Salaar Day 2 Collection: ‘ಸಲಾರ್‌​’ ಕಲೆಕ್ಷನ್‌ನಲ್ಲಿ ಗಣನೀಯ ಇಳಿಕೆ! ಹೀಗಿದ್ದರೂ ಸೃಷ್ಟಿಯಾಯ್ತು ಹೊಸ ಮೈಲಿಗಲ್ಲು
ಕನ್ನಡ ಸುದ್ದಿ  /  ಮನರಂಜನೆ  /  Salaar Day 2 Collection: ‘ಸಲಾರ್‌​’ ಕಲೆಕ್ಷನ್‌ನಲ್ಲಿ ಗಣನೀಯ ಇಳಿಕೆ! ಹೀಗಿದ್ದರೂ ಸೃಷ್ಟಿಯಾಯ್ತು ಹೊಸ ಮೈಲಿಗಲ್ಲು

Salaar Day 2 Collection: ‘ಸಲಾರ್‌​’ ಕಲೆಕ್ಷನ್‌ನಲ್ಲಿ ಗಣನೀಯ ಇಳಿಕೆ! ಹೀಗಿದ್ದರೂ ಸೃಷ್ಟಿಯಾಯ್ತು ಹೊಸ ಮೈಲಿಗಲ್ಲು

ಪ್ರಭಾಸ್‌ ಅಭಿನಯದ ಸಲಾರ್‌ ಸಿನಿಮಾ ಬಾಕ್ಸ್‌ ಆಫೀಸ್‌ನಲ್ಲಿ ಧೂಳೆಬ್ಬಿಸುತ್ತಿದೆ. ಮೊದಲ ದಿನ ದಾಖಲೆಯ 178 ಕೋಟಿ ರೂ. ಗಳಿಸಿರುವ ಈ ಸಿನಿಮಾ ಎರಡನೇ ದಿನವೂ ದೊಡ್ಡ ಮೊತ್ತವನ್ನೇ ಪಡೆದುಕೊಂಡಿದೆ. ಆದರೆ, ಅಷ್ಟೇ ಪ್ರಮಾಣದಲ್ಲಿ ಇಳಿಕೆಯೂ ಆಗಿದೆ.

Salaar Day 2 Collection: ‘ಸಲಾರ್‌​’ ಕಲೆಕ್ಷನ್‌ನಲ್ಲಿ ಗಣನೀಯ ಇಳಿಕೆ! ಹೀಗಿದ್ದರೂ ಸೃಷ್ಟಿಯಾಯ್ತು ಹೊಸ ಮೈಲಿಗಲ್ಲು
Salaar Day 2 Collection: ‘ಸಲಾರ್‌​’ ಕಲೆಕ್ಷನ್‌ನಲ್ಲಿ ಗಣನೀಯ ಇಳಿಕೆ! ಹೀಗಿದ್ದರೂ ಸೃಷ್ಟಿಯಾಯ್ತು ಹೊಸ ಮೈಲಿಗಲ್ಲು

Salaar Box Office Collection Day 2: ಹೊಂಬಾಳೆ ಫಿಲಂಸ್‍ ನಿರ್ಮಾಣದ ಪ್ಯಾನ್‍ ಇಂಡಿಯಾ ಚಿತ್ರ ‘ಸಲಾರ್’, ಶುಕ್ರವಾರ ಜಗತ್ತಿನಾದ್ಯಂತ ಬಿಡುಗಡೆಯಾಗಿ ಪ್ರೇಕ್ಷಕರಿಂದ ಮೆಚ್ಚುಗೆ ಪಡೆದಿದೆ. ಚಿತ್ರವು ಮೊದಲ ದಿನವೇ 178.7 ಕೋಟಿ ರೂ ಸಂಪಾದಿಸುವ ಮೂಲಕ ಭಾರತೀಯ ಚಿತ್ರರಂಗದಲ್ಲಿ, ಮೊದಲ ದಿನ ಅತೀ ಹೆಚ್ಚು ಗಳಿಕೆ ಮಾಡಿದ ಚಿತ್ರ ಎಂಬ ಹೊಸ ದಾಖಲೆಯನ್ನು ತನ್ನದಾಗಿಸಿಕೊಂಡಿದೆ. ಕನ್ನಡದ ನಿರ್ಮಾಣದ ಸಂಸ್ಥೆಯೊಂದು ರಾಷ್ಟ್ರ ಮಟ್ಟದಲ್ಲಿ ಇಂಥದ್ದೊಂದು ದಾಖಲೆ ಮಾಡಿರುವುದು ಕನ್ನಡ ಚಿತ್ರರಂಗಕ್ಕೆ ಮತ್ತು ಕನ್ನಡಿಗರಿಗೂ ಇದು ಹೆಮ್ಮೆಯ ವಿಚಾರ.

ಮೊದಲ ದಿನ ಭಾರತವೊಂದರಲ್ಲಿಯೇ 90 ಪ್ಲಸ್‌ ಕೋಟಿ ರೂ. ಕಲೆಕ್ಷನ್‌ ಸಲಾರ್‌ ಸಿನಿಮಾಕ್ಕೆ ಹರಿದುಬಂದಿದೆ. ಜಾಗತಿಕ ಮಾರುಕಟ್ಟೆಯಲ್ಲಿಯೂ ಕೋಟಿ ಕೋಟಿ ಬಾಚಿಕೊಂಡಿರುವ ಸಲಾರ್‌ ಸಿನಿಮಾ ಮೊದಲ ದಿನ 178 ಕೋಟಿ ರೂ. ಗಳಿಸಿದೆ. ಈ ಮೂಲಕ ಮೊದಲ ದಿನದ ಗಳಿಕೆಯಲ್ಲಿ ಭಾರತೀಯ ಸಿನಿಮಾ ಇತಿಹಾಸದಲ್ಲಿ ಬೇರಾವ ಸಿನಿಮಾ ಮಾಡದ ಹೊಸ ದಾಖಲೆಯನ್ನು ಸಲಾರ್‌ ಸಿನಿಮಾ ಮಾಡಿದೆ. ಇದೀಗ ಎರಡನೇ ದಿನದ ಸರದಿ. ಎರಡನೇ ದಿನಕ್ಕೆ ಸಲಾರ್‌ ಬೊಕ್ಕಸಕ್ಕೆ ಬಂದ ಮೊತ್ತ ಎಷ್ಟು?

ಎರಡನೇ ದಿನಕ್ಕೆ ಗಳಿಕೆಯಲ್ಲಿ ಕುಸಿತ

ಮೊದಲ ದಿನ 178 ಕೋಟಿ ಗಳಿಸಿದ ಸಲಾರ್‌ ಸಿನಿಮಾ ಗಲ್ಲಾಪೆಟ್ಟಿಗೆಯಲ್ಲಿ ಹಲವು ದಾಖಲೆಯನ್ನು ತನ್ನದಾಗಿಸಿಕೊಂಡಿತು. ಬಿಡುಗಡೆಯಾದ ಮೊದಲ ದಿನದಂದು 90 ಕೋಟಿ ರೂಪಾಯಿ ಗಳಿಸಿದ್ದ, ನಿರ್ದೇಶಕ ಪ್ರಶಾಂತ್ ನೀಲ್ ನಿರ್ದೆಶನದ ಸಲಾರ್‌ ಸಿನಿಮಾ ಎರಡನೇ ದಿನದಲ್ಲಿ ಶೇ. 60 ರಷ್ಟು ಕುಸಿತ ಕಂಡಿದೆ. ಬಾಕ್ಸ್‌ ಆಫೀಸ್‌ ಮಾಹಿತಿ ನೀಡು ಸ್ಯಾಕ್ನಿಲ್ಕ್ ವರದಿ ಪ್ರಕಾರ, ಸಲಾರ್ ಸಿನಿಮಾ ಶನಿವಾರ 55 ಕೋಟಿ ರೂ. ಸಂಗ್ರಹಿಸಿದೆ ಎಂದಿದೆ. ಭಾರತದಲ್ಲಿ ಚಿತ್ರದ ಒಟ್ಟು ಕಲೆಕ್ಷನ್ 145.70 ಕೋಟಿ ರೂಗೆ ತಲುಪಿದೆ. ಈ ಮೂಲಕ ಎರಡೇ ದಿನದಲ್ಲಿ 150 ಕೋಟಿಯ ಹತ್ತಿರ ಬಂದು ಹೊಸ ಮೈಲಿಗಲ್ಲನ್ನೂ ಈ ಸಿನಿಮಾ ಸೃಷ್ಟಿಸಿದೆ.

ಯಾವ ಭಾಷೆಯಲ್ಲಿ ಎಷ್ಟು ಕಲೆಕ್ಷನ್‌?

ಒಟ್ಟು ಐದು ಭಾಷೆಗಳಲ್ಲಿ ಸಲಾರ್‌ ಸಿನಿಮಾ ಬಿಡುಗಡೆ ಆಗಿದೆ. ಭಾರತದಲ್ಲಿ 90 ಕೋಟಿಗೂ ಅಧಿಕ ಕಲೆಕ್ಷನ್‌ ಮಾಡಿ, ಈ ವರೆಗೂ ಬೇರಾವ ಸಿನಿಮಾ ಮಾಡದ ದಾಖಲೆಯನ್ನು ಈ ಸಿನಿಮಾ ನಿರ್ಮಿಸಿದೆ. ಇದೀಗ ಭಾಷಾವಾರ ಮೊದಲ ದಿನದ ಕಲೆಕ್ಷನ್‌ ಲೆಕ್ಕ ನೋಡುವುದಾದರೆ, ತೆಲುಗಿನಲ್ಲಿ 66.75 ಕೋಟಿ, ಮಲಯಾಳಂನಲ್ಲಿ 3.55 ಕೋಟಿ ರೂ., ತಮಿಳಿನಲ್ಲಿ 3.75 ಕೋಟಿ ರೂ., ಕನ್ನಡದಲ್ಲಿ 90 ಲಕ್ಷ, ಹಿಂದಿಯಲ್ಲಿ ಮೊದಲ ದಿನ 15.75 ಕೋಟಿ ಬಾಚಿಕೊಂಡಿದೆ.

'ಸಲಾರ್' ಪ್ರಶಾಂತ್ ನೀಲ್ ನಿರ್ದೇಶನದ ಪ್ಯಾನ್ ಇಂಡಿಯಾ ಸಿನಿಮಾವಾಗಿದೆ. ಹೊಂಬಾಳೆ ಫಿಲಂಸ್‌ ನಿರ್ಮಾಣದ ಈ ಚಿತ್ರದಲ್ಲಿ ಪ್ರಭಾಸ್ ಜತೆಗೆ ಪೃಥ್ವಿರಾಜ್ ಸುಕುಮಾರನ್, ಶೃತಿ ಹಾಸನ್, ಜಗಪತಿ ಬಾಬು, ಕನ್ನಡದ ಕಲಾವಿದರಾದ ಪ್ರಮೋದ್‌, ನವೀನ್‌ ಶಂಕರ್‌, ಮಧುಗುರುಸ್ವಾಮಿ, ದೇವರಾಜ್ ಸೇರಿದಂತೆ ದೊಡ್ಡ ತಾರಾಗಣವೇ ಇದೆ.

'ಸಲಾರ್’ ಪ್ಯಾನ್‍ ಇಂಡಿಯಾ ಚಿತ್ರವಾದರೂ, ಈ ಚಿತ್ರದ ಹಿಂದಿರುವ ತಾಂತ್ರಿಕ ತಂಡದವರೆಲ್ಲರೂ ಕನ್ನಡದವರಾಗಿದ್ದಾರೆ. ನಿರ್ಮಾಪಕರಾದ ವಿಜಯ್‍ ಕಿರಗಂದೂರು, ನಿರ್ದೇಶಕ ಪ್ರಶಾಂತ್‍ ನೀಲ್‍, ಛಾಯಾಗ್ರಾಹಕ ಭುವನ್‍ ಗೌಡ, ಸಂಗೀತ ನಿರ್ದೇಶಕ ರವಿ ಬಸ್ರೂರು, ಕಲಾ ನಿರ್ದೇಶಕ ಶಿವಕುಮಾರ್ ಸೇರಿದಂತೆ ಚಿತ್ರದಲ್ಲಿ ಕೆಲಸ ಮಾಡಿರುವ ಹಲವು ತಂತ್ರಜ್ಞರು ಹಾಗೂ ಕಲಾವಿದರು ಈ ನೆಲದ ಮಣ್ಣಿನವರೇ.

Whats_app_banner