ಕನ್ನಡ ಸುದ್ದಿ  /  ಮನರಂಜನೆ  /  ಕಿತ್ತಳೆ ತೋಟದ ಕೆಲಸದ ಹುಡುಗಿಯ ಕನಸಿನಂತೆ… ಚೈತ್ರಾ ಆಚಾರ್‌ ಹಾಡಿನ ಮೋಡಿ; ಒಂದು ಮೊಟ್ಟೆಯ ಕಥೆ ಟೀಮ್‌ ಜತೆ ಮತ್ತೆ ಜತೆಯಾದ ರಾಜ್‌ ಬಿ ಶೆಟ್ಟಿ

ಕಿತ್ತಳೆ ತೋಟದ ಕೆಲಸದ ಹುಡುಗಿಯ ಕನಸಿನಂತೆ… ಚೈತ್ರಾ ಆಚಾರ್‌ ಹಾಡಿನ ಮೋಡಿ; ಒಂದು ಮೊಟ್ಟೆಯ ಕಥೆ ಟೀಮ್‌ ಜತೆ ಮತ್ತೆ ಜತೆಯಾದ ರಾಜ್‌ ಬಿ ಶೆಟ್ಟಿ

Roopanthara Kittale Song Lyrics: ರಾಜ್‌ ಬಿ ಶೆಟ್ಟಿ ನಟನೆಯ ರೂಪಾಂತರ ಸಿನಿಮಾದ ಹಾಡೊಂದು ಬಿಡುಗಡೆಯಾಗಿದೆ. ಕಿತ್ತಳೆ ತೋಟದ ಕೆಲಸದ ಹುಡುಗಿನ ಕನಸಿನಂತೆ ಒಂದು ಕಿತ್ತಳೆ ಹಣ್ಣು ಎಂಬ ಹಾಡಿಗೆ ಚೈತ್ರಾ ಜೆ ಆಚಾರ್‌ ಧ್ವನಿಯಾಗಿದ್ದಾರೆ. ಕಿತ್ತಳೆ ಹಾಡಿನ ಲಿರಿಕ್ಸ್‌ ಇಲ್ಲಿದೆ.

ರೂಪಾಂತರ ಸಿನಿಮಾದ ಕಿತ್ತಳೆ ಹಾಡು
ರೂಪಾಂತರ ಸಿನಿಮಾದ ಕಿತ್ತಳೆ ಹಾಡು

ಗರುಡ ಗಮನ ವೃಷಭ ವಾಹನ ಸಿನಿಮಾದಲ್ಲಿ "ಮಾದೇವ ಮಾದೇವ ಮಾದೇವ ಮಾದೇವ ಸೋಜುಗದ ಸೂಜು ಮಲ್ಲಿಗೆ, ಮಾದೇವ ನಿಮ್ಮ ಮಂಡೆ ಮ್ಯಾಲೆ ದುಂಡು ಮಲ್ಲಿಗೆ ಸೂಜುಗದ ಸೂಜು ಮಲ್ಲಿಗೆ ಮಾದೇವ ನಿಮ್ಮ ಮಂಡೆ ಮ್ಯಾಲೇ ದುಂಡು ಮಲ್ಲಿಗೆ" ಎಂಬ ಹಾಡಿನ ಮೂಲಕ ಚೈತ್ರಾ ಜೆ ಆಚಾರ್‌ ಕನ್ನಡ ಸಿನಿಮಾ ಹಾಡುಗಳ ಅಭಿಮಾನಿಗಳಿಗೆ ಮೋಡಿ ಮಾಡಿದ್ದರು. ಇದೀಗ ಕಿತ್ತಳೆ ಎಂಬ ಹಾಡಿನ ಮೂಲಕ ಅದೇ ಕಂಪನವನ್ನು ಉಂಟು ಮಾಡಿದ್ದಾರೆ. "ಕಿತ್ತಳೆ ತೋಟದ ಕೆಲಸದ ಹುಡುಗಿನ ಕನಸಿನಂತೆ ಒಂದು ಕಿತ್ತಳೆ ಹಣ್ಣು" ಎಂದು ಅದ್ಭುತವಾಗಿ ಹಾಡಿದ್ದಾರೆ.

ಕಿತ್ತಳೆ ತೋಟದ ಕೆಲಸದ ಹುಡುಗಿಯ ಹಾಡಿನ ಕನ್ನಡ ಲಿರಿಕ್ಸ್‌

ಕಿತ್ತಳೆ ತೋಟದ ಕೆಲಸದ ಹುಡುಗಿಯ ಕನಸಿನಂತೆ ಒಂದು ಕಿತ್ತಳೆ ಹಣ್ಣು, ಕಿತ್ತಳೆ ಹಣ್ಣು...

ಮ್ಯಾಲೆ ಇರೋ ಸ್ವಾಮಿ ಕೊಯ್ದು ಕೊಡಲೇನು....

ಟ್ರೆಂಡಿಂಗ್​ ಸುದ್ದಿ

ಯಾಕೆಂತೆ ಅವ್ನಿಗೆ ಕಾಣದೇ ಕಣ್ಣು, ಕಾಣದೇ ಕಣ್ಣು, ಕಾಣದೇ ಕಣ್ಣು

ಹಣ್ಣು ಕೀಳೆಂದರೆ ಕೈ ಇಲ್ಲದ ಹುಡುಗಿ

ಮರ ಹತ್ತು ಹೋಗೆಂದ್ರೆ ಕಾಲಿಲ್ಲದ ಹುಡುಗಿ

ಹುಳ ತಿಂದ ಹಣ್ಣಾದರೂ ಒಂದಾದರೂ ಕೊಡಿರೋ....

ಹುಳ ತಿಂದ ಹಣ್ಣಾದರೂ ಒಂದಾದರೂ ಕೊಡಿರೋ....

ಹುಳಿ ಹೆಚ್ಚು ಹಸಿ ಕಾಯಿಯಾದರೂ ಕೊಡಿರೋ....

ಹಣ್ಣಾದ್ರೂ ಕೊಡಿರೋ ಕಾಯಾದ್ರೂ ಕೊಡಿರೋ

ಹೋ... ಕಿತ್ತಳೆ ತೋಟದ ಕೆಲಸದ ಹುಡುಗಿ....

ಕಿತ್ತಳೆ ತೋಟದ ಕೆಲಸದ ಹುಡುಗಿಯ ಕನಸಂತೆ ಒಂದು ಕಿತ್ತಳೆ ಹಣ್ಣು...

ಮ್ಯಾಲಿರೋ ಸಾಮಿ ಕೊಯ್ದು ಕೊಡಲೇನು, ಯಾಕಂತೆ ಅವ್ನಿಗೆ ಕಾಣದೇ ಕಣ್ಣು....

ಚೈತ್ರಾ ಜೆ ಆಚಾರ್‌ ಧ್ವನಿಯಲ್ಲಿ ಕಿತ್ತಳೆ ಹಾಡು ಕೇಳಿ

ರೂಪಾಂತರ ಸಿನಿಮಾದಲ್ಲಿ ರಾಜ್‌ ಬಿ ಶೆಟ್ಟಿ

ಒಂದು ಮೊಟ್ಟೆಯ ಕಥೆ ಎಂದಾಗ ರಾಜ್‌ ಬಿ ಶೆಟ್ಟಿ ನೆನಪಾಗುವುದು ಸಹಜ. ರಾಜ್‌ ಬಿ ಶೆಟ್ಟಿಗೆ ಸ್ಯಾಂಡಲ್‌ವುಡ್‌ನಲ್ಲಿ ಕೀರ್ತಿ ತಂದುಕೊಟ್ಟ ಈ ಸಿನಿಮಾ ಟೀಮ್‌ ಜತೆ ಮತ್ತೆ ಜತೆಯಾಗಿ ರೂಪಾಂತರ ಎಂಬ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ರೂಪಾಂತರ' ಸಿನಿಮಾ ಡೈರೆಕ್ಟರ್‌ ಕೆಲವು ದಿನಗಳ ಹಿಂದೆ ಚೈತ್ರಾ ಜೆ ಆಚಾರ್‌ ಧ್ವನಿ ನೀಡಿರುವ ಕಿತ್ತಳೆ ಹಾಡನ್ನು ಬಿಡುಗಡೆ ಮಾಡಿದ್ದಾರೆ. ಇದರ ಜತೆಗೆ ಸಿನಿಮಾದ ಪೋಸ್ಟರ್‌ ಬಿಡುಗಡೆ ಮಾಡಿದ್ದಾರೆ. ಈ ಹಾಡಿಗೆ ರಾಜ್‌ ಬಿ ಶೆಟ್ಟಿ ಸಾಹಿತ್ಯ ಬರೆದಿದ್ದಾರೆ. ಪ್ರವೀಣ್ ಶ್ರೀಯಾನ್ ಛಾಯಗ್ರಹಣ, ಮಿಧುನ್ ಮುಕುಂದನ್ ಸಂಗೀತ ನೀಡಿರುವ ಈ ಹಾಡು ಮತ್ತೆಮತ್ತೆ ಕೇಳಬೇಕೆನಿಸುವಂತೆ ಇದೆ. ರಾಜ್‌ ಬಿ ಶೆಟ್ಟಿ ನಟನೆಯ ಈ ಚಿತ್ರದ ಬಿಡುಗಡೆ ದಿನಾಂಕ ಸೇರಿದಂತೆ ಹೆಚ್ಚಿನ ವಿವರ ಲಭ್ಯವಿಲ್ಲ.