ಕನ್ನಡ ಸುದ್ದಿ  /  ಮನರಂಜನೆ  /  Kalki 2898 Ad Ott: ಒಂದಕ್ಕಿಂತ ಹೆಚ್ಚು ಒಟಿಟಿಗಳಲ್ಲಿ ಕಲ್ಕಿ 2898 ಎಡಿ ಸಿನಿಮಾ ಸ್ಟ್ರೀಮಿಂಗ್‌; ಯಾವಾಗ? ಯಾವ ಒಟಿಟಿಗಳಲ್ಲಿ? ಇಲ್ಲಿದೆ ವಿವರ

Kalki 2898 AD OTT: ಒಂದಕ್ಕಿಂತ ಹೆಚ್ಚು ಒಟಿಟಿಗಳಲ್ಲಿ ಕಲ್ಕಿ 2898 ಎಡಿ ಸಿನಿಮಾ ಸ್ಟ್ರೀಮಿಂಗ್‌; ಯಾವಾಗ? ಯಾವ ಒಟಿಟಿಗಳಲ್ಲಿ? ಇಲ್ಲಿದೆ ವಿವರ

Kalki 2898 AD OTT Streaming Date and platform: ಪ್ರಭಾಸ್‌, ದೀಪಿಕಾ ಪಡುಕೋಣೆ, ಅಮಿತಾಬ್‌ ಬಚ್ಚನ್‌ ನಟನೆಯ ಕಲ್ಕಿ 2898 ಎಡಿ ಸಿನಿಮಾ ಎರಡು ಒಟಿಟಿಗಳಲ್ಲಿ ಏಕಕಾಲದಲ್ಲಿ ಸ್ಟ್ರೀಮಿಂಗ್‌ ಆಗಲಿದೆ. ಇದೇ ಸಮಯದಲ್ಲಿ ಆಗಸ್ಟ್‌ 15ರಂದು ಒಟಿಟಿಗಳಲ್ಲಿ ನಾಗ್‌ ಅಶ್ವಿನ್‌ ನಿರ್ದೇಶನದ ಕಲ್ಕಿ ಸಿನಿಮಾ ಬಿಡುಗಡೆಯಾಗುವ ಸೂಚನೆಯೂ ದೊರಕಿದೆ.

Kalki 2898 AD OTT: ಒಂದಕ್ಕಿಂತ ಹೆಚ್ಚು ಒಟಿಟಿಗಳಲ್ಲಿ ಕಲ್ಕಿ 2898 ಎಡಿ ಸಿನಿಮಾ ರಿಲೀಸ್‌
Kalki 2898 AD OTT: ಒಂದಕ್ಕಿಂತ ಹೆಚ್ಚು ಒಟಿಟಿಗಳಲ್ಲಿ ಕಲ್ಕಿ 2898 ಎಡಿ ಸಿನಿಮಾ ರಿಲೀಸ್‌

Kalki 2898 AD OTT Updates: ಈಗಾಗಲೇ ಜಾಗತಿಕ ಬಾಕ್ಸ್‌ ಆಫೀಸ್‌ನಲ್ಲಿ 900 ಕೋಟಿ ರೂಪಾಯಿ ಬಾಚಿಕೊಂಡಿರುವ, ಇನ್ನು ಹಲವು ವಾರಗಳ ಕಾಲ ನೂರಾರು ಕೋಟಿ ಗಳಿಸುವ ಸಾಧ್ಯತೆ ಇರುವ ಕಲ್ಕಿ 2898 ಎಡಿ ಸಿನಿಮಾ ಒಟಿಟಿಗೆ ಯಾವಾಗ ಬರಲಿದೆ ಎಂಬ ಸಂದೇಹ ಸಾಕಷ್ಟು ಜನರಲ್ಲಿದೆ. ಹಲವು ಸ್ಟಾರ್‌ ನಟರು ನಟಿಸಿರುವ ಈ ದಂತಕಥೆಯನ್ನು ಮನೆಯಲ್ಲಿ ನೋಡಲು ಸಾಕಷ್ಟು ಜನರು ಕಾತರದಿಂದ ಕಾಯುತ್ತಿದ್ದಾರೆ. ಈ ಸಿನಿಮಾ ಈ ತಿಂಗಳಂತೂ ಒಟಿಟಿಗೆ ಆಗಮಿಸುವುದಿಲ್ಲ. ಆದರೆ, ಆಗಸ್ಟ್‌ 15ರಂದು ಒಟಿಟಿಯಲ್ಲಿ ಬಿಡುಗಡೆಯಾಗಬಹುದೇ? ಈ ಕುರಿತು ತಿಳಿಯಲು ಮುಂದೆ ಓದಿ.

ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್, ಬಿಗ್ ಬಿ ಅಮಿತಾಬ್ ಬಚ್ಚನ್, ಯೂನಿವರ್ಸಲ್ ಹೀರೋ ಕಮಲ್ ಹಾಸನ್, ಬಾಲಿವುಡ್ ಸ್ಟಾರ್ ಹೀರೋಯಿನ್ ದೀಪಿಕಾ ಪಡುಕೋಣೆ, ಹಾಟ್ ಬ್ಯೂಟಿ ದಿಶಾ ಪಟಾನಿ ಸೇರಿದಂತೆ ಹಲವು ಕಲಾವಿದರು ಕಲ್ಕಿ 2898 ಎಡಿ ಚಿತ್ರದಲ್ಲಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ನಾಗ್ ಅಶ್ವಿನ್ ನಿರ್ದೇಶನದ ಈ ಚಿತ್ರವು ಪೌರಾಣಿಕ ಮತ್ತು ವೈಜ್ಞಾನಿಕ ಆಕ್ಷನ್ ಥ್ರಿಲ್ಲರ್ ಆಗಿ ಜೂನ್ 27 ರಂದು ಬಿಡುಗಡೆಯಾಯಿತು. ಚಿತ್ರ ಬಿಡುಗಡೆಯಾದ ಮೊದಲ ದಿನವೇ ಬಾಕ್ಸ್ ಆಫೀಸ್ ನಲ್ಲಿ ಸುನಾಮಿ ಎಬ್ಬಿಸುತ್ತಿದೆ. ಇದೀಗ ಥಿಯೇಟರ್‌ನಲ್ಲಿ ಚಿತ್ರ ನೋಡಲಾಗದವರು ಒಟಿಟಿಯಲ್ಲಿ ರಿಲೀಸ್‌ ಆಗಲು ಕಾಯುತ್ತಿದ್ದಾರೆ.

ಸಾವಿರ ಕೋಟಿ ಗಳಿಕೆಯತ್ತ

ಈಗಾಗಲೇ ವಿಶ್ವಾದ್ಯಂತ ಕಲ್ಕಿ 2898 ಎಡಿ ಸಿನಿಮಾ 900 ಕೋಟಿ ರೂಪಾಯಿಗೂ ಹೆಚ್ಚು ಕಲೆಕ್ಷನ್ ಮಾಡಿ 1000 ಕೋಟಿ ಗಡಿ ಮುಟ್ಟಲು ರೆಡಿಯಾಗಿದೆ. ಏತನ್ಮಧ್ಯೆ, ಕಲ್ಕಿ 2898 ಎಡಿ ಸಿನಿಮಾದ ಒಟಿಟಿ ಬಿಡುಗಡೆ ದಿನಾಂಕದ ಕುರಿತು ಸಾಮಾಜಿಕ ಮಾಧ್ಯಮಗಳಲ್ಲಿ ಗುಲ್ಲೆದ್ದಿದೆ.

ಟ್ರೆಂಡಿಂಗ್​ ಸುದ್ದಿ

ಒಂದಲ್ಲ, 2 ಒಟಿಟಿಗಳಲ್ಲಿ ಕಲ್ಕಿ ಸಿನಿಮಾ ರಿಲೀಸ್‌

ಸದ್ಯ ಒಟಿಟಿಗೆ ಕಲ್ಕಿ ಸಿನಿಮಾ ಬರದು ಎಂದು ಎಲ್ಲರಿಗೂ ತಿಳಿದಿದೆ. ಆದರೆ, ಈ ತಿಂಗಳು ಬಾರದೆ ಇದ್ದರೂ ಪರವಾಗಿಲ್ಲ, ಯಾವ ದಿನಾಂಕದಂದು ಬಿಡುಗಡೆಯಾಗಲಿದೆ ಎಂಬ ವಿವರ ದೊರಕಿದರೆ ಸಾಕು ಎಂದು ಸಾಕಷ್ಟು ಜನರು ನಿರೀಕ್ಷೆಯಲ್ಲಿದ್ದಾರೆ. ಪ್ರಭಾಸ್‌ ಅಭಿನಯದ ಕಲ್ಕಿ ಸಿನಿಮಾವು ಒಂದೇ ದಿನ ಎರಡು ಒಟಿಟಿ ಪ್ಲಾಟ್‌ಫಾರ್ಮ್‌ಗಳಲ್ಲಿ ರಿಲೀಸ್‌ ಆಗಲಿದೆ ಎಂಬ ಮಾಹಿತಿ ಹೊರಬಿದ್ದಿದೆ. ಇದನ್ನು ಒಟಿಟಿ ಸ್ಟ್ರೀಮಿಂಗ್‌ ಪಾಲುದಾರರು ಇನ್ನೂ ಖಚಿತಪಡಿಸಿಲ್ಲ.

ನೆಟ್‌ಫ್ಲಿಕ್ಸ್‌ಗೆ ಹಿಂದಿ ಹಕ್ಕುಗಳು

ಕಲ್ಕಿ 2898 ಎಡಿ ಚಿತ್ರದ ಒಟಿಟಿ ಹಕ್ಕುಗಳನ್ನು ಅಮೆಜಾನ್‌ ಪ್ರೈಂ ವಿಡಿಯೋ ಮತ್ತು ನೆಟ್‌ಫ್ಲಿಕ್ಸ್‌ ಖರೀದಿಸಿದೆ ಎನ್ನಲಾಗಿದೆ. ಅದಕ್ಕಾಗಿ ಆಯಾ ಒಟಿಟಿ ಪ್ಲಾಟ್‌ಫಾರ್ಮ್‌ಗಳ ಮಾಲೀಕರು ನಿರ್ಮಾಪಕರಿಗೆ ಭಾರೀ ಪಾವತಿ ಮಾಡಿದ್ದಾರೆ ಎನ್ನಲಾಗಿದೆ. ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ದಕ್ಷಿಣ ಭಾರತದ ಭಾಷೆಗಳಲ್ಲಿ ಅಂದರೆ ಕನ್ನಡ, ತೆಲುಗು, ತಮಿಳು, ಮಲಯಾಳಂನಲ್ಲಿ ಕಲ್ಕಿ ಸ್ಟ್ರೀಮಿಂಗ್‌ ಆಗಲಿದೆ. ನೆಟ್‌ಫ್ಲಿಕ್ಸ್‌ ಹಿಂದಿ ಭಾಷೆಯ ಹಕ್ಕುಗಳನ್ನು ಪಡೆದುಕೊಂಡಿದೆ ಎನ್ನಲಾಗಿದೆ. ಇಂಗ್ಲಿಷ್‌ ಭಾಷೆಯ ಒಟಿಟಿ ಹಕ್ಕು ಕೂಡ ನೆಟ್‌ಫ್ಲಿಕ್ಸ್‌ ಖರೀದಿಸಿರುವ ಸಾಧ್ಯತೆಯಿದೆ.

ಕಲ್ಕಿ 2898 ಎಡಿ ಒಟಿಟಿಯಲ್ಲಿ ಬಿಡುಗಡೆ ಯಾವಾಗ?

ಕಲ್ಕಿ 2898 ಎಡಿ ಒ ಸಿನಿಮಾವು ತೆಲುಗು, ಕನ್ನಡ, ಮಲಯಾಳಂ, ತಮಿಳು ಭಾಷೆಗಳಲ್ಲಿ ಅಮೆಜಾನ್ ಪ್ರೈಮ್‌ನಲ್ಲಿ ಸ್ಟ್ರೀಮ್ ಆಗಲಿದೆ. ಆದರೆ, ಉತ್ತರ ಭಾರತದ ಪ್ರೇಕ್ಷಕರು ನೆಟ್‌ಫ್ಲಿಕ್ಸ್‌ನಲ್ಲಿ ವೀಕ್ಷಿಸಬಹುದು. ಅಮೆಜಾನ್‌ ಪ್ರೈಮ್‌ ಚಂದಾದಾರರಾಗಿಲ್ಲದೆ ಇರುವವರು ನೆಟ್‌ಫ್ಲಿಕ್ಸ್‌ನ ಹಿಂದಿ ಅವತರಣಿಕೆಗೆ, ನೆಟ್‌ಫ್ಲಿಕ್ಸ್‌ ಚಂದಾದಾರರಾಗದೆ ಇರುವವರು ಅಮೆಜಾನ್‌ ಪ್ರೈಮ್‌ನಲ್ಲಿ ದಕ್ಷಿಣ ಭಾರತದ ಭಾಷೆಗಳಲ್ಲಿ ವೀಕ್ಷಿಸಬಹುದಾಗಿದೆ. ಕಲ್ಕಿ ಸಿನಿಮಾವು ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ 7-8 ವಾರಗಳ ನಂತರ ಒಟಿಟಿಗೆ ಆಗಮಿಸಲಿದೆ ಎಂದು ವರದಿಗಳು ತಿಳಿಸಿವೆ. ಕೆಲವು ಮಾಹಿತಿಗಳ ಪ್ರಕಾರ ಆಗಸ್ಟ್‌ 15ರಂದು ಕಲ್ಕಿ 2898 ಎಡಿ ಒ ಸಿನಿಮಾವು ಒಟಿಟಿಗೆ ಆಗಮಿಸಲಿದೆ.