ಕನ್ನಡ ಸುದ್ದಿ  /  ಮನರಂಜನೆ  /  ಮೀನು ತಿನ್ನುವ ಸಂಸದ ತೇಜಸ್ವಿ ಸೂರ್ಯ; ತನ್ನದೇ ಪಕ್ಷದ ರಾಜಕಾರಣಿಯನ್ನು ಟೀಕಿಸಿದ ನಟಿ ಕಂಗನಾ ರಣಾವತ್‌

ಮೀನು ತಿನ್ನುವ ಸಂಸದ ತೇಜಸ್ವಿ ಸೂರ್ಯ; ತನ್ನದೇ ಪಕ್ಷದ ರಾಜಕಾರಣಿಯನ್ನು ಟೀಕಿಸಿದ ನಟಿ ಕಂಗನಾ ರಣಾವತ್‌

ಬಾಲಿವುಡ್‌ ನಟಿ, ರಾಜಕಾರಣಿ ಕಂಗನಾ ರಣಾವತ್‌ ಚುನಾವಣಾ ಪ್ರಚಾರದ ವೇಳೆ ಬಾಯ್ತಪ್ಪಿ ತೇಜಸ್ವಿ ಯಾದವ್‌ ಬದಲು ತೇಜಸ್ವಿ ಸೂರ್ಯನ ಹೆಸರು ಹೇಳಿದ್ದಾರೆ. ಮೀನು ತಿನ್ನುವ ತೇಜಸ್ವಿ ಸೂರ್ಯ ಎಂದು ಹೇಳಿ ಮುಜುಗರಕ್ಕೆ ಈಡಾಗಿದ್ದಾರೆ.

ಮೀನು ತಿನ್ನುವ ಸಂಸದ ತೇಜಸ್ವಿ ಸೂರ್ಯ; ತನ್ನದೇ ಪಕ್ಷದ ರಾಜಕಾರಣಿಯನ್ನು ಟೀಕಿಸಿದ ನಟಿ ಕಂಗನಾ ರಣಾವತ್‌
ಮೀನು ತಿನ್ನುವ ಸಂಸದ ತೇಜಸ್ವಿ ಸೂರ್ಯ; ತನ್ನದೇ ಪಕ್ಷದ ರಾಜಕಾರಣಿಯನ್ನು ಟೀಕಿಸಿದ ನಟಿ ಕಂಗನಾ ರಣಾವತ್‌

ಬಾಲಿವುಡ್‌ ನಟಿ- ರಾಜಕಾರಣಿ ಕಂಗನಾ ರಣಾವತ್‌ ಬಾಯ್ತಪ್ಪಿ ಹೇಳಿದ ಮಾತೊಂದು ಕಾಂಗ್ರೆಸ್‌ ಪಕ್ಷಕ್ಕೆ ಹೊಸ ಅಸ್ತ್ರವಾಗಿದೆ. ತೇಜಸ್ವಿ ಯಾದವ್‌ ಬದಲು ಬಿಜೆಪಿ ಸಂಸದ ತೇಜಸ್ವಿ ಸೂರ್ಯನ ಹೆಸರು ಹೇಳಿ ಗೊಂದಲ ಮಾಡಿಕೊಂಡಿದ್ದಾರೆ ತೇಜಸ್‌ ಸಿನಿಮಾ ನಟಿ. ಹಿಮಾಚಲ ಪ್ರದೇಶದ ಮಂಡಿ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಕಂಗನಾ ರಣಾವತ್‌ ಸ್ಪರ್ಧಿಸುತ್ತಿದ್ದಾರೆ. ಚುನಾವಣಾ ಪ್ರಚಾರದ ಸಮಯದಲ್ಲಿ ವಿರೋಧ ಪಕ್ಷದ ರಾಜಕಾರಣಿಗಳನ್ನು ಟೀಕಿಸುವ ಭರದಲ್ಲಿ ತಪ್ಪಿ ತನ್ನದೇ ಪಕ್ಷದ ಬೆಂಗಳೂರಿನ ತೇಜಸ್ವಿ ಸೂರ್ಯನ ಹೆಸರು ಹೇಳಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಕಂಗನಾ ರಣಾವತ್‌ ಮಂಡಿಯಲ್ಲಿ ಭಾಷಣ ಮಾಡುತ್ತಿದ್ದರು. ಎದುರಾಳಿ ಪಕ್ಷದ ಸದಸ್ಯರನ್ನು ಟೀಕಿಸುತ್ತಿದ್ದರು. "ಆಲೂಗಡ್ಡೆ ಬೆಳೆಯಲು ಬಯಸುವ ರಾಹುಲ್‌ ಗಾಂಧಿ ಇರಬಹುದು, ಮೀನು ತಿನ್ನುವ ತೇಜಸ್ವಿ ಸೂರ್ಯ ಇರಬಹುದು" ಎಂದು ಕಂಗನಾ ರಣಾವತ್‌ ಭಾಷಣ ಮಾಡಿದ್ದಾರೆ. ಇದೀಗ ಈ ಭಾಷಣದ ವಿಡಿಯೋವನ್ನು ತೇಜಸ್ವಿ ಯಾದವ್‌ ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡು ತಾವು ಫಿಶ್‌ ಫ್ರೈ ತಿನ್ನುತ್ತಿರುವ ವಿಡಿಯೋವನ್ನೂ ಹಂಚಿಕೊಂಡಿದ್ದಾರೆ. ತೇಜಸ್ವಿ ಯಾದವ್‌ ಅವರ ಹೆಸರು ಹೇಳಬೇಕಿದ್ದ ಕಂಗನಾ ರಣಾವತ್‌ ಬೆಂಗಳೂರು ಸಂಸದ ತೇಜಸ್ವಿ ಸೂರ್ಯನ ಹೆಸರು ಹೇಳಿ ಯಡವಟ್ಟು ಮಾಡಿಕೊಂಡಿದ್ದಾರೆ.

ರಾಜಕಾರಣಿಯಾದ ಕಂಗನಾ ರಣಾವತ್‌

ಲೋಕಸಭಾ ಚುನಾವಣೆಗೆ ಬಿಜೆಪಿ ಅಭ್ಯರ್ಥಿಯಾಗಿ ಕಂಗನಾ ರಣಾವತ್‌ಗೆ ಈ ಬಾರಿ ಟಿಕೆಟ್‌ ನೀಡಲಾಗಿದೆ. ಹಿಮಾಚಲ ಪ್ರದೇಶದ ಮಂಡಿಯಿಂದ ಇವರು ಸ್ಪರ್ಧಿಸುತ್ತಿದ್ದಾರೆ. ಇದಾದ ಬಳಿಕ ವಿವಿಧ ವೇದಿಕೆಗಳಲ್ಲಿ ಕಂಗನಾ ಕಾಂಗ್ರೆಸ್‌ ವಿರುದ್ಧ ಹರಿಹಾಯ್ದಿದ್ದಾರೆ. ಕಾಂಗ್ರೆಸ್‌ ಸ್ವಜನಪಕ್ಷಪಾತದ ಪಕ್ಷ. ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ನೆಪೋ ಬೇಬಿಗಳು, ಮಂಗಳ ಗ್ರಹದಿಂದ ಬಂದವರಂತೆ ವಿಲಕ್ಷಣರು ಎಂದು ಬಾಲಿವುಡ್‌ ನಟಿ ಕಂಗನಾ ಟೀಕಿಸಿದ್ದರು.

ಕಂಗನಾ ರಣಾವತ್‌ ಬಗ್ಗೆ

ಕಂಗನಾ ರಣಾವತ್‌ ಬಾಲಿವುಡ್‌ನ ಜನಪ್ರಿಯ ನಾಯಕಿ. ಕಂಗನಾ ರಣಾವತ್‌ ಅವರು ಎಮರ್ಜೆನ್ಸಿ ಎಂಬ ಸಿನಿಮಾದಲ್ಲಿ ನಟಿಸಲಿದ್ದಾರೆ. ಮಾಜಿ ಪ್ರಧಾನಿ ಇಂದಿರಾ ಗಾಂಧಿ, ರಾಹುಲ್ ಮತ್ತು ಪ್ರಿಯಾಂಕಾ ಗಾಂಧಿ ಅವರ ಅಜ್ಜಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಇದಕ್ಕೂ ಮುನ್ನ ಕಂಗನಾ ರಣಾವತ್‌ ಅವರು ತೇಜಸ್‌ ಸಿನಿಮಾದಲ್ಲಿ ನಟಿಸಿದ್ದರು. ಇದು ಬಾಕ್ಸ್‌ ಆಫೀಸ್‌ನಲ್ಲಿ ಯಶಸ್ಸು ಕಂಡಿರಲಿಲ್ಲ.

2006ನೇ ಇಸವಿಯಲ್ಲಿ ಥ್ರಿಲ್ಲರ್‌ ಗ್ಯಾಂಗ್‌ಸ್ಟಾರ್‌ ಸಿನಿಮಾ ಮೂಲಕ ಬಾಲಿವುಡ್‌ಗೆ ಪದಾರ್ಪಣೆ ಮಾಡಿದ್ದರು. ಈ ಸಿನಿಮಾದ ನಟನೆಗೆ ಫಿಲ್ಮ್‌ಫೇರ್‌ ಪ್ರಶಸ್ತಿ ಪಡೆದಿದ್ದರು. ಕಂಗನಾ ರಣಾವತ್‌ ಅವರು ಹದಿನೈದು ವರ್ಷದವಳಾಗಿದ್ದಾಗ ಮನೆಯಿಂದ ಓಡಿ ಹೋಗಿದ್ದರಂತೆ. ಮಾದಕ ವ್ಯಸನಕ್ಕೂ ಒಳಗಾಗಿದ್ದರು. ಹದಿಹರೆಯದಲ್ಲಿ ಮುಂಬೈಗೆ ತೆರಳಿದ ಬಳಿಕ ಸಾಕಷ್ಟು ಕಷ್ಟಪಟ್ಟಿದ್ದರು. 2006ರಲ್ಲಿ ಇಮ್ರಾನ್‌ ಹಸ್ಮಿ ಜತೆಗೆ ಗ್ಯಾಂಗ್‌ಸ್ಟಾರ್‌: ಎ ಲವ್‌ಸ್ಟೋರಿಯಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ಇದು ಇವರ ಮೊದಲ ಚಿತ್ರ. ಅಂದಿನಿಂದ 2008ರಲ್ಲಿ ಫ್ಯಾಷನ್‌, 2010ರಲ್ಲಿ ಒನ್ಸ್‌ ಅಪಾನ್‌ ಎ ಟೈಮ್‌ ಇನ್‌ ಮುಂಬೈ, 2011ರಲ್ಲಿ ತನು ವೆಡ್ಸ್‌ ಮನು ಮುಂತಾದ ಸಿನಿಮಾಗಳಲ್ಲಿ ನಟಿಸಿದ್ದಾರೆ. ಬಾಲಿವುಡ್‌ ನಟಿ ಕಂಗನಾ ರಣಾವತ್‌ ಸಂಪೂರ್ಣ ಸ್ಟೋರಿ ಇಲ್ಲಿದೆ ಓದಿ.

IPL_Entry_Point