ಕನ್ನಡ ಸುದ್ದಿ  /  ಮನರಂಜನೆ  /  Kalki 2898 Ad: ಕಲ್ಕಿ ಅಂಗಳದಿಂದ ಮತ್ತೊಂದು ಸರ್ಪ್ರೈಸ್‌; ಬುಜ್ಜಿ ಮತ್ತು ಭೈರವನ ಸಾಹಸದ ಅನಿಮೇಟೆಡ್ ಟ್ರೇಲರ್‌ ಬಿಡುಗಡೆ

Kalki 2898 AD: ಕಲ್ಕಿ ಅಂಗಳದಿಂದ ಮತ್ತೊಂದು ಸರ್ಪ್ರೈಸ್‌; ಬುಜ್ಜಿ ಮತ್ತು ಭೈರವನ ಸಾಹಸದ ಅನಿಮೇಟೆಡ್ ಟ್ರೇಲರ್‌ ಬಿಡುಗಡೆ

ಕಲ್ಕಿ 2898 AD ಸಿನಿಮಾ ಇನ್ನೇನು ಬಿಡುಗಡೆಗೆ ಹೆಚ್ಚು ದಿನ ಉಳಿದಿಲ್ಲ. ಆ ನಿಟ್ಟಿನಲ್ಲಿ ವಿಭಿನ್ನ ರೀತಿಯಲ್ಲಿ ಪ್ರಚಾರಕ್ಕಿಳಿದಿದೆ ಸಿನಿಮಾ ತಂಡ. ಇದೇ ಮೊದಲ ಸಲ ಸಿನಿಮಾ ಬಿಡುಗಡೆಗೂ ಮೊದಲೇ, ಅದೇ ಚಿತ್ರದ ಅನಿಮೇಷನ್‌ ಸಿರೀಸ್‌ ಒಟಿಟಿಯಲ್ಲಿ ಬಿಡುಗಡೆ ಆಗುತ್ತಿದೆ.

Kalki 2898 AD: ಕಲ್ಕಿ ಅಂಗಳದಿಂದ ಮತ್ತೊಂದು ಸರ್ಪ್ರೈಸ್‌; ಬುಜ್ಜಿ ಮತ್ತು ಭೈರವನ ಸಾಹಸದ ಅನಿಮೇಟೆಡ್ ಟ್ರೇಲರ್‌ ಬಿಡುಗಡೆ
Kalki 2898 AD: ಕಲ್ಕಿ ಅಂಗಳದಿಂದ ಮತ್ತೊಂದು ಸರ್ಪ್ರೈಸ್‌; ಬುಜ್ಜಿ ಮತ್ತು ಭೈರವನ ಸಾಹಸದ ಅನಿಮೇಟೆಡ್ ಟ್ರೇಲರ್‌ ಬಿಡುಗಡೆ

Kalki 2898 AD: ಕಲ್ಕಿ 2898 AD ಸಿನಿಮಾ ಹಲವು ವಿಚಾರಕ್ಕೆ ಕುತೂಹಲ ಮೂಡಿಸುತ್ತಿದೆ. ಅದೇ ರೀತಿ ವಿನೂತನವಾಗಿ ಪ್ರಚಾರ ಕಾರ್ಯದಲ್ಲೂ ತೊಡಗಿಸಿಕೊಂಡಿದೆ. ಅದ್ಧೂರಿ ಬಜೆಟ್‌ನಲ್ಲಿ ತಯಾರಾಗಿರುವ ಈ ಸಿನಿಮಾಗೆ ಅದೇ ಮಟ್ಟದ ಓಪನಿಂಗ್ಸ್ ಬರಲು ಭರ್ಜರಿ ಪ್ರಚಾರದ ಅಗತ್ಯವಿದೆ. ಅದರ ಭಾಗವಾಗಿ ಇತ್ತೀಚೆಗೆ ಬುಜ್ಜಿಯನ್ನು ಪರಿಚಯಿಸಿದ ತಂಡ, ಇದೀಗ ಬುಜ್ಜಿ ಮತ್ತು ಭೈರವನ ಸಾಹಸಗಳನ್ನು ಒಟ್ಟಿಗೆ ಅನಿಮೇಟೆಡ್ ಸರಣಿಯ ರೂಪದಲ್ಲಿ ಹೊರ ತರುತ್ತಿದೆ. ಅದರಂತೆ ಟ್ರೇಲರ್‌ ಸಹ ಬಿಡುಗಡೆ ಆಗಿದೆ.

ಟ್ರೆಂಡಿಂಗ್​ ಸುದ್ದಿ

ಬುಜ್ಜಿ, ಭೈರವನ ಸಾಹಸ

ಕಲ್ಕಿ 2898 ಎಡಿ ಸಿನಿಮಾದಲ್ಲಿ ರೆಬೆಲ್ ಸ್ಟಾರ್ ಪ್ರಭಾಸ್ ಭೈರವನ ಪಾತ್ರ ನಿಭಾಯಿಸಿದ್ದಾರೆ. ಸಿನಿಮಾದಲ್ಲಿ ಅವರು ಬಳಸಿದ ವಾಹನದ ಹೆಸರು ಬುಜ್ಜಿ. ಆರು ಟನ್ ತೂಕದ ಈ ಕಾರನ್ನು ಚಿತ್ರಕ್ಕಾಗಿಯೇ ವಿಶೇಷವಾಗಿ ಮಹೀಂದ್ರಾ ಕಂಪನಿ ತಯಾರಿಸಿಕೊಟ್ಟಿದೆ. ಈ ವಾಹನ ನಿರ್ಮಾಣಕ್ಕೆ ಬರೋಬ್ಬರಿ 7 ಕೋಟಿ ಹಣ ಖರ್ಚಾಗಿದೆ. ಇದೀಗ ಇದೇ ಬುಜ್ಜಿ ಮತ್ತು ಭೈರವನ ಸಾಹಸಗಳನ್ನು ಅನಿಮೇಟೆಡ್ ಮೂಲಕ ಕಣ್ತುಂಬಿಕೊಳ್ಳಬಹುದು. ಅಂಥ ಒಂದು ವಿಭಿನ್ನ ಪ್ರಯತ್ನವನ್ನು ಚಿತ್ರತಂಡ ಮಾಡಿದೆ.

ಮೇ 31ರಂದು ಪ್ರೈಂನಲ್ಲಿ ಸ್ಟ್ರೀಮಿಂಗ್‌

ಇಂದು (ಮೇ 30) ಬುಜ್ಜಿ ಮತ್ತು ಭೈರವ ಶೀರ್ಷಿಕೆಯ ಟ್ರೇಲರ್ ಬಿಡುಗಡೆಯಾಗಿದ್ದು, ಶುಕ್ರವಾರ (ಮೇ 31) ಸರಣಿಯು ಅಮೆಜಾನ್‌ ಪ್ರೈಂನಲ್ಲಿ ‌ಸ್ಟ್ರೀಮಿಂಗ್‌ ಆಗಲಿದೆ. ಈ ಪೌರಾಣಿಕ, ವೈಜ್ಞಾನಿಕ ಮತ್ತು ಕಾಲ್ಪನಿಕ ಕಥಾಹಂದರದ ಚಿತ್ರವನ್ನು ನಾಗ್ ಅಶ್ವಿನ್ ನಿರ್ದೇಶನ ಮಾಡಿದ್ದಾರೆ. ಪ್ರಭಾಸ್, ಬುಜ್ಜಿ ಮತ್ತು ಬ್ರಹ್ಮಾನಂದಂ ಅವರ ಪಾತ್ರಗಳನ್ನು ಆಧರಿಸಿ ಸಿರೀಸ್‌ ಮೂಡಿಬಂದಿದೆ. ಈ ಸಿರೀಸ್‌ ಮೇ 31ರಂದು ಪ್ರೈಮ್ ವಿಡಿಯೋದಲ್ಲಿ ಬಿಡುಗಡೆ ಆಗಲಿದೆ. ವೈಜಯಂತಿ ಮೂವೀಸ್‌ ಬ್ಯಾನರ್‌ನಲ್ಲಿ ನಿರ್ಮಾಣವಾಗಿರುವ ಈ ಸಿನಿಮಾ ಇದೀಗ ಪ್ರಚಾರದ ನಿಮಿತ್ತ ಹೊಸ ರೂಪ ಪಡೆದುಕೊಂಡಿದೆ. ಬುಜ್ಜಿ ಮತ್ತು ಭೈರವ ಹೆಸರಿನೊಂದಿಗೆ ಈ ಅನಿಮೇಟೆಡ್ ಸರಣಿಯನ್ನು ನೇರವಾಗಿ ಪ್ರೈಂಗೆ ತರುತ್ತಿದ್ದಾರೆ ನಿರ್ಮಾಪಕರು.

ಭೈರವನ ಪಾತ್ರಕ್ಕೆ ಪ್ರಭಾಸ್ ಡಬ್ಬಿಂಗ್ ಮಾಡಿದರೆ, ಕೀರ್ತಿ ಸುರೇಶ್ ಬುಜ್ಜಿಗೆ ಮುದ್ದಾದ ಧ್ವನಿ ನೀಡಿದ್ದಾರೆ. ಮಧ್ಯದಲ್ಲಿ ಬ್ರಹ್ಮಾನಂದಂ ಪಾತ್ರವನ್ನೂ ಪರಿಚಯಿಸಲಾಗಿದೆ. ಬುಜ್ಜಿ ಮತ್ತು ಭೈರವನ ಡೈಲಾಗ್‌ಗಳು ಹಾಸ್ಯಮಯವಾಗಿವೆ. ಸಾಹಸದ ಜತೆಗೆ ಸ್ನೇಹವೂ ಸದ್ಯ ಬಿಡುಗಡೆ ಆಗಿರುವ ಟ್ರೇಲರ್‌ನ ಹೈಲೈಟ್.‌ ಕ್ರಿ.ಶ 2896ರಲ್ಲಿ ಕಾಶಿಯಲ್ಲಿ ನಡೆದ ಕಥೆಯನ್ನು ಟ್ರೇಲರ್‌ನಲ್ಲಿ ತೋರಿಸಲಾಗಿದೆ. ಅಂದರೆ ಕಲ್ಕಿ 2898ಗೂ ಎರಡು ವರ್ಷಗಳ ಮುನ್ನ ಬುಜ್ಜಿ ಮತ್ತು ಭೈರವನ ನಡುವಿನ ಬಾಂಧವ್ಯ ಹೇಗೆ ಗಟ್ಟಿಯಾಯಿತು ಎಂಬುದನ್ನು ಈ ಸರಣಿಯಲ್ಲಿ ತೋರಿಸಿದ್ದಾರೆ ನಿರ್ದೇಶಕರು.

ಜೂನ್‌ 27ರಂದು ಬಿಡುಗಡೆ

ವೈಜಯಂತಿ ಮೂವೀಸ್ ಈ ಸಿನಿಮಾವನ್ನು 600 ಕೋಟಿ ಬಜೆಟ್‌ನಲ್ಲಿ ನಿರ್ಮಿಸಿದೆ. ಪ್ರಭಾಸ್ ಜೊತೆಗೆ ಅಮಿತಾಬ್ ಬಚ್ಚನ್, ಕಮಲ್ ಹಾಸನ್, ದೀಪಿಕಾ ಪಡುಕೋಣೆ ಮತ್ತು ದಿಶಾ ಪಟಾನಿ ಮುಖ್ಯ ಭೂಮಿಕೆಯಲ್ಲಿದ್ದಾರೆ. ಈ ಚಿತ್ರ ಜೂನ್ 27 ರಂದು ವಿಶ್ವದಾದ್ಯಂತ ಹಲವು ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.

ಟಿ20 ವರ್ಲ್ಡ್‌ಕಪ್ 2024