ಕನ್ನಡ ಸುದ್ದಿ  /  ಮನರಂಜನೆ  /  ಅವ್ರಿಗೊಂದು ದೊಡ್ಡ ನಮಸ್ಕಾರ! ಈಜುಡುಗೆ ಬಗ್ಗೆ ತಮಗಿದ್ದ ಭಯ ಎಷ್ಟು ಎಂಬುದನ್ನು ಮುಚ್ಚುಮರೆಯಿಲ್ಲದೇ ಹೇಳಿದ ಮೀನಾ

ಅವ್ರಿಗೊಂದು ದೊಡ್ಡ ನಮಸ್ಕಾರ! ಈಜುಡುಗೆ ಬಗ್ಗೆ ತಮಗಿದ್ದ ಭಯ ಎಷ್ಟು ಎಂಬುದನ್ನು ಮುಚ್ಚುಮರೆಯಿಲ್ಲದೇ ಹೇಳಿದ ಮೀನಾ

90ರ ದಶಕದಲ್ಲಿ ಭಾರತೀಯ ಚಿತ್ರರಂಗವನ್ನಾಳಿದ ನಟಿ ಮೀನಾ, ಇಂದಿಗೂ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತ ಚಿತ್ರೋದ್ಯಮದಲ್ಲಿ ಬಿಜಿಯಾಗಿದ್ದಾರೆ. ನಟಿಸಿದ ಸಿನಿಮಾಗಳಲ್ಲಿ ಬೋಲ್ಡ್‌ ಪಾತ್ರಗಳಿಂದ ದೂರ ಉಳಿದು, ಅಪ್ಪಟ ನೆಲದ ಸೊಗಡಿನ ಹುಡುಗಿಯಂತೆ ಕಾಣಿಸಿದ್ದೇ ಹೆಚ್ಚು.

ಅವ್ರಿಗೊಂದು ದೊಡ್ಡ ನಮಸ್ಕಾರ! ಈಜುಡುಗೆ ಬಗ್ಗೆ ತಮಗಿದ್ದ ಭಯ ಎಷ್ಟು ಎಂಬುದನ್ನು ಮುಚ್ಚುಮರೆಯಿಲ್ಲದೇ ಹೇಳಿದ ಮೀನಾ
ಅವ್ರಿಗೊಂದು ದೊಡ್ಡ ನಮಸ್ಕಾರ! ಈಜುಡುಗೆ ಬಗ್ಗೆ ತಮಗಿದ್ದ ಭಯ ಎಷ್ಟು ಎಂಬುದನ್ನು ಮುಚ್ಚುಮರೆಯಿಲ್ಲದೇ ಹೇಳಿದ ಮೀನಾ

Meena Sagar: ಭಾರತೀಯ ಚಿತ್ರೋದ್ಯಮದಲ್ಲಿ ಒಂದು ಕಾಲದಲ್ಲಿ ಸ್ಟಾರ್‌ ಆಗಿ ಮೆರೆದವರು ನಟಿ ಮೀನಾ ಸಾಗರ್‌ (Meena Sagar). ಒಂದೇ ಚಿತ್ರೋದ್ಯಮಕ್ಕೆ ಸೀಮಿತವಾಗದೆ, ಬಾಲಿವುಡ್‌, ಕಾಲಿವುಡ್‌, ಟಾಲಿವುಡ್‌, ಸ್ಯಾಂಡಲ್‌ವುಡ್‌, ಮಾಲಿವುಡ್‌ ಹೀಗೆ ಎಲ್ಲ ಚಿತ್ರೋದ್ಯಮಗಳಲ್ಲಿ ಬೇಡಿಕೆ ಸೃಷ್ಟಿಸಿಕೊಂಡಿದ್ದರು ಮೀನಾ. 4ನೇ ವಯಸ್ಸಿಗೆ ಬಣ್ಣ ಲೋಕಕ್ಕೆ ಬಂದಿಳಿದಿದ್ದ ಈ ನಟಿ, ಅದಾದ ಮೇಲೆ ಮೇಲಿಂದ ಮೇಲೆ ಸಾಲು ಸಾಲು ಸಿನಿಮಾಗಳಲ್ಲಿ ನಟಿಸಿ ಸ್ಟಾರ್‌ ಬಾಲನಟಿಯಾದರು. ಅಲ್ಲಿಗೆ ನಿಲ್ಲದ ಆ ಪ್ರಯಾಣ ನಾಯಕಿಯಾಗುವವರೆಗೂ ಹೋಯಿತು. ಇದೀಗ ವಯಸ್ಸಹಜ ಪೋಷಕ ಪಾತ್ರಗಳಲ್ಲಿ ಬಿಜಿಯಾಗಿದ್ದಾರೆ ಮೀನಾ.

ಟ್ರೆಂಡಿಂಗ್​ ಸುದ್ದಿ

ಸಿನಿಮಾ ನಟನೆ ಮಾತ್ರವಲ್ಲದೇ, ಹತ್ತು ಹಲವು ವಿವಾದಗಳಲ್ಲೂ ನಟಿ ಮೀನಾ ಅವರ ಹೆಸರು ತಳುಕು ಹಾಕಿಕೊಂಡಿತ್ತು. ಆ ಪೈಕಿ ಹೆಚ್ಚು ಸದ್ದು ಗದ್ದಲ ಎಬ್ಬಿಸಿದ್ದು ಅವರ ಎರಡನೇ ಮದುವೆ ವಿಚಾರ. ಕಾಲಿವುಡ್‌ ನಟ ಧನುಷ್‌ ಜತೆಗೆ ಮೀನಾ ಮದುವೆ ಆಗಲಿದ್ದಾರೆ ಎಂಬ ಸುದ್ದಿಯೂ ದೊಡ್ಡ ಮಟ್ಟದಲ್ಲಿ ಹರಿದಾಡಿತ್ತು. ಅದಾದ ಬಳಿ ತಮ್ಮ 47ನೇ ವಯಸ್ಸಿನಲ್ಲಿಯೇ ಖ್ಯಾತ ಉದ್ಯಮಿಯನ್ನು ಮೀನಾ ವರಿಸಲಿದ್ದಾರೆ ಎಂಬ ಸುದ್ದಿಯೂ ಓಡಾಡಿತ್ತು. ಇದೆಲ್ಲದಕ್ಕೂ ಉತ್ತರ ಎಂಬಂತೆ, ಹೀಗೆ ಮಾತನಾಡುವುದರಿಂದ ನನ್ನ ಕುಟುಂಬಕ್ಕೆ ಏನಾಗಲಿದೆ ಎಂಬ ಅರಿವು ಯಾರಿಗಾದರೂ ಇದೆಯೇ? ಎಂದು ತಿರುಗೇಟು ಕೊಟ್ಟಿದ್ದರು.

ಬೋಲ್ಡ್‌ ಪಾತ್ರಗಳಿಂದ ದೂರ ದೂರ

ಹೀಗೆ ವೈಯಕ್ತಿಕ ವಿಚಾರಗಳ ಜತೆಗೆ ಸಿನಿಮಾ ಸಂಬಂಧಿ ವಿಚಾರಕ್ಕೂ ನಟಿ ಮೀನಾ ಸುದ್ದಿಯಲ್ಲಿರುತ್ತಾರೆ. ಸ್ಟಾರ್‌ ನಟಿಯಾಗಿ ಗುರುತಿಸಿಕೊಂಡಿದ್ದ ಇದೇ ನಟಿ ತಮ್ಮ ಕೆರಿಯರ್‌ನಲ್ಲಿಯೇ ಈಜುಡುಗೆಯಲ್ಲಿ ಕಾಣಿಸಿಕೊಂಡ ಉದಾಹರಣೆ ಇಲ್ಲ. ಆ ಕಾಲದಲ್ಲಿ ಎಷ್ಟೋ ನಟಿಯರು ಬಿಕಿನಿಯಲ್ಲಿ ಪೋಸ್‌ ಕೊಟ್ಟರೂ, ಮೀನಾ ಮಾತ್ರ ಅದರಿಂದ ದೂರ ದೂರ. ಎಷ್ಟೋ ನಿರ್ದೇಶಕರು, ನಾಯಕ ನಟರು ಸ್ವಿಮ್‌ ಸೂಟ್‌ ಧರಿಸಿ ಎಂದು ಪರಿಪರಿಯಾಗಿ ಮೀನಾ ಬಳಿ ಬೇಡಿಕೊಂಡರೂ ಅದಕ್ಕೆ ಸೊಪ್ಪು ಹಾಕುವ ಕೆಲಸ ಮಾತ್ರ ಅವರಿಂದ ಆಗಿರಲಿಲ್ಲ.

ಸಾಕಷ್ಟು ಮಂದಿಯಿಂದ ಬಂದಿತ್ತು ಸಲಹೆ

ನಟಿ ಮೀನಾ ಸ್ವಿಮ್‌ ಸೂಟ್‌ ಏಕೆ ಧರಿಸಲಿಲ್ಲ. ಗ್ಲಾಮರ್‌ ಪಾತ್ರಗಳಿಂದ ದೂರ ಉಳಿದಿದ್ದಕ್ಕೆ ಕಾರಣ ಏನು ಎಂಬ ಬಗ್ಗೆ ಈ ಹಿಂದೆ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ ಮೀನಾ. "ನನಗೆ ಗ್ಲಾಮರಸ್‌ ಪಾತ್ರಗಳಲ್ಲಿ ಕಾಣಿಸಿಕೊಳ್ಳುವುದಕ್ಕೇ ಕೊಂಚ ಭಯ. ಸಾಕಷ್ಟು ಮಂದಿ ಬೋಲ್ಡ್‌ ಆಗಿ ಕಾಣುವಂತೆ ಹೇಳುತ್ತಲೇ ಬಂದಿದ್ದರು. ಆದರೆ, ನಾನು ಮಾತ್ರ ಅದ್ಯಾವುದನ್ನೂ ಕಿವಿಗೆ ಹಾಕಿಕೊಳ್ಳದೆ, ಅವಾಯ್ಡ್‌ ಮಾಡುತ್ತಲೇ ಬಂದಿದ್ದೆ" ಎಂದಿದ್ದಾರೆ.

ನಾಚಿಕೆ ಜತೆಗೆ ಮುಜುಗರ

ಈ ನಡುವೆ ನಟ ಪ್ರಭುದೇವ, ನೀವ್ಯಾಕೆ ಬೋಲ್ಡ್‌ ಮತ್ತು ಗ್ಲಾಮರಸ್‌ ಪಾತ್ರ ಒಪ್ಪಿಕೊಳ್ಳುತ್ತಿಲ್ಲ? ಅಂಥ ಒಳ್ಳೊಳ್ಳೆ ಪ್ರಾಜೆಕ್ಟ್‌ ಒಪ್ಪಿಕೊಳ್ಳಿ" ಎಂದಿದ್ದರು. ಇದಕ್ಕೆ ಉತ್ತರಿಸಿದ್ದ ಮೀನಾ, "ನನಗೆ ಭಯದ ಜತೆಗೆ ನಾಚಿಕೆ. ನಾನು ಸ್ವಿಮ್‌ ಸೂಟ್‌, ಬಿಕಿನಿಯಲ್ಲಿ ಕಾಣಿಸಿಕೊಳ್ಳಲು ನನ್ನಿಂದ ಆಗದು. ಅದೆಲ್ಲದಕ್ಕಿಂತ ಹೆಚ್ಚಾಗಿ, ಆ ಥರದ ಉಡುಗೆಯನ್ನು ಧರಿಸಿ ಕೋಣೆಯನ್ನು ದಾಟಿ ಹೊರ ಬರಲು ನನ್ನಿಂದ ಅಸಾಧ್ಯ. ನನಗದು ಅತಿಯಾದ ಮುಜುಗರ ಉಂಟು ಮಾಡುತ್ತದೆ. ಬೋಲ್ಡ್‌ ಪಾತ್ರದಲ್ಲಿ ಕಾಣಿಸಿಕೊಳ್ಳುವುದು ನನ್ನ ಪಾಲಿಗೆ ನಿಜಕ್ಕೂ ಕಷ್ಟದ ಕೆಲಸ. ಅಂಥ ಪಾತ್ರದಲ್ಲಿ ನಟಿಸುವ ನಟಿಯರಿಗೊಂದು ನಮಸ್ಕಾರ ಎಂದಿದ್ದಾರೆ ಮೀನಾ.

ಇನ್ನು ಸಿನಿಮಾ ವಿಚಾರಕ್ಕೆ ಬಂದರೆ, 2022ರಲ್ಲಿ ಮಲಯಾಳಂ ಬ್ರೋ ಡ್ಯಾಡಿ ಸಿನಿಮಾದಲ್ಲಿ ಮೀನಾ ನಟಿಸಿದ್ದರು. ಇದೇ ವರ್ಷದ ಮಾರ್ಚ್‌ನಲ್ಲಿ ಮಲಯಾಳಂ ಆನಂದಪುರಂ ಡೈರೀಸ್‌ ಚಿತ್ರದಲ್ಲೂ ನಟಿಸಿದ್ದರು. ಸದ್ಯ ತಮಿಳಿನ ರೌಡಿ ಬೇಬಿ ಚಿತ್ರದ ಶೂಟಿಂಗ್‌ನಲ್ಲಿ ಬಿಜಿಯಾಗಿದ್ದಾರೆ.

IPL_Entry_Point