ಲ. ಚಿಕ್ಕ ವಯಸ್ಸಲ್ಲಿಯೇ ಫಿಟ್‌ ಇದ್ದಾಗಲೇ ಇಹಲೋಕ ತ್ಯಜಿಸಿ ಶಾಕ್‌ ಕೊಟ್ಟಿದ್ದರು ಅಪ್ಪು!

ಇದೀಗ ಹೀಗೆ ಅಗಲಿದ ಪುನೀತ್‌ ರಾಜ್‌ಕುಮಾರ್‌ ಜತೆಗೆ ಮಾತನಾಡುವ ಪ್ರಯತ್ನ ಮಾಡಿದ್ದಾರೆ ಜನ್ಮಾಂತರ ಖ್ಯಾತಿಯ ಆಧ್ಯಾತ್ಮಿಕ ಗುರು, ಅಂತಾರಾಷ್ಟ್ರೀಯ ಮಟ್ಟದಲ್ಲಿಯೂ ಹೆಸರು ಮಾಡಿರುವ ಡಾ. ಶ್ರೀ ರಾಮಚಂದ್ರ ಗುರೂಜಿ. ಈ ಹಿಂದೆ ಸಿನಿಮಾ ಸೆಲೆಬ್ರಿಟಿಗಳು ಸೇರಿ ಗಣ್ಯರ ಅಕಾಲಿಕ ಸಾವಿನ ಹಿಂದಿನ ರಹಸ್ಯವನ್ನು ಅವರ ಆತ್ಮದ ಜತೆಗೆ ಮಾತನಾಡಿದ ಸಾಕಷ್ಟು ಉದಾಹರಣೆಗಳಿವೆ. ಬಾಲಿವುಡ್‌ ನಟ ಸುಶಾಂತ್‌ ಸಿಂಗ್‌ ರಜಪೂತ್‌ ಸಾವಿನ ಬಗ್ಗೆಯೂ ಅವರ ಆತ್ಮದ ಜತೆಗೆ ಮಾತನಾಡಿದ್ದರು. ಇದೀಗ ಪುನೀತ್‌ ರಾಜ್‌ಕುಮಾರ್‌ ಅವರ ಜತೆಗೂ ಸಂಭಾಷಣೆ ನಡೆಸಿದ್ದಾರೆ ರಾಮಚಂದ್ರ ಗುರೂಜಿ.

ಟ್ರೆಂಡಿಂಗ್​ ಸುದ್ದಿ

ಪುನೀತ್ ಆತ್ಮದ ಜತೆಗೆ ಮೂರು ಪ್ರಶ್ನೆಗಳು

ಆರ್‌ಜೆ ರಾಜೇಶ್‌ ಗೌಡ ಅವರ ಯೂಟ್ಯೂಬ್‌ ಚಾನೆಲ್‌ ಜತೆಗಿನ ಸಂದರ್ಶನದಲ್ಲಿ ಭಾಗವಹಿಸಿದ ಶ್ರೀ ರಾಮಚಂದ್ರ ಗುರೂಜಿ, ಜನ್ಮಾಂತರಗಳ ಬಗ್ಗೆ ಸುದೀರ್ಘವಾಗಿ ಎರಡು ಗಂಟೆಗಳ ಕಾಲ ಮಾತನಾಡಿದ್ದಾರೆ. ಈ ವೇಳೆ ಆತ್ಮಗಳ ಸಂಚಾರ, ಭೂತ ಪ್ರೇತ, ಸೇರಿ ಒಂದಷ್ಟು ಅಚ್ಚರಿಯ ವಿಚಾರಗಳಿಗೆ ಉತ್ತರ ನೀಡಿದ್ದಾರೆ. ತಮ್ಮ ಅನುಭವಗಳನ್ನೂ ಹಂಚಿಕೊಂಡಿದ್ದಾರೆ. ಪುನೀತ್ ರಾಜ್‌ಕುಮಾರ್‌ ನಿಧನರಾದ ಕೆಲವೇ ದಿನಗಳಲ್ಲಿ ಅವರ ಜತೆಗೆ ಶ್ರೀ ರಾಮಚಂದ್ರ ಗುರೂಜಿ ಸಂಭಾಷಣೆ ನಡೆಸಿದ್ದಾರೆ. ತಮ್ಮ ತಲೆಯಲ್ಲಿದ್ದ ಮೂರು ಪ್ರಶ್ನೆಗಳನ್ನು ಪುನೀತ್‌ ಆತ್ಮದ ಮುಂದಿಟ್ಟಿದ್ದರು. ಅದಕ್ಕೆ ಉತ್ತರವನ್ನೂ ಪಡೆದಿದ್ದಾರೆ.

"ಆತ್ಮಗಳ ಜತೆಗೆ ಮಾತನಾಡುವುದು, ಸಂಭಾಷಣೆ ನಡೆಸುವುದು ಸಾಧ್ಯ. ಅದೊಂದು ರೀತಿಯ ಟೆಕ್ನಾಲಜಿ. ನಮ್ಮ ಈ ಆಧ್ಯಾತ್ಮದಲ್ಲಿ ಬದುಕಿದ್ದವರ ಹಿಂದಿನ ಜನ್ಮದ ರಹಸ್ಯವನ್ನು ಹಗೇ ತಿಳಿದುಕೊಳ್ಳಲು ಸಾಧ್ಯವೋ, ಅದೇ ರೀತಿಯಲ್ಲಿ ಸತ್ತ ಕೆಲ ದಿನಗಳ ಬಳಿಕ ಅವರ ಜತೆಗೆ ಸಂಭಾಷಣೆ ನಡೆಸುವುದೂ ಸಾಧ್ಯವಿದೆ. ನನ್ನ ವೈಯಕ್ತಿಕ ಮಾಹಿತಿಗೋಸ್ಕರ ಪುನೀತ್‌ ರಾಜ್‌ಕುಮಾರ್‌ ಅವರ ಆತ್ಮದ ಜತೆಗೆ ಸಂಭಾಷಣೆ ನಡೆಸಿದ್ದೆ. ಅವರಿಂದ ಮೂರು ಪ್ರಶ್ನೆಗಳಿಗೆ ಉತ್ತರ ಪಡೆದಿದ್ದೆ. ಆದರೆ, ಅದನ್ನು ನಾನು ಸಾರ್ವಜನಿಕ ವೇದಿಕೆಯಲ್ಲಿ ಮಾಡಿಲ್ಲ. ಕೋಟಿ ಲೆಕ್ಕದಲ್ಲಿ ಅವರಿಗೆ ಅಭಿಮಾನಿಗಳು ಇರೋದ್ರಿಂದ ಪಬ್ಲಿಕ್‌ ವೇದಿಕೆ ಮಾಡುವುದಕ್ಕೆ ಅದು ಕಷ್ಟ"

ಅಪ್ಪ ಅಮ್ಮನ ಹುಡುಕಾಟದಲ್ಲಿ ಪುನೀತ್!

"ಅಪ್ಪು ಜತೆ ಕನೆಕ್ಟ್‌ ಆಗ್ತಿದ್ದಂತೆ, ನಿಮ್ಮ ಸಾವಿನ ಬಗ್ಗೆ ಸಾಕಷ್ಟು ಊಹಾಪೋಹಗಳು ಹರಿದಾಡುತ್ತಿವೆ. ಅವುಗಳು ನಿಜಾನಾ? ಎಂದೆ. ಅದಕ್ಕೆ ಉತ್ತರಿಸಿದ ಅವರು, "ಇಲ್ಲ ನಾನು ಹೃದಯ ಸಂಬಂಧಿ ಸಮಸ್ಯೆಯಿಂದಲೇ ಸತ್ತಿದ್ದೇನೆ.." ಎಂದು ಕ್ಲಿಯರ್‌ ಮಾಡಿದರು. ಅದಾದ ಬಳಿಕ ಈಗ ಎಲ್ಲಿದ್ದೀರಿ? ಎಂದೆ, ಆ ಪ್ರಶ್ನೆಗೆ ಉತ್ತರ ನೀಡಿದ ಅವ್ರು, "ನಾನೀಗ ನನ್ನ ತಂದೆ ತಾಯಿಯ ಹುಡುಕಾಟದಲ್ಲಿದ್ದೇನೆ.."ಎಂದು ರಾಮಚಂದ್ರ ಗುರೂಜಿ ಪ್ರಶ್ನೆಗೆ ಉತ್ತರ ನೀಡಿದರು.

ಮಗಳ ಹೊಟ್ಟೆಯಲ್ಲಿ ಮತ್ತೆ ಹುಟ್ಟಿಬರುವೆ..

ಈ ಎರಡು ಪ್ರಶ್ನೆಗಳ ಬಳಿಕ ಮರುಜನ್ಮದ ಬಗ್ಗೆ ರಾಮಚಂದ್ರ ಗುರೂಜಿ ಮೂರನೇಯದಾಗಿ, ಮರು ಜನ್ಮದ ಬಗ್ಗೆ ಪ್ರಶ್ನೆ ಮಾಡಿದರು. "ನೀವು ಮತ್ತೆ ಹುಟ್ಟಿ ಬರುತ್ತೀರಾ?" ಎಂದರು. ಅದಕ್ಕೆ ಪ್ರತಿಯಾಗಿ, "ಆ ಬಗ್ಗೆ ನಾನಿನ್ನೂ ಯೋಚನೆ ಮಾಡಿಲ್ಲ. ಒಂದು ವೇಳೆ ಮತ್ತೊಮ್ಮೆ ಹುಟ್ಟಿ ಬರುವುದೇ ಆದರೆ, ನನ್ನ ಮಗಳ ಹೊಟ್ಟೆಯಲ್ಲಿ ಹುಟ್ಟಿ ಬರುತ್ತೇನೆಂದು ಪುನೀತ್‌ ಸ್ಪಷ್ಟಪಡಿಸಿದರು. ಅವರ ಸಾವಿನ ಬಗ್ಗೆ ಒಂದಷ್ಟು ಅನುಮಾನಗಳು ವ್ಯಕ್ತವಾದವು. ಅದನ್ನು ತಿಳಿಯುವ ಉದ್ದೇಶಕ್ಕೆ, ನಮ್ಮ ಸಂಶೋಧನೆಯ ಭಾಗವಾಗಿ ನಾನು ವರ ಆತ್ಮದ ಜತೆಗೆ ಮಾತನಾಡಿದ್ದೆ. ಇದನ್ನು ನಾನು ಎಲ್ಲಿಯೂ ಹೇಳಿಕೊಂಡಿಲ್ಲ" ಎಂದರು ಶ್ರೀ ರಾಮಚಂದ್ರ ಗುರೂಜಿ.