ಯುವ ರಾಜ್‌ಕುಮಾರ್‌ ಪತ್ನಿ ಶ್ರೀದೇವಿ ಭೈರಪ್ಪ ಪರಿಚಯ; ಹುಟ್ಟೂರು ಮೈಸೂರು, ಓದಿದ್ದು ಹಾರ್ವರ್ಡ್‌, ವಿವಾಹ ವಿಚ್ಛೇದನದತ್ತ ಲವ್‌ಬರ್ಡ್ಸ್‌
ಕನ್ನಡ ಸುದ್ದಿ  /  ಮನರಂಜನೆ  /  ಯುವ ರಾಜ್‌ಕುಮಾರ್‌ ಪತ್ನಿ ಶ್ರೀದೇವಿ ಭೈರಪ್ಪ ಪರಿಚಯ; ಹುಟ್ಟೂರು ಮೈಸೂರು, ಓದಿದ್ದು ಹಾರ್ವರ್ಡ್‌, ವಿವಾಹ ವಿಚ್ಛೇದನದತ್ತ ಲವ್‌ಬರ್ಡ್ಸ್‌

ಯುವ ರಾಜ್‌ಕುಮಾರ್‌ ಪತ್ನಿ ಶ್ರೀದೇವಿ ಭೈರಪ್ಪ ಪರಿಚಯ; ಹುಟ್ಟೂರು ಮೈಸೂರು, ಓದಿದ್ದು ಹಾರ್ವರ್ಡ್‌, ವಿವಾಹ ವಿಚ್ಛೇದನದತ್ತ ಲವ್‌ಬರ್ಡ್ಸ್‌

Yuva Rajkumar Sridevi Divorce: ಡಾ. ರಾಜ್‌ಕುಮಾರ್‌ ಮೊಮ್ಮಗ, ರಾಘವೇಂದ್ರ ರಾಜ್‌ಕುಮಾರ್‌ ಮಗ, ಯುವ ರಾಜ್‌ಕುಮಾರ್‌ ತಮ್ಮ ಪತ್ನಿ ಶ್ರೀದೇವಿ ಭೈರಪ್ಪರಿಗೆ ಡಿವೋರ್ಸ್‌ ನೀಡಲು ಮುಂದಾಗಿರುವ ಸುದ್ದಿ ಕೇಳಿ ದೊಡ್ಮನೆ ಕುಟುಂಬದ ಅಭಿಮಾನಿಗಳಿಗೆ ಆತಂಕವಾಗಿದೆ. ಶ್ರೀದೇವಿ ಭೈರಪ್ಪ ಅವರ ಪರಿಚಯ ಇಲ್ಲಿದೆ.

ಯುವ ರಾಜ್‌ಕುಮಾರ್‌ ಪತ್ನಿ ಶ್ರೀದೇವಿ ಭೈರಪ್ಪ ಪರಿಚಯ
ಯುವ ರಾಜ್‌ಕುಮಾರ್‌ ಪತ್ನಿ ಶ್ರೀದೇವಿ ಭೈರಪ್ಪ ಪರಿಚಯ

ಬೆಂಗಳೂರು: ಡಾ. ರಾಜ್‌ಕುಮಾರ್‌ ಮೊಮ್ಮಗ, ರಾಘವೇಂದ್ರ ರಾಜ್‌ಕುಮಾರ್‌ ಮಗ, ಯುವ ರಾಜ್‌ಕುಮಾರ್‌ ತಮ್ಮ ಪತ್ನಿ ಶ್ರೀದೇವಿ ಭೈರಪ್ಪರಿಗೆ ಡಿವೋರ್ಸ್‌ ನೀಡಲು ಮುಂದಾಗಿರುವ ಸುದ್ದಿ ಕೇಳಿ ದೊಡ್ಮನೆ ಕುಟುಂಬದ ಅಭಿಮಾನಿಗಳಿಗೆ ಆತಂಕವಾಗಿದೆ. ಶ್ರೀದೇವಿ ಭೈರಪ್ಪ ನಟನೆಯಿಂದ ದೂರ. ಹೀಗಾಗಿ, ಇವರ ಹೆಸರು ಸೋಷಿಯಲ್‌ ಮೀಡಿಯಾದಲ್ಲಿಯಾಗಲಿ ಅಥವಾ ಸುದ್ದಿಗಳಲ್ಲಿಯಾಗಲಿ ನಿತ್ಯ ಕಾಣಿಸದು. ಆದರೆ, ಹಲವು ಐಎಎಸ್‌, ಐಪಿಎಸ್‌ ಅಧಿಕಾರಿಗಳನು ಸೃಷ್ಟಿಸುವಲ್ಲಿ ಮಹತ್ವದ ಪಾತ್ರ ವಹಿಸುವ, ನಾಗರಿಕ ಸೇವಾ ಪರೀಕ್ಷೆಗಳಿಗೆ ತರಬೇತಿ ನೀಡುವ ಡಾ. ರಾಜ್‌ಕುಮಾರ್‌ ಅಕಾಡೆಮಿಯಲ್ಲಿ ತರಬೇತಿ ಪಡೆದ, ಪಡೆಯುತ್ತಿರುವ ವಿದ್ಯಾರ್ಥಿಗಳಿಗೆ "ಶ್ರೀದೇವಿ ಭೈರಪ್ಪ" ಪರಿಚಿತ ಹೆಸರು.

ಶ್ರೀದೇವಿ ಭೈರಪ್ಪ ಪರಿಚಯ

ಶ್ರೀದೇವಿ ಭೈರಪ್ಪ ಅವರು ಯುವ ರಾಜ್‌ಕುಮಾರ್‌ ಅವರ ಪತ್ನಿ. ಮೈಸೂರು ಇವರ ಹುಟ್ಟೂರು. ಮೈಸೂರಿನ ನಿರ್ಮಲಾ ಕಾನ್ವೆಂಟ್‌ ಸ್ಕೂಲ್‌ನಲ್ಲಿ ಆರಂಭಿಕ ಶಿಕ್ಷಣ ಪಡೆದಿದ್ದಾರೆ. ಮೈಸೂರು ವಿಶ್ವವಿದ್ಯಾಲಯದಲ್ಲಿ ಬಿಸ್ನೆಸ್‌ ಮ್ಯಾನೇಜ್‌ಮೆಂಟ್‌ನಲ್ಲಿ ಪದವಿ ಪಡೆದಿದ್ದಾರೆ. ಇದಾದ ಬಳಿಕ ಮಣಿಪಾಲದಲ್ಲಿರುವ ಮಣಿಪಾಲ್‌ ಇನ್‌ಸ್ಟಿಟ್ಯೂಟ್‌ ಆಫ್‌ ಮ್ಯಾನೇಜ್‌ಮೆಂಟ್‌ (ಮಾಹೆ)ನಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಇಷ್ಟು ಮಾತ್ರವಲ್ಲದೆ ಹಾರ್ವರ್ಡ್‌ ವಿಶ್ವವಿದ್ಯಾಲಯದಲ್ಲಿ ಸ್ನಾತಕ ಪದವಿ ಪಡೆದಿದ್ದಾರೆ.

ಏಳು ವರ್ಷದ ಸ್ನೇಹ, ಪ್ರೀತಿ

ಸುಮಾರು ಏಳು ವರ್ಷಗಳ ಸ್ನೇಹ, ಪ್ರೀತಿಯಲ್ಲಿದ್ದ ಯುವ ರಾಜ್‌ಕುಮಾರ್‌ ಮತ್ತು ಶ್ರೀದೇವಿ ಭೈರಪ್ಪ ಬಳಿಕ ಮನೆಯವರ ಒಪ್ಪಿಗೆ ಪಡೆದು ವಿವಾಹವಾಗಿದ್ದರು. ಮೇ 26, 2019ರಂದು ಯುವ ರಾಜ್‌ಕುಮಾರ್‌ ಮತ್ತು ಶ್ರೀದೇವಿ ಭೈರಪ್ಪ ಬೆಂಗಳೂರಿನ ಅರಮನೆ ಮೈದಾನದಲ್ಲಿ ವಿವಾಹವಾಗಿದ್ದರು. ದೊಡ್ಮನೆ ಕುಟುಂಬದ ಮದುವೆಯಾದ ಕಾರಣ ಹಲವು ಸೆಲೆಬ್ರಿಟಿಗಳು, ರಾಜಕಾರಣಿಗಳು ಮದುವೆಗೆ ಹಾಜರಾಗಿದ್ದರು. ವಿನಯ್‌ ರಾಜ್‌ಕುಮಾರ್‌ ನಟನೆಯ ರನ್‌ ಆಂಟನಿ ಸಿನಿಮಾದ ಪ್ರಚಾರ ಕಾರ್ಯಕ್ರಮಗಳಲ್ಲಿಯೂ ಶ್ರೀದೇವಿ ಭೈರಪ್ಪ ಕಾಣಿಸಿಕೊಂಡಿದ್ದರು.

ಡಾ. ರಾಜ್‌ಕುಮಾರ್‌ ಅಕಾಡೆಮಿಯ ಸಹಸ್ಥಾಪಕಿ

ಡಾ. ರಾಜ್‌ಕುಮಾರ್‌ ಕುಟುಂಬದ ಒಡೆತನದ ಡಾ. ರಾಜ್‌ ಕುಮಾರ್‌ ಸಿವಿಲ್‌ ಸರ್ವೀಸ್‌ ಅಕಾಡೆಮಿಯ ಉಸ್ತುವಾರಿಯನ್ನು 2017ರಿಂದ ಶ್ರೀದೇವಿ ಭೈರಪ್ಪ ವಹಿಸಿಕೊಂಡಿದ್ದಾರೆ. ಯುಪಿಎಸ್‌ಸಿ, ಕೆಪಿಎಸ್‌ಸಿ ಪರೀಕ್ಷೆಗಳಿಗೆ ತರಬೇತಿ ನೀಡುವ ಕರ್ನಾಟಕದ ಪ್ರಮುಖ ಸಂಸ್ಥೆಯಾಗಿ ಡಾ. ರಾಜ್‌ಕುಮಾರ್‌ ಐಎಎಸ್‌/ಕೆಎಎಸ್‌ ಅಕಾಡೆಮಿ ಜನಪ್ರಿಯತೆ ಪಡೆದಿದೆ.

ಯುವ ರಾಜ್‌ಕುಮಾರ್‌- ಶ್ರೀದೇವಿ ಡಿವೋರ್ಸ್‌

ಇದೀಗ ಪತ್ನಿ ಶ್ರೀದೇವಿ ಭೈರಪ್ಪರಿಗೆ ವಿವಾಹ ವಿಚ್ಚೇದನ ನೀಡಲು ಯುವ ರಾಜ್‌ಕುಮಾರ್‌ ಮುಂದಾಗಿದ್ದಾರೆ ಎಂದು ಸುದ್ದಿಯಾಗಿದೆ. ದೊಡ್ಮನೆ ಕುಟುಂಬದಲ್ಲಿ ಇದೇ ಮೊದಲ ವಿವಾಹ ವಿಚ್ಛೇದನವಾಗಿದ್ದು, ಅಭಿಮಾನಿಗಳಿಗೆ ಬೇಸರವಾಗಿದೆ. ಕೆಲವು ವರದಿಗಳ ಪ್ರಕಾರ ಈ ಡಿವೋರ್ಸ್‌ ಹಿಂದೆ ನಾನಾ ಕಾರಣಗಳು ಇವೆಯಂತೆ. "ಯುವ ರಾಜ್‌ಕುಮಾರ್‌ಗೆ ಕನ್ನಡದ ಖ್ಯಾತ ನಟಿಯೊಬ್ಬರ ಜತೆಗೆ ಇರುವ ಪರಿಚಯವು "ಡಿವೋರ್ಸ್‌"ಗೆ ಕಾರಣವಂತೆ. ಡಿವೋರ್ಸ್‌ ನೀಡಲು ಶ್ರೀದೇವಿಗೆ ಮನಸ್ಸಿಲ್ಲವಂತೆ" ಎಂದೆಲ್ಲ ಕೆಲವು ಮಾಧ್ಯಮಗಳು ಮೂಲಗಳನ್ನು ಉಲ್ಲೇಖಿಸಿ ವರದಿ ಮಾಡಿವೆ.

Whats_app_banner