ಸ್ಯಾಂಡಲ್‌ವುಡ್‌ನಲ್ಲಿ ಎಲೆ ಮರೆ ಕಾಯಿಯಂತಿರುವ ಯುವ ಸಂಗೀತಗಾರ ಚೇತನ್‌ ರಾವ್‌; ಇವರ ಸಾಧನೆ ಒಂದಲ್ಲಾ ಎರಡಲ್ಲ
ಕನ್ನಡ ಸುದ್ದಿ  /  ಮನರಂಜನೆ  /  ಸ್ಯಾಂಡಲ್‌ವುಡ್‌ನಲ್ಲಿ ಎಲೆ ಮರೆ ಕಾಯಿಯಂತಿರುವ ಯುವ ಸಂಗೀತಗಾರ ಚೇತನ್‌ ರಾವ್‌; ಇವರ ಸಾಧನೆ ಒಂದಲ್ಲಾ ಎರಡಲ್ಲ

ಸ್ಯಾಂಡಲ್‌ವುಡ್‌ನಲ್ಲಿ ಎಲೆ ಮರೆ ಕಾಯಿಯಂತಿರುವ ಯುವ ಸಂಗೀತಗಾರ ಚೇತನ್‌ ರಾವ್‌; ಇವರ ಸಾಧನೆ ಒಂದಲ್ಲಾ ಎರಡಲ್ಲ

ಕನ್ನಡದಲ್ಲಿ ಎಷ್ಟೋ ಪ್ರತಿಭೆಗಳು ಎಲೆ ಮರೆ ಕಾಯಿಯಂತೆ ಇದ್ದಾರೆ. ಕೆಟಿಎಂ, ಸೀತಾ ಸರ್ಕಲ್ ಶ್ರೀ ಕೃಷ್ಣನ್ ಮನೆ ಹಿಂದಿಯ 'ಮಾನ್ಸೂನ್ ಶೂಟೌಟ್ ಸೇರಿದಂತೆ ಅನೇಕ ಸಿನಿಮಾಗಳಿಗೆ ಸಂಗೀತ ನಿರ್ದೇಶನ ಮಾಡಿರುವ ಯುವ ಪ್ರತಿಭೆ ಚೇತನ್‌ ರಾವ್‌, ಬೆಂಗಳೂರಿನವರು. ಇಂಜಿನಿಯರಿಂಗ್‌ ಪದವೀಧರರಾಗಿರುವ ಇವರು ನಂತರ ಸಂಗೀತ ಕ್ಷೇತ್ರವನ್ನು ಅಯ್ಕೆ ಮಾಡಿಕೊಂಡರು.

ಸ್ಯಾಂಡಲ್‌ವುಡ್‌ನಲ್ಲಿ ಎಲೆ ಮರೆ ಕಾಯಿಯಂತಿರುವ ಯುವ ಸಂಗೀತಗಾರ ಚೇತನ್‌ ರಾವ್‌; ಇವರ ಸಾಧನೆ ಒಂದಲ್ಲಾ ಎರಡಲ್ಲ
ಸ್ಯಾಂಡಲ್‌ವುಡ್‌ನಲ್ಲಿ ಎಲೆ ಮರೆ ಕಾಯಿಯಂತಿರುವ ಯುವ ಸಂಗೀತಗಾರ ಚೇತನ್‌ ರಾವ್‌; ಇವರ ಸಾಧನೆ ಒಂದಲ್ಲಾ ಎರಡಲ್ಲ

ಯಾವುದೇ ಸಿನಿಮಾ ಗೆಲ್ಲಬೇಕಾದರೆ, ನಟ-ನಟಿಯರು ಮಾತ್ರವಷ್ಟೇ ಅಲ್ಲದೆ, ತೆರೆ ಹಿಂದಿನ ತಾಂತ್ರಿಕ ಬಳಗದ ಕೆಲಸವೂ ಅಷ್ಟೇ ಮುಖ್ಯ. ಬೆಳ್ಳಿ ಪರದೆ ಮೇಲೆ ಕಲಾವಿದರು ಮೋಡಿ ಮಾಡಿದರೆ, ಅವರಿಗೆ ಕ್ಯಾಮರಾ, ಸಂಗೀತ, ಹಿನ್ನೆಲೆ ಸಂಗೀತ ಪೂರಕವಾಗಿರಬೇಕು. ಕಿವಿಗೆ ಇಂಪು ನೀಡುವ ಹಾಡುಗಳು ಮನ ಕುಣಿಸಬೇಕು. ಅದಕ್ಕೆ ಒಂದೊಳ್ಳೆ ಸಂಗೀತ ನಿರ್ದೇಶಕರು ಬೇಕು. ಕನ್ನಡದಲ್ಲಿ ಇಂತ ಸಾಕಷ್ಟು ಮ್ಯೂಸಿಕ್‌ ಡೈರೆಕ್ಟರ್‌ಗಳು ಇದ್ದಾರೆ. ಇದೀಗ ಮತೊಬ್ಬ ಯುವ ಸಂಗೀತ ನಿರ್ದೇಶಕ, ಚೇತನ್‌ ರಾವ್‌ ಇದೀಗ ತಮ್ಮ ಸಂಗೀತದ ಮೂಲಕವೇ ಗಮನ ಸೆಳೆಯುತ್ತಿದ್ದಾರೆ.

ಇಂಜಿನಿಯರಿಂಗ್‌ ಪದವೀಧರ

ಕನ್ನಡಿಗ, ಅದರಲ್ಲೂ ಬೆಂಗಳೂರಿನವರಾದ ಚೇತನ್‌ ರಾವ್‌, ಆರ್‌ವಿ ಕಾಲೇಜಿನಲ್ಲಿ ಇಂಜಿನಿಯರಿಂಗ್‌ ಮುಗಿಸಿ ನಂತರ ಆಯ್ದುಕೊಂಡಿದ್ದು ಸಂಗೀತ ಕ್ಷೇತ್ರವನ್ನು. ಚೆನ್ನೈನಲ್ಲಿರುವ ಲಂಡನ್‌ ಮೂಲದ Middlesex Universityಯಲ್ಲಿ ಸಂಗೀತ ಕೋರ್ಸ್‌ ಮುಗಿಸಿದ್ದಾರೆ. ಇವರು ಸಂಗೀತ ನಿರ್ದೇಶಕ ಮಾತ್ರವಲ್ಲ, ಒಳ್ಳೆ ಹಾಡುಗಾರರೂ ಹೌದು. ಸಂಗೀತಾ ಕಟ್ಟಿ ಅವರಿಂದ ಹಿಂದೂಸ್ತಾನಿ ಸಂಗೀತ ಶಿಕ್ಷಣವನ್ನು ಪಡೆದಿದ್ದಾರೆ. ನಾನು ಏನೇ ಸಾಧಿಸಿದರೂ ಅದು ಗುರುಗಳಾದ ಸಂಗೀತಾ ಕಟ್ಟಿ ಅವರಿಗೆ ಎಂದು ಚೇತನ್‌ ಹೇಳುತ್ತಾರೆ. ಆಸ್ಕರ್ ಪ್ರಶಸ್ತಿ ಪಡೆದಿರುವ ಭಾರತದ ಖ್ಯಾತ ಸಂಗೀತ ನಿರ್ದೇಶಕ ಎ. ಆರ್‌ ರೆಹಮಾನ್‌ ಅವರ ಜತೆಗೆ ಈ ಹಿಂದೆ ಸಹಾಯಕ ನಿರ್ದೇಶಕರಾಗಿಯೂ ಕೆಲಸ ಮಾಡಿದ ಅನುಭವ ಚೇತನ್‌ ಅವರಿಗಿದೆ. ಇದೀಗ ರೆಹಮಾನ್‌ ಅವರ ಒಪೆರಾ ಬ್ಯಾಂಡ್‌ ಸೆಂಪ್ರೆ ಲಿಬೆರಾದಲ್ಲಿ ಲೀಡ್‌ ಗಾಯಕರಾಗಿ ಇಂದಿಗೂ ಸಕ್ರಿಯರಾಗಿದ್ದಾರೆ. ಕನ್ನಡ ಮತ್ತು ಹಿಂದಿ ಸಿನಿಮಾ ಚಿತ್ರರಂಗದಲ್ಲಿ ಸ್ವತಂತ್ರ ಸಂಗೀತ ನಿರ್ದೇಶಕರಾಗಿ ಜತೆಗೆ ಗಾಯಕರಾಗಿಯೂ ಗುರುತಿಸಿಕೊಂಡಿದ್ದಾರೆ.‌

ಹಿಂದಿ ಚಿತ್ರಕ್ಕೂ ಕಂಪೋಸಿಂಗ್

ಅನುರಾಗ್ ಕಶ್ಯಪ್ ಮತ್ತು ಆಸ್ಕರ್ ಪ್ರಶಸ್ತಿ ವಿಜೇತ ನಿರ್ಮಾಪಕಿ ಗುನೀತ್ ಮೊಂಗಾ ಅವರ ನವಾಜುದ್ದೀನ್‌ ಸಿದ್ದೀಕಿ ನಾಯಕನಾಗಿ ನಟಿಸಿರುವ 'ಮಾನ್ಸೂನ್ ಶೂಟೌಟ್' ಚಿತ್ರದ 2 ಹಾಡುಗಳನ್ನು ಚೇತನ್‌ ರಾವ್‌ ಕಂಪೋಸ್‌ ಮಾಡಿದ್ದಾರೆ. 2017ರ ಡಿಸೆಂಬರ್‌ 15ರಂದು ಈ ಸಿನಿಮಾ ಬಿಡುಗಡೆಯಾಗಿತ್ತು. ಕಾನ್‌ ಚಲನಚಿತ್ರೋತ್ಸವದಲ್ಲಿಯೂ ಪ್ರಸಾರ ಕಂಡು ಮೆಚ್ಚುಗೆ ಪಡೆದಿತ್ತು. ಕನ್ನಡಿಗರಾಗಿ ಕನ್ನಡದಲ್ಲಿ ಏನೂ ಮಾಡೇ ಇಲ್ವಾ? ಎಂಬ ಪ್ರಶ್ನೆ ಎದುರಾಗಬಹುದು. ಅದಕ್ಕೂ ಉತ್ತರ ಇದೆ. ಇದೇ ವರ್ಷದ ಫೆಬ್ರವರಿ 16ರಂದು ಬಿಡುಗಡೆ ಆಗಿದ್ದ ದೀಕ್ಷಿತ್‌ ಶೆಟ್ಟಿ ನಾಯಕನಾಗಿ ನಟಿಸಿದ್ದ ಕೆಟಿಎಂ ಚಿತ್ರದ ಹಾಡುಗಳಿಗೆ ಮತ್ತು ಚಿತ್ರಕ್ಕೆ ಹಿನ್ನೆಲೆ ಸಂಗೀತವನ್ನು ಸಂಯೋಜಿಸಿದ್ದು ಇದೇ ಚೇತನ್‌. ಬಿಡುಗಡೆಯಾದ 5 ವಾರಗಳ ಕಾಲ ಈ ಸಿನಿಮಾ ಚಿತ್ರಮಂದಿರದಲ್ಲಿ ಓಡಿತ್ತು. ಹಾಡುಗಳಿಂದಲೂ ಮೋಡಿ ಮಾಡಿತ್ತು.‌

ಹೊಸ ಆಲ್ಬಂ ರಿಲೀಸ್

ಸೆಪ್ಟೆಂಬರ್‌ 20 ರಂದು ಚೇತನ್‌ ರಾವ್‌ ಅವರ 'ಸರ್ವಸ್ವ' ಹಾಡು ಕನ್ನಡ ಮತ್ತು ಹಿಂದಿ ಭಾಷೆಗಳಲ್ಲಿ ಬಿಡುಗಡೆಯಾಗಿದೆ. ಸದ್ಯದ ಪ್ರಾಜೆಕ್ಟ್‌ಗಳ ಬಗ್ಗೆ ಹೇಳುವುದಾದರೆ, ಪ್ರಸ್ತುತ ನಿರೂಪ್ ಭಂಡಾರಿ ಅಭಿನಯದ ಇನ್ನೂ ಟೈಟಲ್‌ ಅಂತಿಮವಾಗದ ಸಿನಿಮಾಗೆ ಕೂಡಾ ಚೇತನ್‌ ಸಂಗೀತ ನಿರ್ದೇಶಕರಾಗಿ ಕೆಲಸ ಆರಂಭಿಸಿದ್ದಾರೆ. ಇದರ ಜತೆಗೆ 'ಸೀತಾ ಸರ್ಕಲ್ ಶ್ರೀ ಕೃಷ್ಣನ್ ಮನೆ' ಸೇರಿದಂತೆ ಇನ್ನೂ 2 ಕನ್ನಡ ಸಿನಿಮಾಗಳಿಗೂ ಕೆಲಸ ಮಾಡುತ್ತಿದ್ದಾರೆ. ಆ ಪೈಕಿ 'ಸೀತಾ ಸರ್ಕಲ್ ಶ್ರೀ ಕೃಷ್ಣನ್ ಮನೆ' ಸಿನಿಮಾ ಇದೇ ವರ್ಷ ತೆರೆಗೆ ಬರಲಿದೆ. ಸಿನಿಮಾ ಜತೆ ಜತೆಗೆ ಅಮೆರಿಕಾ, ದುಬೈ, ಯುಕೆ ಸೇರಿ ವಿಶ್ವದ ಹಲವೆಡೆ ಸಿಂಗರ್‌ ಆಗಿ ಫರ್ಫಾಮನ್ಸ್‌ ನೀಡಿದ್ದಾರೆ. ಈ ಯುವ ಸಂಗೀತಗಾರ 'ಆರಿಜಿನ್ ಈಸ್ಟ್ ಮ್ಯೂಸಿಕ್' ಶೀರ್ಷಿಕೆಯ ಆಡಿಯೊ ಕಂಪನಿಯ ಸಂಸ್ಥಾಪಕರೂ ಹೌದು. ಚೇತನ್‌ ರಾವ್ ಹಲವು ಬ್ರಾಂಡ್‌ಗಳಿಗೂ ಜಿಂಗಲ್ಸ್‌ ಕೂಡಾ ಮಾಡಿದ್ದಾರೆ. ಇಂತಹ ಯುವ ಸಂಗೀತಗಾರರರು ಕನ್ನಡದಲ್ಲಿ ಹೆಚ್ಚಾಗಿ ಬರಬೇಕಿದೆ.

Whats_app_banner