ಕನ್ನಡ ಸುದ್ದಿ  /  ಮನರಂಜನೆ  /  ಹೆಣ್ಣನ್ನು ನಿಂದಿಸಿದ ಹೀನ ಮನಸ್ಸುಗಳ ವಿರುದ್ಧ ಕಿಚ್ಚನ ಫ್ಯಾನ್ಸ್‌ ಕಿಡಿ; ತಪ್ಪು ಮಾಡಿದಾತನನ್ನೇ ಹುಡುಕ್ತಿದ್ದಾರೆ ದರ್ಶನ್‌ ಅಭಿಮಾನಿಗಳು

ಹೆಣ್ಣನ್ನು ನಿಂದಿಸಿದ ಹೀನ ಮನಸ್ಸುಗಳ ವಿರುದ್ಧ ಕಿಚ್ಚನ ಫ್ಯಾನ್ಸ್‌ ಕಿಡಿ; ತಪ್ಪು ಮಾಡಿದಾತನನ್ನೇ ಹುಡುಕ್ತಿದ್ದಾರೆ ದರ್ಶನ್‌ ಅಭಿಮಾನಿಗಳು

ಸೋಷಿಯಲ್‌ ಮೀಡಿಯಾದಲ್ಲಿ ಅಶ್ವಿನಿ ಪುನೀತ್‌ ರಾಜ್‌ಕುಮಾರ್‌ ಅವರನ್ನು ಕೆಟ್ಟದಾಗಿ ನಿಂದಿಸಿದ ಕಿಡಿಗೇಡಿ ವಿರುದ್ಧ ಅಪ್ಪು ಅಭಿಮಾನಿಗಳು ರೊಚ್ಚಿಗೆದ್ದಿದ್ದಾರೆ. ಜತೆಗೆ ಕಿಡಿಗೆ ಸುದೀಪ್‌ ಫ್ಯಾನ್ಸ್‌ ಸಹ ಜತೆಯಾಗಿದ್ದಾರೆ.

ಹೆಣ್ಣನ್ನು ನಿಂದಿಸಿದ ಹೀನ ಮನಸ್ಸುಗಳ ವಿರುದ್ಧ ಕಿಚ್ಚನ ಫ್ಯಾನ್ಸ್‌ ಕಿಡಿ; ತಪ್ಪು ಮಾಡಿದಾತನನ್ನೇ ಹುಡುಕ್ತಿದ್ದಾರೆ ದರ್ಶನ್‌ ಅಭಿಮಾನಿಗಳು
ಹೆಣ್ಣನ್ನು ನಿಂದಿಸಿದ ಹೀನ ಮನಸ್ಸುಗಳ ವಿರುದ್ಧ ಕಿಚ್ಚನ ಫ್ಯಾನ್ಸ್‌ ಕಿಡಿ; ತಪ್ಪು ಮಾಡಿದಾತನನ್ನೇ ಹುಡುಕ್ತಿದ್ದಾರೆ ದರ್ಶನ್‌ ಅಭಿಮಾನಿಗಳು

Darshan fans: ಸೋಷಿಯಲ್‌ ಮೀಡಿಯಾದಲ್ಲಿ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಅವರ ಅಭಿಮಾನಿಗಳ ವಿರುದ್ಧ ವ್ಯಾಪಕ ಟೀಕೆ ವ್ಯಕ್ತವಾಗುತ್ತಿದೆ. ಹೆಣ್ಣನ್ನು ನಿಂದಿಸಿದ ಆರೋಪದ ಮೇಲೆ ನಟ ದರ್ಶನ್‌ ಸೇರಿ ಅವರ ಅಭಿಮಾನಿಗಳ ಬಗ್ಗೆಯೂ ಎಲ್ಲೆಡೆ ಅಸಮಾಧಾನ ವ್ಯಕ್ತವಾಗುತ್ತಿದೆ. ದೊಡ್ಮನೆ ಸೊಸೆ ಪುನೀತ್‌ ರಾಜ್‌ಕುಮಾರ್‌ ಅವರ ಪತ್ನಿ ಅಶ್ವಿನಿ ಪುನೀತ್‌ ರಾಜ್‌ಕುಮಾರ್‌ ಬಗ್ಗೆ ಕಟುವಾಗಿ ಮಾತನಾಡಿದ ಆ ಮನಸ್ಸು ಎಷ್ಟು ಕೊಳಕಿರಬಹುದು ಎಂದು ಕೆಲವರು ತಮ್ಮ ಮನದ ನೋವನ್ನು ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಈ ನಡುವೆ ಅಪ್ಪು ಅಭಿಮಾನಿಗಳು ಮಾತ್ರವಲ್ಲದೆ, ಕಿಚ್ಚನ ಅಭಿಮಾನಿಗಳೂ ಸಹ ಕಿಡಿಗೇಡಿ ವಿರುದ್ಧ ಡಂಗುರ ಸಾರಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಐಪಿಎಲ್‌ ಪಂದ್ಯಾವಳಿಯಲ್ಲಿ ಆರ್‌ಸಿಬಿ ಹೀನಾಯವಾಗಿ ಸೋಲನುಭವಿಸುತ್ತಿದೆ. ಹೀಗೆ ಸೋಲಲು ಅಶ್ವಿನಿ ಪುನೀತ್‌ ರಾಜ್‌ಕುಮಾರ್‌ ಅವರೇ ಕಾರಣ ಎಂದು ದರ್ಶನ್‌ ಅವರ ಅಭಿಮಾನಿಯೊಬ್ಬ ಕೆಟ್ಟದಾಗಿ ಪೋಸ್ಟ್‌ ಹಾಕಿದ್ದ. "ಶುಭ ಕಾರ್ಯಕ್ಕೆ ಮುತ್ತೈದೆಯರನ್ನು ಕರೀಬೇಕು. ಗಂಡ ಸತ್ತ ಮುಂ** ಯರನ್ನು ಕರೀಬಾರದು. ಆರ್‌ಸಿಬಿ ಅನ್‌ಬಾಕ್ಸ್‌ ಇವೆಂಟ್‌ಗೆ ಈ ಮುಂ**ಯನ್ನು ಕರೆದಿದ್ದಕ್ಕೆ ಎಲ್ಲ ಮ್ಯಾಚ್‌ ಸೋಲ್ತಾ ಇದ್ದಾರೆ" ಎಂದು ಗಜಪಡೆ ಟ್ವಿಟ್ಟರ್‌ ಖಾತೆಯಿಂದ ಪೋಸ್ಟ್‌ ಹೊರಬಂದಿತ್ತು. ಈ ಪೋಸ್ಟ್‌ ವೈರಲ್‌ ಆಗುತ್ತಿದ್ದಂತೆ ಟೀಕೆಯೂ ಶುರುವಾಗಿದೆ.

ದರ್ಶನ್‌ ಅಭಿಮಾನಿ ಹಾಕಿದ ಪೋಸ್ಟ್‌ನಲ್ಲೇನಿತ್ತು?

ಈ ನಡುವೆ ಹೀಗೆ ವೈರಲ್‌ ಆಗಿದ್ದ ಗಜಪಡೆ ಪೋಸ್ಟ್‌ ಏಕಾಏಕಿ ಡಿಲಿಟ್‌ ಆಗಿದೆ. ಗಜಪಡೆ ಹೆಸರಿನ ಖಾತೆ ಸುದೀಪ್‌ ಅಭಿಮಾನಿ ಎಂದು ಬದಲಾಗಿದೆ. ಹೀಗೆ ಕಿಚ್ಚನ ಹೆಸರು ಬಂತೋ, ಸುದೀಪ್‌ ಫ್ಯಾನ್ಸ್‌ ಕಹಳೆಯೂದಿದ್ದಾರೆ. ಯಾವುದು ಅಸಲಿ, ಯಾವುದು ನಕಲಿ ಎಂಬುದನ್ನು ಪತ್ತೆ ಮಾಡಿ, ಸಾಕ್ಷಿ ಸಮೇತ ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಜತೆಗೆ ಎಚ್ಚರಿಕೆ ಸಂದೇಶವನ್ನೂ ರವಾನಿಸಿದ್ದಾರೆ. "ದರ್ಶನ್ ಅಭಿಮಾನಿಯಾಗಿ ಕಚಡ ಕೆಲಸ ಮಾಡಿದಲ್ಲದೆ id ಚೇಂಜ್ ಮಾಡಿ ಕಿಚ್ಚ ಬಾಸ್ dp ಹಾಕಿದಿಯಲ್ಲ ಎಂತಾ ನಾಮ** ನನ್ನ ಮಗನೋ ನೀನು. ನೀವು ಈ ತರ ಎಷ್ಟೇ ಕಚಡಾ ಕೆಲಸ ಮಾಡಿದ್ರು ಕಿಚ್ಚ ಬಾಸ್‌ದು ಒಂದೂ ಕೂದ್ಲೂ ಕೂಡ ಕೀತ್ಕೊಳ್ಳಕ್ಕಾಗಲ್ಲ ಇವೆಲ್ಲ ನಮ್ಮತ್ರ ಬೇಡ" ಎನ್ನುತ್ತಿದ್ದಾರೆ.

ಕಿಡಿಗೇಡಿ ಹುಡುಕಾಟಕ್ಕಿಳಿದ ದರ್ಶನ್‌ ಫ್ಯಾನ್ಸ್‌

ದರ್ಶನ್‌ ಅಭಿಮಾನಿ ಎಂದು ಹೇಳಿಕೊಂಡ ಗಜಪಡೆ ಹೆಸರಿನ ಟ್ವಿಟರ್‌ ಖಾತೆಯ ಮೂಲಕ ಅಶ್ವಿನಿ ಪುನೀತ್‌ ರಾಜ್‌ಕುಮಾರ್‌ ಅವರನ್ನು ನಿಂದಿಸಿದ್ದ ವ್ಯಕ್ತಿ ಸದ್ಯ ನಾಪತ್ತೆಯಾಗಿದ್ದಾನೆ. ಆ ಟ್ವಿಟರ್‌ ಖಾತೆಯೂ ಸಹ ಡಿಲಿಟ್‌ ಆಗಿದೆ. ಇನ್ನೊಂದೆಡೆ ಅಭಿಮಾನಿಯ ಈ ಒಂದು ತಪ್ಪಿನಿಂದ ಒಟ್ಟಾರೆ ಎಲ್ಲ ದರ್ಶನ್‌ ಮತ್ತು ಅವರ ಅಭಿಮಾನಿಗಳು ತಲೆ ತಗ್ಗಿಸಿದ್ದಾರೆ. ಸ್ವತಃ ದರ್ಶನ್‌ ಅಭಿಮಾನಿ ವಲಯದಲ್ಲಿಯೇ ಹಾಗೇ ಪೋಸ್ಟ್‌ ಹಾಕಿದ ವ್ಯಕ್ತಿಯ ಹುಡುಕಾಟ ನಡೆಯುತ್ತಿದೆ. ತಿಳಿಸಿ ಬುದ್ಧಿಹೇಳುವ ಕೆಲಸವೂ ನಡೆಯುತ್ತಿದೆಯಂತೆ.

ಈ ವಿಚಾರ ದರ್ಶನ್‌ಗೂ ಬೇಸರ ತರಿಸಿದೆ..

ಅಶ್ವಿನಿ ಪುನೀತ್‌ ರಾಜ್‌ಕುಮಾರ್‌ಗೆ ಸೋಷಿಯಲ್‌ ಮೀಡಿಯಾದಲ್ಲಿ ಕೆಟ್ಟದಾಗಿ ನಿಂದಿಸಿದ ವಿಚಾರ ನಟ ದರ್ಶನ್‌ ಅವರ ಗಮನಕ್ಕೂ ಬಂದಿದೆ. ಈ ಬಗ್ಗೆ ಅವರ ಆಪ್ತರ ಬಳಿಯೂ ಅವರು ಮಾತನಾಡಿದ್ದಾರೆ. ಯಾವುದೇ ಕಾರಣಕ್ಕೂ ಸೋಷಿಯಲ್‌ ಮೀಡಿಯಾ ಮೂಲಕ ನಾವು ಉತ್ತರಿಸಬಾರದು ಎಂದಿದ್ದಾರೆ ಎಂದು ಅವರ ಆಪ್ತರಾದ ಪುನೀತ್‌ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ. ಇನ್ನೊಂದು ಕಡೆ ಪುನೀತ್‌ ಅಭಿಮಾನಿಗಳು, ಈ ಸಂಬಂಧ ಪೊಲೀಸ್‌ ಠಾಣೆಗ ದೂರು ದಾಖಲಿಸಿದ್ದು, ಕಿಡಿಗೇಡಿಗೆ ತಕ್ಕ ಪಾಠ ಕಲಿಸಿ ಎಂದು ಮನವಿ ಮಾಡಿದ್ದಾರೆ.

IPL_Entry_Point