Krishnam Pranaya Sakhi X Review: ಗೋಲ್ಡನ್‌ ಸ್ಟಾರ್‌ ಗಣೇಶ್‌ ನಟನೆಯ ಕೃಷ್ಣಂ ಪ್ರಣಯ ಸಖಿ ಹೇಗಿದೆ? ಪ್ರೇಕ್ಷಕರ ವೈವಿಧ್ಯಮಯ ವಿಮರ್ಶೆ
ಕನ್ನಡ ಸುದ್ದಿ  /  ಮನರಂಜನೆ  /  Krishnam Pranaya Sakhi X Review: ಗೋಲ್ಡನ್‌ ಸ್ಟಾರ್‌ ಗಣೇಶ್‌ ನಟನೆಯ ಕೃಷ್ಣಂ ಪ್ರಣಯ ಸಖಿ ಹೇಗಿದೆ? ಪ್ರೇಕ್ಷಕರ ವೈವಿಧ್ಯಮಯ ವಿಮರ್ಶೆ

Krishnam Pranaya Sakhi X Review: ಗೋಲ್ಡನ್‌ ಸ್ಟಾರ್‌ ಗಣೇಶ್‌ ನಟನೆಯ ಕೃಷ್ಣಂ ಪ್ರಣಯ ಸಖಿ ಹೇಗಿದೆ? ಪ್ರೇಕ್ಷಕರ ವೈವಿಧ್ಯಮಯ ವಿಮರ್ಶೆ

Krishnam Pranaya Sakhi Movie Public Review: ಗೋಲ್ಡನ್‌ ಸ್ಟಾರ್‌ ಗಣೇಶ್‌ ನಟನೆಯ ಕೃಷ್ಣಂ ಪ್ರಣಯ ಸಿನಿಮಾದ ಕುರಿತು ಎಲ್ಲೆಡೆ ಪಾಸಿಟಿವ್‌ ವಿಮರ್ಶೆ ಕೇಳಿ ಬರುತ್ತಿದೆ. ಮೊದಲಾರ್ಧ ತುಸು ಗೊಂದಲ ಮೂಡಿಸಿದರೂ, ಸೆಕೆಂಡ್‌ ಆಫ್‌ ಸೂಪರ್‌ ಡೂಪರ್‌ ಪಕ್ಕಾ ಪೈಸಾ ವಸೂಲ್‌ ಎಂದು ಸಿನಿಮಾ ನೋಡಿರುವವರು ವಿಮರ್ಶೆ ಮಾಡಿದ್ದಾರೆ.

Krishnam Pranaya Sakhi X Review: ಕೃಷ್ಣಂ ಪ್ರಣಯ ಸಖಿ ಸಿನಿಮಾ ವಿಮರ್ಶೆ
Krishnam Pranaya Sakhi X Review: ಕೃಷ್ಣಂ ಪ್ರಣಯ ಸಖಿ ಸಿನಿಮಾ ವಿಮರ್ಶೆ

Krishnam Pranaya Sakhi Movie Twitter Review: ದ್ವಾಪರ ದಾಟಲು ಸೇರಿದಂತೆ ವಿವಿಧ ಹಾಡುಗಳ ಮೂಲಕ ನಿರೀಕ್ಷೆ ಹುಟ್ಟುಹಾಕಿರುವ ಕೃಷ್ಣಂ ಪ್ರಣಯ ಸಖಿ ಸಿನಿಮಾದ ಪ್ರೀಮಿಯರ್‌ ಶೋವನ್ನು ಸಾಕಷ್ಟು ಜನರು ಬುಧವಾರ ಸಂಜೆಯೇ ನೋಡಿದ್ದಾರೆ. ಗೋಲ್ಡನ್‌ ಸ್ಟಾರ್‌ ನಟನೆಯ ಈ ಸಿನಿಮಾದ ಕುರಿತು ಎಲ್ಲೆಡೆ ಪ್ರಶಂಸೆ, ಮೆಚ್ಚುಗೆಯ ಸುರಿಮಳೆ ಮೂಡಿದೆ. ಇದೇ ಸಮಯದಲ್ಲಿ ಒಂದಿಷ್ಟು ಜನರಿಗೆ ಈ ಸಿನಿಮಾ ಅಷ್ಟಾಗಿ ಇಷ್ಟವಾಗಿಲ್ಲ. ಮುಂಗಾರು ಮಳೆ ಸಿನಿಮಾದ ನಿರೀಕ್ಷೆ ಇಟ್ಟುಕೊಂಡು ಹೋಗಬೇಡಿ, ರೋಮಿಯೊ ಸಿನಿಮಾ ನಿಮಗೆ ಇಷ್ಟವಾಗಿದ್ದರೆ ಖಂಡಿತವಾಗಿಯೂ ಕೃಷ್ಣಂ ಪ್ರಣಯ ಸಖಿ ಇಷ್ಟವಾಗುತ್ತದೆ ಎಂದಿದ್ದಾರೆ. ಪ್ರೀತಿ ಮತ್ತು ಕುಟುಂಬ ಸಂಬಂಧದ ಶಕ್ತಿಯನ್ನು ತೋರಿಸುವಂತಹ ಸುಂದರ ಸಿನಿಮಾ ಎಂದು ಕೆಲವರು ವಿಮರ್ಶೆ ಮಾಡುತ್ತಾರೆ. ಕೃಷ್ಣಂ ಪ್ರಣಯ ಸಖಿ ಮೂಲಕ ಮತ್ತೆ ಗೋಲ್ಡನ್‌ ಸ್ಟಾರ್‌ ಗಣೇಶ್‌ ಹಿಟ್‌ ಸಿನಿಮಾವೊಂದನ್ನು ನೀಡಿದ್ದಾರೆ. ದಂಡುಪಾಳ್ಯದಂತಹ ಕಿಲ್ಲರ್‌ ಸಿನಿಮಾ ನೀಡಿರುವ ನಿರ್ದೇಶಕ ಶ್ರೀನಿವಾಸ್‌ ರಾಜು ಕೃಷ್ಣಂ.. ಮೂಲಕ ಎಲ್ಲರಿಗೆ ಅಚ್ಚರಿ ನೀಡಿದ್ದಾರೆ. ನಗುವಿನೊಂದಿಗೆ ಭಾವುಕವಾಗಿ ಸಿನಿಮಾ ಕಾಡುತ್ತದೆ ಎಂದು ಕೃಷ್ಣಂ ಪ್ರಣಯ ಸಖಿ ಸಿನಿಮಾದ ವಿಮರ್ಶೆಯನ್ನು ಎಕ್ಸ್‌ನಲ್ಲಿ ಮಾಡಿದ್ದಾರೆ. ಬನ್ನಿ ಸೋಷಿಯಲ್‌ ಮೀಡಿಯಾದಲ್ಲಿ ಕೃಷ್ಣಂ ಪ್ರಣಯ ಸಖಿ ಕುರಿತು ಏನೆಲ್ಲ ವಿಮರ್ಶೆಗಳಿವೆ ಎಂದು ನೋಡೋಣ.

ಕೃಷ್ಣಂ ಪ್ರಣಯ ಸಖಿ ಸಿನಿಮಾ ವಿಮರ್ಶೆ

"ಇತ್ತೀಚೆಗೆ ಬಿಡುಗಡೆಯಾದ ಡೀಸೆಂಟ್‌ ಫೀಲ್‌ ಗುಡ್‌ ಸಿನಿಮಾ. ಸಿನಿಮಾದ ಕಥೆ ತುಂಬಾ ಹೊಸತು ಎಂದಲ್ಲ. ಆದರೆ, ಸಿನಿಮಾವನ್ನು ಪ್ರಸ್ತುತಪಡಿಸಿದ ರೀತಿ ಇಷ್ಟವಾಗುತ್ತದೆ. ಮೊದಲಾರ್ಥ ತುಸು ಗೊಜಲುಗೊಜಲಾಗಿದೆ. ಇಂಟರ್‌ವಲ್‌ನಿಂದ ಸಿನಿಮಾ ಮುಗಿಯೋ ತನಕ ಚಿತ್ರ ತುಂಬಾ ಇಷ್ಟವಾಗುತ್ತದೆ. ಇಂಟರ್‌ವಲ್‌ ಮುಗಿಯುವಾಗ ಸಾಕಷ್ಟು ಉತ್ತರವಿಲ್ಲದ ಪ್ರಶ್ನೆಗಳು, ಗೊಂದಲಗಳು ಉಳಿಯುತ್ತವೆ. ಆದರೆ, ದ್ವಿತೀಯಾರ್ಧ ಆರಂಭವಾದ ಬಳಿಕ ಎಲ್ಲಾ ಪ್ರಶ್ನೆಗಳಿಗೂ ಉತ್ತರ ದೊರಕುತ್ತದೆ. ಇದು ಸಂಪೂರ್ಣವಾಗಿ ಕಾಮಿಡಿ ರೋಲರ್‌ ಕೋಸ್ಟರ್‌ ಸಿನಿಮಾ. ನನಗೆ ಮತ್ತು ನನ್ನ ಸುತ್ತಮುತ್ತ ಇದ್ದ ಸಾಕಷ್ಟು ಜನರಿಗೆ ಈ ಸಿನಿಮಾ ಇಷ್ಟವಾಗಿದೆ. ಈ ಸಿನಿಮಾದ ಕ್ಲೈಮ್ಯಾಕ್ಸ್‌ ನಿರೀಕ್ಷೆ ಮಾಡುವಂತೆ ಇದ್ದರೂ ತೃಪ್ತಿ ನೀಡುತ್ತದೆ. ಕೆಲವೊಂದು ಪ್ರಶ್ನೆಗಳಿಗೆ ಇನ್ನೂ ಉತ್ತರ ದೊರಕದೆ ಸಿನಿಮಾ ಸಡನ್‌ ಕೊನೆಗೊಂಡಂತೆ ಭಾಸವಾಗುತ್ತದೆ.

"ಒಟ್ಟಾರೆ, ಸೆಕೆಂಡ್‌ ಹಾಫ್‌ ತೃಪ್ತಿ ನೀಡುತ್ತದೆ. ಹೊಟ್ಟೆ ತುಂಬಾ ನಗು ನೀಡುತ್ತೆ. ಈ ಸಿನಿಮಾವನ್ನು ಥಿಯೇಟರ್‌ನಲ್ಲಿ ನೋಡಿ, ಗುಂಪಾಗಿ ಹೋಗಿ ನೋಡಿ. ಮಜಾ ಸಿಗುತ್ತದೆ. ನನಗೆ ಹೀರೋಯಿನ್‌ ಮೇಲೆ ತುಸು ಕ್ರಶ್‌ ಆಗಿದೆ. ಗಣೇಶ್‌ ಯಾವತ್ತಿನಂತೆ ಬೆಸ್ಟ್‌ ಆಗಿ ನಟಿಸಿದ್ದಾರೆ. ಅರ್ಜುನ್‌ ಜನ್ಯ ಸಂಗೀತ ಹೃದಯವನ್ನು ತಟ್ಟುತ್ತದೆ. ದ್ವಾಪರ ದಾಟಲು ಹಾಡು ಆರಂಭವಾದಗ ಎಲ್ಲಾ ಸಿನಿಮಾ ವೀಕ್ಷಕರು ಸಂಭ್ರಮಿಸಿದ್ದಾರೆ. ಸಾಧು ಕೋಕಿಲಾರ ಬಗ್ಗೆ ಏನೂ ಹೇಳಬೇಕಿಲ್ಲ. ಬೆಂಕಿ" ಎಂದು ಎಕ್ಸ್‌ನಲ್ಲಿ ಆರ್‌ಎಸ್‌ಕೆ ಖಾತೆಯಿಂದ ರಿವ್ಯೂ ಮಾಡಲಾಗಿದೆ.

ಕಳೆದ ವಾರ ಭೀಮ, ಈಗ ಕೃಷ್ಣಂ ಪ್ರಣಯ ಸಖಿ, ಇಂದಿನಿಂದ ಕನ್ನಡ ಬಾಕ್ಸ್‌ ಆಫೀಸ್‌ನಲ್ಲಿ ಹಬ್ಬ. ಸಿನಿಮಾ ಬೆಂಕಿ ಎಂದು ಸೋಷಿಯಲ್‌ ಮೀಡಿಯಾದಲ್ಲಿ ಬಳಕೆದಾರರೊಬ್ಬರು ಸಿನಿಮಾ ನೋಡಿ ವಿಮರ್ಶೆ ಮಾಡಿದ್ದಾರೆ.

 

ನಿಮಗೆ ರಿಸ್ಕ್‌ ತೆಗೆದುಕೊಳ್ಳಲು ಇಷ್ಟವಾದರೆ ಕೃಷ್ಣಂ ಪ್ರಣಯ ಸಖಿ ಸಿನಿಮಾ ನೋಡಿ ಎಂದು ಎಕ್ಸ್‌ ಬಳಕೆದಾರೊಬ್ಬರು ಸಿನಿಮಾದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ರೋಮಿಯೋ 2ನಂತೆ ಚೆನ್ನಾಗಿದೆ

ಈ ಸಿನಿಮಾದಲ್ಲಿ ಹುಲಿ ಉಗುರು, ಕರಿಮಣಿ, ಕಾಪಿರೈಟ್ಸ್‌, ಕದ್ದಿರೋ ಮ್ಯೂಸಿಕ್‌ ಇತ್ಯಾದಿಗಳನ್ನು ಎಲ್ಲಾ ಚೆನ್ನಾಗಿ ಬಳಸಿದ್ದಾರೆ. ಒಳ್ಳೆಯ ಕಾಮಿಡಿ ಇದೆ. ಇದನ್ನು ರೋಮಿಯೂ 2 ಎನ್ನಬಹುದು ಎಂದು ಇನ್ನೊಬ್ಬರು ಹೊಗಳಿದ್ದಾರೆ.

ಕೂಲ್‌ ಸಿನಿಮಾ, ಖುಷಿ ಕೊಡುತ್ತದೆ

ಡೈಲಾಗ್‌ಗಳು ಕೂಲ್‌ ಖುಷಿ ನೀಡುತ್ತದೆ. ಸ್ಕ್ರೀನ್‌ಪ್ಲೇ ಸಿನಿಮಾ ನೋಡಿಸಿಕೊಂಡು ಹೋಗುವಂತೆ ಮಾಡುತ್ತದೆ. ನಿರ್ದೇಶನ ಮತ್ತು ಕ್ಯಾಮೆರಾ ವರ್ಕ್‌ ಟಾಪ್‌ ಆಗಿದೆ ಎಂದು ಇನ್ನೊಬ್ಬರು ವಿಮರ್ಶೆ ಮಾಡಿದ್ದಾರೆ.

ಇದು ಖಂಡಿತವಾಗಿಯೂ ನಗು, ಭಾವುಕ ಸಿನಿಮಾ. ಖಂಡಿತವಾಗಿಯೂ ಕುಟುಂಬಕ್ಕೆ ಮನರಂಜನೆ ನೀಡುವಂತಹ ಸಿನಿಮಾ ಎಂದು ಇನ್ನೊಬ್ಬರು ವಿಮರ್ಶೆ ಮಾಡಿದ್ದಾರೆ.

ಕೃಷ್ಣ ನಾಯಕನ ಹೆಸರು. ಪ್ರಣಯ ಹೀರೋಯಿನ್‌ ಹೆಸರು. ಸಖಿ ಸಿನಿಮಾದ ಕಥೆ ಎಂದು ಮತ್ತೊಬ್ಬರು ಮೂರು ಸಾಲಿನಲ್ಲಿ ಈ ಚಿತ್ರದ ವಿಮರ್ಶೆ ಮಾಡಿದ್ದಾರೆ.

ಸ್ವಾತಂತ್ರ್ಯ ದಿನಾಚರಣೆ, ವರಮಹಾಲಕ್ಷ್ಮಿ ಹಬ್ಬ, ವೀಕೆಂಡ್‌ ರಜೆಯ ಸಮಯದಲ್ಲಿ ಕನ್ನಡ ಪ್ರೇಕ್ಷಕರನ್ನು ಥಿಯೇಟರ್‌ಗೆ ಕರೆಸೋ ಶಕ್ತಿ ಈ ಸಿನಿಮಾಕ್ಕೆ ಇದೆ ಎಂದು ಬಹುತೇಕ ಎಕ್ಸ್‌ ವಿಮರ್ಶೆಗಳನ್ನು ನೋಡಿದಾಗ ಅನಿಸುತ್ತದೆ.

ಪೇಯ್ಡ್‌ ವಿಮರ್ಶೆಗಳ ಹಾವಳಿ!

ಕೃಷ್ಣಂ ಪ್ರಣಯ ಸಖಿ ಸಿನಿಮಾದ ಕುರಿತು ಒಂದಿಷ್ಟು ಜನರು ನೈಜ ಅಭಿಪ್ರಾಯಗಳನ್ನು ದಾಖಲಿಸಿದ್ದಾರೆ. ಎಕ್ಸ್‌ನಲ್ಲಿ ಸಾಕಷ್ಟು ಪೇಯ್ಡ್‌ ವಿಮರ್ಶೆಗಳು ಬಂದಿವೆ. ಹಿಂದಿ ಟ್ವಿಟ್ಟರ್‌ ಖಾತೆಗಳಿಂದ ಸಾಕಷ್ಟು ವಿಮರ್ಶೆಗಳಿವೆ. ಇದರ ಅವಶ್ಯಕತೆ ಇತ್ತಾ? ಎಂದು ಸಾಕಷ್ಟು ಜನರು ಟ್ವಿಟ್ಟರ್‌ನಲ್ಲಿ ಪ್ರಶ್ನಿಸಿದ್ದಾರೆ. ಅನುಮಾನಸ್ಪದವಾಗಿ ಕಂಡ ಟ್ವಿಟ್ಟರ್‌ ರಿವ್ಯೂಗಳನ್ನು ನಾವು ಕೂಡ ಇಲ್ಲಿ ಪ್ರಕಟಿಸಿಲ್ಲ.

ಸಿನಿಮಾದ ಹೆಸರು: ಕೃಷ್ಣಂ ಪ್ರಣಯ ಸಖಿ

ನಿರ್ದೇಶಕರು: ಶ್ರೀನಿವಾಸ ರಾಜು

ತಾರಾಗಣ: ಗೋಲ್ಡನ್‌ ಸ್ಟಾರ್‌ ಗಣೇಶ, ಮಾಲವಿಕ ನಾಯರ್‌, ಶರಣ್ಯ ಶೆಟ್ಟಿ, ಶಶಿ ಕುಮಾರ್‌, ಗಿರೀಶ್‌ ಶಿವಣ್ಣ, ರಂಗಾಯಣ ರಘು, ಸಾಧು ಕೋಕಿಲಾ, ಕುರಿ ಪ್ರತಾಪ್‌ ಮುಂತಾದವರು

ಸಂಗೀತ: ಅರ್ಜುನ್‌ ಜನ್ಯ

ನಿರ್ಮಾಪಕರು: ಪ್ರಶಾಂತ್‌ ಜಿ ರುದ್ರಪ್ಪ

ಸಂಕಲನ: ಕೆಎಂ ಪ್ರಕಾಶ್‌

ರೇಟಿಂಗ್‌: 3.5 (5) ಇದು ಸೋಷಿಯಲ್‌ ಮೀಡಿಯಾದಲ್ಲಿ ಕೃಷ್ಣಂ ಪ್ರಣಯ ಸಖಿಗೆ ಬಹುತೇಕರು ನೀಡಿರುವ ರೇಟಿಂಗ್‌. ಕೆಲವರು 3 ಸ್ಟಾರ್‌ ರೇಟಿಂಗ್‌ ಕೂಡ ನೀಡಿದ್ದಾರೆ. 

 

Whats_app_banner