ಕನ್ನಡ ಸುದ್ದಿ  /  ಮನರಂಜನೆ  /  ಲಕ್ಷ್ಮಿ ಬಾರಮ್ಮ ಸೀರಿಯಲ್‌ ನಟಿ ಕವಿತಾ ಗೌಡ ಪ್ರೆಗ್ನೆಟ್‌; ಅಪ್ಪನಾಗುವ ಖುಷಿಯಲ್ಲಿ ನಟ ಚಂದನ್‌ ಕುಮಾರ್‌

ಲಕ್ಷ್ಮಿ ಬಾರಮ್ಮ ಸೀರಿಯಲ್‌ ನಟಿ ಕವಿತಾ ಗೌಡ ಪ್ರೆಗ್ನೆಟ್‌; ಅಪ್ಪನಾಗುವ ಖುಷಿಯಲ್ಲಿ ನಟ ಚಂದನ್‌ ಕುಮಾರ್‌

ಲಕ್ಷ್ಮೀ ಬಾರಮ್ಮ ಸೀರಿಯಲ್‌ನ ನಟಿ ಕವಿತಾ ಮತ್ತು ಚಂದನ್‌ ಕುಮಾರ್‌ ದಂಪತಿ ಇನ್‌ಸ್ಟಾಗ್ರಾಂನಲ್ಲಿ ಹೊಸ ಅಪ್‌ಡೇಟ್‌ ನೀಡಿದ್ದಾರೆ. ತಾವಿಬ್ಬರು ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ಫೋಟೋ ಸುದ್ದಿ ಹಂಚಿಕೊಂಡಿದ್ದಾರೆ.

ಲಕ್ಷ್ಮಿ ಬಾರಮ್ಮ ಸೀರಿಯಲ್‌ ನಟಿ ಕವಿತಾ ಗೌಡ ಪ್ರೆಗ್ನೆಟ್‌; ಅಪ್ಪನಾಗುವ ಖುಷಿಯಲ್ಲಿ ನಟ ಚಂದನ್‌
ಲಕ್ಷ್ಮಿ ಬಾರಮ್ಮ ಸೀರಿಯಲ್‌ ನಟಿ ಕವಿತಾ ಗೌಡ ಪ್ರೆಗ್ನೆಟ್‌; ಅಪ್ಪನಾಗುವ ಖುಷಿಯಲ್ಲಿ ನಟ ಚಂದನ್‌

ಬೆಂಗಳೂರು: ಲಕ್ಷ್ಮೀ ಬಾರಮ್ಮ ಸೀರಿಯಲ್‌ನ ನಟಿ ಕವಿತಾ ಮತ್ತು ಚಂದನ್‌ ಕುಮಾರ್‌ ದಂಪತಿ ಇನ್‌ಸ್ಟಾಗ್ರಾಂನಲ್ಲಿ ಹೊಸ ಅಪ್‌ಡೇಟ್‌ ನೀಡಿದ್ದಾರೆ. ತಾವಿಬ್ಬರು ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ಫೋಟೋ ಸುದ್ದಿ ಹಂಚಿಕೊಂಡಿದ್ದಾರೆ. ಈ ಜೋಡಿಗೆ ಸೋಷಿಯಲ್‌ ಮೀಡಿಯಾದಲ್ಲಿ ಅಭಿನಂದನೆಗಳ ಮಹಾಪೂರವೇ ಬರುತ್ತಿದೆ. ಕಿರುತೆರೆ ಮತ್ತು ಹಿರಿತೆರೆ ಕಲಾವಿದರೂ ಇವರಿಗೆ ಕಂಗ್ರಾಜ್ಯಲೇಷನ್‌ ಹೇಳುತ್ತಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ನಟಿ ಕವಿತ ಲಕ್ಷ್ಮೀಬಾರಮ್ಮ ಸೀರಿಯಲ್‌ ಮೂಲಕ ಕಿರುತೆರೆ ಪ್ರೇಕ್ಷಕರಿಗೆ ಹತ್ತಿರವಾಗಿದ್ದಾರೆ. ಚಂದನ್‌ ಕುಮಾರ್‌ ಕೂಡ ಸೀರಿಯಲ್‌ ನಟ. ಸಿನಿಮಾಗಳಲ್ಲೂ ನಟಿಸಿದ್ದಾರೆ. ಚಂದನ್‌ ಕನ್ನಡ ಮಾತ್ರವಲ್ಲದೆ ತೆಲುಗು ಚಿತ್ರಗಳಲ್ಲೂ ನಟಿಸಿದ್ದಾರೆ. ಲಕ್ಷ್ಮಿ ಬಾರಮ್ಮ ಸೀರಿಯಲ್‌ನಲ್ಲಿ ಕವಿತಾ ಮತ್ತು ಚಂದನ್‌ ಕುಮಾರ್‌ ಜತೆಯಾಗಿ ನಟಿಸಿದ್ದರು.

ಕೊರೊನಾ ಲಾಕ್‌ಡೌನ್‌ ಸಮಯದಲ್ಲಿಯೇ ಈ ಜೋಡಿ ವಿವಾಹವಾಗಿದ್ದರು. ಮಾಸ್ಕ್‌ ಧರಿಸಿಯೇ ಮದುವೆಯಾಗಿ ಸುದ್ದಿಯಾಗಿದ್ದರು. 2021ರ ಮೇ 14ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.

ಕವಿತಾ ಮತ್ತು ಚಂದನ್‌ಗೆ ಕಲರ್ಸ್‌ ಕನ್ನಡ ಸೀರಿಯಲ್‌ನಲ್ಲಿ ನಟಿಸುತ್ತಿದ್ದ ವೇಳೆಯೇ ಸ್ನೇಹವಿತ್ತು. ಬಳಿಕ ಇದು ಪ್ರೀತಿಯಾಗಿ ಮದುವೆ ಬಂಧನಕ್ಕೆ ಒಳಗಾಗಿದ್ದರು. ಲಾಕ್‌ಡೌನ್‌ ಸಮಯಲ್ಲಿಯೇ ವಿವಾಹವಾಗಿದ್ದಾರೆ. ಇವರಿಬ್ಬರೂ ವಿವಾಹವಾಗಿ ಎರಡು ವರ್ಷ ಕಳೆದಿದ್ದು, ಇದೀಗ ಮೊದಲ ಮಗುವಿನ ನಿರೀಕ್ಷೆಯ ಖುಷಿಯಲ್ಲಿದ್ದಾರೆ.

ಸೋಷಿಯಲ್‌ ಮೀಡಿಯಾದಲ್ಲಿ ಇವರು ಹಂಚಿಕೊಂಡ ಗುಡ್‌ನ್ಯೂಸ್‌ ಕೇಳಿ ಸಾಕಷ್ಟು ಸೆಲೆಬ್ರಿಟಿಗಳು ಅಭಿನಂದನೆಗಳನ್ನು ತಿಳಿಸಿದ್ದಾರೆ. ನೇಹಾ ಗೌಡ, ಗೀತಾ ಭಾರತಿ ಭಟ್‌, ವಿನಯ್‌ ಗೌಡ, ಧನ್‌ರಾಜ್‌, ಪ್ರಿಯಾಂಕ ಚಿಂಚೋಳಿ ಸೇರಿದಂತೆ ಹಲವು ನಟಿನಟರು ಕಂಗ್ರಾಜ್ಯುಲೇಷನ್‌ ಹೇಳಿದ್ದಾರೆ.

ಕವಿತಾ ಗೌಡ ದಂಪತಿ ಈಗ ಹೋಟೆಲ್‌ ಬಿಸ್ನೆಸ್‌ನಲ್ಲಿ ಬಿಝಿಯಾಗಿದ್ದಾರೆ. ಸೀರಿಯಲ್‌ನಲ್ಲಿ ಅಷ್ಟಾಗಿ ಕಾಣಿಸಿಕೊಳ್ಳುತ್ತಿಲ್ಲ. ಕೆಲವು ಸೀರಿಯಲ್‌ನಲ್ಲಿ ಗೆಸ್ಟ್‌ ಪಾತ್ರ ಮಾಡಿದ್ದಾರೆ. ಕಲರ್ಸ್‌ ಕನ್ನಡದ ಪುಣ್ಯವತಿ, ಕೆಂಡಸಂಪಿಗೆ ಸೀರಿಯಲ್‌ಗಳಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿದ್ದರು. ಕವಿತಾ ಗೌಡ ಅವರು ಲಕ್ಷ್ಮೀ ಬಾರಮ್ಮ, ವಿದ್ಯಾವಿನಾಯಕ ಸೇರಿದಂತೆ ಹಲವು ಸೀರಿಯಲ್‌ಗಳಲ್ಲಿ ನಟಿಸಿದ್ದಾರೆ.

'ಸಾವಿತ್ರಮ್ಮಗಾರಿ ಅಬ್ಬಾಯಿ' ಎಂಬ ತೆಲುಗು ಧಾರಾವಾಹಿಯಲ್ಲಿ ಚಂದನ್‌ ಮುಖ್ಯಭೂಮಿಕೆಯಲ್ಲಿ ನಟಿಸುತ್ತಿದ್ದರು. ಅಲ್ಲಿ ಒಂದಿಷ್ಟು ಕಿರಿಕ್‌ ಆಗಿತ್ತು. ಶೂಟಿಂಗ್‌ ಸಮಯದಲ್ಲಿ ಮೊದಲಿಗೆ ಚಂದನ್‌ ಅವರೇ ಅಸಿಸ್ಟಂಟ್‌ ಕ್ಯಾಮರಾಮನ್‌ ಮೇಲೆ ಹಲ್ಲೆ ಮಾಡಿದ್ದರಂತೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಮಾತಿಗೆ ಮಾತು ಬೆಳೆದು, ಕಿರಿಕ್‌ ಆಗಿದೆ. ಶೂಟಿಂಗ್‌ ಕೈಬಿಟ್ಟ ಇಡೀ ತಂಡ, ಚಂದನ್‌ ವಿರುದ್ಧ ತಿರುಗಿ ಬಿದ್ದಿತ್ತು. ಹಲ್ಲೆ ಖಂಡಿಸಿ ಮಾತಿಗೆ ಇಳಿದಾಗ, ಗುಂಪಿನಲ್ಲಿದ್ದ ಕ್ಯಾಮರಾ ಅಸಿಸ್ಟಂಟ್ ಏಕಾಏಕಿ ದಾಳಿ ಮಾಡಿ ಚಂದನ್‌ ಕೆನ್ನೆಗೆ ಬಾರಿಸಿದ್ದರು. ಇದಾದ ಬಳಿಕ ಚಂದನ್‌ ತೆಲುಗು ಸೀರಿಯಲ್‌ ಸಹವಾಸ ಬಿಟ್ಟಿದ್ದರು.

IPL_Entry_Point