ರೇಣುಕಾ ಸ್ವಾಮಿ ಕೊಲೆ ಪ್ರಕರಣ, ದರ್ಶನ್‌ ಹಣದ ಮೂಲ ಪತ್ತೆಗೆ ಮುಂದಾದ ಆದಾಯ ತೆರಿಗೆ ಇಲಾಖೆ, ಜಾರಿಯಾಯ್ತು ನೋಟಿಸ್‌-sandalwood news renukaswamy murder case income tax department issue notice to darshan on money transaction kub ,ಕರ್ನಾಟಕ ಸುದ್ದಿ
ಕನ್ನಡ ಸುದ್ದಿ  /  ಕರ್ನಾಟಕ  /  ರೇಣುಕಾ ಸ್ವಾಮಿ ಕೊಲೆ ಪ್ರಕರಣ, ದರ್ಶನ್‌ ಹಣದ ಮೂಲ ಪತ್ತೆಗೆ ಮುಂದಾದ ಆದಾಯ ತೆರಿಗೆ ಇಲಾಖೆ, ಜಾರಿಯಾಯ್ತು ನೋಟಿಸ್‌

ರೇಣುಕಾ ಸ್ವಾಮಿ ಕೊಲೆ ಪ್ರಕರಣ, ದರ್ಶನ್‌ ಹಣದ ಮೂಲ ಪತ್ತೆಗೆ ಮುಂದಾದ ಆದಾಯ ತೆರಿಗೆ ಇಲಾಖೆ, ಜಾರಿಯಾಯ್ತು ನೋಟಿಸ್‌

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣ ಮುಚ್ಚಿ ಹಾಕಲು ಹಣ ಬಳಕೆ ಮಾಡಿದ್ದರ ಹೇಳಿಕೆ ಹಿನ್ನೆಲೆಯಲ್ಲಿ ಹಣ ಮೂಲ ಪತ್ತೆಗೆ ಮುಂದಾಗಿರುವ ಆದಾಯ ತೆರಿಗೆ ಇಲಾಖೆ ನಟ ದರ್ಶನ್‌ ಗೆ ನೋಟಿಸ್‌ ಜಾರಿ ಮಾಡಿದೆ.

ನಟ ದರ್ಶನ್‌ಗೆ ಈಗ ಆದಾಯ ತೆರಿಗೆ ಇಲಾಖೆ ನೊಟೀಸ್‌ ಜಾರಿ ಮಾಡಿದೆ.
ನಟ ದರ್ಶನ್‌ಗೆ ಈಗ ಆದಾಯ ತೆರಿಗೆ ಇಲಾಖೆ ನೊಟೀಸ್‌ ಜಾರಿ ಮಾಡಿದೆ.

Film Star Darshan ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಪ್ರಮುಖ ಆರೋಪಿಯಾಗಿ ಜೈಲು ಸೇರಿರುವ ನಟ ದರ್ಶನ್‌ ತೂಗುದೀಪ ಅವರಿಗೆ ಆದಾಯ ತೆರಿಗೆ ಇಲಾಖೆ ನೋಟಿಸ್‌ ಜಾರಿ ಮಾಡಿದೆ. ರೇಣುಕಾ ಸ್ವಾಮಿ ಕೊಲೆ ಮುಚ್ಚಿ ಭಾರೀ ಪ್ರಮಾಣದಲ್ಲಿ ದರ್ಶನ್‌ ಹಣ ನೀಡಿದ್ದರು ಎನ್ನುವ ಆರೋಪಗಳು ಹಾಗೂ ಹೇಳಿಕೆಗಳನ್ನಾಧರಿಸಿ ಆದಾಯ ಇಲಾಖೆ ನೋಟಿಸ್‌ ಜಾರಿ ಮಾಡಿದ್ದು ದರ್ಶನ್‌ರನ್ನು ವಿಚಾರಣೆಗೆ ಒಳಪಡಿಸಲಿದೆ. ಇದಲ್ಲದೇ ಹಣದ ವಿಚಾರವಾಗಿ ದಾಳಿ ನಡೆಸಲು ಅನುಮತಿ ನೀಡುವಂತೆಯೂ ಕೋರಿ ಆದಾಯ ತೆರಿಗೆ ಇಲಾಖೆ ಬೆಂಗಳೂರು ಸೆಷನ್ಸ್‌ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದೆ. ಅನುಮತಿ ಸಿಕ್ಕರೆ ದರ್ಶನ್‌ ಅವರ ನಿವಾಸಗಳ ಮೇಲೆ ದಾಳಿ ಮಾಡಿ ಮಾಹಿತಿ ಹಾಕಲು ಸಿದ್ದತೆಯನ್ನೂ ಆದಾಯ ತೆರಿಗೆ ಇಲಾಖೆ ಮಾಡಕೊಂಡಿದೆ.

ಆದಾಯ ತೆರಿಗೆ ಅಧಿಕಾರಿಗಳು ಸೆಪ್ಟೆಂಬರ್ 24 ರಂದು ದರ್ಶನ್ ತೂಗುದೀಪ ಅವರ ನಿವಾಸದ ಮೇಲೆ ದಾಳಿ ಮಾಡಲು ಅನುಮತಿ ಕೋರಿ ಸೆಷನ್ಸ್ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರಿಂದ ದರ್ಶನ್ ತೂಗುದೀಪ ಅವರಿಗೆ ಇನ್ನಷ್ಟು ತೊಂದರೆಗೆ ಸಿಲುಕುವ ಸನ್ನಿವೇಶ ಕಂಡು ಬರುತ್ತಿದೆ. ಕಾದಿದೆ. ರೇಣುಕಾ ಸ್ವಾಮಿಯ ಅಮಾನುಷ ಹತ್ಯೆಗೆ ಸಂಬಂಧಿಸಿದಂತೆ ದರ್ಶನ್ ಪ್ರಸ್ತುತ ನ್ಯಾಯಾಂಗ ಬಂಧನದಲ್ಲಿದ್ದಾರೆ. ಮೂರು ತಿಂಗಳ ಹಿಂದೆಯೇ ಬಂಧನಕ್ಕೆ ಒಳಗಾಗಿ ಬೆಂಗಳೂರು ನಂತರ ಸದ್ಯ ಬಳ್ಳಾರಿ ಜೈಲಿಯಲ್ಲಿ ದರ್ಶನ್‌ ಇದ್ದಾರೆ.

ಇಂಡಿಯಾ ಟುಡೇ ವರದಿಯ ಪ್ರಕಾರ, ಆದಾಯ ತೆರಿಗೆ ಅಧಿಕಾರಿಗಳು ಮಂಗಳವಾರ ಕನ್ನಡ ನಟನಿಗೆ ಅವರ ಮನೆಯಲ್ಲಿ ದಾಖಲೆಗಳನ್ನು ಪರಿಶೀಲಿಸಲು ನೋಟಿಸ್ ನೀಡಿದ್ದಾರೆ ಎಂದು ಮೂಲಗಳು ಖಚಿತಪಡಿಸಿವೆ. ಇದಲ್ಲದೆ, ಅಪರಾಧದಲ್ಲಿ ಭಾಗಿಯಾಗಿರುವ ಹಣದ ಬಗ್ಗೆ ಹೇಳಿಕೆಯನ್ನು ದಾಖಲಿಸಲು ಅವರು ಬಳ್ಳಾರಿ ಜೈಲಿಗೂ ಭೇಟಿ ನೀಡಿದ್ದರು.

ರೇಣುಕಾ ಸ್ವಾಮಿ ಹತ್ಯೆ ಪ್ರಕರಣ ಮುಚ್ಚಿಹಾಕಲು ಮತ್ತು ಅವರ ಪರವಾಗಿ ಶರಣಾಗಲು ದರ್ಶನ್ ಕೆಲವರಿಗೆ 30 ಲಕ್ಷ ರೂ ನೀಡಿರುವ ಕುರಿತು, ಇದಲ್ಲದೆ, ಕೊಲೆಗೆ ಸಂಬಂಧಿಸಿದ ಸಾಕ್ಷ್ಯಗಳನ್ನು ನಾಶಪಡಿಸಲು ಇತರ ಆರೋಪಿಗಳು ಮೌನವಾಗಿರಲಿ ದರ್ಶನ್‌ ತೂಗುದೀಪ ತನ್ನ ಸ್ನೇಹಿತರೊಬ್ಬರಿಂದ 40 ಲಕ್ಷ ರೂಪಾಯಿ ಸಾಲ ಪಡೆದಿದ್ದಾರೆ ಎಂಬುದು ಹಿಂದಿನ ತನಿಖೆಯಿಂದ ತಿಳಿದುಬಂದಿದೆ. ಅಲ್ಲದೇ ಖುದ್ದು ವಿಚಾರಣೆ ವೇಳೆಯೂ ದರ್ಶನ್‌ ಇದನ್ನೂ ಒಪ್ಪಿಕೊಂಡಿರುವುದು ವರದಿಯಾಗಿದೆ.

ಈ ಕಾರಣದಿಂದಲೇ ಆದಾಯ ತೆರಿಗೆ ಇಲಾಖೆಯು ದರ್ಶನ್‌ ಅವರೇ ಒಪ್ಪಿಕೊಂಡಂತೆ ಹಣ ಯಾರಿಂದ ಸಾಲ ಪಡೆದರು. ಅವರು ಎಲ್ಲಿಂದ ಹಣ ನೀಡಿದರು. ಇದರಲ್ಲಿ ಯಾರು ಇದ್ದಾರೆ ಮಾಹಿತಿ ಕಲೆ ಹಾಕಲು ಮುಂದಾಗಿದೆ. ನ್ಯಾಯಾಲಯದ ಅನುಮತಿ ಸಿಕ್ಕರೆ ದರ್ಶನ್‌ ಮನೆ ಮೇಲೆ ದಾಳಿ ಮಾಡುವ ಸಾಧ್ಯತೆ ದಟ್ಟವಾಗಿದೆ.

ಯಾವುದೇ ರೀತಿಯ ಹಣದ ವಹಿವಾಟು ನಡೆದಾಗ ಆದಾಯ ತೆರಿಗೆ ಇಲಾಖೆ ಹಣದ ಮೂಲವನ್ನು ಪರಾಮರ್ಶಿಸಲಿದೆ. ಈ ಬಗ್ಗೆ ಸಂಬಂಧಿಸಿದವರಿಗೆ ನೋಟಿಸ್‌ ನೀಡಿ ವಿಚಾರಣೆ ನಡೆಸಿ ಮಾಹಿತಿ ನೀಡಲು ಕೋರುವಂತ ಅವಕಾಶ ಆದಾಯ ತೆರಿಗೆ ಕಾನೂನಿನಲ್ಲಿ ಇದೆ. ಇದನ್ನಾಧರಿಸಿಯೇ ಈಗ ಆದಾಯ ತೆರಿಗೆ ಇಲಾಖೆಯು ದರ್ಶನ್‌ ಹಾಗೂ ಅವರ ಸಂಗಡಿಗರಿಂದ ವಿವರ ಕಲೆ ಹಾಕತ್ತಿದೆ.

ಏತನ್ಮಧ್ಯೆ, ಇತ್ತೀಚಿನ ಘಟನೆಗಳಲ್ಲಿ, ದರ್ಶನ್ 100 ದಿನಗಳನ್ನು ಜೈಲಿನಲ್ಲಿ ಕಳೆದ ನಂತರ ಜಾಮೀನು ಅರ್ಜಿ ಸಲ್ಲಿಸಿದ್ದಾರೆ. ಆದಾಗ್ಯೂ, ನ್ಯಾಯಾಲಯವು ಅವರ ಜಾಮೀನು ಅರ್ಜಿಯನ್ನು ಸೆಪ್ಟೆಂಬರ್ 27 ಕ್ಕೆ ಮುಂದೂಡಿದೆ. ಮತ್ತೊಂದೆಡೆ, ರೇಣುಕಾ ಸ್ವಾಮಿ ಪ್ರಕರಣದ ಮೂವರು ಆರೋಪಿಗಳಾದ ಕೇಶವ ಮೂರ್ತಿ, ನಿಖಿಲ್ ನಾಯ್ಕ್ ಮತ್ತು ಕಾರ್ತಿಕ್ ಅವರಿಗೆ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.

mysore-dasara_Entry_Point