Kaalapaathar OTT: ವಿಕ್ಕಿ ವರುಣ್‌ ನಿರ್ದೇಶಿಸಿ ನಟಿಸಿರುವ ಕಾಲಾಪತ್ಥರ್‌ ಸಿನಿಮಾ ಒಟಿಟಿಗೆ ಬರೋದು ಯಾವಾಗ?
ಕನ್ನಡ ಸುದ್ದಿ  /  ಮನರಂಜನೆ  /  Kaalapaathar Ott: ವಿಕ್ಕಿ ವರುಣ್‌ ನಿರ್ದೇಶಿಸಿ ನಟಿಸಿರುವ ಕಾಲಾಪತ್ಥರ್‌ ಸಿನಿಮಾ ಒಟಿಟಿಗೆ ಬರೋದು ಯಾವಾಗ?

Kaalapaathar OTT: ವಿಕ್ಕಿ ವರುಣ್‌ ನಿರ್ದೇಶಿಸಿ ನಟಿಸಿರುವ ಕಾಲಾಪತ್ಥರ್‌ ಸಿನಿಮಾ ಒಟಿಟಿಗೆ ಬರೋದು ಯಾವಾಗ?

ಸೆಪ್ಟೆಂಬರ್‌ 13 ರಂದು ತೆರೆ ಕಂಡಿದ್ದ ವಿಕ್ಕಿ ವರುಣ್‌ ನಟನೆಯ ಕಾಲಾಪತ್ಥರ್‌ ಚಿತ್ರಕ್ಕೆ ಉತ್ತಮ ಪ್ರಶಂಸೆ ವ್ಯಕ್ತವಾಗುತ್ತಿದೆ. ಚಿತ್ರದಲ್ಲಿ ವಿಕ್ಕಿ ವರುಣ್‌ಗೆ ಧನ್ಯಾ ರಾಮ್‌ಕುಮಾರ್‌ ನಾಯಕಿಯಾಗಿ ನಟಿಸಿದ್ದಾರೆ. ಸಿನಿಮಾ ಅಕ್ಟೋಬರ್‌ ಕೊನೆಯ ವಾರದಲ್ಲಿ ಒಟಿಟಿಯಲ್ಲಿ ಸ್ಟ್ರೀಮ್‌ ಆಗಲಿದೆ.

ವಿಕ್ಕಿ ವರುಣ್‌ ನಿರ್ದೇಶಿಸಿ ನಟಿಸಿರುವ ಕಾಲಾಪತ್ಥರ್‌ ಸಿನಿಮಾ ಒಟಿಟಿಗೆ ಬರೋದು ಯಾವಾಗ?
ವಿಕ್ಕಿ ವರುಣ್‌ ನಿರ್ದೇಶಿಸಿ ನಟಿಸಿರುವ ಕಾಲಾಪತ್ಥರ್‌ ಸಿನಿಮಾ ಒಟಿಟಿಗೆ ಬರೋದು ಯಾವಾಗ? (PC: vikky_varun)

ಕಾಲೇಜ್‌ ಕುಮಾರ ಖ್ಯಾತಿಯ ವಿಕ್ಕಿ ವರುಣ್‌ ಅಭಿನಯದ ಕಾಲಾಪತ್ಥರ್‌ ಸಿನಿಮಾ ಕಳೆದ ವಾರ ತೆರೆ ಕಂಡಿತ್ತು. 1979 ರಲ್ಲಿ ಬಾಲಿವುಡ್‌ನಲ್ಲಿ ಶಶಿಕಪೂರ್‌ ಅಭಿನಯದ ಕಾಲಾಪತ್ಥರ್‌ ಸಿನಿಮಾ ರಿಲೀಸ್‌ ಆಗಿತ್ತು. ಚಿತ್ರದ ಕಥೆಗೆ ಹೊಂದಾಣಿಕೆ ಆಗುವ ಕಾರಣ ವಿಕ್ಕಿ ವರುಣ್‌ ಚಿತ್ರಕ್ಕೂ ಅದೇ ಹೆಸರು ಬಳಸಿಕೊಳ್ಳಲಾಗಿತ್ತು.

ನಟನೆ ಜೊತೆಗೆ ನಿರ್ದೇಶನಕ್ಕೂ ಇಳಿದ ವಿಕ್ಕಿ ವರುಣ್

ಸೆಪ್ಟೆಂಬರ್‌ 13 ರಂದು ತೆರೆ ಕಂಡ ಸಿನಿಮಾಗೆ ಉತ್ತಮ ಪ್ರಶಂಸೆ ವ್ಯಕ್ತವಾಗಿದೆ. ವಿಕ್ಕಿ ವರುಣ್‌ 2013 ರಲ್ಲಿ ತೆರೆ ಕಂಡ ಕಡ್ಡಿಪುಡಿ ಚಿತ್ರದ ಪುಟ್ಟ ಪಾತ್ರದ ಮೂಲಕ ಚಿತ್ರರಂಗಕ್ಕೆ ಬಂದರು. ನಂತರ 2025 ರಲ್ಲಿ ಮಾನ್ವಿತಾ ಜೊತೆ ಕೆಂಡಸಂಪಿಗೆ ಚಿತ್ರದಲ್ಲಿ ನಟಿಸಿದರು. 2017 ರಲ್ಲಿ ಕಾಲೇಜು ಕುಮಾರ ಸಿನಿಮಾದಲ್ಲಿ ನಟಿಸಿದರು. ಈ ಚಿತ್ರ ಅವರಿಗೆ ಒಳ್ಳೆ ಹೆಸರು ತಂದುಕೊಟ್ಟರೂ ಈ ಚಿತ್ರದ ನಂತರ ಅವರು ನಟಿಸಿದ ಯಾವುದೇ ಸಿನಿಮಾ ರಿಲೀಸ್‌ ಆಗಲಿಲ್ಲ ಕಾಲಾಪತ್ಥರ್‌ ಅನೌನ್ಸ್‌ ಆಗಿ ಬಹಳ ವರ್ಷಗಳಾದರೂ ಕಾರಣಾಂತರಗಳಿಂದ ತಡವಾಗುತ್ತಾ ಬಂತು. ಕೊನೆಗೆ ವಿಕ್ಕಿ ವರುಣ್‌, ಸಿನಿಮಾದಲ್ಲಿ ನಟಿಸುವುದು ಮಾತ್ರವಲ್ಲ, ನಿರ್ದೇಶಕನಾಗಿಯೂ ಜವಾಬ್ದಾರಿ ಹೊತ್ತು ಚಿತ್ರವನ್ನು ಪೂರ್ಣಗೊಳಿಸಿ ರಿಲೀಸ್‌ ಮಾಡಿದ್ದಾರೆ.‌

ಚಿತ್ರದ ಹಾಡನ್ನು ಗೃಹಿಣಿಯರಿಂದ ಬಿಡುಗಡೆಗೊಳಿಸಿದ್ದ ಚಿತ್ರತಂಡ

ಚಿತ್ರದಲ್ಲಿ ವಿಕ್ಕಿಗೆ ನಾಯಕಿಯಾಗಿ ಧನ್ಯಾ ರಾಮ್‌ ಕುಮಾರ್‌ ನಟಿಸಿದ್ದಾರೆ. ಸೇನೆಯಲ್ಲಿ ಅಡುಗೆ ಕೆಲಸ ಮಾಡುವ ನಾಯಕ ಶಂಕರ್‌, ಒಮ್ಮೆ ಭಯೋತ್ಪಾದಕರ ದಾಳಿ ಆದಾಗ ಧೈರ್ಯದಿಂದ ಹೋರಾಡುತ್ತಾನೆ. ಇವನ ಸಾಹಸ ಎಲ್ಲೆಡೆ ಮನೆ ಮಾತಾಗುತ್ತದೆ. ಶಂಕರ್‌ ಸ್ವಂತ ಊರಿನವರು ಕೂಡಾ ನಮ್ಮ ಊರಿನ ಹುಡುಗನ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಾರೆ. ಅದಕ್ಕಾಗಿ ಶಂಕರನ ಒಂದು ಕಪ್ಪು ಪ್ರತಿಮೆಯನ್ನು ಸ್ಥಾಪಿಸುತ್ತಾರೆ. ನನಗೆ ಇಷ್ಟೆಲ್ಲಾ ಗೌರವ ಸಿಕ್ಕಿದೆ ಎಂದು ತಿಳಿದ ಶಂಕರ್‌ ಆಶ್ಚರ್ಯ ವ್ಯಕ್ತಪಡಿಸುತ್ತಾನೆ. ಅಲ್ಲಿಂದ ಆಚೆಗೆ ಅವನು ಹೇಗೆ ಬದಲಾಗುತ್ತಾನೆ? ಅದರಿಂದ ಏನೆಲ್ಲಾ ಸಮಸ್ಯೆಗೆ ಸಿಲುಕುತ್ತಾನೆ? ಕೊನೆಗೆ ಅದರಿಂದ ಹೇಗೆ ಹೊರ ಬರುತ್ತಾನೆ ಅನ್ನೋದು ಚಿತ್ರದ ಕಥೆ. ಇದೇ ವರ್ಷ ಆಗಸ್ಟ್‌ನಲ್ಲಿ ಚಿತ್ರತಂಡ ಸಿನಿಮಾದ ಬಾಂಡ್ಲಿ ಸ್ಟವ್...ಹಾಡನ್ನು ಗೃಹಿಣಿಯರಿಂದ ಬಿಡುಗಡೆ ಮಾಡಿಸಿ ಗಮನ ಸೆಳೆದಿತ್ತು.

ಕಾಲಾಪತ್ಥರ್‌ ಚಿತ್ರಕ್ಕೆ ರಾಮಾ ರಾಮಾ ರೇ, ಒಂದಲ್ಲಾ ಎರಡಲ್ಲಾ ಸಿನಿಮಾ ನಿರ್ದೇಶಕ ಸತ್ಯಪ್ರಕಾಶ್ ಕಥೆ ಬರೆದಿದ್ದಾರೆ. ಚಿತ್ರದ ಹಾಡುಗಳಿಗೆ ಅನೂಪ್‌ ಸೀಳಿನ್‌ ಸಂಗೀತ ನೀಡಿದ್ದಾರೆ. ಭುವನ್ ಮೂವೀಸ್ ಬ್ಯಾನರ್‌ನಲ್ಲಿ ಭುವನ್ ಸುರೇಶ್ ಹಾಗೂ ನಾಗರಾಜ್ ಬಿಲ್ಲಿನಕೋಟೆ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಟಿ.ಎಸ್‌. ನಾಗಾಭರಣ, ರಾಜೇಶ್​ ನಟರಂಗ, ಸಂಪತ್​ ಮೈತ್ರೇಯ ಹಾಗೂ ಇನ್ನಿತರರು ಚಿತ್ರದಲ್ಲಿ ನಟಿಸಿದ್ದಾರೆ. ನಾಯಕಿ ಧನ್ಯಾ ಈ ಚಿತ್ರದಲ್ಲಿ ಶಿಕ್ಷಕಿಯಾಗಿ ನಟಿಸಿದ್ದಾರೆ.

ಒಟಿಟಿಯಲ್ಲಿ ಸ್ಟ್ರೀಮ್‌ ಯಾವಾಗ?

ಸಾಮಾನ್ಯವಾಗಿ ಥಿಯೇಟರ್‌ನಲ್ಲಿ ಬಿಡುಗಡೆ ಆದ ಒಂದು ತಿಂಗಳಲ್ಲೇ ಸಿನಿಮಾಗಳು ಒಟಿಟಿಗೆ ಎಂಟ್ರಿ ಕೊಡುತ್ತವೆ. ಈಗ ಕಾಲಾಪತ್ಥರ್‌ ಸಿನಿಮಾ ಯಾವಾಗ ಎಂಟ್ರಿ ಕೊಡಬಹುದು ಎಂದು ಸಿನಿಪ್ರಿಯರು ಲೆಕ್ಕಾಚಾರ ಹಾಕುತ್ತಿದ್ದಾರೆ. ಅಕ್ಟೋಬರ್‌ನಲ್ಲಿ ದಸರಾ ಅಥವಾ ತಿಂಗಳ ಕೊನೆಯಲ್ಲಿ ಕಾಲಾಪತ್ಥರ್‌ ಜೀ 5 ಅಥವಾ ಅಮೆಜಾನ್‌ ಪ್ರೈಂನಲ್ಲಿ ಸ್ಟ್ರೀಮ್‌ ಆಗಲಿದೆ.

Whats_app_banner