Salaar Box Office: ಮೊದಲ ದಿನದ ಗಳಿಕೆಯಲ್ಲಿಯೇ ‘ಸಲಾರ್‌’ ಇತಿಹಾಸ! ಹೊಂಬಾಳೆ ಬೊಕ್ಕಸಕ್ಕೆ ಬಂತು ಸಾರ್ವಕಾಲಿಕ ಅತೀ ಹೆಚ್ಚು ಮೊತ್ತ
ಕನ್ನಡ ಸುದ್ದಿ  /  ಮನರಂಜನೆ  /  Salaar Box Office: ಮೊದಲ ದಿನದ ಗಳಿಕೆಯಲ್ಲಿಯೇ ‘ಸಲಾರ್‌’ ಇತಿಹಾಸ! ಹೊಂಬಾಳೆ ಬೊಕ್ಕಸಕ್ಕೆ ಬಂತು ಸಾರ್ವಕಾಲಿಕ ಅತೀ ಹೆಚ್ಚು ಮೊತ್ತ

Salaar Box Office: ಮೊದಲ ದಿನದ ಗಳಿಕೆಯಲ್ಲಿಯೇ ‘ಸಲಾರ್‌’ ಇತಿಹಾಸ! ಹೊಂಬಾಳೆ ಬೊಕ್ಕಸಕ್ಕೆ ಬಂತು ಸಾರ್ವಕಾಲಿಕ ಅತೀ ಹೆಚ್ಚು ಮೊತ್ತ

ಪ್ರಭಾಸ್‌ ನಟನೆಯ ಸಲಾರ್‌ ಸಿನಿಮಾ ಮೊದಲ ದಿನವೇ ಬಾಕ್ಸ್‌ ಆಫೀಸ್‌ನಲ್ಲಿ ಬಿರುಗಾಳಿ ಎಬ್ಬಿಸಿದೆ. ಕಲೆಕ್ಷನ್‌ ವಿಚಾರದಲ್ಲಿ ಬಾಕ್ಸ್‌ ಬಾಕ್ಸ್‌ ಆಫೀಸ್‌ ಕೊಳ್ಳೆ ಹೊಡೆದಿದೆ. ಅದ್ಯಾವ ಮಟ್ಟಿಗೆ ಎಂದರೆ, ಈ ವರೆಗೂ ಬೇರಾವ ಭಾರತೀಯ ಸಿನಿಮಾ ಮಾಡದ ನೂತನ ಇತಿಹಾಸವನ್ನೇ ಬರೆದಿದೆ ಈ ಸಿನಿಮಾ.

Salaar Box Office: ಮೊದಲ ದಿನದ ಗಳಿಕೆಯಲ್ಲಿಯೇ ‘ಸಲಾರ್‌’ ಇತಿಹಾಸ! ಹೊಂಬಾಳೆ ಬೊಕ್ಕಸಕ್ಕೆ ಬಂತು ಸಾರ್ವಕಾಲಿಕ ಅತೀ ಹೆಚ್ಚು ಮೊತ್ತ
Salaar Box Office: ಮೊದಲ ದಿನದ ಗಳಿಕೆಯಲ್ಲಿಯೇ ‘ಸಲಾರ್‌’ ಇತಿಹಾಸ! ಹೊಂಬಾಳೆ ಬೊಕ್ಕಸಕ್ಕೆ ಬಂತು ಸಾರ್ವಕಾಲಿಕ ಅತೀ ಹೆಚ್ಚು ಮೊತ್ತ

Salaar Box Office Collection Day 1: ಪ್ರಶಾಂತ್‌ ನೀಲ್‌ ಮತ್ತು ಪ್ರಭಾಸ್‌ ಕಾಂಬಿನೇಷನ್‌ನಲ್ಲಿ ಮೂಡಿಬಂದ ಸಲಾರ್‌ ಸಿನಿಮಾ ಶುಕ್ರವಾರ (ಡಿ. 22) ವಿಶ್ವದಾದ್ಯಂತ ಬಿಡುಗಡೆ ಆಗಿದೆ. ಭಾರತ ಮಾತ್ರವಲ್ಲದೆ, ವಿದೇಶಿ ನೆಲದಲ್ಲೂ ಸಲಾರ್‌ ಅಕ್ಷರಶಃ ಅಬ್ಬರಿಸುತ್ತಿದೆ. ಮಾಸ್‌ ಪ್ರಿಯರ ತಟ್ಟೆಗೆ ಬಾಡೂಟವನ್ನೇ ಮಾಡಿ ಬಡಿಸಿದೆ ಹೊಂಬಾಳೆ ಫಿಲಂಸ್‌. ಸಿನಿಮಾ ನೋಡಿದ ಪ್ರೇಕ್ಷಕ ನಿಬ್ಬೆರಗಾಗಿದ್ದಾನೆ. ಹಾಲಿವುಡ್‌ ರೇಂಜಿನ ಸಿನಿಮಾ ಎಂದು ಕೊಂಡಾಡುತ್ತಿದ್ದಾನೆ. ಹೀಗೆ ಒಳ್ಳೆಯ ರೆಸ್ಪಾನ್ಸ್‌ ಜತೆಗೆ ಕಲೆಕ್ಷನ್‌ ವಿಚಾರದಲ್ಲೂ ಹೊಸದೊಂದು ಇತಿಹಾಸ ಬರೆದಿದೆ ಸಲಾರ್.

ಮುಂಗಡ ಬುಕಿಂಗ್‌ ವಿಚಾರದಲ್ಲಿ ದೊಡ್ಡ ಮಟ್ಟದಲ್ಲಿ ಟಿಕೆಟ್‌ಗಳನ್ನು ಸೇಲ್‌ ಮಾಡಿಕೊಂಡಿದ್ದ ಸಲಾರ್‌ ಸಿನಿಮಾಕ್ಕೆ, ನಿರೀಕ್ಷೆಗೂ ಮೀರಿ ಮೊದಲ ದಿನ ಹಣ ಹರಿದು ಬಂದಿದೆ. ಬಾಕ್ಸ್‌ ಆಫೀಸ್‌ ಪಂಡಿತರೇ ಸಲಾರ್‌ನ ಮೊದಲ ದಿನದ ಅಚ್ಚರಿಯ ನಂಬರ್‌ ಕಂಡು ದಂಗಾಗಿದ್ದಾರೆ. ಮುಂಗಡ ಟಿಕೆಟ್‌ ಬುಕಿಂಗ್‌ ಮೂಲಕವೇ ಭಾರತದಲ್ಲಿ 42 ಕೋಟಿ ರೂಪಾಯಿ ಬಾಚಿಕೊಂಡಿದ್ದ ಸಲಾರ್‌ ಸಿನಿಮಾ, ವಿದೇಶಿ ಬುಕಿಂಗ್‌ ಮೂಲಕ 7 ಕೋಟಿ ಗಳಿಸಿತ್ತು. ಇದು ಆನ್‌ಲೈನ್‌ ಗಳಿಕೆಯ ಮೊತ್ತವಾದರೆ, ಆಫ್‌ಲೈನ್‌ ಎಷ್ಟು? ಸಲಾರ್‌ ಸಿನಿಮಾ ಮೊದಲ ದಿನ ಗಳಿಸಿದ್ದೆಷ್ಟು? ಇಲ್ಲಿದೆ ಮಾಹಿತಿ.

ಆಕ್ಷನ್ ಡ್ರಾಮಾ ಶೈಲಿಯಲ್ಲಿ ಮೂಡಿಬಂದ ಸಲಾರ್‌ ಸಿನಿಮಾದಲ್ಲಿ ಪ್ರಭಾಸ್ ಮತ್ತು ಪೃಥ್ವಿರಾಜ್ ಸುಕುಮಾರನ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. 'ಕೆಜಿಎಫ್' ನಿರ್ದೇಶಕ ಪ್ರಶಾಂತ್ ನೀಲ್ ನಿರ್ದೇಶನದ ಈ ಸಲಾರ್‌ ಜಗತ್ತಿನಾದ್ಯಂತ ಬಹು ಭಾಷೆಗಳಲ್ಲಿ ಬಿಡುಗಡೆಯಾಗಿದೆ. ತೆಲುಗು, ಕನ್ನಡ, ತಮಿಳು, ಮಲಯಾಳಂ ಮತ್ತು ಹಿಂದಿ ಭಾಷೆಯಲ್ಲಿ ತೆರೆಕಂಡಿದೆ. ಹೀಗೆ ಬಿಡುಗಡೆಯಾದ ಮೊದಲ ದಿನವೇ ವಿಶ್ವದಾದ್ಯಂತ ಬರೋಬ್ಬರಿ 180 ಕೋಟಿ ರೂಪಾಯಿಯನ್ನು ಗಳಿಸಿ ಹೊಸ ಇತಿಹಾಸ ಬರೆದಿದಿದೆ ಸಲಾರ್‌ ಸಿನಿಮಾ.

ಭಾರತವೊಂದರಲ್ಲಿಯೇ 135 ಕೋಟಿ ರೂ. ಕಲೆಕ್ಷನ್‌ ಸಲಾರ್‌ ಸಿನಿಮಾಕ್ಕೆ ಹರಿದುಬಂದಿದೆ. ಜಾಗತಿಕ ಮಾರುಕಟ್ಟೆಯ ಗಳಿಕೆ 45 ಕೋಟಿ ರೂ.ವನ್ನು ಇದಕ್ಕೆ ಸೇರಿಸಿದರೆ, ಮೊದಲ ದಿನ 180 ಕೋಟಿ ರೂ. ಸಲಾರ್‌ ಬೊಕ್ಕಸಕ್ಕೆ ಬಂದಿದೆ. ಈ ಮೂಲಕ ಮೊದಲ ದಿನದ ಗಳಿಕೆಯಲ್ಲಿ ಭಾರತೀಯ ಸಿನಿಮಾ ಇತಿಹಾಸದಲ್ಲಿ ಬೇರಾವ ಸಿನಿಮಾ ಮಾಡದ ಹೊಸ ದಾಖಲೆಯನ್ನು ಸಲಾರ್‌ ಸಿನಿಮಾ ಮಾಡಿದೆ. ಇದೇ ವರ್ಷ ಶಾರುಖ್‌ ಖಾನ್‌ ಅವರ ಜವಾನ್‌ ಸಿನಿಮಾ ಮೊದಲ ದಿನ 129 ಕೋಟಿ ಕಲೆಕ್ಷನ್‌ ಮಾಡಿತ್ತು. ಅದೇ ಈ ವರೆಗಿನ ಮೊದಲ ದಿನದ ಸಾರ್ವಕಾಲಿಕ ಅತೀ ಹೆಚ್ಚು ಗಳಿಕೆಯಾಗಿತ್ತು. ಈಗ ಅದು ಸಲಾರ್‌ ಪಾಲಾಗಿದೆ.

ಸೋತು ಸುಣ್ಣವಾಗಿದ್ದ ಪ್ರಭಾಸ್‌ಗೆ ಸಿಕ್ತು ಗೆಲುವಿನ ಟಾನಿಕ್!‌

ಬಾಹುಬಲಿ ಸರಣಿ ಸಿನಿಮಾ ಬಳಿಕ ಒಂದೇ ಒಂದು ಗೆಲುವಿನ ರುಚಿ ಕಾಣದ ಪ್ರಭಾಸ್‌ಗೆ ಇದೀಗ ಸಲಾರ್‌ ಕೈ ಹಿಡಿದು ಮೇಲಕ್ಕೆತ್ತಿದೆ. ಸಾಹೋ ಮಕಾಡೆ ಮಲಗಿದರೆ, ಅದಾದ ಬಳಿಕ ಬಂದ ರಾಧೆ ಶ್ಯಾಮ್‌ಗೂ ಹೇಳಿಕೊಳ್ಳುವ ಗೆಲುವು ಸಿಗಲಿಲ್ಲ. ಟ್ರೋಲ್‌ ಮೂಲಕವೇ ಸುದ್ದಿಯಾದ ಬಹುಕೋಟಿ ವೆಚ್ಚದ ಆದಿಪುರುಷ್‌ ಸಹ ಅವರ ಕೈ ಹಿಡಿಯಲಿಲ್ಲ. ಈಗ ಸಲಾರ್‌ ಒಂದೇ ಸಿನಿಮಾ ಸರಣಿ ಸೋಲುಗಳಿಂದ ಅವರನ್ನು ಆಚೆ ತಂದಿದೆ. ಬಾಕ್ಸ್‌ ಆಫೀಸ್‌ನಲ್ಲಿ ಪ್ರಭಾಸ್‌ ಮತ್ತೆ ಪುಟಿದೆದ್ದು ನಿಂತಿದ್ದಾರೆ.

ಹೆಚ್ಚಿತು ಎರಡನೇ ಭಾಗದ ಮೇಲಿನ ನಿರೀಕ್ಷೆ

ಸಲಾರ್‌ ಸೀಸ್‌ ಫೈರ್‌ ಬಳಿಕ ಸಲಾರ್‌ ಭಾಗ 2ರ ಅಡಿ ಬರಹ ರಿವೀಲ್‌ ಆಗಿದೆ. ಪಾರ್ಟ್‌ 2ಗೆ 'ಶೌರ್ಯಾಂಗ ಪರ್ವಂ' ಎಂದು ಹೆಸರಿಡಲಾಗಿದೆ. ದೇವನಾಗಿ ಪ್ರಭಾಸ್, ವರದರಾಜ್‌ ಮನ್ನಾರ್‌ ಪಾತ್ರದಲ್ಲಿ ಪೃಥ್ವಿರಾಜ್ ಸುಕುಮಾರನ್, ರಾಜ ಮನ್ನಾರ್‌ ಪಾತ್ರದಲ್ಲಿ ಜಗಪತಿ ಬಾಬು ನಟಿಸಿದ್ದಾರೆ. ಆದ್ಯಾಳಾಗಿ ಶ್ರುತಿ ಹಾಸನ್‌ ನಟಿಸಿದ್ದಾರೆ. ತೆಲುಗು, ಕನ್ನಡ, ಹಿಂದಿ, ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲಿ ಸಲಾರ್‌ ಬಿಡುಗಡೆ ಆಗಿದೆ.

Whats_app_banner