Karnataka News Live December 3, 2024 : ಕರ್ನಾಟಕದಲ್ಲಿ 13,722 ಕೋಟಿ ರೂ ಜಿಎಸ್‌ಟಿ ಸಂಗ್ರಹ, ದೇಶದಲ್ಲೇ ಎರಡನೇ ಸ್ಥಾನ; ಅಬಕಾರಿ ಇಲಾಖೆಯ ಗ್ರೂಪ್‌ ಸಿ ಹುದ್ದೆಗಳ ಭರ್ತಿಗೆ ಕ್ರಮ
ಕನ್ನಡ ಸುದ್ದಿ  /  ಕರ್ನಾಟಕ  /  Karnataka News Live December 3, 2024 : ಕರ್ನಾಟಕದಲ್ಲಿ 13,722 ಕೋಟಿ ರೂ ಜಿಎಸ್‌ಟಿ ಸಂಗ್ರಹ, ದೇಶದಲ್ಲೇ ಎರಡನೇ ಸ್ಥಾನ; ಅಬಕಾರಿ ಇಲಾಖೆಯ ಗ್ರೂಪ್‌ ಸಿ ಹುದ್ದೆಗಳ ಭರ್ತಿಗೆ ಕ್ರಮ

ಕರ್ನಾಟಕದಲ್ಲಿ 13,722 ಕೋಟಿ ರೂ ಜಿಎಸ್‌ಟಿ ಸಂಗ್ರಹ, ದೇಶದಲ್ಲೇ ಎರಡನೇ ಸ್ಥಾನ; ಅಬಕಾರಿ ಇಲಾಖೆಯ ಗ್ರೂಪ್‌ ಸಿ ಹುದ್ದೆಗಳ ಭರ್ತಿಗೆ ಕ್ರಮ

Karnataka News Live December 3, 2024 : ಕರ್ನಾಟಕದಲ್ಲಿ 13,722 ಕೋಟಿ ರೂ ಜಿಎಸ್‌ಟಿ ಸಂಗ್ರಹ, ದೇಶದಲ್ಲೇ ಎರಡನೇ ಸ್ಥಾನ; ಅಬಕಾರಿ ಇಲಾಖೆಯ ಗ್ರೂಪ್‌ ಸಿ ಹುದ್ದೆಗಳ ಭರ್ತಿಗೆ ಕ್ರಮ

01:26 PM ISTDec 03, 2024 06:56 PM HT Kannada Desk
  • twitter
  • Share on Facebook
01:26 PM IST

ಎಚ್‌ಟಿ ಕನ್ನಡ ಲೈವ್ ಅಪ್‌ಡೇಟ್ಸ್‌ಗೆ ಸ್ವಾಗತ. ಕರ್ನಾಟಕಕ್ಕೆ ಸಂಬಂಧಿಸಿದ ಬ್ರೇಕಿಂಗ್ ನ್ಯೂಸ್‌, ವಿದ್ಯಮಾನ, ವಿಶ್ಲೇಷಣೆಗಳ ಇಣುಕುನೋಟ ಇಲ್ಲಿ ಲಭ್ಯ. ಕರ್ನಾಟಕದ ವಿವಿಧ ಜಿಲ್ಲೆಗಳ ಪ್ರಮುಖ ವಿದ್ಯಮಾನಗಳೂ ಇಲ್ಲಿದೆ.

Tue, 03 Dec 202401:26 PM IST

ಕರ್ನಾಟಕ News Live: ಕರ್ನಾಟಕದಲ್ಲಿ 13,722 ಕೋಟಿ ರೂ ಜಿಎಸ್‌ಟಿ ಸಂಗ್ರಹ, ದೇಶದಲ್ಲೇ ಎರಡನೇ ಸ್ಥಾನ; ಅಬಕಾರಿ ಇಲಾಖೆಯ ಗ್ರೂಪ್‌ ಸಿ ಹುದ್ದೆಗಳ ಭರ್ತಿಗೆ ಕ್ರಮ

  • ಕರ್ನಾಟಕ ರಾಜ್ಯ ಜಿಎಸ್‌ಟಿ ಸಂಗ್ರಹದಲ್ಲಿ ಶೇಕಡಾ 15ರ ಬೆಳವಣಿಗೆ ದರ ಸಾಧಿಸಿದೆ. ರಾಜ್ಯದಲ್ಲಿ ನವೆಂಬರ್‌ ಅಂತ್ಯದವರೆಗೆ ರೂ.13,722 ಕೋಟಿ ಜಿಎಸ್‌ಟಿ ಸಂಗ್ರಹಿಸಲಾಗಿದ್ದು, ದೇಶದಲ್ಲೇ ಎರಡನೇ ಸ್ಥಾನದಲ್ಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
Read the full story here

Tue, 03 Dec 202412:58 PM IST

ಕರ್ನಾಟಕ News Live: ಕೊಪ್ಪದಲ್ಲಿ 60 ಅಡಿ ಬಾವಿಗೆ ಬಿದ್ದ 94 ವರ್ಷದ ಅಜ್ಜಿ, ಒಂದು ಗಂಟೆ ಕಾಲ ಪೈಪ್ ಹಿಡಿದು ಪ್ರಾಣ ಉಳಿಸಿಕೊಂಡ ವೃದ್ಧೆ

  • ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಗ್ರಾಮ ಒಂದರಲ್ಲಿ 94 ವರ್ಷದ ಅಜ್ಜಿ ಕಾಲುಜಾರಿ 60 ಅಡಿ ಆಳದ ತೆರೆದ ಬಾವಿಗೆ ಬಿದ್ದಿದ್ದರು. ಅವರು ತಮ್ಮ ಪ್ರಾಣ ಉಳಿಸಿಕೊಳ್ಳಲು 1 ಗಂಟೆಗೂ ಹೆಚ್ಚು ಕಾಲ ಪೈಪ್ ಹಿಡಿದು ಬಾವಿ ಬದಿಗೆ ನಿಂತು ಹರಸಾಹಸ ಪಟ್ಟಿದ್ದರು. 

Read the full story here

Tue, 03 Dec 202412:20 PM IST

ಕರ್ನಾಟಕ News Live: ಸನ್ಯಾಸ ದೀಕ್ಷೆ ಪಡೆಯಲಿದ್ದಾರಂತೆ ಮಂಡ್ಯದ ಅಪಾರ ಜಿಲ್ಲಾಧಿಕಾರಿ, ಒಕ್ಕಲಿಗ ಮಠಕ್ಕೆ ಪೀಠಾಧ್ಯಕ್ಷರಾಗಿ ನೇಮಕ ಸಾಧ್ಯತೆ; ಯಾರಿವರು ನಾಗರಾಜು?

  • ಮಂಡ್ಯದ ಕೆಎಎಸ್‌ ಅಧಿಕಾರಿ, ಅಪಾರ ಜಿಲ್ಲಾಧಿಕಾರಿ ಡಾ. ಹೆಚ್ ಎಲ್ ನಾಗರಾಜು ತಮ್ಮ ಸರಕಾರಿ ಹುದ್ದೆ ಬಿಟ್ಟು ಸನ್ಯಾಸ ದೀಕ್ಷೆ ಸ್ವೀಕರಿಸಲು ಮುಂದಾಗಿದ್ದಾರೆ ಎಂದು ಹೇಳಲಾಗಿದೆ. ಇವರು ವಿಶ್ವ ಒಕ್ಕಲಿಗ ಮಠಕ್ಕೆ ಪೀಠಾಧ್ಯಕ್ಷರಾಗಿ ನೇಮಕಗೊಳ್ಳುವ ಸಾಧ್ಯತೆ ಇದೆ ಎಂಬ ವದಂತಿ ದಟ್ಟವಾಗಿದೆ.
Read the full story here

Tue, 03 Dec 202410:01 AM IST

ಕರ್ನಾಟಕ News Live: ಕರಾವಳಿಯಲ್ಲಿ ಫೆಂಗಲ್‌ ಚಂಡಮಾರುತದ ಅಬ್ಬರ: ಆದ್ಯಪಾಡಿಯಲ್ಲಿ ಗುಡ್ಡ ಕುಸಿತ, ಹಲವೆಡೆ ಹಾನಿ, ಕಡಲು ಪ್ರಕ್ಷುಬ್ದ, ಬೋಟ್‌ಗಳಿಗೆ ಹಾನಿ

  • Cyclone Fengal: ಫೆಂಗಲ್ ಚಂಡಮಾರುತದ ಅಬ್ಬರದ ಕಾರಣ ಕರಾವಳಿ ಜಿಲ್ಲೆಗಳಲ್ಲೂ ಮಳೆಯಾಗಿದ್ದು, ದಕ್ಷಿಣ ಕನ್ನಡದ ಆದ್ಯಪಾಡಿಯಲ್ಲಿ ಗುಡ್ಡ ಕುಸಿತ ಸಂಭವಿಸಿದೆ. ಸಮುದ್ರ ಪ್ರಕ್ಷುಬ್ಧವಾಗಿದ್ದು ಬೋಟ್‌ಗಳು ಹಾನಿಗೀಡಾಗಿವೆ. (ವರದಿ- ಹರೀಶ್ ಮಾಂಬಾಡಿ, ಮಂಗಳೂರು)

Read the full story here

Tue, 03 Dec 202408:42 AM IST

ಕರ್ನಾಟಕ News Live: Kalaburagi Rotti: ಖಡಕ್ ರೊಟ್ಟಿ ಶೇಂಗಾ ಚಟ್ನಿ ತಿನ್‌ಬೇಕು ಅಂತ ಅನ್ನಿಸ್ತಿದೆಯಾ, ಕಲಬುರಗಿ ರೊಟ್ಟಿ ನಿಮ್ಮ ಮನೆಬಾಗಿಲಿಗೆ ಬರುತ್ತೆ ನೋಡಿ

  • Kalaburagi Rotti: ಖಡಕ್ ರೊಟ್ಟಿ ಶೇಂಗಾ ಹಿಂಡಿ ರುಚಿ ಬಲ್ಲವನೇ ಬಲ್ಲ, ಕರ್ನಾಟಕದ ದಕ್ಷಿಣ ತುದಿಯ ಮಂಗಳೂರಲ್ಲಿ ಕುಳಿತು ಕರ್ನಾಟಕದ ಉತ್ತರ ತುದಿಯ ಕಲಬುರಗಿಯ ಖಡಕ್ ರೊಟ್ಟಿ ಶೇಂಗಾ ಹಿಂಡಿ ತಿನ್ನಬೇಕು ಅಂತ ಬಯಸಿದರೆ ಹೇಗೆ? ತಪ್ಪೇನಿಲ್ಲ, ಕಲಬುರಗಿಯಿಂದಲೇ ಖಡಕ್ ರೊಟ್ಟಿ ಶೇಂಗಾ ಚಟ್ನಿ ನಿಮ್ಮ ಮನೆಬಾಗಿಲಿಗೆ ಬರುತ್ತೆ ನೋಡಿ.

Read the full story here

Tue, 03 Dec 202408:41 AM IST

ಕರ್ನಾಟಕ News Live: ಫೆಂಗಲ್ ಚಂಡಮಾರುತ; ಬೆಂಗಳೂರಲ್ಲಿ ಏನಾಗಿದೆ, ಕರ್ನಾಟಕ ದಕ್ಷಿಣ ಒಳನಾಡು ಜನ ಕಂಗಾಲು, ಕೃಷಿ, ಬೆಳೆ ನಾಶ ನಷ್ಟ- 10 ಮುಖ್ಯ ಅಂಶಗಳು

  • Cyclone Fengal: ಫೆಂಗಲ್ ಚಂಡಮಾರುತದ ಪರಿಣಾಮ ಕರ್ನಾಟಕದ ದಕ್ಷಿಣ ಒಳನಾಡು ಮತ್ತು ಕರಾವಳಿ ಕರ್ನಾಟಕದಲ್ಲಿ ಭಾರಿ ಮಳೆಯಾಗುತ್ತಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ಕೃಷಿ, ಬೆಳೆ ನಾಶ ನಷ್ಟ ಸಂಭವಿಸಿದೆ. ಬೆಂಗಳೂರಲ್ಲಿ ಏನಾಗಿದೆ ಎಂಬುದು ಸೇರಿ 10 ಮುಖ್ಯ ಅಂಶಗಳ ವಿವರ ಇಲ್ಲಿದೆ.

Read the full story here

Tue, 03 Dec 202408:10 AM IST

ಕರ್ನಾಟಕ News Live: ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಸೀಟ್‌ ಬ್ಲಾಕಿಂಗ್‌ ಹಗರಣ; 10 ಮಂದಿ ಆರೋಪಿಗಳನ್ನು ಬಂಧಿಸಿದ ಬೆಂಗಳೂರು ಪೊಲೀಸರು

  • KIA engineering seat blocking: ಎಂಜಿನಿಯರಿಂಗ್ ಸೀಟ್ ಬ್ಲಾಕಿಂಗ್ ಹಗರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (ಕೆಇಎ) ಸಿಬ್ಬಂದಿ ಒಳಗೊಂಡಂತೆ 10 ಮಂದಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ. ಈ ಹಗರಣದಲ್ಲಿ ಪ್ರತಿಷ್ಠಿತ ಕಾಲೇಜುಗಳು ಭಾಗಿಯಾಗಿರುವ ಶಂಕೆ ಇದೆ.

Read the full story here

Tue, 03 Dec 202407:29 AM IST

ಕರ್ನಾಟಕ News Live: Bengaluru Crime: ಬೆಂಗಳೂರು ವಿದ್ಯಾರ್ಥಿನಿ ಆತ್ಮಹತ್ಯೆಗೆ ಕಾಲೇಜು ಸಹಪಾಠಿ ಮಾಡಿದ 15 ಲಕ್ಷ ರೂ ವಂಚನೆ ಕಾರಣ- ವರದಿ

  • Bengaluru Crime News: ಬೆಂಗಳೂರಿನ ರಾಜಾಜಿನಗರದ ತನ್ನ ಮನೆಯ ಬಾಲ್ಕನಿಯಲ್ಲಿ ನವೆಂಬರ್‌ 29ರಂದು ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ ಪ್ರಿಯಾಂಕ (19) ಸಾವಿಗೆ ಆಕೆಯ ಸಹಪಾಠಿಯ ಹಣಕಾಸು ವಂಚನೆಯೇ ಕಾರಣ ಎಂದು ವರದಿಗಳು ತಿಳಿಸಿವೆ.
Read the full story here

Tue, 03 Dec 202405:51 AM IST

ಕರ್ನಾಟಕ News Live: ಚಾಮರಾಜಪೇಟೆಯಲ್ಲಿ ಸಚಿವ ಜಮೀರ್ ಅಹ್ಮದ್ ಎದುರೇ ಸಂಸ್ಕೃತಿಯ ಅಣಕ; ತುಳುನಾಡ ದೈವಗಳನ್ನು ಅವಮಾನಿಸಿದ ಪಂಜುರ್ಲಿ ದೈವ ವೇಷಧಾರಿಗಳು, ವೈರಲ್ ವಿಡಿಯೋ

  • Viral Video: ಚಾಮರಾಜಪೇಟೆಯಲ್ಲಿ ಸಚಿವ ಜಮೀರ್ ಅಹ್ಮದ್ ಎದುರೇ ಸಂಸ್ಕೃತಿಯ ಅಣಕ ನಡೆದಿರುವ ಘಟನೆ ಈಗ ಟೀಕೆಗೆ ಒಳಗಾಗಿದೆ. ತುಳುನಾಡ ದೈವಗಳನ್ನು ಅವಮಾನಿಸಿದ ಪಂಜುರ್ಲಿ ದೈವ ವೇಷಧಾರಿಗಳ ವೈರಲ್ ವಿಡಿಯೋಕ್ಕೆ ಆಕ್ಷೇಪ ವ್ಯಕ್ತವಾಗಿದ್ದು, ತುಳುನಾಡ ಸಂಸ್ಕೃತಿ, ಪರಂಪರೆ ಉಳಿಸುವಂತಹ ತುರ್ತು ಕ್ರಮಕ್ಕೆ ಆಗ್ರಹ ವ್ಯಕ್ತವಾಗಿದೆ. 

Read the full story here

Tue, 03 Dec 202403:30 AM IST

ಕರ್ನಾಟಕ News Live: ಕಾಡಿನ ಕಥೆಗಳು: ಬಾಲ್ಯದಲ್ಲಿ ಹಕ್ಕಿ, ಪರಿಸರ, ಕಾಡಿನ ಪ್ರಭಾವ; ಬೆಂಗಳೂರಿನ ಅರ್ಲಿ ಬರ್ಡ್‌ ಸಂಸ್ಥೆ ಹುಟ್ಟು ಹಾಕುತ್ತಿರುವ ಹಸಿರು ಮಹಾ ಮಾರ್ಗ

  • Forest Tales: ಮೈಸೂರಿನಲ್ಲಿ ಹುಟ್ಟಿ, ಬೆಂಗಳೂರಿನಲ್ಲಿ ಬೆಳೆದು ಈಗ ಭಾರತದ ಹಲವು ಭಾಗಗಳಲ್ಲಿ ಹರಡಿರುವ ಅರ್ಲಿ ಬರ್ಡ್‌ ಎಂಬ ಪಕ್ಷಿ, ಪರಿಸರದ ಹಸಿರು ಬಿತ್ತುವ ಸಂಸ್ಥೆ ಮಕ್ಕಳ ಬಾಲ್ಯಕ್ಕೆ ನೀಡುತ್ತಿರುವ ಕೊಡುಗೆ ದೊಡ್ಡದು. ಸಂಸ್ಥೆಯ ವಿಭಿನ್ನ ಪ್ರಯತ್ನಗಳ ಹಾದಿ ಇಲ್ಲಿದೆ.

Read the full story here

Tue, 03 Dec 202402:48 AM IST

ಕರ್ನಾಟಕ News Live: ಬೆಂಗಳೂರಿನಲ್ಲಿ ಪೊಲೀಸರಂತೆ ನಟಿಸಿ 15 ಲಕ್ಷ ರೂ ಸುಲಿಗೆ ಮಾಡಿದ ದುಷ್ಕರ್ಮಿಗಳು; ಇಂಜಿನಿಯರಿಂಗ ಸೀಟ್ ಬ್ಲಾಕಿಂಗ್ ದಂಧೆಯ ಆರೋಪಿಗಳು ಅರೆಸ್ಟ್

  • ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಸುಲಿಗೆ ಪ್ರಕರಣ ದಾಖಲಾಗಿದೆ. ಪೊಲೀಸರ ಸೋಗಿನಲ್ಲಿ ಬಂದ ದುಷ್ಕರ್ಮಿಗಳು ವ್ಯಕ್ತಿಯೊಬ್ಬರ ಬಳಿ ಇದ್ದ 15 ಲಕ್ಷ ರೂಪಾಯಿ ಸುಲಿಗೆ ಮಾಡಿ ಪರಾರಿಯಾಗಿದ್ದಾರೆ. ಮತ್ತೊಂದೆಡೆ ಇಂಜಿನಿಯರಿಂಗ್ ಸೀಟು ದಂಧೆ ಪ್ರಕರಣದಲ್ಲಿ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಈ ಎರಡೂ ಪ್ರಕರಣಗಳ ವಿವರ ಇಲ್ಲಿದೆ.
Read the full story here

Tue, 03 Dec 202402:15 AM IST

ಕರ್ನಾಟಕ News Live: ಬೆಳಗಾವಿಗೆ ಮಹಾತ್ಮ ಗಾಂಧಿ ಭೇಟಿ, ಕಾಂಗ್ರೆಸ್‌ ಅಧಿವೇಶನದ ಶತಮಾನೋತ್ಸವ ನೆನಪು; ಡಿಸೆಂಬರ್ 26, 27ರಂದು ಕಾರ್ಯಕ್ರಮಕ್ಕೆ ತಯಾರಿ

  • Belagavi Congress Centanary Convention: ಬೆಳಗಾವಿಯಲ್ಲಿ ಶತಮಾನದ ಹಿಂದೆ ನಡೆದಿದ್ದ ಕಾಂಗ್ರೆಸ್‌ ಅಧಿವೇಶನದ ನೆನಪಿಗೆ ನೂರು ವರ್ಷದ ನಂತರ ವಿಶೇಷ ಅಧಿವೇಶನವನ್ನು ಆಯೋಜಿಸಲಾಗಿದೆ. ಡಿಸೆಂಬರ್ 26, 27 ರಂದು ವಿಶೇಷವಾಗಿ ಚಟುವಟಿಕೆ ರೂಪಿಸಲು ನಿರ್ಧರಿಸಲಾಗಿದೆ.
Read the full story here

Tue, 03 Dec 202401:46 AM IST

ಕರ್ನಾಟಕ News Live: Karnataka Weather: ಫೆಂಗಲ್ ಚಂಡಮಾರುತ ಎಫೆಕ್ಟ್; ಕರಾವಳಿ ಪ್ರದೇಶ ಸೇರಿ 10 ಜಿಲ್ಲೆಗಳಲ್ಲಿ ಭಾರಿ ಮಳೆ ನಿರೀಕ್ಷೆ, ಬೆಂಗಳೂರಿಗೂ ಮುನ್ಸೂಚನೆ

  • ಕರ್ನಾಟಕ ಹವಾಮಾನ: ಫೆಂಗಲ್ ಚಂಡಮಾರುತ ಬೆಂಗಳೂರಿನಿಂದ ದಕ್ಷಿಣ ಒಳನಾಡಿನ ಜಿಲ್ಲೆಗಳಾದ ತುಮಕೂರು, ರಾಮನಗರ ಹಾಗೂ ಮಂಡ್ಯ ಜಿಲ್ಲೆಗಳತ್ತ ಸಾಗಿದ್ದು, ಈ ಭಾಗದಲ್ಲಿ ಮಳೆಯ ಮುನ್ಸೂಚನೆ ಇದೆ. ಡಿಸೆಂಬರ್ 3ರ ಮಂಗಳವಾರ ಕರ್ನಾಟಕದ ಇತರೆ ಜಿಲ್ಲೆಗಳಲ್ಲಿನ ಹವಾಮಾನ ವರದಿ ಇಲ್ಲಿದೆ.
Read the full story here

Tue, 03 Dec 202401:45 AM IST

ಕರ್ನಾಟಕ News Live: Mandya Sahitya Sammelana: ಮಂಡ್ಯ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಈ ಬಾರಿ18 ದೇಶಗಳಿಂದ ಬರಲಿದ್ದಾರೆ ವಿದೇಶಿ ಕನ್ನಡಿಗರು

  • Mandya Sahitya Sammelana: ಮಂಡ್ಯ ಸಾಹಿತ್ಯ ಸಮ್ಮೇಳನಕ್ಕೆ ವಿದೇಶದಲ್ಲಿ ನೆಲೆಸಿರುವ ಕನ್ನಡಿಗರೂ ಪ್ರೀತಿಯಿಂದ ಬರುತ್ತಿದ್ದಾರೆ. ಯಾವ ದೇಶದಿಂದ ಬರಲಿದ್ದಾರೆ ಎನ್ನುವ ಮಾಹಿತಿ ಇಲ್ಲಿದೆ.
Read the full story here

Tue, 03 Dec 202412:30 AM IST

ಕರ್ನಾಟಕ News Live: ಬೆಂಗಳೂರು ಹೊರವಲಯ ನೆಲಮಂಗಲ ಸಮೀಪ ಹೆಚ್ಚಾಯ್ತು ಚಿರತೆಗಳ ಹಾವಳಿ; ಸೆರೆಗೆ 10 ಬೋನು ಇರಿಸಿದ ಅರಣ್ಯ ಇಲಾಖೆ

  • ಕೆಲವೇ ದಿನಗಳಲ್ಲಿ ಈ ಪ್ರದೇಶದಲ್ಲಿ ನಡೆದ ಎರಡನೇ ದಾಳಿ ಇದಾಗಿದ್ದು, ಈ ಪ್ರದೇಶದಲ್ಲಿ ಮಾನವ-ವನ್ಯಜೀವಿ ಸಂಘರ್ಷದ ಹೆಚ್ಚುತ್ತಿರುವ ಬೆದರಿಕೆಯ ಬಗ್ಗೆ ಕಳವಳವನ್ನು ಪುನರುಚ್ಚರಿಸಿದೆ.
Read the full story here

ಹಂಚಿಕೊಳ್ಳಲು ಲೇಖನಗಳು

  • twitter