Bigg Boss Kannada: ಬಿಗ್‌ಬಾಸ್ ಕನ್ನಡ ಸೀಸನ್ 10ಕ್ಕೆ ಕಾಂತಾರ ನಟ ಹೋಗುವ ಸಾಧ್ಯತೆ, ರಿಷಬ್ ಶೆಟ್ಟಿ ಅಲ್ವೇ ಅಲ್ಲ, ಇವ್ರು ಹಾಸ್ಯ ನಟ
Bigg Boss Kannada season 10 contestants: ಕಲರ್ಸ್ ಕನ್ನಡದಲ್ಲಿ ಅಕ್ಟೋಬರ್ 8ರಂದು ಆರಂಭವಾಗಲಿರುವ ಬಿಗ್‌ಬಾಸ್ ಕನ್ನಡ ಸೀಸನ್ 10ರಲ್ಲಿ ಯಾರೆಲ್ಲ ಸ್ಪರ್ಧಿಸಲಿದ್ದಾರೆ ಎಂದು ಹಲವು ಹೆಸರುಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ. ಕಾಂತಾರ ಸಹನಟ ಪ್ರಕಾಶ್ ತುಮಿನಾಡು ಬಿಗ್‌ಬಾಸ್ ಮನೆಯೊಳಗೆ ಪ್ರವೇಶಿಸಲಿದ್ದಾರೆಯೇ? ಇಲ್ಲಿದೆ ವಿವರ.
ಬೆಂಗಳೂರು: ಬಿಗ್‌ಬಾಸ್ ಕನ್ನಡ ಆರಂಭಕ್ಕೆ ದಿನಗಣನೆ ಆರಂಭವಾಗಿದೆ. ಈ ಬಾರಿ ಬಿಗ್‌ಬಾಸ್ ಮನೆಯೊಳಗೆ ಯಾರೆಲ್ಲ ಪ್ರವೇಶಿಸಲಿದ್ದಾರೆ ಎಂದು ವದಂತಿಗಳು ಹೆಚ್ಚುತ್ತಿವೆ. ಸೋಷಿಯಲ್ ಮೀಡಿಯಾದಲ್ಲಿ "ಬಿಗ್‌ಬಾಸ್ ಕನ್ನಡಕ್ಕೆ ಈ ಬಾರಿ ಯಾರೆಲ್ಲ ಸ್ಪರ್ಧಿಗಳು ಇರಲಿದ್ದಾರೆ" ಎಂದು ಚರ್ಚೆಯೇ ನಡೆಯುತ್ತಿದೆ. ಇದೇ ಸಂದರ್ಭದಲ್ಲಿ ಕಾಂತಾರ ನಟನೊಬ್ಬ ಈ ಬಾರಿ ಬಿಗ್‌ಬಾಸ್ ಮನೆಗೆ ಪ್ರವೇಶಿಸುವ ಸಾಧ್ಯತೆ ಕುರಿತು ವದಂತಿಗಳಿವೆ. ಈ ನಟ ಪ್ರವೇಶಿಸಿದರೆ ಬಿಗ್‌ಬಾಸ್ ಮನೆಯೊಳಗೆ ಭರಪೂರ ಮನರಂಜನೆ ನಿರೀಕ್ಷಿಸಬಹುದಾಗಿದೆ.
ವರದಿಯ ಪ್ರಕಾರ, ಈ ಬಾರಿ ಬಿಗ್‌ಬಾಸ್ ಮನೆಯೊಳಗೆ ಕಾಂತಾರ ಸಿನಿಮಾದ ಸಹನಟರಾದ ಪ್ರಕಾಶ್ ತುಮಿನಾಡು ಪ್ರವೇಶಿಸುವ ಸಾಧ್ಯತೆಯಿದೆ. ಈ ಕುರಿತು ಸೋಷಿಯಲ್ ಮೀಡಿಯಾದಲ್ಲಿ ವದಂತಿಗಳು ಹರಿದಾಡುತ್ತಿದೆ. ಬಿಗ್‌ಬಾಸ್ ಮನೆಯೊಳಗೆ ಯಾರು ಹೋಗುತ್ತಾರೆ ಎನ್ನುವ ವಿಚಾರವನ್ನು ಕೊನೆಕ್ಷಣದವರೆಗೂ ಬಿಗ್‌ಬಾಸ್ ಆಯೋಜಕರು ಬಹಿರಂಗಪಡಿಸುವುದಿಲ್ಲ. ಹೀಗಾಗಿ, ವಂದತಿಗಳು ನಿಜವೋ ಸುಳ್ಳೋ ಎಂದು ಬಿಗ್‌ಬಾಸ್ ಆರಂಭವಾಗುವವರೆಗೆ ತಿಳಿಯುವುದಿಲ್ಲ.
ಪ್ರಕಾಶ್ ತುಮಿನಾಡು ಅವರು ಈಗಾಗಲೇ ತಮ್ಮ ಕಾಮಿಡ್ ಶೋಗಳಿಂದ ಜನಪ್ರಿಯತೆ ಪಡೆದಿದ್ದಾರೆ. ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು ಚಿತ್ರದಲ್ಲಿಯೂ ಇವರ ಅಭಿಮಾನ ಜನಮನ್ನಣೆ ಗಳಿಸಿತ್ತು. ರಿಷಬ್ ಶೆಟ್ಟಿ ನಾಯಕನಾಗಿ ನಟಿಸಿದ ಕಾಂತಾರ ಚಿತ್ರದಲ್ಲಿಯೂ ತನ್ನ ವಿಭಿನ್ನ ಮ್ಯಾನರಿಸಂ ಮೂಲಕ ಪ್ಕರಾಶ್ ತುಮಿನಾಡು ಪ್ರೇಕ್ಷಕರಿಗೆ ಇಷ್ಟವಾಗಿದ್ದರು. ವಿವಿಧ ಹಾಸ್ಯ ನಾಟಕಗಳು, ಹಾಸ್ಯ ಪಾತ್ರಗಳಲ್ಲಿ ಈಗಾಗಲೇ ಮಿಂಚಿರುವ ಪ್ರಕಾಶ್ ತುಮಿನಾಡು ನಿಜಕ್ಕೂ ಬಿಗ್‌ಬಾಸ್ ಮನೆಗೆ ಹೋಗುತ್ತಾರ ಎಂದು ತಿಳಿಯಲು ಇನ್ನು ಕೆಲವು ದಿನ ಕಾಯಬೇಕು.
ಬಿಗ್‌ಬಾಸ್ ಕನ್ನಡ ಆರಂಭ ಯಾವಾಗ?
ಕಲರ್ಸ್ ಕನ್ನಡದಲ್ಲಿ ಇದೇ ಅಕ್ಟೋಬರ್ 8ರಿಂದ ಬಿಗ್‌ಬಾಸ್ ಕನ್ನಡ ರಿಯಾಲಿಟಿ ಶೋ ಆರಂಭವಾಗಲಿದೆ. ಇದು ಸೀಸನ್ 10 ಶೋ ಆಗಿದೆ. ಈ ಹಿಂದಿನ ಬಿಗ್‌ಬಾಸ್ ಕನ್ನಡ ಶೋದಲ್ಲಿ ಗೆದ್ದವರು ಯಾರು? ರನ್ನರ್ ಅಪ್ ಆದವರು ಯಾರು ಎಂದು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ. ಬಿಗ್‌ಬಾಸ್ ಕನ್ನಡ ಗ್ರ್ಯಾಂಡ್ ಪ್ರೀಮಿಯರ್ ಅಕ್ಟೋಬರ್ 8ರ ಸಂಜೆ 6 ಗಂಟೆಯಿಂದ ಆರಂಭವಾಗಲಿದೆ.
ನಿವೇದಿತಾ ಗೌಡ ಬಿಗ್‌ಬಾಸ್‌ಗೆ ಮರು ಎಂಟ್ರಿ?
ಈಗಾಗಲೇ ಬಿಗ್‌ಬಾಸ್ ಕನ್ನಡದಲ್ಲಿ ಸ್ಪರ್ಧಿಸಿರುವ ಸ್ಪರ್ಧಿಗಳು ಮತ್ತೆ ಬಿಗ್‌ಬಾಸ್ ಮನೆಗೆ ಆಗಮಿಸಿದರೆ ಅಚ್ಚರಿಯಿಲ್ಲ. ನಿವೇದಿತಾ ಗೌಡ ಮತ್ತೆ ಬಿಗ್‌ಬಾಸ್ ಮನೆಗೆ ಎಂಟ್ರಿ ನೀಡುತ್ತಾರ ಎಂಬ ಚರ್ಚೆಯೂ ಸೋಷಿಯಲ್ ಮೀಡಿಯಾದಲ್ಲಿ ಆರಂಭವಾಗಿದೆ. ಬಿಗ್‌ಬಾಸ್‌ನಲ್ಲಿ ಹೊಸಬರು ಮತ್ತು ಹಳಬರ ಸಮಾಗಮ ಇರುತ್ತದೆ. ಈ ರೀತಿ ಎಂಟ್ರಿ ಕೊಡುತ್ತಾರೋ ಅಥವಾ ಕೆಲವು ದಿನ ಬಿಗ್‌ಬಾಸ್ ಮನೆಯೊಳಗಿದ್ದು ನಿವೇದಿತಾ ವಾಪಸ್ ಬರುತ್ತಾರೋ ಎಂದು ಕಾದುನೋಡಬೇಕಿದೆ.
ಕ್ರಿಕೆಟಿಗ ವಿನಯ್ ಕುಮಾರ್‌ಗೆ ಅವಕಾಶ?
ಕೆಲವು ವರದಿಗಳ ಪ್ರಕಾರ ಬಿಗ್‌ಬಾಸ್ ಕನ್ನಡ ಸೀಸನ್ 10ರಲ್ಲಿ ದಾವಣಗೆರೆ ಎಕ್ಸ್‌ಪ್ರೆಸ್ ಖ್ಯಾತಿಯ ಕ್ರಿಕೆಟಿಗ ವಿನಯ್ ಕುಮಾರ್ ಸ್ಪರ್ಧಿಸಲಿದ್ದಾರಂತೆ. ಬಿಗ್‌ಬಾಸ್ ಕನ್ನಡ ಸೀಸನ್ 9ಕ್ಕೂ ಇವರ ಎಂಟ್ರಿ ಕುರಿತು ಸುದ್ದಿಯಾಗಿತ್ತು. ಆದರೆ, ಅವರು ಬಿಗ್‌ಬಾಸ್ ಮನೆ ಪ್ರವೇಶಿಸಿರಲಿಲ್ಲ. ಭಾರತ ಕ್ರಿಕೆಟ್ ತಂಡದ ಮಾಜಿ ವೇಗಿ ವಿನಯ್ ಕುಮಾರ್ ಈ ಬಾರಿ ಬಿಗ್‌ಬಾಸ್ ಮನೆಯೊಳಗೆ ಪ್ರವೇಶಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಈ ಕುರಿತು ಕಲರ್ಸ್ ಕನ್ನಡ ತುಟಿಪಿಟಿಕ್ ಎಂದಿಲ್ಲ. ಈ ಕುರಿತ ವರದಿ ಇಲ್ಲಿದೆ ಓದಿ.
ಬಿಗ್‌ಬಾಸ್ ಕನ್ನಡದ ಸಂಭಾವ್ಯ ಸ್ಪರ್ಧಿಗಳು
ಕರ್ನಾಟಕದ ಯಾವೆಲ್ಲ ಪ್ರತಿಭೆಗಳು ಈ ರಿಯಾಲಿಟಿ ಶೋಗೆ ಎಂಟ್ರಿ ನೀಡಲಿದ್ದಾರೆ ಎಂದು ನೆಟ್ಟಿಗರು ಚರ್ಚೆ ಮಾಡುತ್ತಿದ್ದಾರೆ. ಸಾಕಷ್ಟು ಹೆಸರುಗಳನ್ನು ಜನರು ಸೂಚಿಸುತ್ತಿದ್ದಾರೆ ಕೂಡ. ಆ ಪೈಕಿ ಖ್ಯಾತ ಯೂಟ್ಯೂಬರ್ ಡಾ.ಬ್ರೋ ಗಗನ್ ಶ್ರೀನಿವಾಸ್ ಈ ಸಲದ ಬಿಗ್‌ಬಾಸ್‌ನಲ್ಲಿ ಕಾಣಿಸಿಕೊಳ್ಳಲಿ ಎಂದು ಆನ್‌ಲೈನ್‌ನಲ್ಲಿ ಬೇಡಿಕೆ ಆರಂಭವಾಗಿದೆ. ಸೋಷಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ಭೂಮಿಕಾ ಬಸವರಾಜ್ ಕೂಡ ಬಿಗ್‌ಬಾಸ್‌ನಲ್ಲಿ ಇರಲಿದ್ದಾರೆ ಎನ್ನಲಾಗುತ್ತಿದೆ. ಈ ಕುರಿತ ಕಂಪ್ಲಿಟ್ ವರದಿ ಇಲ್ಲಿದೆ.