ಕನ್ನಡ ಚಿತ್ರೋದ್ಯಮದಲ್ಲಿಯೂ ನಟಿಯರಿಗೆ ಲೈಂಗಿಕ ಕಿರುಕುಳ! ಕೂಡಲೇ ನ್ಯಾಯಮೂರ್ತಿ ಸಮಿತಿ ರಚಿಸಿ ಎಂದ FIRE
ಕನ್ನಡ ಸುದ್ದಿ  /  ಮನರಂಜನೆ  /  ಕನ್ನಡ ಚಿತ್ರೋದ್ಯಮದಲ್ಲಿಯೂ ನಟಿಯರಿಗೆ ಲೈಂಗಿಕ ಕಿರುಕುಳ! ಕೂಡಲೇ ನ್ಯಾಯಮೂರ್ತಿ ಸಮಿತಿ ರಚಿಸಿ ಎಂದ Fire

ಕನ್ನಡ ಚಿತ್ರೋದ್ಯಮದಲ್ಲಿಯೂ ನಟಿಯರಿಗೆ ಲೈಂಗಿಕ ಕಿರುಕುಳ! ಕೂಡಲೇ ನ್ಯಾಯಮೂರ್ತಿ ಸಮಿತಿ ರಚಿಸಿ ಎಂದ FIRE

Film Industry for Rights and Equality: ಕನ್ನಡ ಚಲನಚಿತ್ರೋದ್ಯಮದಲ್ಲಿ ಮಹಿಳೆಯರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ತನಿಖೆ ನಡೆಸಿ ವರದಿ ನೀಡಲು, ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ಸಮಿತಿಯೊಂದನ್ನು ರಚಿಸುವಂತೆ FIRE ಸಂಸ್ಥೆಯು ಕರ್ನಾಟಕ ಸರ್ಕಾರವನ್ನು ಆಗ್ರಹಿಸಿದೆ.

ಕನ್ನಡ ಚಲನಚಿತ್ರೋದ್ಯಮದಲ್ಲಿ ಮಹಿಳೆಯರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ತನಿಖೆ ನಡೆಸಿ ವರದಿ ನೀಡಲು, ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ಸಮಿತಿಯೊಂದನ್ನು ರಚಿಸುವಂತೆ FIRE ಸಂಸ್ಥೆಯು ಕರ್ನಾಟಕ ಸರ್ಕಾರವನ್ನು ಆಗ್ರಹಿಸಿದೆ.
ಕನ್ನಡ ಚಲನಚಿತ್ರೋದ್ಯಮದಲ್ಲಿ ಮಹಿಳೆಯರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ತನಿಖೆ ನಡೆಸಿ ವರದಿ ನೀಡಲು, ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ಸಮಿತಿಯೊಂದನ್ನು ರಚಿಸುವಂತೆ FIRE ಸಂಸ್ಥೆಯು ಕರ್ನಾಟಕ ಸರ್ಕಾರವನ್ನು ಆಗ್ರಹಿಸಿದೆ. (Linkedin)

Film Industry for Rights and Equality: ಮಲಯಾಳಂ ಚಿತ್ರರಂಗದಲ್ಲಿನ ಕರಾಳ ಸತ್ಯಗಳು ಒಂದೊಂದೆ ಹೊರಬರುತ್ತಿವೆ. ಸ್ಟಾರ್‌ ಕಲಾವಿದರೇ ಕಾಸ್ಟಿಂಗ್‌ ಕೌಚ್‌ನಲ್ಲಿ ಭಾಗವಹಿಸಿದ ಆರೋಪಗಳನ್ನು ಎದುರಿಸುತ್ತಿದ್ದಾರೆ. ಕಿರುಕುಳ ಅನುಭವಿಸಿದ ಎಷ್ಟೋ ನಟಿಯರೇ ಮುಂದೆ ಬಂದು ತಮಗಾದ ಕೆಟ್ಟ ಅನುಭವಗಳನ್ನು ತೆರೆದಿಡುತ್ತಿದ್ದಾರೆ. ಇದೆಲ್ಲ ಬೆಳವಣಿಗೆ ಆಗಿದ್ದು ಜಸ್ಟಿಸ್‌ ಹೇಮಾ ಸಮಿತಿ ವರದಿಯಿಂದ. ಇದೀಗ ಅಂಥದ್ದೇ ನ್ಯಾಯಮೂರ್ತಿಗಳ ಸಮಿತಿಯನ್ನು ರಚಿಸಿ ಕನ್ನಡ ಚಿತ್ರರಂಗದಲ್ಲಿ ಮಹಿಳೆಯರು ಎದುರಿಸುತ್ತಿರುವ ಸಮಸ್ಯೆಗಳನ್ನು ಹೊರತನ್ನಿ ಎಂದು FIRE ಸರ್ಕಾರಕ್ಕೆ ಆಗ್ರಹಿಸಿದೆ.

ಮಲಯಾಳಂ ಚಿತ್ರರಂಗದಲ್ಲಿನ ಬೆಳವಣಿಗೆಗಳನ್ನು ಗಮನಿಸಿದ ಫಿಲಂ ಇಂಡಸ್ಟ್ರಿ ಫಾರ್‌ ರೈಟ್ಸ್‌ ಅಂಡ್‌ ಇಕ್ವಾಲಿಟಿ (FIRE) ಸಂಸ್ಥೆ ಇದೀಗ ಸರ್ಕಾರಕ್ಕೆ ಪತ್ರದ ಮೂಲಕ ಮನವಿ ಸಲ್ಲಿಸಿದೆ. ಆ ಪತ್ರದಲ್ಲಿ ಹೀಗಿದೆ. ಲೈಂಗಿಕ ಹಿಂಸೆಯ ಸಮಸ್ಯೆಗಳು ಸೇರಿದಂತೆ ಕನ್ನಡ ಚಲನಚಿತ್ರೋದ್ಯಮದಲ್ಲಿ ಮಹಿಳೆಯರು ಎದುರಿಸುತ್ತಿರುವ ಇನ್ನಿತರ ಸಮಸ್ಯೆಗಳ ಬಗ್ಗೆ ತನಿಖೆ ನಡೆಸಿ ವರದಿ ನೀಡಲು, ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ಸಮಿತಿಯೊಂದನ್ನು ರಚಿಸುವಂತೆ FIRE ಸಂಸ್ಥೆಯು ಕರ್ನಾಟಕ ಸರ್ಕಾರವನ್ನು ಆಗ್ರಹಿಸುತ್ತದೆ.

ನ್ಯಾಯಮೂರ್ತಿ ಹೇಮಾ ಸಮಿತಿ ವರದಿಯು, ಮಲಯಾಳಂ ಚಲನಚಿತ್ರೋದ್ಯಮದಲ್ಲಿ ಮಹಿಳೆಯರು ಎದುರಿಸುತ್ತಿರುವ ಲೈಂಗಿಕ ಹಿಂಸೆ ಮತ್ತು ಇತರೆ ಸಮಸ್ಯೆಗಳನ್ನು ಬಹಿರಂಗಪಡಿಸಿದ ನಂತರ ಕರ್ನಾಟಕ ಸರ್ಕಾರವು, ಕನ್ನಡ ಚಲನಚಿತ್ರೋದ್ಯಮದಲ್ಲಿನ ಈ ರೀತಿಯ ಸಮಸ್ಯೆಗಳನ್ನು ಪರಿಹರಿಸಲು ಈ ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಫಿಲಂ ಇಂಡಸ್ಟ್ರಿ ಫಾರ್‌ ರೈಟ್ಸ್‌ ಅಂಡ್‌ ಇಕ್ವಾಲಿಟಿ ಸಂಸ್ಥೆಯೂ ಆಗ್ರಹಿಸುತ್ತಿದೆ.

ಕನ್ನಡ ಚಲನಚಿತ್ರೋದ್ಯಮದಲ್ಲಿ ದೇಶದ ಮೊದಲ ಚಿತ್ರೋದ್ಯಮದ ಆಂತರಿಕ ದೂರುಗಳ ಸಮಿತಿಯನ್ನು ರಚಿಸುವಲ್ಲಿ ನಮ್ಮ FIRE ಸಂಸ್ಥೆಯು ಪ್ರಮುಖ ಪಾತ್ರ ವಹಿಸಿದೆ. ಹಾಗೆಯೇ ಲೈಂಗಿಕ ಕಿರುಕುಳದ ಸಂತ್ರಸ್ತರನ್ನು (2017ರಿಂದ ಈ ವರೆಗೂ) ನಮ್ಮ ಸಂಸ್ಥೆ ಬೆಂಬಲಿಸುತ್ತಲೇ ಬಂದಿದೆ. ಸದ್ಯ ಚಿತ್ರೋದ್ಯಮದಲ್ಲಿ ಕೆಲಸ ಮಾಡುವ ಮಹಿಳೆಯರಿಗೆ ಸುರಕ್ಷಿತವಾದ ಕೆಲಸದ ವಾತಾವರಣವನ್ನು ನೀಡುವುದಕ್ಕಾಗಿ ಅಗತ್ಯ ಕ್ರಮಗಳನ್ನು ಕೈಗೊಳ್ಳುವುದು ಮುಖ್ಯವಾದ ಅಂಶವೆಂದು ನಾವು ಭಾವಿಸುತ್ತೇವೆ ಎಂದು ಸರ್ಕಾರಕ್ಕೆ ಪತ್ರದ ಮೂಲಕ ತಿಳಿಸಿದೆ.

153 ಜನರಿಂದ ಸಹಿ..

ಚಿತ್ರೋದ್ಯಮದಲ್ಲಿ ಮಹಿಳೆಯರ ಮೇಲಿನ ಸಮಸ್ಯೆಗಳ ವಿರುದ್ಧ ಧ್ವನಿ ಎತ್ತುವ ಉದ್ದೇಶಕ್ಕಾಗಿಯೇ FIRE ಸ್ಥಾಪಿತವಾಗಿತ್ತು. ಇದರ ಅಧ್ಯಕ್ಷೆಯಾಗಿ ಕವಿತಾ ಲಂಕೇಶ್‌ ಇದ್ದಾರೆ. ಕಾರ್ಯದರ್ಶಿಯಾಗಿ ನಟ, ಸಾಮಾಜಿಕ ಕಾರ್ಯಕರ್ತ ಚೇತನ್‌ ಅಹಿಂಸಾ ಸಕ್ರಿಯರಾಗಿದ್ದಾರೆ. ಇವರ ಜತೆಗೆ ಕನ್ನಡದ ಇತರ ಸಿನಿಮಾ ನಟಿಯರಾದ ಶ್ರುತಿ ಹಾಸನ್‌, ಐಂದ್ರಿತಾ ರೇ, ಆಶಿಕಾ ರಂಗನಾಥ್‌, ಚೈತ್ರಾ ಆಚಾರ್‌, ಸಂಯುಕ್ತಾ ಹೆಗಡೆ, ಪೂಜಾ ಗಾಂಧಿ, ನಿಶ್ವಿಕಾ ನಾಯ್ಡು, ಧನ್ಯಾ ರಾಮ್‌ಕುಮಾರ್‌, ಅಮೃತಾ ಅಯ್ಯಂಗಾರ್‌ ಸೇರಿ ನಟ ವಿನಯ್‌ ರಾಜ್‌ಕುಮಾರ್‌ ಸೇರಿ ಒಟ್ಟು 153 ಮಂದಿ ಈ ಅರ್ಜಿಗೆ ಸಹಿ ಹಾಕಿದ್ದಾರೆ. ಈ ಮೂಲಕ ಸರ್ಕಾರಕ್ಕೂ ಸಮಿತಿ ರಚಿಸುವಂತೆ ಒತ್ತಾಯಿಸಿದ್ದಾರೆ.

Whats_app_banner