‘ಸುಳ್ಳು ಪೋಣಿಸುವ ಡಾ ಬ್ರೋ’ ಟೀಕೆಗೆ ‘ಹಿಸ್ಟರಿ ಎಕ್ಸಾಂ ಬರೆಯೋರು ಯಾರೂ ಇಲ್ಲ, ನಿಮಗ್ಯಾಕೆ ಉರಿ’ ಎಂದು ತಿರುಗೇಟು ಕೊಟ್ಟ ಅಭಿಮಾನಿಗಳು
ಕನ್ನಡ ಸುದ್ದಿ  /  ಮನರಂಜನೆ  /  ‘ಸುಳ್ಳು ಪೋಣಿಸುವ ಡಾ ಬ್ರೋ’ ಟೀಕೆಗೆ ‘ಹಿಸ್ಟರಿ ಎಕ್ಸಾಂ ಬರೆಯೋರು ಯಾರೂ ಇಲ್ಲ, ನಿಮಗ್ಯಾಕೆ ಉರಿ’ ಎಂದು ತಿರುಗೇಟು ಕೊಟ್ಟ ಅಭಿಮಾನಿಗಳು

‘ಸುಳ್ಳು ಪೋಣಿಸುವ ಡಾ ಬ್ರೋ’ ಟೀಕೆಗೆ ‘ಹಿಸ್ಟರಿ ಎಕ್ಸಾಂ ಬರೆಯೋರು ಯಾರೂ ಇಲ್ಲ, ನಿಮಗ್ಯಾಕೆ ಉರಿ’ ಎಂದು ತಿರುಗೇಟು ಕೊಟ್ಟ ಅಭಿಮಾನಿಗಳು

Dr Bro Kannada: ಡಾ ಬ್ರೋ ಎಂದೇ ಖ್ಯಾತರಾದ ಗಗನ್ ಶ್ರೀನಿವಾಸ್ ಅವರು ನೈಜೀರಿಯಾ ಕುರಿತ ವಿಡಿಯೊದಲ್ಲಿ ತರ್ಕಹೀನ ಸಂಗತಿಗಳನ್ನು ಪ್ರಸ್ತಾಪಿಸಿದ್ದನ್ನು ನೈಜೀರಿಯಾದಲ್ಲಿರುವ ಕನ್ನಡ ಶ್ರೀಹರ್ಷ ಟೀಕಿಸಿದ್ದರು. ಶ್ರೀಹರ್ಷ ಅವರ ಬರಹಕ್ಕೆ ಬಂದ ಪ್ರತಿಕ್ರಿಯೆಗಳ ಸಂಗ್ರಹ ರೂಪ ಇಲ್ಲಿದೆ.

‘ಸುಳ್ಳು ಪೋಣಿಸುವ ಡಾ ಬ್ರೋ’ ಟೀಕೆಗೆ ‘ಹಿಸ್ಟರಿ ಎಕ್ಸಾಂ ಬರೆಯೋರು ಯಾರೂ ಇಲ್ಲ, ನಿಮಗ್ಯಾಕೆ ಉರಿ’ ಎಂದು ತಿರುಗೇಟು ಕೊಟ್ಟ ಅಭಿಮಾನಿಗಳು
‘ಸುಳ್ಳು ಪೋಣಿಸುವ ಡಾ ಬ್ರೋ’ ಟೀಕೆಗೆ ‘ಹಿಸ್ಟರಿ ಎಕ್ಸಾಂ ಬರೆಯೋರು ಯಾರೂ ಇಲ್ಲ, ನಿಮಗ್ಯಾಕೆ ಉರಿ’ ಎಂದು ತಿರುಗೇಟು ಕೊಟ್ಟ ಅಭಿಮಾನಿಗಳು (instagram)

Dr Bro Kannada: ಭಾರತದ ಮಾನ ಜಗತ್ತಿನ ನಾನಾ ದೇಶಗಳಲ್ಲಿ ತೆಗೆಯುವ ಡಾ ಬ್ರೋ ಥರದ ಯೂಟ್ಯೂಬ್ ಚಾನೆಲ್ ಬಗ್ಗೆ ಹೆಮ್ಮೆ ಪಡಬೇಕಾ? ಎಂಬ ಶೀರ್ಷಿಕೆ ಅಡಿಯಲ್ಲಿ ಡಾ. ಬ್ರೋ ಅವರ ಬಗ್ಗೆ ನೈಜೀರಿಯಾದಲ್ಲಿ ವಾಸವಿರುವ ಕನ್ನಡಿಗ ಶ್ರೀಹರ್ಷ ದ್ವಾರಕಾನಾಥ್‌ ಅವರ ಬರಹವೊಂದನ್ನು ‘ಎಚ್‌ಟಿ ಕನ್ನಡ’ ಪ್ರಕಟಿಸಿತ್ತು. ಆ ಬರಹದಲ್ಲಿ, ಡಾ ಬ್ರೋ ಅಲಿಯಾಸ್‌ ಗಗನ್‌ ಶ್ರೀನಿವಾಸ್‌ ಕೊಡುತ್ತಿರುವ ಮಾಹಿತಿ ಎಷ್ಟರ ಮಟ್ಟಿಗೆ ಸರಿ? ಅವರು ನೀಡುವ ಮಾಹಿತಿಯ ನಿಖರತೆ ಎಷ್ಟು? ಎಂದು ಪ್ರಶ್ನೆ ಮಾಡಿದ್ದರು ಶ್ರೀಹರ್ಷ. ಮುಂದುವರಿದು, ವಿಕಿಪೀಡಿಯಾವೊಂದನ್ನೇ ನಂಬಿ ಏನು ಬೇಕಾದರೂ ಹೇಳಬಹುದಾ ಎಂದೂ ಪ್ರಶ್ನಿಸಿದ್ದರು. ಶ್ರೀಹರ್ಷ ಅವರು ತಮ್ಮ ಬರಹದ ಮೂಲಕ ಜನರ ಗಮನಕ್ಕೆ ತಂದಿದ್ದ ಪ್ರಶ್ನೆಗಳಿಗೆ ಹಲವು ಓದುಗರು ಪ್ರತಿಕ್ರಿಯಿಸಿದ್ದಾರೆ. ಆಯ್ದ ಕೆಲ ಪ್ರತಿಕ್ರಿಯೆಗಳನ್ನು ಇಲ್ಲಿ ನೀಡಲಾಗಿದೆ.

ಡಾ ಬ್ರೋ ಬಗ್ಗೆ ಶ್ರೀಹರ್ಷ ಅಸಮಾಧಾನ
"ಭಾರತದಿಂದ ನೈಜಿರೀಯಾಗೆ ಬಂದ ವ್ಯಕ್ತಿ ಈ ದೇಶದ ಒಬ್ಬೇ ಒಬ್ಬ ಇತಿಹಾಸ ತಜ್ಞರನ್ನೋ, ಆರ್ಥಿಕ ತಜ್ಞರನ್ನೋ, ಇಲ್ಲಿನ ವಿಶ್ವವಿದ್ಯಾಲಯದ ಪ್ರಾಧ್ಯಾಪಕರನ್ನೋ, ಮಾನವ ಹಕ್ಕುಗಳ ಹೋರಾಟಗಾರರನ್ನೋ, ಪ್ರವಾಸೋದ್ಯಮಕ್ಕೆ ಸಂಬಂಧಿಸಿದ ವ್ಯಕ್ತಿಗಳನ್ನೋ ಮಾತನಾಡಿಸಿ ಸಮಗ್ರವಾದ ಚಿತ್ರಣ ನೀಡುವ ಆಲೋಚನೆಯನ್ನು ಸಹ ಮಾಡದಿರುವುದು ವಿಪರ್ಯಾಸ. ಇಂಥ ವ್ಯಕ್ತಿ ತೋರಿಸುವ ಸಂಗತಿಗಳನ್ನು ನೋಡಿ, ಮನಸ್ಸಿಗೆ ಬಂದಂತೆ ಮಾತನಾಡುವುದನ್ನು ನೋಡಿ ಅದೇ ಸತ್ಯ ಎಂದುಕೊಳ್ಳುವವರ ಸಂಖ್ಯೆ ದೊಡ್ಡ ಪ್ರಮಾಣದಲ್ಲಿದೆ" ಎಂದು ಶ್ರೀಹರ್ಷ ಅಸಮಾಧಾನ ವ್ಯಕ್ತಪಡಿಸಿದ್ದರು.

"ಒಂದು ದೇಶ, ಸ್ಥಳದ ಇತಿಹಾಸ, ಸಂಸ್ಕೃತಿ, ಆರ್ಥಿಕ ಹಾಗೂ ಸಾಮಾಜಿಕ ಜನಜೀವನವನ್ನು ಗಾಂಭೀರ್ಯದಿಂದ ಕಟ್ಟಿಕೊಡಬೇಕು. ಅದಕ್ಕಾಗಿ ಆ ದೇಶದ ಪತ್ರಕರ್ತರು, ಇತಿಹಾಸ ತಜ್ಞರು, ಸಾಮಾಜಿಕ ಕಾರ್ಯಕರ್ತೆಯರು- ಕಾರ್ಯಕರ್ತರು, ಧಾರ್ಮಿಕ ಮುಖಂಡರು, ಜನಸಾಮಾನ್ಯರಲ್ಲಿ ವಿವಿಧ ವರ್ಗದವರ ಮನೆಗಳಿಗೆ ಭೇಟಿ ನೀಡಿ, ಹೀಗೆ ವಿವಿಧ ಕ್ಷೇತ್ರದವರು- ಆಯಾ ದೇಶದ ಬಗ್ಗೆ ನಿಷ್ಪಕ್ಷಪಾತವಾಗಿ- ಸರಿಯಾದ ಮಾಹಿತಿ ನೀಡುವವರನ್ನು ಮಾತನಾಡಿಸಬೇಕು. ಅದು ಬಿಟ್ಟು ವಿಕಿಪೀಡಿಯಾ ಹಾಗೂ ತಮಗಾದ ಅಲ್ಪ ಸಮಯದ ಅನುಭವವನ್ನು ಅಂತಿಮ ಸತ್ಯ ಎಂಬಂತೆ ಬಿಂಬಿಸುವುದು ಎಷ್ಟು ಸರಿ?" ಎಂದೂ ಹೇಳಿದ್ದರು. ಈಗ ಇದೇ ಲೇಖನಕ್ಕೆ ಓದುಗರು ಪ್ರತಿಕ್ರಿಯೆ ನೀಡಿದ್ದಾರೆ.

ಓದುಗರ ಅಭಿಪ್ರಾಯ, ಅನಿಸಿಕೆ ಏನು?

ಸಾಮಾಜಿಕ ಮಾಧ್ಯಮಗಳು ಹಾಗೂ ಡೇಲಿಹಂಟ್‌ನಲ್ಲಿ ಈ ಬರಹಕ್ಕೆ ಸಾಕಷ್ಟು ಓದುಗರು ಕಾಮೆಂಟ್ ಮೂಲಕ ಪ್ರತಿಕ್ರಿಯಿಸಿದ್ದಾರೆ. ಆ ಪೈಕಿ ಆಯ್ದ ಒಂದಷ್ಟು ಕಾಮೆಂಟ್‌ಗಳನ್ನು ಇಲ್ಲಿ ಪ್ರಕಟಿಸಲಾಗಿದೆ.

  • ಜನಗಳಿಗೆ ಡಾ ಬ್ರೋ ಹೇಳುವುದು ತಪ್ಪು ಅಂತ ಅನಿಸಿದ್ದೇ ಆಗಿದ್ದರೆ ಇಷ್ಟೊಂದು ವ್ಯೂಸ್‌ ಬರ್ತಿರಲಿಲ್ಲ. ನೀವು ಹೇಳೋ ರೀತಿಯ ರಿಸರ್ಚ್‌ ಜನಗಳಿಗೆ ಬೇಕಾಗಿಲ್ಲ. ಬರಿ ವಾಸ್ತವ ತೋರಿಸಿದ್ರೆ ಸಾಕು. ಹಿಸ್ಟರಿ ಎಕ್ಸಾಂ ಬರೆಯುವವರು ಯಾರೂ ಇಲ್ಲ ಇಲ್ಲಿ.
  • ಸತ್ಯವಾದ ಮಾತು ಮತ್ತು ವಾಸ್ತವಿಕತೆಗೆ ಹತ್ತಿರವಾದ ಲೇಖನ. ಸತ್ಯವನ್ನು ಮರೆಮಾಚಿ ಬರೀ ಸುಳ್ಳುಗಳನ್ನು ಅಲಂಕಾರ ಮಾಡಿ ತನ್ನ ಚಾನೆಲ್‌ ಮೂಲಕ ಬದರುವ ಗಗನ್‌ ಶ್ರೀನಿವಾಸ್‌ನಂಥವನ ಮಾತುಗಳ ನಂಬುವ ಮೊದಲು ಜನರು ಈ ಲೇಖನ ಓದಲಿ.
  • ಇರುವ ಸತ್ಯ ಹೇಳಿದ್ದಾರೆ. ಸತ್ಯನ ಒಪ್ಪಿಕೊಳ್ಳುವ ಮನಸ್ಥಿತಿ ಬೆಳೆಸಿಕೊಳ್ಳಬೇಕು.
  • dr bro ಸಾಮಾನ್ಯ ಭಾಷೆಲಿ ಅರ್ಥ ಆಗುವ ಥರ ಹೇಳುತ್ತಾ ಕೊಡ್ತಾ ಇದ್ದಾನೆ. ನಿಮಗೆಲ್ಲ ಯಾಕೆ ಹೊಟ್ಟೆ ಉರಿ?
  • ಶ್ರೀಹರ್ಷ ದ್ವಾರಕಾನಾಥ್‌ ಅವರು ನೈಜಿರಿಯ ಬಗ್ಗೆ ಮಾತಾಡುವುದು ಎಷ್ಟು ಸರಿ. ಭಾರತ ಹೆಮ್ಮೆಯ ಪುತ್ರ ಡಾಕ್ಟರ್‌ ಬ್ರೋ ಅವರು ಯಾರಿಗೂ ನೋವು ಮಾಡಲ್ಲ, ಸುಮ್ನೆ ಕೆಲಸ ಮಾಡು ಮಗ.
  • ಹೆಂಗೂ ಬಿಡ್ರಪ್ಪ ಅಪೊಸಿಟ್‌ ಪಾರ್ಟಿ ಇಲ್ಲದ ಮಹಾನ್‌ ವ್ಯಕ್ತಿ ಡಾನ್ಟರ್‌ ಬ್ರೋ ಅಂತ ಸೋಷಿಯಲ್‌ ಮೀಡಿಯಾದಲ್ಲಿ ಹೇಳುತಿದ್ರಿ. ಅದುಕ್ಕೂ ಕಲ್ಲು ಹಾಕೋ ಜನ ಹುಟ್ಟಿಕೊಂಡಿದ್ದಾರೆ... ವಾ ವಾ ಒಳ್ಳೆಯವರ ಜನ್ಮ ಪಾವನ. ಇಂಡಿಯಾದಲ್ಲಿ ಇರೋ ಜನರಿಗೆ ಇಂಡಿಯಾದ ಬಗ್ಗೆ ಇನ್ನೂಗೊತ್ತಿಲ್ಲ.‌ 2 ದಿನ ಪ್ರವಾಸ ಹೋಗೋರ್‌ ಬಗ್ಗೆ ಬ್ಯಾಡ್‌ ಕಾಮೆಂಟ್‌ ಎಂದು ಹರೀಶ್‌ ವರುಣ್‌ ಗೌಡ ಕಾಮೆಂಟ್‌ ಮಾಡಿದ್ದಾರೆ.
  • ನೀವು ಹೇಳಿರುವ ಮಾತು ಸತ್ಯವಾಗಿದೆ. ಮಿಸ್ಟರ್‌ ಬ್ರೋ ಒಂದು ದೇಶದ ಒಂದು ಪಟ್ಟಣ ನೋಡಿ ಕಥೆ ಹೇಳುತ್ತಾರೆ ಎಲ್ಲ ದೇಶಗಳಲ್ಲೂ ಒಳ್ಳೆಯ ಮತ್ತು ಕೆಟ್ಟ ದೃಶ್ಯಗಳು, ಪ್ರದೇಶ, ನಡವಳಿಕೆ, ಜನಾಂಗ ಇರುತ್ತದೆ
  • ಗಗನ್‌ ಶ್ರೀನಿವಾಸ್‌ ಅವರ ಸಾಹಸ ನಿಜಕ್ಕೂ ತುಂಬಾ ಗ್ರೇಟ್‌. ಸ್ವಂತ ದುಡಿಮೆಯಿಂದ ಎಷ್ಟೊಂದು ದೇಶ ಸುತ್ತಿ ಅಲ್ಲಿಯ ವಿಚಾರ ತಿಳಿಸುವುದು, ಅಷ್ಟು ಸುಲಭ ಅಲ್ಲ. ಆದರೆ, ಅಲ್ಲಿಯ ಸ್ಥಳೀಯ ಗೈಡ್‌ಗಳ ಸಹಕಾರ ತೆಗೆದುಕೊಂಡು ಅಲ್ಲಿಯ ಸರಿಯಾದ ನಿಖರವಾದ ಮಾಹಿತಿಯನ್ನು ಜನರಿಗೆ ಕೊಟ್ಟರೆ ಒಳ್ಳೆಯದು. ಇಲ್ಲಿ ಕಾಮೆಂಟ್‌ ಮಾಡುವವರಿಗೆ ಒಂದು ರಿಕ್ವೆಸ್ಟ್‌. ಯಾರೂ ಕೆಟ್ಟದಾಗಿ ಅವರಿಗೆ ಕಾಮೆಂಟ್‌ ಮಾಡಬೇಡಿ. ಅವರ ಅಭಿಪ್ರಾಯಕ್ಕೂ ಗೌರವ ಕೊಡಿ. ಅವರು ಗಗನ್‌ ಶ್ರೀನಿವಾಸ್‌ ಮಾಡಿದ್ದು ತಪ್ಪು ಎಂದು ಹೇಳುತ್ತಿಲ್ಲ. ಸರಿಯಾದ ಮಾಹಿತಿ ಹಾಕಿ ಜನರಿಗೆ ಸರಿಯಾದ ಮಾಹಿತಿ ಮಾತ್ರ ತಿಳಿಸಿ ಎಂದು ಹೇಳುತ್ತಿದ್ದಾರೆ ಅಷ್ಟೇ. ಅವರ ಮಾತು ಸರಿಯಾಗಿದೆ ಅಲ್ಲವೇ? ಎಂದು ಸತೀಶ್‌ ಎಂಬುವವರು ಕಾಮೆಂಟ್‌ ಮಾಡಿದ್ದಾರೆ.

Whats_app_banner