ರಜಿನಿಕಾಂತ್‌ ಅವರೇ ನೀವಿನ್ನು ಕರ್ನಾಟಕಕ್ಕೆ ಕಾಲಿಡಬೇಡಿ, ನಮಗೆ ನಿಮ್ಮ ಚಿತ್ರವೂ ಬೇಡ, ನೀವೂ ಬೇಡ; ವಾಟಾಳ್‌ ನಾಗರಾಜ್‌
ಕನ್ನಡ ಸುದ್ದಿ  /  ಮನರಂಜನೆ  /  ರಜಿನಿಕಾಂತ್‌ ಅವರೇ ನೀವಿನ್ನು ಕರ್ನಾಟಕಕ್ಕೆ ಕಾಲಿಡಬೇಡಿ, ನಮಗೆ ನಿಮ್ಮ ಚಿತ್ರವೂ ಬೇಡ, ನೀವೂ ಬೇಡ; ವಾಟಾಳ್‌ ನಾಗರಾಜ್‌

ರಜಿನಿಕಾಂತ್‌ ಅವರೇ ನೀವಿನ್ನು ಕರ್ನಾಟಕಕ್ಕೆ ಕಾಲಿಡಬೇಡಿ, ನಮಗೆ ನಿಮ್ಮ ಚಿತ್ರವೂ ಬೇಡ, ನೀವೂ ಬೇಡ; ವಾಟಾಳ್‌ ನಾಗರಾಜ್‌

ಕಾವೇರಿ ನೀರು ಹಂಚಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಕನ್ನಡ ವಾಟಾಳ್‌ ಪಕ್ಷದ ವಾಟಾಳ್‌ ನಾಗರಾಜ್‌, ರಜಿನಿಕಾಂತ್‌ ವಿರುದ್ಧ ತಿರುಗಿ ಬಿದ್ದಿದ್ದಾರೆ.

ರಜಿನಿಕಾಂತ್‌ ಅವರೇ ನೀವು ತಮಿಳು ಪರವಾದರೆ ಕರ್ನಾಟಕಕ್ಕೆ ಕಾಲಿಡಬೇಡಿ, ನಮಗೆ ನಿಮ್ಮ ಚಿತ್ರವೂ ಬೇಡ, ನೀವೂ ಬೇಡ; ವಾಟಾಳ್‌ ನಾಗರಾಜ್‌
ರಜಿನಿಕಾಂತ್‌ ಅವರೇ ನೀವು ತಮಿಳು ಪರವಾದರೆ ಕರ್ನಾಟಕಕ್ಕೆ ಕಾಲಿಡಬೇಡಿ, ನಮಗೆ ನಿಮ್ಮ ಚಿತ್ರವೂ ಬೇಡ, ನೀವೂ ಬೇಡ; ವಾಟಾಳ್‌ ನಾಗರಾಜ್‌

Cauvery water Dispute: ರಾಜ್ಯದಲ್ಲಿ ಕಾವೇರಿ ನದಿ ನೀರು ಹಂಚಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಕರ್ನಾಟಕದಲ್ಲಿ ಉದ್ವಿಘ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಸಿನಿಮಾ ತಾರೆಯರು, ಕನ್ನಡಪರ ಸಂಘಟನೆಗಳು, ಕನ್ನಡಪರ ಹೋರಾಟಗಾರರು ಸೋಷಿಯಲ್‌ ಮೀಡಿಯಾದಲ್ಲಿ ತಮ್ಮ ನಿಲುವು, ಅನಿಸಿಕೆ ಅಭಿಪ್ರಾಯಗಳನ್ನು ಹೇಳಿಕೊಳ್ಳುತ್ತಿದ್ದಾರೆ.

ಸುಪ್ರೀಂಕೋರ್ಟ್‌ ಸಹ 5 ಸಾವಿರ ಕ್ಯೂಸೆಕ್‌ ನೀರು ಹರಿಸುವಂತೆ ಆದೇಶಿಸಿದೆ. ಇದರ ಬೆನ್ನಲ್ಲೇ ರಾಜ್ಯದಲ್ಲಿ ಬರದ ಸ್ಥಿತಿ ನಿರ್ಮಾಣವಾಗಿದೆ. ಕುಡಿಯಲು ನೀರಿನ ಸಮಸ್ಯೆ ಎದುರಾಗಿದೆ. ಹೀಗಿರುವಾಗ ತಮಿಳುನಾಡಿಗೆ ಹೆಚ್ಚುವರಿ ನೀರು ಹರಿಸುವುದು ಅಸಾಧ್ಯ ಎನ್ನುತ್ತಿದ್ದಾರೆ. ಇತ್ತ ಕನ್ನಡ ವಾಟಾಳ್‌ ಪಕ್ಷದ ವಾಟಾಳ್‌ ನಾಗರಾಜ್‌ ಸಹ ಕಾವೇರಿ ನೀರಿನ ಹಂಚಿಕೆ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.

ರಜಿನಿಕಾಂತ್‌ ನೀವು ಕರ್ನಾಟಕಕ್ಕೆ ಕಾಲಿಡಬೇಡಿ

ಬೆಂಗಳೂರಿನಲ್ಲಿನ ತಮಿಳಿಗರನ್ನು ಎಷ್ಟು ಜನರಿದ್ದಾರೆ, ಯಾವ ಕಾಲಿದಿಂದ ಇದ್ದಾರೆ. ಕುಡಿಯುವ ನೀರು ಯಾವುದು? ಅವರು ನೀರು ಕುಡಿಬೇಕೋ ಬೇಡವೋ? ಅವರಿಗೂ ನೀರು ಬೇಕು ಎಂದಾದರೆ ಗಂಭೀರವಾಗಿರಿ. ಕುಡಿಬಾರದು ಎಂದಾದರೆ, ಎಲ್ಲರನ್ನೂ ಹೊಸೂರು ಮೂಲಕ ತಮಿಳುನಾಡಿಗೆ ಕರೆದೊಯ್ಯಿರಿ. ಸ್ಟಾಲಿನ್‌ ಅವರೇ ನೀವೇ ಕರೆಸಿಕೊಂಡು ಬಿಡಿ. ಟ್ರಕ್ಕು, ರೈಲು ಎಲ್ಲದರ ಮೂಲಕ ಕರೆಸಿಕೊಳ್ಳಿ.

ತಮಿಳು ಸಿನಿಮಾಗಳನ್ನು ಬಂದ್‌ ಮಾಡುತ್ತೇವೆ. ರಜಿನಿಕಾಂತ್‌ ಕರ್ನಾಟಕಕ್ಕೆ ಬರಕೂಡದು. ಕಾಲಿಡಕೂಡದು. ರಜಿನಿಕಾಂತ್‌ ಈಗ ನೀವೇನು ಹೇಳುತ್ತೀರಿ ಹೇಳಿ. ತಮಿಳುನಾಡಿನಲ್ಲಿ ಕರ್ನಾಟಕದ ಪರ ನಿಲ್ಲುತ್ತೀರಾ ಅಥವಾ ತಮಿಳುನಾಡು ಪರ ನಿಲ್ಲುತ್ತೀರಾ? ಹೇಳಿ. ಇಲ್ಲವಾದರೆ, ನೀವು ಕರ್ನಾಟಕಕ್ಕೆ ಕಾಲಿಡಬೇಡಿ. ನಿಮ್ಮ ಸಿನಿಮಾಗಳೂ ಇಲ್ಲಿ ರಿಲೀಸ್‌ ಆಗುವುದು ಬೇಡ. ನಾನು ಉದ್ದೇಶಪೂರ್ವಕವಾಗಿ ನಿಮ್ಮ ಬಗ್ಗೆ ಮಾತನಾಡುತ್ತಿಲ್ಲ. ನೋವಿನಲ್ಲಿ ಮಾತನಾಡುತ್ತಿದ್ದೇನೆ ಎಂದಿದ್ದಾರೆ.

ತಮಿಳುನಾಡಿಗೆ ಹದಿನೈದು ದಿನ ಕಾವೇರಿ ನೀರು ಹರಿಸಿ: ಕರ್ನಾಟಕಕ್ಕೆ ಸುಪ್ರೀಂ ಸೂಚನೆ

ತಮಿಳುನಾಡಿಗೆ ಮುಂದಿನ ಹದಿನೈದು ದಿನ ಕಾವೇರಿ ನೀರು ಹರಿಸಬೇಕು ಎಂದು ಸುಪ್ರೀಂಕೋರ್ಟ್‌ಗೆ ತೀರ್ಪು ನೀಡಿದೆ. ಇದರಿಂದ ಕಾವೇರಿ ಜಲ ವಿವಾದದ ವಿಚಾರದಲ್ಲಿ ಹೋರಾಟ ನಡೆಸುತ್ತಲೇ ಕರ್ನಾಟಕಕ್ಕೆ ತೀವ್ರ ಹಿನ್ನಡೆಯಾಗಿದೆ. ಈಗಾಗಲೇ ಕಾವೇರಿ ನೀರು ಮೇಲ್ವಿಚಾರಣಾ ಸಮಿತಿ ಹಾಗೂ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಆದೇಶವನ್ನು ಎತ್ತಿ ಹಿಡಿದಿರುವ ಸುಪ್ರೀಂಕೋರ್ಟ್‌ ಮುಂದಿನ ಹದಿನೈದು ದಿನ ತಮಿಳುನಾಡಿಗೆ ನಿತ್ಯ ಐದು ಸಾವಿರ ಕ್ಯೂಸೆಕ್‌ ನೀರು ಹರಿಸಬೇಕು ಎಂದು ಸ್ಪಷ್ಟ ನಿರ್ದೇಶನ ನೀಡಿದೆ.

ಈಗಾಗಲೇ ನಾಲ್ಕು ಬಾರಿ ಮುಂದೂಡಿಕೆಯಾಗಿದ್ದ ಕಾವೇರಿ ಕುರಿತಾದ ಅರ್ಜಿಗಳ ವಿಚಾರಣೆಯನ್ನು ನ್ಯಾಯಮೂರ್ತಿ ಬಿ.ಆರ್‌.ಗವಾಯಿ ನೇತೃತ್ವದ ಸುಪ್ರೀಂಕೋರ್ಟ್‌ನ ತ್ರಿಸದಸ್ಯ ಪೀಠ ಗುರುವಾರ ಕೈಗೆತ್ತಿಕೊಂಡಿತು. ಈ ವೇಳೆ ತಮಿಳುನಾಡು ಪರ ವಾದ ಮಂಡಿಸಿದ ಹಿರಿಯ ನ್ಯಾಯವಾದಿ ಮುಕುಲ್‌ ರೋಹ್ಟಗಿ, ಪ್ರಸ್ತುತ ನೀರಿನ ಸಂಕಷ್ಟ ಇರುವುದು ಗೊತ್ತಿರುವ ವಿಚಾರವೇ. ತಮಿಳುನಾಡಿನಲ್ಲೂ ಸಂಕಷ್ಟದ ವಾತಾವರಣವಿದೆ. ಹೀಗಿದ್ದರೂ ಕರ್ನಾಟಕ ಪ್ರಾಧಿಕಾರದ ಸೂಚನೆಗಳನ್ನು ಪಾಲಿಸುತ್ತಿಲ್ಲ.ನಿಗದಿತ ನೀರು ತಮಿಳುನಾಡಿಗೆ ಬಿಡುಗಡೆಯಾಗುತ್ತಿಲ್ಲ. ನೀರು ಬಿಡುಗಡೆಗೆ ಈಗಾಗಲೇ ನೀಡಿರುವ ಆದೇಶ ಜಾರಿಗೊಳಿಸಬೇಕು ಎಂದು ಹೇಳಿದರು.‌

ಮನರಂಜನೆ ಕುರಿತ ಸುದ್ದಿಗಳಿಗೆ ಇಲ್ಲಿ ಕ್ಲಿಕ್‌ ಮಾಡಿ

Whats_app_banner