ಅಧಿಕೃತವಾಗಿ ಪುಟ್ಟಕ್ಕನ ಮಕ್ಕಳು ಸೀರಿಯಲ್‌ಗೆ ಸಂಜನಾ ಬುರ್ಲಿ ಗುಡ್‌ ಬೈ; ಅಭಿಮಾನಿಗಳೊಂದಿಗೆ ಹಂಚಿಕೊಂಡ ಸಂದೇಶ ಇಲ್ಲಿದೆ
ಕನ್ನಡ ಸುದ್ದಿ  /  ಮನರಂಜನೆ  /  ಅಧಿಕೃತವಾಗಿ ಪುಟ್ಟಕ್ಕನ ಮಕ್ಕಳು ಸೀರಿಯಲ್‌ಗೆ ಸಂಜನಾ ಬುರ್ಲಿ ಗುಡ್‌ ಬೈ; ಅಭಿಮಾನಿಗಳೊಂದಿಗೆ ಹಂಚಿಕೊಂಡ ಸಂದೇಶ ಇಲ್ಲಿದೆ

ಅಧಿಕೃತವಾಗಿ ಪುಟ್ಟಕ್ಕನ ಮಕ್ಕಳು ಸೀರಿಯಲ್‌ಗೆ ಸಂಜನಾ ಬುರ್ಲಿ ಗುಡ್‌ ಬೈ; ಅಭಿಮಾನಿಗಳೊಂದಿಗೆ ಹಂಚಿಕೊಂಡ ಸಂದೇಶ ಇಲ್ಲಿದೆ

ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲಿ ಸ್ನೇಹಾ ಪಾತ್ರ ಅಭಿನಯಿಸುತ್ತಿದ್ದ ಸಂಜನಾ ಬುರ್ಲಿ ಅಧಿಕೃತವಾಗಿ ತಾವು ಸೀರಿಯಲ್‌ನಿಂದ ಹೊರಬಂದ ವಿಷಯವನ್ನು ತಮ್ಮ ಸೋಶಿಯಲ್‌ ಮೀಡಿಯಾ ಖಾತೆಗಳಲ್ಲಿ ಹಂಚಿಕೊಂಡಿದ್ದಾರೆ.

ಪುಟ್ಟಕ್ಕನ ಮಕ್ಕಳು ಸ್ನೇಹಾ ಪಾತ್ರಧಾರಿ ಸಂಜನಾ ಬುರ್ಲಿ
ಪುಟ್ಟಕ್ಕನ ಮಕ್ಕಳು ಸ್ನೇಹಾ ಪಾತ್ರಧಾರಿ ಸಂಜನಾ ಬುರ್ಲಿ

ತನ್ನೆಲ್ಲ ಅಭಿಮಾನಿಗಳೊಂದಿಗೆ ಪುಟ್ಟಕ್ಕನ ಮಕ್ಕಳು ಸ್ನೇಹಾ ಪಾತ್ರಧಾರಿ ಸ್ನೇಹಾ, ಸಂಜನಾ ಬುರ್ಲಿ ಅವರು ತಾವು ಧಾರಾವಾಹಿಯಲ್ಲಿ ಇನ್ನು ಮುಂದೆ ಅಭಿನಯಿಸುತ್ತಿಲ್ಲ ಎಂಬ ವಿಷಯವನ್ನು ಹಂಚಿಕೊಂಡಿದ್ದಾರೆ. ಈಗಾಗಲೇ ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲಿ ಸ್ನೇಹಾ ಪಾತ್ರಕ್ಕೆ ಅಪಘಾತವಾಗಿ ಸಾವನ್ನಪ್ಪಿರುವ ದೃಷ್ಯವನ್ನು ನೀವೆಲ್ಲರೂ ನೋಡಿದ್ದಿರಿ. ಆ ಕಾರಣದಿಂದ ಇನ್ನು ಮುಂದಿನ ದಿನಗಳಲ್ಲಿ ಅವರು ಅಭಿನಯಿಸುತ್ತಿಲ್ಲ. ಈ ಕುರಿತು ಈ ಹಿಂದೆ ಸುದ್ದಿಯಾಗಿತ್ತು. ಇನ್ನು ಮುಂದೆ ಅವರು ಧಾರಾವಾಹಿಯಲ್ಲಿ ಕಾಣಿಸಿಕೊಳ್ಳುವುದಿಲ್ಲ ಎಂದು. ಆದರೆ ಅವರೇ ಈಗ ಅಧಿಕೃತವಾಗಿ ವಿಷಯ ಹಂಚಿಕೊಂಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಅವರು ಹಂಚಿಕೊಂಡ ಮಾಹಿತಿಯನ್ನು ನಾವಿಲ್ಲಿ ನೀಡಿದ್ದೇವೆ.

ಎಲ್ಲ ಅಭಿಮಾನಿಗಳು ಹಾಗೂ ಫಾಲೋವರ್ಸ್‌ಗಳಿಗೂ ನಾನು ಒಂದು ವಿಷಯ ಹಂಚಿಕೊಳ್ಳುತ್ತಿದ್ದೇನೆ. ಪ್ರತಿಯೊಂದು ದೊಡ್ಡ ವಿಷಯವೂ ಕೊನೆಗೊಳ್ಳುತ್ತದೆ. ಅದರಂತೆ ಸ್ನೇಹಾ ಎಂಬ ಮಹತ್ವದ ಪಾತ್ರದೊಂದಿಗೆ ನನ್ನ ಪ್ರಯಾಣವೂ ಕೊನೆಗೊಳ್ಳುತ್ತದೆ.

ಕಳೆದ 3 ವರ್ಷಗಳಿಂದ ಸ್ನೇಹಾ ಪಾತ್ರವನ್ನು ನಿರ್ವಹಿಸುವುದು ನನ್ನ ನಟನಾ ವೃತ್ತಿಜೀವನದ ಅವಿಭಾಜ್ಯ ಅಂಗವಾಗಿತ್ತು. ಆದರೆ ಈಗ ಆ ಸಮಯ ಮುಗಿದಿದೆ. ಈ ಪಾತ್ರವನ್ನು ಮಾಡಿದ್ದಕ್ಕೆ ನಾನು ಯಾವಾಗಲೂ ಕೃತಜ್ಞನಾಗಿರುತ್ತೇನೆ. ನನಗೆ ಈ ಉತ್ತಮ ಪಾತ್ರವನ್ನು ನೀಡಿದ್ದಕ್ಕಾಗಿ ಮತ್ತು ನನ್ನನ್ನು ಸ್ನೇಹಾ ಆಗಿ ಆಯ್ಕೆ ಮಾಡಿದ್ದಕ್ಕಾಗಿ ಯುನಿವರ್ಸ್‌, ಚಾನಲ್ ಮತ್ತು ಪ್ರೊಡಕ್ಷನ್ ಹೌಸ್‌ಗೆ ನನ್ನ ಹೃತ್ಪೂರ್ವಕ ಧನ್ಯವಾದಗಳನ್ನು ತಿಳಿಸುತ್ತಿದ್ದೇನೆ.

ಆದರೆ ಇಷ್ಟೊಂದು ಒಳ್ಳೆಯ ಮಹತ್ವಾಕಾಂಕ್ಷಿ, ಆತ್ಮವಿಶ್ವಾಸ ಮತ್ತು ಡೇರಿಂಗ್ ಹುಡುಗಿ ಸ್ನೇಹಾ ಪಾತ್ರದಿಂದ ಈಗ ಮೂವ್‌ ಆನ್‌ ಆಗುವ ಸಮಯ ಬಂದಿದೆ. ಕೆಲವು ಅನಿವಾರ್ಯ ಸಂದರ್ಭಗಳು ಮತ್ತು ನನ್ನ ವೈಯಕ್ತಿಕ ಕಾರಣಗಳಿಂದಾಗಿ ನಾನು ಭಾರವಾದ ಹೃದಯದಿಂದ ಈ ಪಾತ್ರದಿಂದ ಹೊರಬರಬೇಕಾಯಿತು. ನನ್ನ ಜೀವನದಲ್ಲಿ ಈ ಸಮಯದಲ್ಲಿ ಸಾಧಿಸಲು ನನಗೆ ಇತರ ಸವಾಲುಗಳಿವೆ.

ಈ ಪ್ರಾಜೆಕ್ಟ್‌ನಲ್ಲಿನ ಈ ಪಾತ್ರಕ್ಕಾಗಿ ನಾನು ಪಡೆದ ಅಪಾರ ಪ್ರೀತಿ ಮತ್ತು ಮನ್ನಣೆಯು ನನ್ನಪಾಲಿಗೆ ದೊಡ್ಡ ಪ್ರಶಸ್ತಿ. ಅದು ನನ್ನೊಂದಿಗೆ ಶಾಶ್ವತವಾಗಿ ಉಳಿಯುತ್ತದೆ. ನಿಮ್ಮಲ್ಲಿ ಹೆಚ್ಚಿನವರು ಪಾತ್ರವು ಸಾಯುವುದನ್ನು ನೋಡಲು ಬೇಸರ ಮಾಡಿಕೊಂಡಿದ್ದೀರಿ ಎಂದು ನನಗೆ ತಿಳಿದಿದೆ. ಆದರೆ ಇದು ಅನಿವಾರ್ಯವಾಗಿತ್ತು ಇದನ್ನು ಧನಾತ್ಮಕವಾಗಿ ತೆಗೆದುಕೊಳ್ಳೋಣ. ಸ್ವಲ್ಪ ಸಮಯದ ನಂತರ ವಿಭಿನ್ನ ಪಾತ್ರದಲ್ಲಿ ನನ್ನ ಅಭಿಮಾನಿಗಳನ್ನು ಭೇಟಿಯಾಗಲು ಆಶಿಸುತ್ತಿದ್ದೇನೆ.

ಕಳೆದ 3 ವರ್ಷಗಳಲ್ಲಿ ಇಡೀ ಕರ್ನಾಟಕ ನನಗೆ ನೀಡಿದ ಪ್ರೀತಿ ಮತ್ತು ಬೆಂಬಲಕ್ಕೆ ಧನ್ಯವಾದಗಳು. ನನ್ನ ಇತರ ಭವಿಷ್ಯದ ಪ್ರಯತ್ನಗಳಿಗೂ ನಿಮ್ಮ ಪ್ರೀತಿ ಸಿಗುತ್ತದೆ ಎಂದು ನಂಬಿದ್ದೇನೆ. ನನ್ನ ವೈಯಕ್ತಿಕ ಮತ್ತು ವೃತ್ತಿಪರ ಪ್ರಗತಿಗೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿಗಾಗಿ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಮನಿಸಿ. ಲೆಟ್ಸ್‌ ಮೂವ್‌ ಆನ್ ಪಾಸಿಟಿವ್ ನೋಟ್ ಎಂದು ಬರೆದುಕೊಂಡಿದ್ದಾರೆ.

ಏನಾಗಲಿ ಮುಂದೆ ಸಾಗು ನೀ

ಮತ್ತೊಮ್ಮೆ ತೆರೆ ಮೇಲೆ ಭೇಟಿ ಆಗೋಣ ಬೇರೆ ವಿಭಿನ್ನ ಪಾತ್ರ ಜೊತೆಗೆ , ಶೀಘ್ರದಲ್ಲಿ

ನನ್ನ ಅಭಿಮಾನಿಗಳೇ ನನ್ನ ಸ್ಪೂರ್ತಿ, ಶಕ್ತಿ ಎಂದು ತಿಳಿಸಿದ್ದಾರೆ.

Whats_app_banner