Movies Released today: ಈ ವಾರ ಚಿತ್ರಮಂದಿರಗಳಲ್ಲಿ ನೋಡಬಹುದಾದ 15 ಸಿನಿಮಾ; ಕೃಷ್ಣಂ ಪ್ರಣಯ ಸಖಿ, ತಂಗಲಾನ್‌, ರಘುತಾತ ಇತ್ಯಾದಿ-top 15 movies released this week thangalaan krishanam pranaya sakhi double ismart stree 2 and other films details ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  Movies Released Today: ಈ ವಾರ ಚಿತ್ರಮಂದಿರಗಳಲ್ಲಿ ನೋಡಬಹುದಾದ 15 ಸಿನಿಮಾ; ಕೃಷ್ಣಂ ಪ್ರಣಯ ಸಖಿ, ತಂಗಲಾನ್‌, ರಘುತಾತ ಇತ್ಯಾದಿ

Movies Released today: ಈ ವಾರ ಚಿತ್ರಮಂದಿರಗಳಲ್ಲಿ ನೋಡಬಹುದಾದ 15 ಸಿನಿಮಾ; ಕೃಷ್ಣಂ ಪ್ರಣಯ ಸಖಿ, ತಂಗಲಾನ್‌, ರಘುತಾತ ಇತ್ಯಾದಿ

Movies released this week: ಕನ್ನಡ, ತಮಿಳು, ತೆಲುಗು, ಮಲಯಾಳಂ, ಹಿಂದಿ ಸೇರಿದಂತೆ ವಿವಿಧ ಭಾಷೆಗಳಲ್ಲಿ ಸ್ವಾತಂತ್ರ್ಯ ದಿನವಾದ ಇಂದು (ಆಗಸ್ಟ್‌ 15) ಒಟ್ಟು 15 ಸಿನಿಮಾಗಳು ರಿಲೀಸ್‌ ಆಗಿವೆ. ಕೃಷ್ಣಂ ಪ್ರಣಯ ಸಖಿ, ಗೌರಿ, ತಂಗಲಾನ್‌, ರಘುತಾತ, ಸ್ತ್ರೀ 2 ಸೇರಿದಂತೆ ಇಂದು ಬಿಡುಗಡೆಯಾದ ಸಿನಿಮಾಗಳ ವಿವರ ಪಡೆಯೋಣ.

Movies Released today: ಈ ವಾರ ಚಿತ್ರಮಂದಿರಗಳಲ್ಲಿ ತಂಗಲಾನ್‌, ಕೃಷ್ಣಂ ಪ್ರಣಯ ಸಖಿ ಸೇರಿದಂತೆ ಹಲವು ಹೊಸ ಸಿನಿಮಾಗಳು ರಿಲೀಸ್‌ ಆಗಿವೆ.
Movies Released today: ಈ ವಾರ ಚಿತ್ರಮಂದಿರಗಳಲ್ಲಿ ತಂಗಲಾನ್‌, ಕೃಷ್ಣಂ ಪ್ರಣಯ ಸಖಿ ಸೇರಿದಂತೆ ಹಲವು ಹೊಸ ಸಿನಿಮಾಗಳು ರಿಲೀಸ್‌ ಆಗಿವೆ.

Movies released this week: ಸ್ವಾತಂತ್ರ್ಯ ದಿನಾಚರಣೆಯಂದು ದೇಶದ ಚಿತ್ರಮಂದಿರಗಳಲ್ಲಿ ಸಡಗರ ಮನೆ ಮಾಡಿದೆ. ಈ ವಾರ ಒಳ್ಳೊಳ್ಳೆಯ ಸಿನಿಮಾಗಳು ರಿಲೀಸ್‌ ಆಗಿವೆ. ಕನ್ನಡದಲ್ಲಿ ಬಾಕ್ಸ್‌ ಆಫೀಸ್‌ನಲ್ಲಿ ಕಳೆದ ವಾರ ಭೀಮ ಸಿನಿಮಾ ಧೂಳೆಬ್ಬಿಸಿತ್ತು. ಈ ವಾರ ಗೋಲ್ಡನ್‌ ಸ್ಟಾರ್‌ ಗಣೇಶ್‌ ನಟನೆಯ ಕೃಷ್ಣಂ ಪ್ರಣಯ ಸಖಿ ಮತ್ತು ಸಮರ್ಜಿತ ಲಂಕೇಶ್ ನಟನೆಯ ಗೌರಿ ಸಿನಿಮಾ ರಿಲೀಸ್‌ ಆಗಿವೆ. ಇಷ್ಟು ಮಾತ್ರವಲ್ಲದೆ ಕೋಲಾರದ ಕೆಜಿಎಫ್‌ನ ಹಳ್ಳಿಯೊಂದರ ಕಾಲ್ಪನಿಕ ಕಥೆಯನ್ನು ಹೊಂದಿರುವ ವಿಕ್ರಮ್‌ ನಟನೆಯ ತಂಗಲಾನ್‌ ಸಿನಿಮಾವು ರಿಲೀಸ್‌ ಆಗಿದ್ದು, ಪಾಸಿಟಿವ್‌ ವಿಮರ್ಶೆ ಪಡೆಯುತ್ತಿದೆ. ಬಾಲಿವುಡ್‌ನಲ್ಲಿ ಸ್ತ್ರೀ ಎಂಬ ಸಿನಿಮಾ ಬಿಡುಗಡೆಯಾಗಿದೆ. ಪಕ್ಕದ ಟಾಲಿವುಡ್‌ನಿಂದ ಡಬಲ್‌ ಐಸ್ಮಾರ್ಟ್‌, ಮಲಯಾಳಂನಲ್ಲಿ ವಾಝಾ ಎಂಬ ಸಿನಿಮಾ ರಿಲೀಸ್‌ ಆಗಿದೆ.

ಈ ವಾರ ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ 15 ಸಿನಿಮಾ

  1. ಕೃಷ್ಣಂ ಪ್ರಣಯ ಸಖಿ (ಕನ್ನಡ)
  2. ಗೌರಿ (ಕೃಷ್ಣಂ)
  3. ತಂಗಲಾನ್‌ (ತಮಿಳು)
  4. ಖೇಲ್‌ ಖೇಲ್‌ ಮೈನ್‌ (ಹಿಂದಿ)
  5. ಸ್ತ್ರೀ 2: (ಹಿಂದಿ)
  6. ವೇದ: (ಹಿಂದಿ)
  7. ಡಬಲ್ ಐಸ್ಮಾರ್ಟ್ ( ತೆಲುಗು)
  8. ಶ್ರೀ ಬಚ್ಚನ್ (ತೆಲುಗು)
  9. ರಘು ತಾತಾ (ತಮಿಳು)
  10. 35-ಚಿನ್ನ ಕಥಾ ಕಾಡು(ತೆಲುಗು)
  11. ಆಯ್ (ತೆಲುಗು)
  12. ನುನಕ್ಕುಜಿ (ಮಲಯಾಳಂ)
  13. ವಾಝಾ- ಬಿಲಿಯನ್ ಬಾಯ್ಸ್‌ ಬಯೋಪಿಕ್ (ಮಲಯಾಳಂ)
  14. ಬಾಬ್ಲಿ (ಬಂಗಾಳಿ)
  15. ಪದಟಿಕ್ (ಬಂಗಾಳಿ)

ಬಾಕ್ಸ್‌ ಆಫೀಸ್‌ನಲ್ಲಿ ಧೂಳೆಬ್ಬಿಸುವ ಸಿನಿಮಾ ಯಾವುದು?

ಈ ಹದಿನೈದು ಸಿನಿಮಾಗಳಲ್ಲಿ ಈ ವಾರ ಬಾಕ್ಸ್‌ ಆಫೀಸ್‌ನಲ್ಲಿ ಧೂಳೆಬ್ಬಿಸುವ ಸಿನಿಮಾ ಯಾವುದು ಎಂಬ ನಿರೀಕ್ಷೆ ಎಲ್ಲರಲ್ಲಿಯೂ ಮೂಡಿದೆ. ಕನ್ನಡದ ಕೃಷ್ಣಂ ಪ್ರಣಯ ಸಖಿ ಸಿನಿಮಾವನ್ನು ನೋಡಲು ಸಾಕಷ್ಟು ಜನರು ಹಾತೋರೆಯುತ್ತಿದ್ದಾರೆ. ಈ ಸಿನಿಮಾದ ಟಿಕೆಟ್‌ಗಳು ಆನ್‌ಲೈನ್‌ ತಾಣಗಳಲ್ಲಿ ಫಿಲ್ಲಿಂಗ್‌ ಫಾಸ್ಟ್‌ ಸ್ಥಿತಿಯಲ್ಲಿವೆ. ಗೌರಿ ಸಿನಿಮಾವೂ ಉತ್ತಮ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ. ಆದರೆ, ಭಾರತದ ಬಾಕ್ಸ್‌ ಆಫೀಸ್‌ನಲ್ಲಿ ಈ ವಾರ ತಮಿಳಿನ ತಂಗಲಾನ್‌ ಸಿನಿಮಾ ಸಾಕಷ್ಟು ಗಳಿಕೆ ಮಾಡುವ ಸೂಚನೆ ಇದೆ. ವಿಕ್ರಮ್‌ ನಟನೆಯ ಈ ಸಿನಿಮಾದ ಕುರಿತು ಒಳ್ಳೆಯ ಮಾತುಗಳು ಕೇಳಿಬರುತ್ತಿವೆ. ನಮ್ಮದೇ ಕೆಜಿಎಫ್‌ನ ಪೂರ್ವಿಕರ ಕಥೆಯನ್ನು ಹೊಂದಿರುವ ಈ ಚಿತ್ರದಲ್ಲಿ ಭರ್ಜರಿ ಆಕ್ಷನ್‌ ದೃಶ್ಯಗಳಿವೆ. ಜತೆಗೆ, ಬ್ರಿಟಿಷ್‌ ಯುಗದ ಹಳ್ಳಿಯ ಚಿತ್ರಣವಿದೆ.

ಇನ್ನೊಂದೆಡೆ ಹಿಂದಿಯ ಸ್ತ್ರೀ 2 ಕೂಡ ಬಾಲಿವುಡ್‌ ಪ್ರಿಯರನ್ನು ಸೆಳೆಯುವ ಸಾಧ್ಯತೆಯಿದೆ. ಡಬಲ್‌ ಐಸ್ಮಾರ್ಟ್‌ ಸಿನಿಮಾ ಕೂಡ ಉತ್ತಮ ಆರಂಭ ಪಡೆದುಕೊಂಡಿದೆ. ಕರ್ನಾಟಕದಲ್ಲೂ ಈ ಸಿನಿಮಾಕ್ಕೆ ಹೆಚ್ಚು ಥಿಯೇಟರ್‌ಗಳನ್ನು ನೀಡಿರುವುದಕ್ಕೆ ಆನ್‌ಲೈನ್‌ನಲ್ಲಿ ಸಾಕಷ್ಟು ಕನ್ನಡಿಗರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕೃಷ್ಣಂ ಪ್ರಣಯ ಸಖಿ ಹೇಗಿದೆ?

ಈ ಸಿನಿಮಾದ ಕುರಿತು ಗೋಲ್ಡನ್‌ ಸ್ಟಾರ್‌ ಗಣೇಶ್‌ ಅಭಿಮಾನಿಗಳು ಇಷ್ಟಪಟ್ಟಿದ್ದಾರೆ. ಇದು ಮತ್ತೊಂದು ರೋಮಿಯೋ ಸಿನಿಮಾ ಎಂದು ಮಾಹಿತಿ ಹಂಚಿಕೊಂಡಿದ್ದಾರೆ. ಕೆಲವರಿಗೆ ಈ ಸಿನಿಮಾ ಇಷ್ಟವಾಗಿಲ್ಲ. ಇಂಟರ್‌ವಲ್‌ ತನಕ ಗೊಂದಲವಿದೆ. ಬಳಿಕ ಹಾಸ್ಯ ಇತ್ಯಾದಿಗಳು ಚೆನ್ನಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಈ ಸಿನಿಮಾದಲ್ಲಿ ಹುಲಿ ಉಗುರು, ಕರಿಮಣಿ, ಕಾಪಿರೈಟ್ಸ್‌, ಕದ್ದಿರೋ ಮ್ಯೂಸಿಕ್‌ ಇತ್ಯಾದಿಗಳನ್ನು ಎಲ್ಲಾ ಚೆನ್ನಾಗಿ ಬಳಸಿದ್ದಾರೆ. ಒಳ್ಳೆಯ ಕಾಮಿಡಿ ಇದೆ. ಇದನ್ನು ರೋಮಿಯೂ 2 ಎನ್ನಬಹುದು ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ. ಹಿಂದೂಸ್ತಾನ್‌ ಟೈಮ್ಸ್‌ ಕನ್ನಡದಲ್ಲಿ ಈಗಾಗಲೇ ಈ ಸಿನಿಮಾದ ವಿಮರ್ಶೆ ಪ್ರಕಟವಾಗಿದೆ.