ನಯನತಾರಾ-ವಿಘ್ನೇಶ್ ಶಿವನ್ ಪ್ರೇಮಕಥನಕ್ಕೆ ತಿರುವು ಕೊಟ್ಟವರೇ ಧನುಷ್: ಹೇಗೆ ಎಂಬ ಕುತೂಹಲವೇ? ಇಲ್ಲಿದೆ ಉತ್ತರ-tollywood news love in the limelight dhanush unknowingly played cupid in nayanthara vignesh shivan romance uks ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  ನಯನತಾರಾ-ವಿಘ್ನೇಶ್ ಶಿವನ್ ಪ್ರೇಮಕಥನಕ್ಕೆ ತಿರುವು ಕೊಟ್ಟವರೇ ಧನುಷ್: ಹೇಗೆ ಎಂಬ ಕುತೂಹಲವೇ? ಇಲ್ಲಿದೆ ಉತ್ತರ

ನಯನತಾರಾ-ವಿಘ್ನೇಶ್ ಶಿವನ್ ಪ್ರೇಮಕಥನಕ್ಕೆ ತಿರುವು ಕೊಟ್ಟವರೇ ಧನುಷ್: ಹೇಗೆ ಎಂಬ ಕುತೂಹಲವೇ? ಇಲ್ಲಿದೆ ಉತ್ತರ

ನಿನ್ನೆಯಷ್ಟೆ ಬರ್ತ್‌ಡೇ ಆಚರಿಸಿಕೊಂಡ ವಿಘ್ನೇಶ್ ಶಿವನ್‌ಗೆ ನಯನತಾರಾ ವಿಶೇಷವಾಗಿ ಶುಭ ಕೋರಿದ್ದಾರೆ. ತಮಿಳು ಸಿನಿಮಾದ ಈ ತಾರಾ ಜೋಡಿ ನಯನತಾರಾ - ವಿಘ್ನೇಶ್ ಶಿವನ್‌ ಪ್ರೇಮಕಥೆ ಬಹಳ ಕುತೂಹಲ ಕೆರಳಿಸುವಂಥದ್ದು. ಇದಕ್ಕೆ ತಿರುವು ಕೊಟ್ಟವರು ನಟ ಧನುಷ್‌ ಎಂಬುದು ಮತ್ತೆ ಮುನ್ನೆಲೆಗೆ ಬಂದಿದೆ. ಹೇಗೆ ಎಂಬ ಕುತೂಹಲ ತಣಿಸುವ ವಿವರ ಇಲ್ಲಿದೆ.

ತಾರಾ ಜೋಡಿ ನಯನತಾರಾ-ವಿಘ್ನೇಶ್ ಶಿವನ್ ಪ್ರೇಮಕಥನಕ್ಕೆ ತಿರುವು ಕೊಟ್ಟವರೇ ನಟ ಧನುಷ್ (ಎಡ ಚಿತ್ರ)
ತಾರಾ ಜೋಡಿ ನಯನತಾರಾ-ವಿಘ್ನೇಶ್ ಶಿವನ್ ಪ್ರೇಮಕಥನಕ್ಕೆ ತಿರುವು ಕೊಟ್ಟವರೇ ನಟ ಧನುಷ್ (ಎಡ ಚಿತ್ರ)

ನಟಿ ನಯನತಾರಾ ತಮ್ಮ ಪತಿ-ಚಿತ್ರ ನಿರ್ಮಾಪಕ ವಿಘ್ನೇಶ್ ಶಿವನ್ ಅವರ ಹುಟ್ಟುಹಬ್ಬದ ಪೋಸ್ಟ್ ಅನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಬುಧವಾರ (ಸೆಪ್ಟೆಂಬರ್ 18) ವಿಘ್ನೇಶ್ ಶಿವನ್ ಅವರ ಬರ್ತ್‌ಡೇ ಇತ್ತು. ಈ ಸಂಭ್ರಮದ ಡಿನ್ನರ್‌ನ ವಿವಿಧ ಫೋಟೋಗಳನ್ನು ಅವರು ಶೇರ್ ಮಾಡಿಕೊಂಡಿದ್ದಾರೆ. ವಿಘ್ನೇಶ್ ಶಿವನ್ ಬುಧವಾರ 39 ನೇ ವರ್ಷಕ್ಕೆ ಕಾಲಿಟ್ಟರು. ಈ ಪೀಠಿಕೆ ಯಾಕೆ ಅಂತೀರಾ? ನಯನತಾರಾ ಮತ್ತು ವಿಘ್ನೇಶ್ ಶಿವನ್ ಪ್ರೇಮಪಕ್ಷಿಗಳು. ಹೌದು ಅವರದು ಪ್ರೇಮ ವಿವಾಹ.

ಸೆಲೆಬ್ರಿಟಿಗಳೂ ಆಗಿರುವ ಕಾರಣ ಅವರ ಬದುಕಿನ ಕುರಿತು ಸಹಜ ಕುತೂಹಲ. ಅವರೂ ಅಷ್ಟೆ ತಮ್ಮ ಇನ್‌ಸ್ಟಾಗ್ರಾಂ ಮತ್ತು ಇತರೆ ಸೋಷಿಯಲ್ ಮೀಡಿಯಾ ತಾಣಗಳಲ್ಲಿ ತಮ್ಮ ಬದುಕಿನ ಆಗುಹೋಗುಗಳನ್ನು ಅಪ್ಡೇಟ್ ಮಾಡುತ್ತಿರುತ್ತಾರೆ.

ವಿಘ್ನೇಶ್ ಶಿವನ್ ಹುಟ್ಟುಹಬ್ಬ ನಿಮಿತ್ತ ನಯನತಾರಾ ಅವರು ಹಂಚಿಕೊಂಡ ಇನ್‌ಸ್ಟಾಗ್ರಾಂ ಪೋಸ್ಟ್‌ ಗಮನಸೆಳೆದಿದೆ.

ನಯನತಾರಾ ಇನ್‌ಸ್ಟಾಗ್ರಾಂ ಪೋಸ್ಟ್‌

ಅವರು ಈ ಪೋಸ್ಟ್‌ನಲ್ಲಿ ನನ್ನ ಎಲ್ಲವೂ (ಎರಡು ಕೆಂಪು ಹೃದಯಗಳ ಇಮೋಜಿ) ಆಗಿರುವವರಿಗೆ ಹುಟ್ಟುಹಬ್ಬದ ಶುಭಾಶಯ. ಪದಗಳು ವರ್ಣಿಸಲಾರದಷ್ಟು ಹೆಚ್ಚು ನಿನ್ನನ್ನು ಪ್ರೀತಿಸುತ್ತೇನೆ! (ಕೆಲವು ಇಮೋಜಿಗಳನ್ನು ಹಾಕಿದ್ದಾರೆ.) ನನ್ನ ಜೀವನದ ಭಾಗವಾಗಿರುವ ನಿನಗೆ ದೇವರು ಆಶೀರ್ವಾದ ಮಾಡಲಿ ಎಂದು ಬರೆದುಕೊಂಡಿದ್ದಾರೆ. ವಿಘ್ನೇಶ್ ಶಿವನ್ ಅವರು ಈ ಪೋಸ್ಟ್‌ ಅನ್ನು ರೀಶೇರ್ ಮಾಡಿದ್ದು, ನನ್ನ ಎಲ್ಲವೂ (ಇಮೋಜಿಗಳು) ಎಂದು ಬರೆದುಕೊಂಡಿದ್ದಾರೆ.

ಹಾಗೆ, ನಯನತಾರಾ ಮತ್ತು ವಿಘ್ನೇಶ್ ಶಿವನ್ ತಮ್ಮ ಪರಿಪೂರ್ಣ ಕುಟುಂಬ ಜೀವನವನ್ನು ಖುಷಿಯಿಂದ ಅನುಭವಿಸುತ್ತಿದ್ದಾರೆ. ಆದರೆ ಅವರ ಈ ಪ್ರೇಮ ಸಂಬಂಧ ಶುರುವಾಗಿದ್ದು ಹೇಗೆ ಎಂಬುದು ಗೊತ್ತಿದೆಯೇ? ಆ ಸಂದರ್ಭವನ್ನು ಪಿಂಕ್‌ ವಿಲ್ಲಾ ಎಂಬ ತಾಣ ಕಟ್ಟಿಕೊಟ್ಟಿದ್ದು ಅದನ್ನು ಇಲ್ಲಿ ಉಲ್ಲೇಖಿಸುತ್ತೇವೆ.

ನಯನತಾರಾ ಮತ್ತು ವಿಘ್ನೇಶ್ ಶಿವನ್ ಪ್ರೇಮಕಥೆ; ಅರಿವಿಲ್ಲದೆಯೇ “ಮನ್ಮಥ”ನಾದ ಧನುಷ್‌!

ಅದು 2015ನೇ ಇಸವಿ. ನಯನತಾರಾ ಆಕೆಯ ಭಾವಿ ಪತಿ ವಿಘ್ನೇಶ್ ಶಿವನ್ ಅವರನ್ನು ಭೇಟಿಯಾದ ಸಂದರ್ಭ. ನಾನುಂ ರೌಡಿ ದಾನ್‌ ಸಿನಿಮಾಕ್ಕೆ ಸಹಿಹಾಕಿದ್ದರು. ವಿಜಯ್ ಸೇತುಪತಿ ನಾಯಕ. ಈ ಸಿನಿಮಾದಲ್ಲಿ ನಾಯಕಿಯಾದ ನಯನತಾರಾ ಎರಡು ಬ್ರೇಕ್‌ಅಪ್‌ಗಳನ್ನು ಅನುಭವಿಸಿದ್ದರು.

ಈ ಸಿನಿಮಾ ಶೂಟಿಂಗ್ ಸಂದರ್ಭದಲ್ಲಿ ಗಂಟೆಗಟ್ಟಲೆ ಮಾತಾನಾಡುತ್ತಿದ್ದ ವಿಘ್ನೇಶ್‌ ಶಿವನ್ ಮತ್ತು ನಯನತಾರಾ ರಿಲೇಶನ್‌ಶಿಪ್‌ಗೆ ಬಿದ್ದ ಕಥೆಯನ್ನು ಅವರ ಸಹನಟರಾಗಿದ್ದ ಮನ್ಸೂರ್ ಅಲಿ ಖಾನ್‌ ನೆನಪಿಸಿಕೊಂಡಿದ್ದಾರೆ ಎಂದು ಆ ವರದಿ ಉಲ್ಲೇಖಿಸಿದೆ.

ಇವರಿಬ್ಬರ ನಡುವೆ ರಿಲೇಶನ್‌ಶಿಪ್‌ ಇರುವ ವಿಚಾರ ವದಂತಿಯಾಯಿತು. 2017ರಲ್ಲಿ ನಯನತಾರಾ ಮತ್ತು ವಿಘ್ನೇಶ್ ಇಬ್ಬರೂ ಜೊತೆಯಾಗಿ ಅವಾರ್ಡ್‌ ಫಂಕ್ಷನ್ ಒಂದರಲ್ಲಿ ಕಾಣಿಸಿಕೊಂಡರು. ಇಬ್ಬರಿಗೂ ಪ್ರಶಸ್ತಿ ಬಂತು. ಆ ರಾತ್ರಿ ಇಬ್ಬರೂ ಪರಸ್ಪರ ಅಭಿನಂದಿಸಿಕೊಂಡು ಬೆಂಬಲವನ್ನು ಸ್ಮರಿಸಿಕೊಂಡರು.

ಇದಾದ ಬಳಿಕ ವಿಘ್ನೇಶ್ ಶಿವನ್ ಮತ್ತು ನಯನತಾರಾ ಪದೇಪದೆ ದೇವಸ್ಥಾನ, ಚರ್ಚ್, ದರ್ಗಾ ಸುತ್ತುತ್ತಿರುವುದು ಕಂಡುಬಂತು. ಇದಲ್ಲದೆ, ಹಲವು ವಿದೇಶ ಪ್ರವಾಸಗಳನ್ನೂ ಜೊತೆಯಾಗಿಯೇ ಮಾಡಿದರು.

ಎಲ್ಲದಕ್ಕೂ ಮಿಗಿಲಾಗಿ ಧನುಷ್ ಪಾತ್ರ ಬಹಿರಂಗವಾಗಿದ್ದು, ನಯನತಾರಾ ಮತ್ತು ವಿಘ್ನೇಶ್ ಶಿವನ್‌ ಅವರಿಂದಲೇ. ಅವರು ಹಲೋ ಇಂಡಿಯಾಗೆ ಸಂದರ್ಶನ ನೀಡಿದಾಗ ಈ ವಿಚಾರ ಬಹಿರಂಗಪಡಿಸಿದ್ದರು.

ನಯನತಾರಾಗೆ ನಾನುಂ ರೌಡಿ ದಾನ್‌ ಸಿನಿಮಾದ ಕಥೆ ನಿರೂಪಿಸುವುದಕ್ಕೆ ಅವಕಾಶ ಮಾಡಿಕೊಟ್ಟದ್ದು ಧನುಷ್ ಸರ್. ಆಕೆ ಅದನ್ನು ಇಷ್ಟಪಟ್ಟರು. ಆಕೆ ಸಿನಿಮಾಗೆ ಒಪ್ಪಿಕೊಂಡ ಕೂಡಲೇ ವಿಜಯ್ ಸೇತುಪತಿ ಅವರ ಜೊತೆಗೆ ಮಾತುಕತೆ ನಡೆಸುವುದು ಸಾಧ್ಯವಾಯಿತು. ಆರಂಭದಲ್ಲಿ ಅವರು ಒಲವು ತೋರಿಸಿದ್ದರಾದರೂ ಅವರಿಗೆ ನಂತರ ಬೇಡ ಎಂದಿದ್ದರು. ಆದರೆ ನಯನತಾರಾ ಒಪ್ಪಿಕೊಂಡ ಬಳಿಕ ಅವರೂ ಒಪ್ಪಿದರು. ಆ ಸಿನಿಮಾ ನನಗೊಂದು ದಾರಿ ಮಾಡಿಕೊಟ್ಟಿತು. ಆಕೆಯ ಜೊತೆಗೆ ಬಹಳ ಸಮಯ ಕಳೆಯುವುದು ಸಾಧ್ಯವಾಯಿತು. ಒಂದು ವರ್ಷದಲ್ಲಿ ಸಾಕಷ್ಟು ಭಾಗಿಯಾದೆವು ಎಂದು ವಿಘ್ನೇಶ್ ಶಿವನ್ ಹೇಳಿಕೊಂಡಿದ್ದರು.

2021ರ ಮಾರ್ಚ್ ತಿಂಗಳಲ್ಲಿ ವಿಘ್ನೇಶ್ ಶಿವನ್‌ ತನ್ನ ಲೇಡಿ ಲವ್‌ ಫೋಟೋವನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದರು. ಅದರಲ್ಲಿ ಆಕೆ ಉಂಗುರ ತೋರಿಸಿದ್ದರು. ಅದೇ ವರ್ಷ ಆಗಸ್ಟ್‌ನಲ್ಲಿ ಮೊದಲ ಬಾರಿಗೆ ನಯನತಾರಾ ಆಕೆಯ ನಿಶ್ಚಿತಾರ್ಥದ ಕುರಿತು ಮಾತನಾಡಿದ್ದರು. ಇಂಡಿಯಾ ಟುಡೇ ಇದನ್ನು ದಾಖಲಿಸಿದ್ದು, “ಅದು ನನ್ನ ಎಂಗೇಜ್‌ಮೆಂಟ್ ರಿಂಗ್ ಆಗಿತ್ತು. ನಾವು ಖಾಸಗಿ ವ್ಯಕ್ತಿಗಳು ಕೂಡ. ಅದ್ದೂರಿ ಸಮಾರಂಭ ನಮಗೆ ಬೇಕಿರಲಿಲ್ಲ. ನಮ್ಮ ಕುಟುಂಬ ಸದಸ್ಯರಷ್ಟೇ ಇದ್ದರು. ನಾವು ಮದುವೆಯಾಗಬೇಕು ಎಂದು ನಿಶ್ಚಯಿಸಿದಾಗ ಖಚಿತವಾಗಿ ಅಭಿಮಾನಿಗಳಿಗೆ ತಿಳಿಸುತ್ತೇವೆ. ಇನ್ನೂ ಮದುವೆ ದಿನ ನಿಶ್ಚಯವಾಗಿಲ್ಲ” ಎಂದು ಹೇಳಿದ್ದಾಗಿ ಉಲ್ಲೇಖಿಸಿತ್ತು. 2022ರ ಜೂನ್ 9 ರಂದು ನಯನತಾರಾ ಮತ್ತು ವಿಘ್ನೇಶ್‌ ಮಹಾಬಲಿಪುರಂನಲ್ಲಿ ಖಾಸಗಿ ಸಮಾರಂಭದಲ್ಲಿ ಮದುವೆಯಾದರು. ತೀರಾ ಆಪ್ತ ಬಳಗವಷ್ಟೇ ಭಾಗಿಯಾಗಿತ್ತು. ಅದೇ ವರ್ಷ ಅಕ್ಟೋಬರ್‌ನಲ್ಲಿ ಬಾಡಿಗೆ ತಾಯ್ತನದ ಮೂಲಕ ಎರಡು ಮಕ್ಕಳ (ಉಯಿರ್ ಮತ್ತು ಉಳಗಂ)ನ್ನು ದಂಪತಿ ಪಡೆದುಕೊಂಡರು

mysore-dasara_Entry_Point