ಗುರಿ ತಲುಪಲು ಕೆಲವೇ ಹೆಜ್ಜೆಗಳು ಬಾಕಿ; ಬಿಲ್ಲ ರಂಗ ಭಾಷ ಸಿನಿಮಾ ತಯಾರಿ, ಸಿಕ್ಸ್ ಪ್ಯಾಕ್ ಫೋಟೋ ಹಂಚಿಕೊಂಡ ಕಿಚ್ಚ ಸುದೀಪ್
ಬಿಲ್ಲ ರಂಗ ಬಾಷ ಚಿತ್ರಕ್ಕಾಗಿ ಕಿಚ್ಚ ಸುದೀಪ್ ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಜಿಮ್‌ನಲ್ಲಿ ವರ್ಕೌಟ್ ಮಾಡುತ್ತಿರುವ ಫೋಟೋವನ್ನು ಸುದೀಪ್ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಗುರಿ ತಲುಪಲು ಕೆಲವೇ ಹೆಜ್ಜೆಗಳು ಸಾಕು ಎಂದು ಕ್ಯಾಪ್ಷನ್ ಬರೆದುಕೊಂಡಿದ್ದಾರೆ.
ಕಿಚ್ಚ ಸುದೀಪ್, ಸಿನಿಮಾ ಜೊತೆ ಜೊತೆಗೆ ಬಿಗ್‌ಬಾಸ್ 11ರ ನಿರೂಪಣೆ ಮಾಡುತ್ತಿದ್ದಾರೆ. ಈ ಬಾರಿ ಸುದೀಪ್ ನಿರೂಪಣೆ ಮಾಡುತ್ತಿಲ್ಲ. ಅವರ ಬದಲಿಗೆ ಬೇರೆ ನಟ ಈ ಕಾರ್ಯಕ್ರಮ ನಡೆಸಿಕೊಡುತ್ತಾರೆ ಎನ್ನಲಾದರೂ. ಇಷ್ಟು ದಿನ ಬೇರೆ ಲೆಕ್ಕ ಇನ್ಮುಂದೆ ಬೇರೆ ಲೆಕ್ಕ ಎಂದು ಡೈಲಾಗ್ ಹೇಳುತ್ತಾ ಕಿಚ್ಚ ಮತ್ತೆ ಬಿಗ್ ಬಾಸ್ ನಿರೂಪಣೆಗೆ ಕಾಲಿಟ್ಟಿದ್ದಾರೆ.
ಹೊಸ ಚಿತ್ರಕ್ಕಾಗಿ ಕಿಚ್ಚನ ತಯಾರಿ
ಬಿಗ್‌ಬಾಸ್ ಕಾರ್ಯಕ್ರಮ ಎರಡನೇ ವಾರಕ್ಕೆ ಕಾಲಿಟ್ಟಿದೆ. ವಾರದ ಕಥೆ ಕೇಳಲು ಸುದೀಪ್ ಬರಿಗಾಲಿನಲ್ಲಿ ಎಂಟ್ರಿ ಕೊಟ್ಟು ಮತ್ತೊಮ್ಮೆ ಅಭಿಮಾನಿಗಳ ಮನಸ್ಸು ಗೆದ್ದಿದ್ದರು. ಒಂದೆಡೆ ಬಿಗ್‌ಬಾಸ್ ನಿರೂಪಣೆ ಮಾಡುತ್ತಾ ತಮ್ಮ ಹೊಸ ಸಿನಿಮಾ ತಯಾರಿಯಲ್ಲೂ ಕಿಚ್ಚ ಬ್ಯುಸಿ ಇದ್ದಾರೆ. ವಿಕ್ರಾಂತ್ ರೋಣ ಚಿತ್ರದ ನಂತರ ಸುದೀಪ್ ಮತ್ತೆ ಅನೂಪ್ ಭಂಡಾರಿ ಜೊತೆಯಾಗಿದ್ದಾರೆ. ಅನೂಪ್ ನಿರ್ದೇಶಿಸುತ್ತಿರುವ ಬಿಲ್ಲ ರಂಗ ಭಾಷ ಸಿನಿಮಾಗಾಗಿ ಸುದೀಪ್ ಎಲ್ಲಾ ತಯಾರಿ ನಡೆಸುತ್ತಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಸಿನಿಮಾ ತಯಾರಿ ಬಗ್ಗೆ ಅಪ್‌ಡೇಟ್ ಕೊಡುತ್ತಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಕಿಚ್ಚ ಹೊಸ ಫೊಟೋವೊಂದನ್ನು ಹಂಚಿಕೊಂಡಿದ್ದು ಕಿಚ್ಚನ ಹೊಸ ಲುಕ್ ನೋಡಿ ಫಿದಾ ಆಗಿದ್ದಾರೆ.
ಜಿಮ್ ಬಾಡಿ ಫೋಟೋ ಹಂಚಿಕೊಂಡ ಕಿಚ್ಚ
ವಾರದ ಹಿಂದೆ ಸುದೀಪ್ ಮೊದಲ ಬಾರಿ ಜಿಮ್ ಬಾಡಿ ಫೋಟೋ ಹಂಚಿಕೊಂಡಿದ್ದರು. ಈ ಫೋಟೋ ನೋಡಿ ಫ್ಯಾನ್ಸ್ ಅಂತೂ ಆಶ್ಚರ್ಯ ವ್ಯಕ್ತಪಡಿಸಿದ್ದರು. ಸಿನಿಮಾಗಾಗಿ ತಯಾರಿ ನಡೆಸುತ್ತಿದ್ದು ಬಹುತೇಕ ಬಾಡಿಬಿಲ್ಡ್ ಮಾಡಿ ಮುಗಿಸಿ ಆಯ್ತು ಎಂಬರ್ಥದಲ್ಲಿ ಸುದೀಪ್ ಫೋಟೋಗೆ ಪೋಸ್ ಕೊಟ್ಟಿದ್ದರು. ಇದೀಗ ಕಿಚ್ಚ ಮತ್ತೆ ಹೊಸ ಫೋಟೋ ಹಂಚಿಕೊಂಡು ಸಿಕ್ಸ್ ಪ್ಯಾಕ್ ಪ್ರದರ್ಶಿಸಿದ್ದಾರೆ. 2 ಫೋಟೋಗಳನ್ನು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ಸುದೀಪ್, ಗುರಿ ತಲುಪಲು ಕೆಲವೇ ಹೆಜ್ಜೆಗಳು ಸಾಕು ಎಂದು ಕ್ಯಾಪ್ಷನ್ ಬರೆದುಕೊಂಡಿದ್ದಾರೆ. ಸುದೀಪ್ ಫೋಟೋಗೆ ಅಭಿಮಾನಿಗಳು ಕಾಮೆಂಟ್ ಮಾಡಿ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ನಿಮ್ಮ ಹೊಸ ಸಿನಿಮಾಗಾಗಿ ಕಾಯುತ್ತಿದ್ದೇವೆ. ಬಿಲ್ಲ ರಂಗ ಭಾಷ ಸಿನಿಮಾದಲ್ಲಿ ನಿಮ್ಮ ಲುಕ್ ನೋಡಲು ಕಾಯುತ್ತಿದ್ದೇವೆ. ನಿಮ್ಮ ವಯಸ್ಸು 25 ತಾನೇ? ನಮ್ಮ ಕಿಚ್ಚನ ಡೆಡಿಕೇಷನ್‌ನಿಂದಲೇ ಅವರ ಸಿನಿಮಾ ಗೆಲ್ಲೋದು. ಅಣ್ಣಾ ನೀವು ಫುಲ್ ಮಾಸ್ ಎಂದೆಲ್ಲಾ ಅಭಿಮಾನಿಗಳು ಕಾಮೆಂಟ್ ಮಾಡುತ್ತಿದ್ದಾರೆ.
ಅನೂಪ್ ಭಂಡಾರಿ ನಿರ್ದೇಶನದ ಬಿಲ್ಲ ರಂಗ ಭಾಷ
ಬಿಲ್ಲ ರಂಗ ಭಾಷ ಚಿತ್ರದಲ್ಲಿ ಸುದೀಪ್ ತ್ರಿಪಾತ್ರದಲ್ಲಿ ನಟಿಸುತ್ತಿರಬಹುದು ಎನ್ನಲಾಗುತ್ತಿದೆ. ಇದು ಭವಿಷ್ಯದ ಕಥೆ ಹೇಳುವ ಸಿನಿಮಾವಾಗಿದ್ದು, ವಿಕ್ರಾಂತ್ ರೋಣ ಚಿತ್ರದಂತೆ ಇದರಲ್ಲಿ ಹೆಚ್ಚು ವಿಎಫ್‌ಎಕ್ಸ್ ಇರಲಿದೆ ಎಂದು ಚಿತ್ರತಂಡ ಮಾಹಿತಿ ನೀಡಿದೆ. ಇದು ಅನುಪ್ ಭಂಡಾರಿ ಅವರ ಡ್ರೀಮ್ ಪ್ರಾಜೆಕ್ಟ್ ಆಗಿದ್ದು ಚಿತ್ರಕ್ಕಾಗಿ ಅವರು 7 ವರ್ಷಗಳಿಂದ ತಯಾರಿ ಮಾಡಿಕೊಂಡಿದ್ದಾರಂತೆ.