OTT Releases This Week: ಥಳವನ್‌, Mr ಬಚ್ಚನ್‌, ಬೆಂಚ್‌ ಲೈಫ್‌; ಈ ವಾರ ಒಟಿಟಿ ಪ್ರಿಯರಿಗೆ ಬಗೆಬಗೆ ಸಿನಿಮಾ, ವೆಬ್‌ಸಿರೀಸ್‌ಗಳ ಹಬ್ಬದೂಟ-south ott releases this week goli soda rising thalavan committee kurrollu to mr bachchan ott releases sep 9 to 15 mnk ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  Ott Releases This Week: ಥಳವನ್‌, Mr ಬಚ್ಚನ್‌, ಬೆಂಚ್‌ ಲೈಫ್‌; ಈ ವಾರ ಒಟಿಟಿ ಪ್ರಿಯರಿಗೆ ಬಗೆಬಗೆ ಸಿನಿಮಾ, ವೆಬ್‌ಸಿರೀಸ್‌ಗಳ ಹಬ್ಬದೂಟ

OTT Releases This Week: ಥಳವನ್‌, Mr ಬಚ್ಚನ್‌, ಬೆಂಚ್‌ ಲೈಫ್‌; ಈ ವಾರ ಒಟಿಟಿ ಪ್ರಿಯರಿಗೆ ಬಗೆಬಗೆ ಸಿನಿಮಾ, ವೆಬ್‌ಸಿರೀಸ್‌ಗಳ ಹಬ್ಬದೂಟ

OTT Releases This Week: ಕೆಲವು ಜನಪ್ರಿಯ ಮತ್ತು ನಿರೀಕ್ಷಿತ ಸಿನಿಮಾಗಳು ಮತ್ತು ವೆಬ್ ಸರಣಿಗಳು ಈ ವಾರ ನಿಮ್ಮ ಬೆರಳ ತುದಿಗೆ ಎಟುಕಲಿವೆ. ಮಲಯಾಳಂನ ಆಸಿಫ್ ಅಲಿ ಮತ್ತು ಬಿಜು ಮೆನನ್ ಅವರ ಥಳವನ್‌, ತಮಿಳು ವೆಬ್ ಸರಣಿ ಗೋಲಿ ಸೋಡಾ ರೈಸಿಂಗ್ ಸೇರಿ ಇನ್ನೂ ಹಲವು ಸಿನಿಮಾಗಳು ಈ ವಾರ ಒಟಿಟಿಗೆ ಆಗಮಿಸಲಿವೆ.

ಸೆಪ್ಟೆಂಬರ್‌ 9ರಿಂದ 15ರ ವರೆಗೆ ಒಟಿಟಿಯಲ್ಲಿ ರಿಲೀಸ್‌ ಆಗಲಿರುವ ಸಿನಿಮಾಗಳ ಲಿಸ್ಟ್‌ ಇಲ್ಲಿದೆ.
ಸೆಪ್ಟೆಂಬರ್‌ 9ರಿಂದ 15ರ ವರೆಗೆ ಒಟಿಟಿಯಲ್ಲಿ ರಿಲೀಸ್‌ ಆಗಲಿರುವ ಸಿನಿಮಾಗಳ ಲಿಸ್ಟ್‌ ಇಲ್ಲಿದೆ.

OTT Releases This Week (Sep 9 To 15): ಒಟಿಟಿ ಪ್ರಿಯರಿಗೆ ಈ ವಾರ ಅಕ್ಷೆರಶಃ ಹಬ್ಬ. ಸಾಲು ಸಾಲು ಸಿನಿಮಾಗಳ ಜತೆಗೆ ಕೆಲವು ವೆಬ್‌ಸಿರೀಸ್‌ಗಳೂ ಸೆ. 9ರಿಂದ 15ರ ಅವಧಿಯಲ್ಲಿ ಸ್ಟ್ರೀಮಿಂಗ್‌ ಆರಂಭಿಸಲಿವೆ. ಆ ಪೈಕಿ ಈ ಒಂದು ವಾರದಲ್ಲಿ ಯಾವೆಲ್ಲ ಸಿನಿಮಾಗಳು, ಯಾವೆಲ್ಲ ಒಟಿಟಿಗಳಲ್ಲಿ ಸ್ಟ್ರೀಮ್‌ ಆಗಲಿವೆ, ಆ ಸಿನಿಮಾಗಳ ಕಥೆ ಏನು, ತಾರಾಬಳಗದಲ್ಲಿ ಯಾರೆಲ್ಲ ನಟಿಸಿದ್ದಾರೆ ಎಂಬಿತ್ಯಾದಿ ವಿವರ ಇಲ್ಲಿದೆ.

ಕೆಲವು ಜನಪ್ರಿಯ ಮತ್ತು ನಿರೀಕ್ಷಿತ ಸಿನಿಮಾಗಳು ಮತ್ತು ವೆಬ್ ಸರಣಿಗಳು ಈ ವಾರ ನಿಮ್ಮ ಬೆರಳ ತುದಿಗೆ ಎಟುಕಲಿವೆ. ಮಲಯಾಳಂನ ಆಸಿಫ್ ಅಲಿ ಮತ್ತು ಬಿಜು ಮೆನನ್ ಅವರ ಥಳವನ್‌, ತಮಿಳು ವೆಬ್ ಸರಣಿ ಗೋಲಿ ಸೋಡಾ ರೈಸಿಂಗ್ ಸೇರಿ ಇನ್ನೂ ಹಲವು ಸಿನಿಮಾಗಳು ಈ ವಾರ ಒಟಿಟಿ ಪ್ಲಾಟ್‌ಫಾರ್ಮ್‌ಗಳಾದ ನೆಟ್‌ಫ್ಲಿಕ್ಸ್‌, ಪ್ರೈಂ ವಿಡಿಯೋ, ಡಿಸ್ನಿ ಪ್ಲಸ್‌ ಹಾಟ್‌ಸ್ಟಾರ್‌, ಜೀ5, ಸೋನಿಲಿವ್‌, ಜಿಯೋ ಸಿನಿಮಾ ಒಟಿಟಿಯಲ್ಲಿ ಬಿಡುಗಡೆಯಾಗಲಿದೆ.

ಮರ್ಡರ್‌ ಮಿಸ್ಟರಿ ಥಳವನ್‌ (Thalavan)

ಮಲಯಾಳಂನ ಥಳವನ್‌ ಸಿನಿಮಾ ಸೆಪ್ಟೆಂಬರ್‌ 10ರಂದು ಸೋನಿ ಲೀವ್‌ ಒಟಿಟಿಗೆ ಬರಲಿದೆ. ಆಸಿಫ್‌ ಅಲಿ ಮತ್ತು ಬಿಜು ಮೆನನ್‌ ಮುಖ್ಯಭೂಮಿಕೆಯಲ್ಲಿರುವ ಈ ಸಿನಿಮಾ ಕೊಲೆ ಪ್ರಕರಣವೊಂದರ ಹಿನ್ನೆಲೆಯಲ್ಲಿ ಸಾಗಲಿದೆ. ಚಿತ್ರದಲ್ಲಿ ಬಿಜು ಮೆನನ್, ಆಸಿಫ್ ಅಲಿ ಜತೆಗೆ ಮಿಯಾ ಜಾರ್ಜ್, ಅನುಶ್ರೀ, ದಿಲೀಶ್ ಪೋತನ್, ಶಂಕರ್ ರಾಮಕೃಷ್ಣನ್, ರಂಜಿತ್ ಮತ್ತು ಕೊಟ್ಟಾಯಂ ನಜೀರ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಇದು ಇದೇ ವರ್ಷದ ಮೇ 24ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿತ್ತು.

ಥಳವನ್‌ ಒಟಿಟಿ ಬಿಡುಗಡೆ ದಿನಾಂಕ: ಸೆಪ್ಟೆಂಬರ್ 10

ಕಮೀಟಿ ಕುರ್ರೋಳ್ಳು (Committee Kurrollu)

ತೆಲುಗಿನ ಕಮೀಟಿ ಕುರ್ರೋಳ್ಳು ಸಿನಿಮಾ ಈಟಿವಿ ವಿನ್‌ ಒಟಿಟಿ ವೇದಿಕೆಯಲ್ಲಿ ಸೆಪ್ಟೆಂಬರ್‌ 12ರಿಂದ ಸ್ಟ್ರೀಮಿಂಗ್‌ ಆರಂಭಿಸಲಿದೆ. ಸಣ್ಣ ಪಟ್ಟಣದ ಯುವಕರ ಕಥೆ ಈ ಚಿತ್ರದ್ದು. ಪಶ್ಚಿಮ ಗೋದಾವರಿ ಭಾಗದ ಹಿನ್ನೆಲೆಯಲ್ಲಿ ಇಡೀ ಕಥೆ ಸಾಗಲಿದೆ. ಸ್ನೇಹಿತರ ನಡುವಿನ ಸಾಮರಸ್ಯಕ್ಕೆ ಅನಿರೀಕ್ಷಿತ ಭಂಗ ಬಂದೊದಗುತ್ತದೆ. ಅದನ್ನು ಆ ಯುವಕರ ಗುಂಪು ಹೇಗೆ ಬಗೆಹರಿಸಿಕೊಳ್ಳುತ್ತೆ ಎಂಬುದೇ ಸಿನಿಮಾ. ಚಿತ್ರದಲ್ಲಿ ಪ್ರಸಾದ್ ಬೆಹ್ರಾ, ರಮಣ ಭಾರ್ಗವ್, ಕೋಟಾ ಜಯರಾಮ್, ಶ್ಯಾಮ್ ಕಲ್ಯಾಣ್, ಸಾಯಿ ಕುಮಾರ್ ಮತ್ತು ಕಿಟ್ಟಯ್ಯ ಪ್ರಮುಖ ಪಾತ್ರಗಳಲ್ಲಿದ್ದಾರೆ.

ಕಮೀಟಿ ಕುರ್ರೋಳ್ಳು ಒಟಿಟಿ ಬಿಡುಗಡೆ ದಿನಾಂಕ: ಸೆಪ್ಟೆಂಬರ್ 12

Mr ಬಚ್ಚನ್ (Mr Bachchan)

ಕಪ್ಪುಹಣವನ್ನು ಬಯಲಿಗೆಳೆಯುವ ಪ್ರಾಮಾಣಿಕ ಆದಾಯ ತೆರಿಗೆ ಅಧಿಕಾರಿಯ ಸುತ್ತ ಸುತ್ತುವ ಕಥೆಯೇ ಮಿಸ್ಟರ್‌ ಬಚ್ಚನ್.‌ ಸಂಸದನ ಎದುರು ಹಾಕಿಕೊಳ್ಳುವ ಕಥಾನಾಯಕ ಸಂಕಷ್ಟಕ್ಕೆ ಸಿಲುಕುತ್ತಾನೆ. ಬಳಿಕ ಹೇಗೆ ಪುಟಿದೇಳುತ್ತಾನೆ ಎಂಬುದೇ ಈ ಚಿತ್ರದ ಕಥೆ. ಚಿತ್ರದಲ್ಲಿ ರವಿತೇಜ, ಭಾಗ್ಯಶ್ರೀ ಬೋರ್ಸೆ, ಅಭಿಮನ್ಯು ಸಿಂಗ್ ಮತ್ತು ಸಚಿನ್ ಖೇಡೇಕರ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಸಿನಿಮಾ ಆಗಸ್ಟ್ 15 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಯಿತು. ಈ ಸಿನಿಮಾ ಸೆಪ್ಟೆಂಬರ್‌ 12ರಂದು ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆ ಆಗಲಿದೆ.

ಮಿಸ್ಟರ್‌ ಬಚ್ಚನ್ ಒಟಿಟಿ ಬಿಡುಗಡೆ ದಿನಾಂಕ: ಸೆಪ್ಟೆಂಬರ್ 12

ನುನಾಕ್ಕುಜಿ (Nunakuzhi)

ಕ್ರೈಮ್‌ ಕಾಮಿಡಿ ಸಿನಿಮಾ ನುನಾಕ್ಕುಜಿ, ಚಿತ್ರಮಂದಿರದಲ್ಲಿ ತೆರೆ ಕಂಡ ಕೆಲವು ದಿನಗಳ ನಂತರ ಒಟಿಟಿಗೆ ಲಗ್ಗೆ ಇಟ್ಟಿದೆ. ಸ್ಟೆಪ್ಟೆಂಬರ್‌ 13 ರಿಂದ ಜೀ 5 ಒಟಿಟಿಯಲ್ಲಿ ಈ ಮಲಯಾಳಂ ಸಿನಿಮಾ ಸ್ಟ್ರೀಮ್‌ ಆಗಲಿದೆ ಎಂದು ಜೀ 5 ಒಟಿಟಿ, ತನ್ನ ಅಧಿಕೃತ ಸೋಷಿಯಲ್‌ ಮೀಡಿಯಾದಲ್ಲಿ ಹೇಳಿಕೊಂಡಿದೆ. ಮಲಯಾಳಂ ಜೊತೆಗೆ ಕನ್ನಡ, ತೆಲುಗು ಭಾಷೆಗಳಲ್ಲಿ ಕೂಡಾ ಈ ಚಿತ್ರ ಸ್ಟ್ರೀಮ್‌ ಆಗಲಿದೆ. ಬೇಸಿಲ್ ಜೋಸೆಫ್ ಮತ್ತು ಗ್ರೇಸ್ ಆಂಟೋನಿ ಈ ಚಿತ್ರದ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

ನುನಾಕ್ಕುಜಿ OTT ಬಿಡುಗಡೆ ದಿನಾಂಕ: ಸೆಪ್ಟೆಂಬರ್ 13

ಬೆಂಚ್ ಲೈಫ್ (Bench Life)

ಸಹಕಾರಿ ಸಂಸ್ಥೆಯ ಉದ್ಯೋಗಿಯ ಜೀವನದ ಸುತ್ತ ಸುತ್ತುತ್ತದೆ ಬೆಂಚ್‌ ಲೈಫ್‌ ವೆಬ್‌ಸಿರೀಸ್‌. ಈ ವೆಬ್‌ಸರಣಿಯಲ್ಲಿ ರಾಜೇಂದ್ರ ಪ್ರಸಾದ್, ವೈಭವ್, ಚರಣ್ ಪೇರಿ, ರಿತಿಕಾ ಸಿಂಗ್, ಆಕಾಂಕ್ಷಾ ಸಿಂಗ್, ನಯನ್ ಸಾರಿಕಾ, ವೆಂಕಟೇಶ್ ಕಾಕುಮನು ಮತ್ತು ತಣಿಕೆಲ್ಲ ಭರಣಿ ಪ್ರಮುಖ ಪಾತ್ರಗಳಲ್ಲಿದ್ದಾರೆ. ಈ ಸಿರೀಸ್‌ ಸೋನಿ ಲೀವ್‌ನಲ್ಲಿ ಸೆಪ್ಟೆಂಬರ್‌ 12ರಿಂದ ಸ್ಟ್ರೀಮಿಂಗ್‌ ಆರಂಭಿಸಲಿದೆ.

ಬೆಂಚ್ ಲೈಫ್ ಬಿಡುಗಡೆ ದಿನಾಂಕ: ಸೆಪ್ಟೆಂಬರ್ 12

ಗೋಲಿ ಸೋಡಾ ರೈಸಿಂಗ್ (Goli Soda Rising)

ಗೋಲಿ ಸೋಡಾ ರೈಸಿಂಗ್ ಹೆಸರಿನ ಸಿನಿಮಾ ಎಲ್ಲಿಂದ ಕೊನೆಯಾಯ್ತೋ ಅಲ್ಲಿಂದಲೇ ಅದೇ ಸಿನಿಮಾ ವೆಬ್‌ಸಿರೀಸ್‌ ಆಗಿ ಬದಲಾಗಿದೆ. ಇದು ಆಚಿ ಮೆಸ್ ಹುಡುಗರ ಜೀವನದ ಕಥೆಯಾಗಿದ್ದು, ಈ ಸಿರೀಸ್‌ನಲ್ಲಿ ಶಾಮ್, ಅಭಿರಾಮಿ, ಪುಗಜ್, ರಮ್ಯಾ ನಂಬೀಸನ್, ಅವಂತಿಕಾ ಮಿಶ್ರಾ, ಚೇರನ್, ಆರ್ ಕೆ ವಿಜಯ್ ಮುರುಗನ್, ಭರತ್ ಶ್ರೀನಿ, ಕಿಶೋರ್, ಪಾಂಡಿ, ಉದಯ ರಾಜ್, ಮುರುಗೇಶ್ ಮತ್ತು ಕುಟ್ಟಿ ಮಣಿ ಪ್ರಮುಖ ಪಾತ್ರಗಳಲ್ಲಿದ್ದಾರೆ. ಇದು ತಮಿಳು, ಹಿಂದಿ, ತೆಲುಗು, ಕನ್ನಡ, ಮಲಯಾಳಂ, ಬೆಂಗಾಲಿ ಮತ್ತು ಮರಾಠಿ ಸೇರಿದಂತೆ ಏಳು ಭಾಷೆಗಳಲ್ಲಿ ಸ್ಟ್ರೀಮ್ ಆಗಲಿದೆ.

ಗೋಲಿ ಸೋಡಾ ರೈಸಿಂಗ್ ಬಿಡುಗಡೆ ದಿನಾಂಕ: ಸೆಪ್ಟೆಂಬರ್ 13

mysore-dasara_Entry_Point