Sushma K Rao: ತಂಗಿ ಮದುವೆ ಆಗ್ತಿದ್ದಂತೆ ಕಾಶಿಗೆ ಹೊರಟ ಭಾಗ್ಯ ಅಲಿಯಾಸ್‌ ಸುಷ್ಮಾ.. ಇಷ್ಟು ಬೇಗ ಏಕೆ ಮೇಡಂ ಎಂದ ನೆಟಿಜನ್ಸ್‌
ಕನ್ನಡ ಸುದ್ದಿ  /  ಮನರಂಜನೆ  /  Sushma K Rao: ತಂಗಿ ಮದುವೆ ಆಗ್ತಿದ್ದಂತೆ ಕಾಶಿಗೆ ಹೊರಟ ಭಾಗ್ಯ ಅಲಿಯಾಸ್‌ ಸುಷ್ಮಾ.. ಇಷ್ಟು ಬೇಗ ಏಕೆ ಮೇಡಂ ಎಂದ ನೆಟಿಜನ್ಸ್‌

Sushma K Rao: ತಂಗಿ ಮದುವೆ ಆಗ್ತಿದ್ದಂತೆ ಕಾಶಿಗೆ ಹೊರಟ ಭಾಗ್ಯ ಅಲಿಯಾಸ್‌ ಸುಷ್ಮಾ.. ಇಷ್ಟು ಬೇಗ ಏಕೆ ಮೇಡಂ ಎಂದ ನೆಟಿಜನ್ಸ್‌

ತಾವು ಕಾಶಿಯಲ್ಲಿ ಇರುವ ವಿಡಿಯೋವನ್ನು ಸುಷ್ಮಾ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ಈಗ ಬೆಳಗ್ಗೆ 4 ಗಂಟೆ, ಕಾಶಿಯಲ್ಲಿದ್ದೇನೆ ಎಂದು ಸುಷ್ಮಾ ಮಾತನಾಡಿರುವ ಸಣ್ಣ ವಿಡಿಯೋ ತುಣುಕನ್ನು ನೋಡಿ ನೆಟಿಜನ್ಸ್‌, ಏನ್‌ ಮೇಡಂ ಇಷ್ಟು ಬೇಗ ಕಾಶಿಯಾತ್ರೆಗೆ ಹೋಗಿದ್ದೀರಿ ಎಂದು ಪ್ರಶ್ನಿಸುತ್ತಿದ್ದಾರೆ.

ಸುಷ್ಮಾ ಕೆ ರಾವ್‌ ಕಾಶಿಯಾತ್ರೆ
ಸುಷ್ಮಾ ಕೆ ರಾವ್‌ ಕಾಶಿಯಾತ್ರೆ (PC: anchor_sushmakrao)

ಶೂಟಿಂಗ್‌ನಿಂದ ಕೆಲವು ದಿನಗಳ ಕಾಲ ಬ್ರೇಕ್‌ ಪಡೆದಿರುವ ನಟಿ ಸುಷ್ಮಾ ರಾವ್‌ ಸದ್ಯಕ್ಕೆ ಕಾಶಿಯಾತ್ರೆಯಲ್ಲಿ ಬ್ಯುಸಿ ಇದ್ದಾರೆ. 2003 ರಲ್ಲಿ ಈಟಿವಿಯಲ್ಲಿ ಪ್ರಸಾರವಾಗುತ್ತಿದ್ದ 'ಗುಪ್ತಗಾಮಿನಿ' ಧಾರಾವಾಹಿ ಕಿರುತೆರೆ ವೀಕ್ಷಕರಿಗೆ ಬಹಳ ಅಚ್ಚುಮೆಚ್ಚು. ಈ ಧಾರಾವಾಹಿಯ ಮೂಲಕ ಸುಷ್ಮಾ ಕೆ. ರಾವ್‌ ವೀಕ್ಷಕರಿಗೆ ಪರಿಚಯ ಆದರು. ಭಾವನಾ ಪಾತ್ರ ಮಾಡಿದ್ದ ಈ ಹುಡುಗಿ ಮೊದಲ ಧಾರಾವಾಹಿಯಲ್ಲೇ ಎಲ್ಲರಿಗೂ ಬಹಳ ಇಷ್ಟವಾಗಿದ್ದರು.

ಸುಷ್ಮಾ, ನಟಿಯಾಗಿ ಮಾತ್ರವಲ್ಲದೆ ನಿರೂಪಕಿಯಾಗಿ, ಭರತನಾಟ್ಯ ಕಲಾವಿದೆಯಾಗಿ ಕೂಡಾ ಗುರುತಿಸಿಕೊಂಡಿದ್ದಾರೆ. ಅನೇಕ ಕಿರುತೆರೆ ಕಾರ್ಯಕ್ರಮಗಳನ್ನು ಸುಷ್ಮಾ ನಿರೂಪಣೆ ಮಾಡಿದ್ದಾರೆ. ಸದ್ಯಕ್ಕೆ ಸುಷ್ಮಾ, ಕಲರ್ಸ್‌ ಕನ್ನಡದಲ್ಲಿ ಪ್ರಸಾರವಾಗುತ್ತಿರುವ 'ಲಕ್ಷ್ಮಿ ಬಾರಮ್ಮ' ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ತಂಗಿಯನ್ನು ಮಗುವಂತೆ ನೋಡಿಕೊಳ್ಳುವ, ಅತ್ತೆ ಹಾಗೂ ಮನೆಮಂದಿಯನ್ನು ಪ್ರೀತಿಯಿಂದ ಕಾಣುವ, ಓದು ಬಾರದ ಗುಗ್ಗು ಎಂದು ಪತಿ ತನ್ನನ್ನು ಎಷ್ಟೇ ಹೀಯಾಳಿಸಿದರೂ ಬೇಸರ ಮಾಡಿಕೊಳ್ಳದ ಹೆಣ್ಣು ಮಗಳಾಗಿ ಸುಷ್ಮಾ ಕೆ. ರಾವ್‌ ನಟಿಸುತ್ತಿದ್ದಾರೆ. ಪ್ರತಿ ದಿನ ಸಂಜೆ 7ಕ್ಕೆ ಅಕ್ಕ ಭಾಗ್ಯಳ ಕಥೆ, 7.30ರಿಂದ ತಂಗಿ ಲಕ್ಷ್ಮಿ ಕಥೆಯನ್ನು ತೋರಿಸಲಾಗುತ್ತಿದೆ.

ಸದ್ಯಕ್ಕೆ ಸುಷ್ಮಾ, ಶೂಟಿಂಗ್‌ನಿಂದ ಸ್ವಲ್ಪ ಬಿಡುವು ಪಡೆದು ಟ್ರಿಪ್‌ ಎಂಜಾಯ್ ಮಾಡುತ್ತಿದ್ದಾರೆ. ಆದರೆ ಸುಷ್ಮಾ ಯಾವುದೋ ಫಾರಿನ್‌ ಟ್ರಿಪ್‌ಗೆ ಹೋಗಿಲ್ಲ. ಸದ್ಯಕ್ಕೆ ಅವರು, ಕಾಶಿಯಾತ್ರೆಯಲ್ಲಿದ್ದಾರೆ. ತಾವು ಕಾಶಿಯಲ್ಲಿ ಇರುವ ವಿಡಿಯೋವನ್ನು ಸುಷ್ಮಾ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ಈಗ ಬೆಳಗ್ಗೆ 4 ಗಂಟೆ, ಕಾಶಿಯಲ್ಲಿದ್ದೇನೆ ಎಂದು ಸುಷ್ಮಾ ಮಾತನಾಡಿರುವ ಸಣ್ಣ ವಿಡಿಯೋ ತುಣುಕನ್ನು ನೋಡಿ ನೆಟಿಜನ್ಸ್‌, ಏನ್‌ ಮೇಡಂ ಇಷ್ಟು ಬೇಗ ಕಾಶಿಯಾತ್ರೆಗೆ ಹೋಗಿದ್ದೀರಿ ಎಂದು ಪ್ರಶ್ನಿಸುತ್ತಿದ್ದಾರೆ.

ಚಿಕ್ಕಮಗಳೂರು ಚೆಲುವೆ ಸುಷ್ಮಾ ರಾವ್‌

ಚಿಕ್ಕಮಗಳೂರಿನ ಹುಡುಗಿ ಸುಷ್ಮಾ ರಾವ್, ಕಂಪ್ಯೂಟರ್ ಸೈನ್ಸ್ ಪದವೀಧರೆ. ಭರತನಾಟ್ಯ ಕಲಾವಿದೆ ಕೂಡಾ ಆಗಿದ್ದು ಅನೇಕ ಸ್ಟೇಜ್ ಶೋ ನೀಡಿದ್ದಾರೆ. ವಿಜಯಕಾಶಿ ಅವರ ಪತ್ನಿ ವೈಜಯಂತಿ ಕಾಶಿ ಅವರ ಬಳಿ ಸುಷ್ಮಾ ಕೂಚಿಪುಡಿ ಕಲಿತಿದ್ದಾರೆ. ಎಸ್. ನಾರಾಯಣ್ ಅವರ 'ಭಾಗೀರಥಿ' ಧಾರಾವಾಹಿಯಲ್ಲಿ ವೀಣಾ ಎಂಬ ಪಾತ್ರದಲ್ಲಿ ನಟಿಸಿದ್ದ ಸುಷ್ಮಾ ರಾವ್ ನಂತರ ಸ್ವಾತಿಮುತ್ತು, ಬಿದಿಗೆ ಚಂದ್ರಮ, ಸೊಸೆ ತಂದ ಸೌಭಾಗ್ಯ ಧಾರಾವಾಹಿಗಳಲ್ಲಿ ನಟಿಸಿದರು. ಆದರೆ ಇವರ ವೃತ್ತಿ ಜೀವನದಲ್ಲಿ ಒಳ್ಳೆ ಹೆಸರು ತಂದುಕೊಟ್ಟದ್ದು 'ಗುಪ್ತಗಾಮಿನಿ' ಹಾಗೂ 'ಯಾವ ಜನ್ಮದ ಮೈತ್ರಿಯೋ' ಧಾರಾವಾಹಿಗಳು. ಪುಟ್ಟ ಗೌರಿ ಮದುವೆ ಧಾರಾವಾಹಿಯಲ್ಲಿ ಬಾಲಕಿ ಗೌರಿಯ ಶಿಕ್ಷಕಿ ಪಾತ್ರದಲ್ಲಿ ಕೂಡಾ ಸುಷ್ಮಾ ರಾವ್ ಕಾಣಿಸಿಕೊಂಡಿದ್ದರು.

ಅನೇಕ ಕಿರುತೆರೆ ಕಾರ್ಯಕ್ರಮಗಳನ್ನು ನಿರೂಪಣೆ ಮಾಡಿರುವ ಸುಷ್ಮಾ

ಸುಷ್ಮಾ ರಾವ್ ಕಿರುತೆರೆಯಲ್ಲಿ ನಟಿಯಾಗಿ ಮಾತ್ರವಲ್ಲದೆ ನಿರೂಪಕಿಯಾಗಿ ಕೂಡಾ ಗುರುತಿಸಿಕೊಂಡಿದ್ದಾರೆ. ತರ್ಲೆ ನನ್ಮಕ್ಳು, ಜೀನ್ಸ್, ಮನೆ ಮನೆ ಮಹಾಲಕ್ಷ್ಮಿ ಸೇರಿ ಅನೇಕ ಕಾರ್ಯಕ್ರಮಗಳಿಗೆ ಸುಷ್ಮಾ ರಾವ್ ನಿರೂಪಣೆ ಮಾಡಿದ್ದಾರೆ. ನಿರ್ದೇಶಕ ಪ್ರೀತಿಂ ಗುಬ್ಬಿ ಅವರನ್ನು ಪ್ರೀತಿಸಿ ಮದುವೆಯಾಗಿದ್ದ ಸುಷ್ಮಾರಾವ್ ಕೆಲವು ವರ್ಷಗಳ ನಂತರ ಅವರಿಂದ ವಿಚ್ಛೇದನ ಪಡೆದಿದ್ದರು. ಡೈವೋರ್ಸ್ ನಂತರ ನಟನೆ, ನಿರೂಪಣೆಯಿಂದ ದೂರ ಉಳಿದಿದ್ದ ಸುಷ್ಮಾ, ಈಗ ಮತ್ತೆ ಕಿರುತೆರೆಯಲ್ಲಿ ಆ್ಯಕ್ಟಿವ್ ಆಗಿದ್ದಾರೆ.

Whats_app_banner