Thandel Release Date: ನಾಗ ಚೈತನ್ಯ, ಸಾಯಿ ಪಲ್ಲವಿ ಅಭಿನಯದ ತಾಂಡೇಲಾ ಚಿತ್ರದ ರಿಲೀಸ್ ಡೇಟ್ ಫಿಕ್ಸ್; ಇಲ್ಲಿದೆ ಅಪ್ಡೇಟ್ಸ್
ನಾಗ ಚೈತನ್ಯ ಮತ್ತು ಸಾಯಿ ಪಲ್ಲವಿ ಅಭಿನಯದ ತಾಂಡೇಲ್ ಚಿತ್ರ ಬಿಡುಗಡೆ ದಿನಾಂಕವನ್ನು ಅಧಿಕೃತವಾಗಿ ಘೋಷಿಸಲಾಗಿದೆ. ಈ ಸಿನಿಮಾ ಮುಂದಿನ ವರ್ಷ ತೆರೆಗೆ ಬರಲಿದೆ. ಮಂಗಳವಾರ (ನವೆಂಬರ್ 5) ನಡೆದ ವಿಶೇಷ ಕಾರ್ಯಕ್ರಮದಲ್ಲಿ ಚಿತ್ರತಂಡ ಇದನ್ನು ಬಹಿರಂಗಪಡಿಸಿದೆ.
ತಾಂಡೇಲ್ ಸಿನಿಮಾ ರಿಲೀಸ್ ಡೇಟ್ ಗಾಗಿ ಕಾತರದಿಂದ ಕಾಯುತ್ತಿರುವ ನಾಗ ಚೈತನ್ಯ ಅಭಿಮಾನಿಗಳಿಗೆ ಗುಡ್ ನ್ಯೂಸ್ ಸಿಕ್ಕಿದೆ. ಈ ಬಹು ನಿರೀಕ್ಷಿತ ಪ್ಯಾನ್ ಇಂಡಿಯಾ ಚಿತ್ರ ಮುಂದಿನ ವರ್ಷ ಫೆಬ್ರವರಿ 7 ರಂದು ಬಿಡುಗಡೆಯಾಗಲಿದೆ. ಇದನ್ನು ನಿರ್ಮಾಪಕರು ಅಧಿಕೃತವಾಗಿ ಘೋಷಿಸಿದ್ದಾರೆ. ತೆಲುಗು ಅಲ್ಲದೆ, ತಮಿಳು, ಕನ್ನಡ, ಮಲಯಾಳಂ ಮತ್ತು ಹಿಂದಿಯಲ್ಲಿ ತಾಂಡೇಲ್ ಬಿಡುಗಡೆಯಾಗಲಿದೆ.
ತಾಂಡೇಲ್ ಚಿತ್ರದಲ್ಲಿ ನಾಗ ಚೈತನ್ಯ ಮತ್ತು ಸಾಯಿ ಪಲ್ಲವಿ ನಟಿಸುತ್ತಿದ್ದಾರೆ . ಈ ಸಿನಿಮಾ ಬಿಡುಗಡೆಗಾಗಿ ಅಭಿಮಾನಿಗಳು ಹಲವು ದಿನಗಳಿಂದ ಕಾಯುತ್ತಿದ್ದರು. ಮೊದಲಿಗೆ ಇದೇ ವರ್ಷ ಬರಲಿದೆ ಎಂದು ಸುದ್ದಿಯಾಗಿತ್ತು. ಎಲ್ಲರೂ ಅದನ್ನೇ ನಂಬಿಕೊಂಡಿದ್ದರು. ಆದರೆ ಈಗ ಆ ಕುರಿತು ಅಧಿಕೃತವಾಗಿ ಮಾಹಿತಿ ಸಿಕ್ಕಿದೆ. ಮುಂದಿನ ವರ್ಷ ಫೆಬ್ರವರಿ 7 ರಂದು ಚಿತ್ರ ಬಿಡುಗಡೆಯಾಗಲಿದೆ ಎಂದು ನಿರ್ಮಾಪಕರು ತಿಳಿಸಿದ್ದಾರೆ.
ಈ ಚಿತ್ರವನ್ನು ಚಂದು ಮೊಂಡೇಟಿ ನಿರ್ದೇಶಿಸಿದ್ದಾರೆ. ಇನ್ನು 10 ದಿನಗಳ ಶೂಟಿಂಗ್ ಬಾಕಿ ಇದ್ದು, ಆ ನಂತರ ಪ್ರಚಾರ ಶುರುವಾಗಲಿದೆ ಎಂದು ತಿಳಿಸಿದ್ದಾರೆ. ತಾಂಡೇಲ್ ಚಿತ್ರಕ್ಕೆ ದೇವಿ ಶ್ರೀ ಪ್ರಸಾದ್ ಸಂಗೀತ ನೀಡಿದ್ದಾರೆ. ಬನ್ನಿ ವಾಸ್ ಚಿತ್ರವನ್ನು ನಿರ್ಮಿಸಿದ್ದಾರೆ. ಅಲ್ಲು ಅರವಿಂದ್ ಪ್ರಸ್ತುತಪಡಿಸುತ್ತಿದ್ದಾರೆ. ಎರಡು ವರ್ಷಗಳ ಹಿಂದೆ ಕಾರ್ತಿಕೇಯ 2 ನಂತಹ ಪ್ಯಾನ್ ಇಂಡಿಯಾ ಹಿಟ್ ನೀಡಿದ ಚಂದು ಮೊಂಡೇಟಿ ನಿರ್ದೇಶನದ ಚಿತ್ರವಾಗಿರುವುದರಿಂದ ಈ ತಾಂಡೇಲ್ ಸಿನಿಮಾದ ಮೇಲೆ ಭಾರೀ ನಿರೀಕ್ಷೆ ಇದೆ.
ಪಾಕಿಸ್ತಾನದ ಗಡಿಯಲ್ಲಿ ಮೀನುಗಾರಿಕೆಗೆ ಹೋಗಿ ಅಲ್ಲಿನ ನೌಕಾಪಡೆಗೆ ಸಿಕ್ಕಿಬೀಳುವ ಶ್ರೀಕಾಕುಳಂ ಜಿಲ್ಲೆಯ ಮೀನುಗಾರರ ಕಥೆಯಿದು. ಪ್ರೇಮಕಥೆಗೆ ದೇಶಭಕ್ತಿಯನ್ನು ಸೇರಿಸಲಾಗಿದೆ. ಸತತ ಸೋಲುಗಳಿಂದ ಬಳಲುತ್ತಿರುವ ನಾಗ ಚೈತನ್ಯ ಕೂಡ ಈ ಪ್ಯಾನ್ ಇಂಡಿಯಾ ಚಿತ್ರದ ಮೇಲೆ ಭರವಸೆ ಇಟ್ಟುಕೊಂಡಿದ್ದಾರೆ. ಈ ಸಿನಿಮಾದ ಹೈಪ್ ಹಿನ್ನಲೆಯಲ್ಲಿ ನೆಟ್ ಫ್ಲಿಕ್ಸ್ ಡಿಜಿಟಲ್ ರೈಟ್ಸ್‌ಅನ್ನು ಈಗಾಗಲೇ ಈ ಸಿನಿಮಾವನ್ನು ಖರೀದಿಸಿದೆ. 40 ಕೋಟಿಗೆ ರೂಪಾಯಿಗೆ ಖರೀದಿಸಿದೆ ಎಂದು ಈ ಹಿಂದೆ ವರದಿಯಾಗಿತ್ತು.
ಕಥೆ ಏನು?
ದಕ್ಷಿಣದ ಎಲ್ಲಾ ಭಾಷೆಗಳ ಜೊತೆಗೆ ಹಿಂದಿಯಲ್ಲೂ ಈ ಸಿನಿಮಾ ಬರುತ್ತಿದೆ. ನೆಟ್‌ಫ್ಲಿಕ್ಸ್ ಈ ಬೃಹತ್ ಮೊತ್ತಕ್ಕೆ ಎಲ್ಲಾ ಭಾಷೆಗಳ OTT ಹಕ್ಕುಗಳನ್ನು ಪಡೆದುಕೊಂಡಿದೆ. ನಾಗ ಚೈತನ್ಯ ಅವರ ವೃತ್ತಿಜೀವನದಲ್ಲಿ ಯಾವುದೇ ಚಿತ್ರದ ಡಿಜಿಟಲ್ ಹಕ್ಕುಗಳು ಇಷ್ಟು ದೊಡ್ಡ ಮೊತ್ತಕ್ಕೆ ಮಾರಾಟವಾಗಿಲ್ಲ. ಈ ನಿಟ್ಟಿನಲ್ಲಿ ತಾಂಡೇಲ್ ಹೊಸ ದಾಖಲೆ ನಿರ್ಮಿಸಿದೆ. ಈ ಹಿಂದೆ ನಾಗ ಚೈತನ್ಯ ಅವರು ತಾಂಡೇಲ್ ಚಿತ್ರದ ಕಥೆಯನ್ನು ಬಹಿರಂಗಪಡಿಸಿದ್ದರು. ನೈಜ ಘಟನೆಗಳನ್ನು ಆಧರಿಸಿ ನಿರ್ದೇಶಕ ಚಂದು ಮೊಂಡೇಟಿ ತಾಂಡೇಲ್ ಸಿನಿಮಾ ಮಾಡುತ್ತಿದ್ದಾರೆ ಎಂದು ನಾಗಚೈತನ್ಯ ಹೇಳಿದ್ದಾರೆ. 2018 ರಲ್ಲಿ, ಶ್ರೀಕಾಕುಳದ ಮೀನುಗಾರ ತಪ್ಪಾಗಿ ಪಾಕಿಸ್ತಾನದ ನೀರನ್ನು ಪ್ರವೇಶಿಸಿದ ಕಥೆ ಇದಾಗಿದೆ.
ವಿಭಾಗ