ಕನ್ನಡ ಸುದ್ದಿ  /  Entertainment  /  Sandalwood News Yash Toxic Movie Update Two Bollywood Actresses Confirmed Kareena Kapoor Kiara Advani Pcp

Yash Toxic: ಟಾಕ್ಸಿಕ್‌ಗೆ ಇಬ್ಬರು ಬಾಲಿವುಡ್‌ ಹೀರೋಯಿನ್‌ಗಳು, ಒಬ್ಬರು ಕರೀನಾ ಕಪೂರ್‌, ಇನ್ನೊಬ್ಬರು ಯಾರು? ಇಲ್ಲಿದೆ ವಿವರ

ರಾಕಿಂಗ್‌ ಸ್ಟಾರ್‌ ಯಶ್‌ ಅಭಿನಯದ ಟಾಕ್ಸಿಕ್‌ ಸಿನಿಮಾದಲ್ಲಿ ಬಾಲಿವುಡ್‌ ನಟಿಯರು ನಟಿಸಲಿದ್ದಾರೆ. ಕರೀನಾ ಕಪೂರ್‌ ಮತ್ತು ಇನ್ನೊಬ್ಬರು ನಟಿ ನಟಿಸುವುದು ಈಗಾಗಲೇ ಖಚಿತವಾಗಿದೆ. ಗೀತು ಮೋಹನ್‌ದಾಸ್‌ ನಿರ್ದೇಶನದ ಟಾಕ್ಸಿಕ್‌ ಸಿನಿಮಾ ಏಪ್ರಿಲ್‌ 10, 2025ರಂದು ಬಿಡುಗಡೆಯಾಗಲಿದೆ.

ಯಶ್‌ ಟಾಕ್ಸಿಕ್‌ ಸಿನಿಮಾದಲ್ಲಿ ಬಾಲಿವುಡ್‌ ನಟಿಯರು
ಯಶ್‌ ಟಾಕ್ಸಿಕ್‌ ಸಿನಿಮಾದಲ್ಲಿ ಬಾಲಿವುಡ್‌ ನಟಿಯರು

ಬೆಂಗಳೂರು: ರಾಕಿಂಗ್‌ ಸ್ಟಾರ್‌ ಯಶ್‌ ನಟನೆಯ ಟಾಕ್ಸಿಕ್‌ ಸಿನಿಮಾ ಸಾಕಷ್ಟು ನಿರೀಕ್ಷೆ ಹುಟ್ಟುಹಾಕಿದೆ. ಈ ಸಿನಿಮಾದ ಕಥೆ ಏನು? ಇತ್ಯಾದಿ ನಿರೀಕ್ಷೆಗಳ ಜತೆ ಯಶ್‌ ಜತೆ ನಾಯಕಿಯರಾಗಿ ಯಾರೆಲ್ಲ ನಟಿಸ್ತಾರೆ? ವಿಲನ್‌ ಪಾತ್ರಗಳಲ್ಲಿ ಯಾರೆಲ್ಲ ಇರುತ್ತಾರೆ ಎಂಬ ಕುತೂಹಲ ಎಲ್ಲರಲ್ಲಿಯೂ ಇದೆ. ಇದೇ ಸಮಯದಲ್ಲಿ ಸ್ಯಾಂಡಲ್‌ವುಡ್‌ ನಟ ಯಶ್‌ ಸಿನಿಮಾದಲ್ಲಿ ಬಾಲಿವುಡ್‌ ನಟಿಯರು ಹೀರೋಯಿನ್‌ಗಳು ಎಂಬ ಮಾಹಿತಿ ಸಾಕಷ್ಟು ದಿನಗಳಿಂದ ಹರಿದಾಡುತ್ತಿದೆ. ಗುಲ್ಟೆ.ಕಾಂ ಪ್ರಕಾರ ಈ ಸಿನಿಮಾದಲ್ಲಿ ಇಬ್ಬರು ಬಾಲಿವುಡ್‌ ನಟಿಯರು ನಟಿಸುವುದು ಪಕ್ಕಾ ಆಗಿದೆ.

ಟಾಕ್ಸಿಕ್‌ ಸಿನಿಮಾದಲ್ಲಿ ಕರೀನಾ ಕಪೂರ್‌ ನಟಿಸಲಿದ್ದಾರೆ ಎಂಬ ವದಂತಿ ಕಳೆದ ಹಲವು ತಿಂಗಳುಗಳಿಂದ ಕೇಳಿಬರುತ್ತಿತ್ತು. ಇತ್ತೀಚೆಗೆ ಕ್ರ್ಯೂ ಸಿನಿಮಾದ ಮೂಲಕ ಪ್ರೇಕ್ಷಕರನ್ನು ರಂಜಿಸಿದ್ದ ಕರೀನಾ ಕಪೂರ್‌ ಅವರು ಯಶ್‌ ನಟನೆಯ ಟಾಕ್ಸಿಕ್‌ ಸಿನಿಮಾದಲ್ಲಿ ಇರಲಿದ್ದಾರೆ. ಯಶ್‌ ನಟನೆಯ ಕೆಜಿಎಫ್‌ 2ನಲ್ಲಿ ರವೀನಾ ಟಂಡನ್‌ ನಟಿಸಿದ್ದರು. ಈಗ ಕರೀನಾ ಕಪೂರ್‌ ಸರದಿ.

ಟಾಕ್ಸಿಕ್‌ ಸಿನಿಮಾದಲ್ಲಿ ನಟಿಸಿರುವ ಕುರಿತು ಕರೀನಾ ಕಪೂರ್‌ ಸಾಕಷ್ಟು ಹಿಂದೆಯೇ ಹಿಂಟ್‌ ನೀಡಿದ್ದರು. "ನಾನು ಈಗಾಗಲೇ ಹೇಳಿದಂತೆ ದಕ್ಷಿಣ ಭಾರತದ ದೊಡ್ಡ ಸಿನಿಮಾವೊಂದರಲ್ಲಿ ನಾನು ನಟಿಸಲಿದ್ದೇನೆ. ಈಗ ಎಲ್ಲವೂ ಪ್ಯಾನ್‌ ಇಂಡಿಯಾ" ಎಂದು ಹಲವು ಸಂದರ್ಭಗಳಲ್ಲಿ ಮಾಹಿತಿ ನೀಡಿದ್ದರು. ಇದೀಗ ಟಾಕ್ಸಿಕ್‌ ಸಿನಿಮಾದಲ್ಲಿ ಕರಿನಾ ಕಪೂರ್‌ ನಟಿಸುವುದು ಖಚಿತವಾಗಿದೆ.

ಟಾಕ್ಸಿಕ್‌ ಸಿನಿಮಾದಲ್ಲಿ ಕರೀನಾ ಕಪೂರ್‌ ಮಾತ್ರವಲ್ಲದೆ ಇನ್ನೊಬ್ಬರು ಬಾಲಿವುಡ್‌ ನಟಿ ನಟಿಸಲಿದ್ದಾರೆ. ಕಿಯಾರ ಅಡ್ವಾಣಿ ಟಾಕ್ಸಿಕ್‌ ಟೀಮ್‌ ಸೇರುವುದು ಖಚಿತವಾಗಿದೆ ಎಂದು ವರದಿಗಳು ತಿಳಿಸಿವೆ. ಟಾಕ್ಸಿಕ್‌ನಲ್ಲಿ ಕಿಯಾರ ಪ್ರಮುಖ ಪಾತ್ರ ನಿರ್ವಹಿಸಲಿದ್ದಾರೆ.

ಕರೀನಾ ಕಪೂರ್‌ ಮತ್ತು ಕಿಯಾರ ಅಡ್ವಾಣಿ ಮಾತ್ರವಲ್ಲದೆ ಇನ್ನೊಬ್ಬರು ನಟಿಯೂ ಟಾಕ್ಸಿಕ್‌ ಸಿನಿಮಾದಲ್ಲಿ ನಟಿಸಲಿದ್ದಾರೆ. ಅವರ ಹೆಸರು ಇನ್ನೂ ಖಚಿತವಾಗಿಲ್ಲ. ಟಾಕ್ಸಿಕ್‌ ಸಿನಿಮಾ ಏಪ್ರಿಲ್‌ 10, 2025ರಂದು ಬಿಡುಗಡೆಯಾಗಲಿದೆ. ಗೋವಾದ ಡ್ರಗ್‌ ಮಾಫಿಯಾ ವಿಷಯ ಟಾಕ್ಸಿಕ್‌ ಸಿನಿಮಾದಲ್ಲಿ ಇರಲಿದೆ.

ಸ್ಯಾಂಡಲ್‌ವುಡ್‌ ನಟ ಯಶ್‌ ಕೆಜಿಎಫ್‌ ಸಿನಿಮಾದ ಬಳಿಕ ದೇಶ-ವಿದೇಶದಲ್ಲಿ ಅಭಿಮಾನಿಗಳನ್ನು ಪಡೆದಿದ್ದಾರೆ. ಕೆಜಿಎಫ್‌ ಬಳಿಕ ಹಲವು ಸಮಯ ಕಳೆದರೂ ಮುಂದಿನ ಸಿನಿಮಾದ ಕುರಿತು ರಾಕಿಂಗ್‌ ಸ್ಟಾರ್‌ ಅಪ್‌ಡೇಟ್‌ ನೀಡಿರಲಿಲ್ಲ. ಕಳೆದ ವರ್ಷ ಡಿಸೆಂಬರ್‌ ತಿಂಗಳಿನಲ್ಲಿ ಟಾಕ್ಸಿಕ್‌ ಕುರಿತು ಚಿತ್ರತಂಡ ಮಾಹಿತಿ ನೀಡಿತ್ತು. . ಗೀತು ಮೋಹನ್‌ದಾಸ್‌ ನಿರ್ದೇಶನದಲ್ಲಿ ಟಾಕ್ಸಿಕ್‌ ಸಿನಿಮಾ ನಿರ್ಮಿಸಲಾಗುವುದು ಎಂದು ಮಾಹಿತಿ ನೀಡಲಾಗಿತ್ತು.

ಕಳೆದ ತಿಂಗಳು ಟಾಕ್ಸಿಕ್‌ ಸಿನಿಮಾಕ್ಕೆ ಅಡಿಷನ್‌ ಕರೆಯಲಾಗಿತ್ತು. ಟಾಕ್ಸಿಕ್‌ ಸಿನಿಮಾದಲ್ಲಿ ನಟಿಸಲು 25-75 ವಯೋಮಿತಿಯ ಪುರುಷರು, 12-16 ವರ್ಷದ ಮಕ್ಕಳು ಮತ್ತು 23-65 ವರ್ಷ ವಯೋಮಿತಿಯ ಮಹಿಳೆಯರಿಂದ ಅರ್ಜಿ ಆಹ್ವಾನಿಸಲಾಗಿತ್ತು.