ಕನ್ನಡ ಸುದ್ದಿ  /  ಮನರಂಜನೆ  /  10 ವರ್ಷಗಳಲ್ಲಿ ಭಾರತ ಬದಲಾಗಿದೆ ಎಂದಿದ್ದ ರಶ್ಮಿಕಾ ಮಂದಣ್ಣಗೆ ಪರೋಕ್ಷವಾಗಿ ‘ಅಜ್ಞಾನಿ’ ಎಂದು ತಿವಿದ ಚೇತನ್‌ ಅಹಿಂಸಾ

10 ವರ್ಷಗಳಲ್ಲಿ ಭಾರತ ಬದಲಾಗಿದೆ ಎಂದಿದ್ದ ರಶ್ಮಿಕಾ ಮಂದಣ್ಣಗೆ ಪರೋಕ್ಷವಾಗಿ ‘ಅಜ್ಞಾನಿ’ ಎಂದು ತಿವಿದ ಚೇತನ್‌ ಅಹಿಂಸಾ

ಮುಂಬೈನ ಸಾರಿಗೆ ಮಾರ್ಗದ ಬಗ್ಗೆ ಮೆಚ್ಚುಗೆಯ ಮಾತನಾಡಿದ ರಶ್ಮಿಕಾ ಅವರನ್ನು ಪರೋಕ್ಷವಾಗಿ, ಎಲ್ಲಿಯೂ ನಟಿಯ ಹೆಸರನ್ನು ಹೇಳದೇ ಟಾಂಗ್‌ ಕೊಟ್ಟಿದ್ದಾರೆ ಚೇತನ್‌ ಅಹಿಂಸಾ. ಕಳೆದ 10 ವರ್ಷಗಳಲ್ಲಿ ಭಾರತ ಬದಲಾಗಿದೆ ಎಂಬ ನಟಿಯ ಮಾತಿಗೆ ಪ್ರತ್ಯುತ್ತರ ನೀಡಿದ್ದಾರೆ.

10 ವರ್ಷಗಳಲ್ಲಿ ಭಾರತ ಬದಲಾಗಿದೆ ಎಂದಿದ್ದ ರಶ್ಮಿಕಾ ಮಂದಣ್ಣಗೆ ಪರೋಕ್ಷವಾಗಿ ‘ಅಜ್ಞಾನಿ’ ಎಂದು ತಿವಿದ ಚೇತನ್‌ ಅಹಿಂಸಾ
10 ವರ್ಷಗಳಲ್ಲಿ ಭಾರತ ಬದಲಾಗಿದೆ ಎಂದಿದ್ದ ರಶ್ಮಿಕಾ ಮಂದಣ್ಣಗೆ ಪರೋಕ್ಷವಾಗಿ ‘ಅಜ್ಞಾನಿ’ ಎಂದು ತಿವಿದ ಚೇತನ್‌ ಅಹಿಂಸಾ

Chetan Ahimsa on Rashmika Mandanna: ಸೋಷಿಯಲ್‌ ಮೀಡಿಯಾದಲ್ಲಿ ಸದಾ ಸಕ್ರಿಯರಾಗಿರುವ ನಟ ಮತ್ತು ಸಾಮಾಜಿಕ ಹೋರಾಟಗಾರ ಚೇತನ್‌ ಅಹಿಂಸಾ, ಆಗಾಗ ತಮ್ಮದೇ ಆದ ಒಂದಷ್ಟು ಸಿದ್ಧಾಂತಗಳನ್ನು ಪೋಸ್ಟ್‌ ಮಾಡುತ್ತಿರುತ್ತಾರೆ. ಪ್ರಸಕ್ತ ಘಟನಾವಳಿಗಳ ಬಗ್ಗೆ ತಮ್ಮ ಅನಿಸಿಕೆ ಅಭಿಪ್ರಾಯವನ್ನು ಹಂಚಿಕೊಳ್ಳುತ್ತಿರುತ್ತಾರೆ. ರಾಜಕೀಯ, ಸಿನಿಮಾ, ಜಾತಿ- ಧರ್ಮ, ಹೀಗೆ ಎಲ್ಲದರ ಬಗ್ಗೆಯೂ ಪೋಸ್ಟ್‌ ಮಾಡುತ್ತಿರುತ್ತಾರೆ. ಈಗ ಕನ್ನಡದಲ್ಲಿ ಮಿಂಚಿ, ಸದ್ಯ ಬಹುಭಾಷೆಗಳಲ್ಲಿಯೇ ಬಿಜಿಯಾಗಿರುವ ನಟಿ ರಶ್ಮಿಕಾ ಮಂದಣ್ಣ ಬಗ್ಗೆಯೂ ಕೊಂಚ ಬಿರುಸಾಗಿಯೇ ಮಾತನಾಡಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ನಟಿ ರಶ್ಮಿಕಾ ಮಂದಣ್ಣ, ಮುಂಬೈ ಟ್ರಾನ್ಸ್ ಹಾರ್ಬರ್ ಲಿಂಕ್‌ನ ಅಟಲ್‌ ಸೇತು ಬಗ್ಗೆ ಇತ್ತೀಚೆಗಷ್ಟೇ ಮುಕ್ತಕಂಠದಿಂದ ಹೊಗಳಿದ್ದರು. ಈ ಅಟಲ್ ಬಿಹಾರಿ ವಾಜಪೇಯಿ ಸೇವಾರಿ- ನವಾ ಶೇವಾ ಅಟಲ್ ಸೇತುವೆಯನ್ನು ಜನವರಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದ್ದರು. ಈ ಸೇತುವೆಯ ಪ್ರಯಾಣದ ಬಗ್ಗೆ ನಟಿ ರಶ್ಮಿಕಾ ಸುದ್ದಿ ಸಂಸ್ಥೆ ಎಎನ್‌ಐಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ್ದರು. “ಇದು ಮಹಾನಗರಿ ಮುಂಬೈ ಸಾರಿಗೆ ಜಾಲದ ದಿಕ್ಕನ್ನೇ ಬದಲಿಸುವ ಮಾರ್ಗ. ಗೇಮ್‌ಚೇಂಜರ್‌ ಎಂದೇ ಹೇಳಬಹುದು. ಇನ್ಮುಂದೆ ಭಾರತ ಎಲ್ಲಿಯೂ ನಿಲ್ಲುವುದಿಲ್ಲ” ಎಂದಿದ್ದರು.

ರಶ್ಮಿಕಾ ಮಂದಣ್ಣ ಹೇಳಿದ್ದೇನು?

ಈ ರಸ್ತೆಯಲ್ಲಿ ಈ ಮೊದಲು ಎರಡು ಗಂಟೆಗಳ ಕಾಲ ಕ್ರಮಿಸಬೇಕಿತ್ತು. ಆದರೆ ಇದೀಗ ಕೇವಲ 20 ನಿಮಿಷಗಳಲ್ಲಿ ಪ್ರಯಾಣಿಸಬಹುದು. ಈ ಸೇತುವೆ ನಿರ್ಮಾಣಕ್ಕೂ ಮೊದಲು, ಇದು ಅಸಾಧ್ಯ ಎಂದವರೇ ಹೆಚ್ಚು ಮಂದಿ. ಆದರೆ, ಈಗ ಅದು ಸಾಕಾರಗೊಂಡಿದೆ. ಇಂದು ನಾವು ನವ ಮುಂಬೈನಿಂದ ಮುಂಬೈ, ಗೋವಾದಿಂದ ಮುಂಬೈ ಮತ್ತು ಬೆಂಗಳೂರಿನಿಂದ ಮುಂಬೈ ಎಲ್ಲ ಕಡೆಗೂ ಸುಲಭವಾಗಿ ಪ್ರಯಾಣಿಸಬಹುದು, ಇಂತಹ ಸೌಕರ್ಯದ ಕುರಿತು ಹೆಮ್ಮೆಯಾಗುತ್ತಿದೆ. ಕಳೆದ 10 ವರ್ಷಗಳಲ್ಲಿ ಭಾರತ ಬಹಳಷ್ಟು ಬದಲಾಗಿದೆ" ಎಂದು ರಶ್ಮಿಕಾ ಹೇಳಿಕೊಂಡಿದ್ದರು.

ಮುಂದುವರಿದು ಮಾತನಾಡಿದ ರಶ್ಮಿಕಾ, “ಈಗ ಭಾರತ ನಾನ್‌ ಸ್ಟಾಪ್‌. ಎಲ್ಲಿಯೂ ನಿಲ್ಲುವುದಿಲ್ಲ. ಈಗ ದೇಶದ ಪ್ರಗತಿ, ಬೆಳವಣಿಗೆಯನ್ನು ಗಮನಿಸಿ. ಕಳೆದ ಹತ್ತು ವರ್ಷಗಳಲ್ಲಿ ಭಾರತವು ಬೆಳೆದ ರೀತಿ ಅದ್ಭುತವಾಗಿದೆ. ಮೂಲಸೌಕರ್ಯ ಅಭಿವೃದ್ಧಿ, ದೇಶದ ವಿವಿಧ ಯೋಜನೆಗಳು, ರಸ್ತೆ ಯೋಜನೆ ಎಲ್ಲವೂ ಅದ್ಭುತವಾಗಿದೆ. ಈಗ ನಮ್ಮ ಸಮಯ. ಈ ಏಳು ವರ್ಷಗಳಲ್ಲಿ ಈ ರಸ್ತೆಯ ಅಭಿವೃದ್ಧಿ ರೋಚಕವಾಗಿದೆ. ಭಾರತ ಅತ್ಯಂತ ಬುದ್ಧಿವಂತ ದೇಶವೆಂದು ಹೇಳಲು ಹೆಮ್ಮೆಯಾಗುತ್ತಿದೆ” ಎಂದಿದ್ದರು.

ಹೀಗೆ ಸಾರಿಗೆ ಮಾರ್ಗದ ಬಗ್ಗೆ ಮೆಚ್ಚುಗೆಯ ಮಾತನಾಡಿದ ರಶ್ಮಿಕಾ ಅವರನ್ನು ಪರೋಕ್ಷವಾಗಿ, ಎಲ್ಲಿಯೂ ನಟಿಯ ಹೆಸರನ್ನು ಹೇಳದೇ ಟಾಂಗ್‌ ಕೊಟ್ಟಿದ್ದಾರೆ ಚೇತನ್‌ ಅಹಿಂಸಾ. ಕಳೆದ 10 ವರ್ಷಗಳಲ್ಲಿ ಭಾರತ ಬದಲಾಗಿದೆ ಎಂಬ ನಟಿಯ ಮಾತಿಗೆ ಪ್ರತ್ಯುತ್ತರ ನೀಡಿದ್ದಾರೆ. ಹಾಗಾದರೆ, ಚೇತನ್‌ ಅಹಿಂಸಾ ಹೇಳಿದ್ದೇನು? ಹೀಗಿದೆ ಪೋಸ್ಟ್‌.

ಚೇತನ್‌ ಅಹಿಂಸಾ ಪೋಸ್ಟ್‌

"ಕಳೆದ 10 ವರ್ಷಗಳಲ್ಲಿ, ಭಾರತದ ಆದಾಯ ಅಸಮಾನತೆ ಗಗನಕ್ಕೇರಿದೆ ಮತ್ತು ಪ್ರಜಾಸತ್ತಾತ್ಮಕ ಸ್ವಾತಂತ್ರ್ಯಗಳು ದಾಳಿಗೆ ಒಳಗಾಗಿವೆ. ಯಾವುದೇ ಮೂರ್ಖ ಪಕ್ಷವು ಕಾಂಕ್ರೀಟ್ ಸುರಿಯಬಹುದು ಮತ್ತು ಮೂಲಸೌಕರ್ಯಗಳನ್ನು ನಿರ್ಮಿಸಬಹುದು-ಸಮಾಜವನ್ನು ಸುಸ್ಥಿರವಾಗಿ ಮತ್ತು ಸಮಾನವಾಗಿ ಅಭಿವೃದ್ಧಿಪಡಿಸಲು ನಿಜವಾದ ಒಳನೋಟದ ಅಗತ್ಯವಿದೆ. ಸೆಲೆಬ್ರಿಟಿಗಳ ಅಜ್ಞಾನವು ಸವಲತ್ತುಗಳ 'ಫ್ರ್ಯಾಕಿಂಗ್ ಬ್ರಿಲಿಯಂಟ್' ರೂಪವಾಗಿದೆ" ಎಂದಿದ್ದಾರೆ.

ಸದ್ಯ ಏನ್‌ ಮಾಡ್ತಿದ್ದಾರೆ ರಶ್ಮಿಕಾ

ಪುಷ್ಪ 2 ಸಿನಿಮಾ ಬಿಡುಗಡೆಗೆ ದಿನಗಣನೆ ಆರಂಭವಾಗಿದೆ. ಆಗಸ್ಟ್‌ 15ರಂದು ಈ ಸಿನಿಮಾ ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ರಿಲೀಸ್‌ ಆಗಲಿದೆ. ಶ್ರೀವಲ್ಲಿ ಪಾತ್ರದಲ್ಲಿ ರಶ್ಮಿಕಾ ನಟಿಸಿದ್ದಾರೆ. ಇದರ ಜತೆಗೆ ರೇನ್‌ಬೋ, ದಿ ಗರ್ಲ್‌ಫ್ರೆಂಡ್‌, ಚಾವಾ, ಕುಬೇರ ಸಿನಿಮಾ ಕೆಲಸಗಳಲ್ಲಿಯೂ ರಶ್ಮಿಕಾ ಮಂದಣ್ಣ ಬಿಜಿಯಾಗಿದ್ದಾರೆ.\

IPL_Entry_Point