SIIMA Awards 2024: ಸ್ಯಾಂಡಲ್‌ವುಡ್‌ನ ಯಾವೆಲ್ಲ ಸಿನಿಮಾಗಳ ಮುಡಿಗೇರಿತು ಸೈಮಾ ಅವಾರ್ಡ್‌? ಪ್ರಶಸ್ತಿ ವಿಜೇತರ ಸಂಪೂರ್ಣ ಪಟ್ಟಿ-sandalwood news sapta sagaradaache ello to kaatera complete siima awards 2024 winners list kannada film industry mnk ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  Siima Awards 2024: ಸ್ಯಾಂಡಲ್‌ವುಡ್‌ನ ಯಾವೆಲ್ಲ ಸಿನಿಮಾಗಳ ಮುಡಿಗೇರಿತು ಸೈಮಾ ಅವಾರ್ಡ್‌? ಪ್ರಶಸ್ತಿ ವಿಜೇತರ ಸಂಪೂರ್ಣ ಪಟ್ಟಿ

SIIMA Awards 2024: ಸ್ಯಾಂಡಲ್‌ವುಡ್‌ನ ಯಾವೆಲ್ಲ ಸಿನಿಮಾಗಳ ಮುಡಿಗೇರಿತು ಸೈಮಾ ಅವಾರ್ಡ್‌? ಪ್ರಶಸ್ತಿ ವಿಜೇತರ ಸಂಪೂರ್ಣ ಪಟ್ಟಿ

SIIMA Awards 2024 Winners List: 2024ನೇ ಸಾಲಿನ ಸೈಮಾ ಅವಾರ್ಡ್ಸ್‌ ಪ್ರಶಸ್ತಿ ಘೋಷಣೆ ಆಗಿದೆ. ಸ್ಯಾಂಡಲ್‌ವುಡ್‌ನಲ್ಲಿ ಈ ಸಲ ಕಳೆದ ವರ್ಷ ತೆರೆಕಂಡಿದ್ದ ಸಪ್ತ ಸಾಗರದಾಚೆ ಎಲ್ಲೋ ಸಿನಿಮಾ ಆರು ಪ್ರಶಸ್ತಿ ತನ್ನದಾಗಿಸಿಕೊಂಡಿದೆ. ಅದೇ ರೀತಿ ಕಾಟೇರ ಸಿನಿಮಾ ನಾಲ್ಕು ವಿಭಾಗಗಳಲ್ಲಿ ಪ್ರಶಸ್ತಿ ಪಡೆದುಕೊಂಡಿದೆ.

ಸೈಮಾ ಪ್ರಶಸ್ತಿ ಸ್ವೀಕರಿಸಿದ ಕನ್ನಡ ಸಿನಿಮಾ ಕಲಾವಿದರು.
ಸೈಮಾ ಪ್ರಶಸ್ತಿ ಸ್ವೀಕರಿಸಿದ ಕನ್ನಡ ಸಿನಿಮಾ ಕಲಾವಿದರು. (Twitter\ SIIMA)

SIIMA Awards 2024: 2024ನೇ ಸಾಲಿನ ಸೈಮಾ ಪ್ರಶಸ್ತಿ ಸಮಾರಂಭ ಅರಬ್ಬರ ನಾಡು ದುಬೈನಲ್ಲಿ ನಡೆದಿದೆ. ಸೌತ್‌ ಸಿನಿಮಾ ಸೆಲೆಬ್ರಿಟಿಗಳ ಸಮ್ಮುಖದಲ್ಲಿ ಗ್ರ್ಯಾಂಡ್‌ ಆಗಿಯೇ ಕಲರ್‌ಫುಲ್‌ ಇವೆಂಟ್‌ ನಡೆದಿದೆ. ಆ ಪೈಕಿ ಸ್ಯಾಂಡಲ್‌ವುಡ್‌ನ ಸಾಲು ಸಾಲು ಸಿನಿಮಾಗಳಿಗೆ ಪ್ರಶಸ್ತಿಗಳು ಅರಸಿ ಬಂದಿವೆ. ಆ ಪೈಕಿ ಹೇಮಂತ್‌ ಎಂ ರಾವ್‌ ನಿರ್ದೇಶನದ ಸಪ್ತ ಸಾಗರದಾಚೆ ಎಲ್ಲೋ ಸಿನಿಮಾ ಸರಣಿ ಪ್ರಶಸ್ತಿಗಳನ್ನು ಬಾಚಿಕೊಂಡಿದೆ. ಹಾಗಾದರೆ, ಯಾವ ಸಿನಿಮಾಕ್ಕೆ ಯಾವ ಪ್ರಶಸ್ತಿ ಸಿಕ್ಕಿದೆ ಇಲ್ಲಿದೆ ನೋಡಿ ಕನ್ನಡ ಸಿನಿಮಾ ವಿಭಾಗದ ಪ್ರಶಸ್ತಿ ವಿಜೇತರ ಸಂಪೂರ್ಣ ಪಟ್ಟಿ.

ಯಾವೆಲ್ಲ ಸಿನಿಮಾಗಳಿಗೆ ಸಿಕ್ತು ಈ ಸಲದ ಸೈಮಾ 2024 ಪ್ರಶಸ್ತಿ

ಆರು ಪ್ರಶಸ್ತಿ ಗಿಟ್ಟಿಸಿಕೊಂಡ ಸಪ್ತ ಸಾಗರದಾಚೆ ಎಲ್ಲೋ

  • ಅತ್ಯುತ್ತಮ ನಟ- ರಕ್ಷಿತ್ ಶೆಟ್ಟಿ (ಸಪ್ತ ಸಾಗರದಾಚೆ ಎಲ್ಲೊ)
  • ಅತ್ಯುತ್ತಮ ನಟ (ಕ್ರಿಟಿಕ್)- ಡಾಲಿ ಧನಂಜಯ್ (ಗುರುದೇವ ಹೊಯ್ಸಳ)
  • ಅತ್ಯುತ್ತಮ ನಟಿ- ರುಕ್ಮಿಣಿ ವಸಂತ್ (ಸಪ್ತ ಸಾಗರದಾಚೆ ಎಲ್ಲೊ)
  • ಅತ್ಯುತ್ತಮ ನಟಿ (ಕ್ರಿಟಿಕ್)- ಚೈತ್ರಾ ಆಚಾರ್ (ಸಪ್ತ ಸಾಗರದಾಚೆ ಎಲ್ಲೊ)
  • ಅತ್ಯುತ್ತಮ ನಿರ್ದೇಶಕ- ಹೇಮಂತ್ ರಾವ್ (ಸಪ್ತ ಸಾಗರದಾಚೆ ಎಲ್ಲೊ)
  • ಅತ್ಯುತ್ತಮ ವಿಲನ್- ರಮೇಶ್ ಇಂದಿರಾ (ಸಪ್ತ ಸಾಗರದಾಚೆ ಎಲ್ಲೊ)
  • ಅತ್ಯುತ್ತಮ ಗಾಯಕ- ಕಪಿಲ್ (ಸಪ್ತ ಸಾಗರದಾಚೆ ಎಲ್ಲೊ)
  • ಅತ್ಯುತ್ತಮ ಪೋಷಕ ನಟ- ನವೀನ್ ಶಂಕರ್ (ಹೊಂದಿಸಿ ಬರೆಯಿರಿ)
  • ಅತ್ಯುತ್ತಮ ಪೋಷಕ ನಟಿ- ಸಂಯುಕ್ತಾ ಹೊರನಾಡು (ಟೋಬಿ)

ಇದನ್ನೂ ಓದಿ: ಸೆಪ್ಟೆಂಬರ್‌ ಮಾಸಾಂತ್ಯಕ್ಕೆ ಒಟಿಟಿಗೆ ಎಂಟ್ರಿಕೊಡಲಿರುವ ತಮಿಳಿನ ಬಹುನಿರೀಕ್ಷಿತ ಸಿನಿಮಾಗಳಿವು

ನಾಲ್ಕು ವಿಭಾಗಗಳಲ್ಲಿ ಕಾಟೇರ ಚಿತ್ರಕ್ಕೆ ಪ್ರಶಸ್ತಿ

  • ಅತ್ಯುತ್ತಮ ಕನ್ನಡ ಸಿನಿಮಾ- ಕಾಟೇರ
  • ಅತ್ಯುತ್ತಮ ಹೊಸ ನಟಿ- ಆರಾಧನಾ (ಕಾಟೇರ)
  • ಅತ್ಯುತ್ತಮ ಸಂಗೀತ ನಿರ್ದೇಶಕ- ವಿ ಹರಿಕೃಷ್ಣ (ಕಾಟೇರ)
  • ಅತ್ಯುತ್ತಮ ಗಾಯಕಿ: ಮಂಗ್ಲಿ (ಕಾಟೇರ)
  • ಅತ್ಯುತ್ತಮ ಸಿನಿಮಾಟೊಗ್ರಫರ್- ಶ್ವೇತ ಪ್ರಿಯ (ಕೈವ)
  • ಅತ್ಯುತ್ತಮ ಸಾಹಿತ್ಯ- ಡಾಲಿ ಧನಂಜಯ್ (ಟಗರುಪಲ್ಯ)
  • ಅತ್ಯುತ್ತಮ ಹಾಸ್ಯನಟ- ಅನಿರುದ್ಧ್ ಆಚಾರ್ (ಆಚಾರ್ ಆಂಡ್ ಕೋ)
  • ಅತ್ಯುತ್ತಮ ಭರವಸೆಯ ನಟಿ- ವೃಷಾ ಪಾಟೀಲ್ (ಲವ್)
  • ಅತ್ಯುತ್ತಮ ಹೊಸ ನಟ- ಶಿಶಿರ್ ಬೈಕಾಡಿ (ಡೇರ್​ಡೆವಿಲ್ ಮುಸ್ತಫಾ)
  • ಅತ್ಯುತ್ತಮ ಹೊಸ ನಿರ್ದೇಶಕ- ನಿತಿನ್ ಕೃಷ್ಣಮೂರ್ತಿ (ಹಾಸ್ಟೆಲ್ ಹುಡುಗರು)
  • ಅತ್ಯುತ್ತಮ ಹೊಸ ನಿರ್ಮಾಣ ಸಂಸ್ಥೆ: ಅಭುವನಸ ಫಿಲಮ್ಸ್
  • ವರ್ಷದ ಅತ್ಯುತ್ತಮ ನಿರ್ಮಾಪಕ: ಪಿಬಿ ಸ್ಟುಡಿಯೋಸ್, ಅನ್ವಿತ್ ಸಿನಿಮಾಸ್
  • ಸಿನಿಮಾ ರಂಗದಲ್ಲಿ ಅತ್ಯುತ್ತಮ ಸೇವೆ- ನಟ ಶಿವರಾಜ್ ಕುಮಾರ್

ಇದನ್ನೂ ಓದಿ: ಯಾವ ಸಮುದಾಯಕ್ಕೂ ಅವಮಾನ ಮಾಡೋ ಉದ್ದೇಶ ನಮ್ಮದಲ್ಲ; ಲಂಗೋಟಿ ಮ್ಯಾನ್‌ ಶೀರ್ಷಿಕೆ ಬಗ್ಗೆ ನಿರ್ದೇಶಕಿ ಸಂಜೋತಾ ಸ್ಪಷ್ಟನೆ

mysore-dasara_Entry_Point